ಆಯುರ್ವೇದ ಆಹಾರ, ವಿಹಾರ ಪದ್ದತಿ ಮತ್ತು ಜೀವನ ಕ್ರಮ ಯೋಗಾಸನಗಳಿಂದ ದೈಹಿಕ ಮತ್ತು ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ. ಸರಸ್ವತಿ.

by | 21/08/23 | ಆರೋಗ್ಯ, ಜೀವನಶೈಲಿ

ನಾಯಕನಹಟ್ಟಿ ಆ.21.ಆಯುರ್ವೇದ ಆಹಾರ, ವಿಹಾರ ಪದ್ದತಿ ಮತ್ತು ಜೀವನ ಕ್ರಮ ಯೋಗಾಸನಗಳಿಂದ ದೈಹಿಕ ಮತ್ತು ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು, ಪ್ರಾಣಾಯಾಮ ಮಾಡುವುದರಿಂದ ರಕ್ತದೊತ್ತಡ ಶ್ವಾಸಕ್ರಿಯೆ ನಿಯಂತ್ರಿಸಬಹುದು, ದ್ಯಾನ ಮಾಡುವುದರಿಂದ ರಕ್ತದ ಒತ್ತಡ, ಮನಸ್ಸನ್ನು ಏಕಾಗ್ರತೆಗೊಳಿಸಿ ಸಂಪೂರ್ಣ ಶರೀರದ ಆರೋಗ್ಯ ಕಾಪಾಡಿಕೊಳ್ಳಬಹುದು ಒತ್ತಡದ ಜೀವನದಲ್ಲಿ ಹೃದಯದ ಮೇಲೆ ಅತಿಯಾದ ಪ್ರಭಾವ ಬೀರುವ ಸಾದ್ಯತೆ ಇದೆ. ದೇಹ, ಮನಸ್ಸು, ಬುದ್ದಿ, ಆತ್ಮ ಎಲ್ಲವೂಗಳ ಸಂಪೂರ್ಣ ಜ್ಞಾನ ಇರುವುದು ತುಂಬಾ ಅವಶ್ಯಕ ಶರೀರ ಮತ್ತು ಆತ್ಮಶುದ್ಧಿ ಆಯುರ್ವೇದ ಪದ್ಧತಿಯಿಂದ ಮಾತ್ರ ಸಾಧ್ಯ. ನಮ್ಮ ಹೃದಯಕ್ಕೆ ರಕ್ತವನ್ನು ಪೂರೈಸುವ ಅಪದಮನಿಯು, ಕೊಲೆಸ್ಟಾçಲ್‌ನ ಶೇಕರಣೆಯಿಂದ ಅಥವಾ ಕೆಲವು ಸಂದರ್ಭಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಹೃದಯಕ್ಕೆ ರಕ್ತ ಚಲನೆಯಿಂದ ನಿಂತುಹೋಗಿ ಹೃದಯಘಾತ ಸಂಭವಿಸುತ್ತದೆ ಈ ರಕ್ತ ಹೆಪ್ಪುಗಟ್ಟುವುದು ಅಥವಾ ರಕ್ತಚಲನೆ ನಿಲ್ಲುವುದರಿಂದ ಹೃದಯಘಾತ ಸಂಭವಿಸುತ್ತದೆ. ಈ ರೀತಿ ರಕ್ತ ಹೆಪ್ಪುಗಟ್ಟುವುದು ರಕ್ತಚಲನೆ ನಿಲ್ಲುವುದರಿಂದ ಹೃದಯಕ್ಕೆ ಬೇಕಾದ ರಕ್ತ ಸಿಗದೆ ಹೃದಯವು ಕಾರ್ಯಚರಣೆಯನ್ನು ನಿಲ್ಲಿಸುತ್ತದೆ ಇದರಿಂದ ಹೃದಯಘಾತ ಸಂಭವಿಸುತ್ತದೆ. ಹೃದಯ ಎಂಬುವುದು ಕುಟುಂಬದ ಆಸ್ತಿ ಇದ್ದಹಾಗೆ ಸಣ್ಣ ಹೃದಯ ನಾಳಗಳು ಹೆಚ್ಚಿನ ಮಟ್ಟದ ಕೊಲೆಸ್ಟಾçಲ್ ಮಟ್ಟದ ಉತ್ತಮ ಕೊಲೆಸ್ಟಾçಲ್ ರಕ್ತದ ಒತ್ತಡ, ಬೊಜ್ಜು ಕಳಪೆ ಆಹಾರ ಮತ್ತು ದೂಮಪಾನದಿಂದ ಸಂಭವಿಸಬಹುದು ನಮ್ಮ ಜೀವನ ಪದ್ದತಿಯಿಂದ ಹಾಗೂ ಆಹಾರ ಪದ್ದತಿ ಚನ್ನಾಗಿ ಇದ್ದರೆ ಹೃದಯಘಾತ ತಪ್ಪಿಸಿಕೊಳ್ಳಬಹುದು. ಹೃದಯಘಾತ ಸಂಭವಿಸಿದಾಗ ಎಡಭಾಗದ ಎದೆಯಲ್ಲಿ ನೋವು ಕಾಣ ಸಿಕೊಳ್ಳುತ್ತದೆ. ಆದರೆ ಎಲ್ಲರಿಗೂ ಈ ರೀತಿ ಆಗಬೇಕಿಲ್ಲ ನೀವು ಉತ್ತಮ ಆಹಾರವನ್ನು ಸೇವಿಸಿದರೆ ಹೃದ್ರೋಗ ಬಿಡಿ ಎಲ್ಲಾ ರೋಗದಿಂದ ಮುಕ್ತರಾಗಬಹುದು ನಾವು ತಿನ್ನುವ ಆಹಾರವು ನಿಮ್ಮ ದೇಹಕ್ಕೆ ಬಹಳ ಮುಖ್ಯವಾಗಿದೆ. ಏಕೆಂದರೆ ಇದು ಅಂಗಾಂಗಗಳ ದೈನಂದಿನ ಕಾರ್ಯನಿರ್ವಹಣೆಗೆ ಅಗತ್ಯವಾದ ಇಂಧನವನ್ನು ತೊಡಗಿಸುತ್ತದೆ. ಈಗಾಗಿ ಹೃದಯವನ್ನು ಆರೋಗ್ಯವಾಗಿಡುವ ಆಹಾರವನ್ನು ನಾವು ಸೇವಿಸಿದರೆ, ಉತ್ತಮವಾದ ಹಣ್ಣುಗಳನ್ನು ಸೇವಿಸಬೇಕು, ಇನ್ನು ಹಸಿರು ತರಕಾರಿಗಳನ್ನು ಸೇವನೆ ಮಾಡುವುದು ಉತ್ತಮ ಇನ್ನು ಸಂಸ್ಕರಿಸಿದ ಜಂಗ್‌ಫುಡ್‌ಗಳಿಂದ ದೂರ ಇರುವುದು ಒಳ್ಳೆಯದು. ಪ್ರತಿದಿನ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹದ ಆಕಾರವನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತದೆ. ಮಾತ್ರವಲ್ಲ ನಿಮ್ಮ ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಹೌದು ದಿನನಿತ್ಯ ಸುಮಾರು 20ನಿಮಿಷ ಒಂದು ವಾರದಲ್ಲಿ ಒಟ್ಟು 150ನಿಮಿಷಗಳ ವ್ಯಾಯಾಮಗಳಿಂದ ಅಧಿಕ ರಕ್ತದೊತ್ತಡ, ಮದುಮೇಹ, ಹೃದ್ರೋಗದಿಂದ ಬಳಲುತ್ತಿರುವ ವ್ಯಕ್ತಿಯನ್ನು ರಕ್ಷಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ವ್ಯಾಯಾಮದ ಮೂಲಕ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು. ಮದ್ಯಪಾನ ಬಿಟ್ಟುಬಿಡಿ, ಹೃದಯಘಾತದ ಪ್ರಾಥಮಿಕ ಅಪಾಯಕಾರಿ ಅಂಶಗಳಲ್ಲಿ ಮದ್ಯಪಾನ ಕೂಡ ಹೌದು. ಒಂದು ಹೃದಯಘಾತ ಸಂಭವಿಸಿದ ಅನೇಕರ ಪೈಕಿ ಮದ್ಯಪಾನದಂತಹ ಒಂದಿದವರಿಗೆ ಅಪಾಯ ಜಾಸ್ತಿ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಹೆಚ್ಚು ಆಲ್ಕೋಹಾಲ್ ಕುಡಿಯುವುದು ಹೃದಯಕ್ಕೆ ಎಂದೂ ಒಳ್ಳೆಯದಲ್ಲ. ಈಗಾಗಿ ಹೃದಯಘಾತವನ್ನು ತಡೆಗಟ್ಟಲು ಆಲ್ಕೋಹಾಲ್ ಸೇವನೆಯನ್ನು ತ್ಯಜಿಸಬೇಕು ಮದ್ಯಪಾನ ಬಿಡುವ ಮೂಲಕ ಆರೋಗ್ಯಕರ ಜೀವನವನ್ನು ಹೊಂದಬಹುದು. ಹೃದಯಘಾತ ಅಥವಾ ತಂಬಾಕು ಸೇವನೆ ನಿಮ್ಮ ಹೃದಯದ ಆರೋಗ್ಯದ ಮೇಲೆ ಹಾನಿಯನ್ನುಂಟು ಮಾಡುತ್ತದೆ. ಆದ್ದರಿಂದ ಹೃದಯವನ್ನು ಆರೋಗ್ಯವಾಗಿಡಲು ನೀವು ಯಾವುದೇ ರೂಪದಲ್ಲಿ ತಂಬಾಕು ಸೇವನೆಯನ್ನು ಮಾಡಬಾರದು, ದೂಮಪಾನವನ್ನು ಬಿಟ್ಟುಬಿಡಿ, ದೂಮಪಾನ ನಿಮ್ಮ ಆರೋಗ್ಯವನ್ನು ಅನಾರೋಗ್ಯ ಪೀಡಿತವನ್ನಾಗಿ ಮಾಡುತ್ತದೆ. ವ್ಯಾಯಾಮದ ಮೂಲಕ ಹೃದಯಘಾತದಿಂದ ತಪ್ಪಿಸಬಹುದು.

ಡಾ. ಸರಸ್ವತಿ, ಆಯುಷ್ ಇಲಾಖೆಯ ವೈದ್ಯಾಧಿಕಾರಿ, ದಿನ

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page