ದೇಶಕ್ಕೆ ಬೃಹತ್ ಸಂವಿಧಾನವನ್ನು ನೀಡಿದಂತ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ರಿಗೆ ಸಲ್ಲುತ್ತದೆ :ಎಸ್.ಚೈತ್ರ .

by | 21/12/23 | ಸುದ್ದಿ


ಹಿರಿಯೂರು :
ಈ ದೇಶದ ನೊಂದಜನರಿಗೆ, ಶೋಷಿತರಿಗೆ, ಮಹಿಳೆಯರಿಗೆ, ಸಮಾನತೆ ಸ್ವಾತಂತ್ರ್ಯ ಸಾಮಾಜಿಕನ್ಯಾಯ ಒದಗಿಸುವ ನಿಟ್ಟಿನಲ್ಲಿ ದೇಶದಲ್ಲಿ ಬೃಹತ್ ಸಂವಿಧಾನವನ್ನು ನೀಡಿದಂತ ಕೀರ್ತಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಸಲ್ಲುತ್ತದೆ ಎಂಬುದಾಗಿ ಪೊಲೀಸ್ ಉಪ ಅಧೀಕ್ಷಕರಾದ ಶ್ರೀಮತಿ ಎಸ್.ಚೈತ್ರ ಹೇಳಿದರು.
ತಾಲ್ಲೂಕಿನ ಐಮಂಗಲ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರದುರ್ಗ ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದ ಸುಮಾರು 70 ರಾಷ್ಟ್ರಗಳ ಸಂವಿಧಾನವನ್ನು ಅಧ್ಯಯನ ಮಾಡಿ, ಜೀವಪರ, ಮಾನವಪರ ಮತ್ತು ಮನುಷ್ಯತ್ವಪರ ಇರುವ ಸಂವಿಧಾನವನ್ನು ನೀಡಿ ವ್ಯಕ್ತಿ ಗೌರವ ದೇಶದ ಏಕತೆ ಸಹೋದರತೆಯ ಭಾವವನ್ನು ಬೆಳೆಸಿ ಸಮಗ್ರತೆಯ ಭಾರತವನ್ನು ಕಟ್ಟಿದರರಲ್ಲದೆ, ದೇಶದಲ್ಲಿ ವಾಸಿಸುವ ಎಲ್ಲಾ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿ ರಾಜಕೀಯವಾಗಿ ಸಬಲೀಕರಣಗೊಳ್ಳಲು ಕಾರಣರಾದವರು
ಅಂಬೇಡ್ಕರ್ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿಯನ್ನು ನೀಡಿದ್ದು, ಸಂವಿಧಾನದ ಆಶಯವಾಗಿದೆ ಸಂವಿಧಾನದ ರಚನಾ ಸಮಿತಿಯಲ್ಲಿ 284 ಜನ ಒಟ್ಟು ಸದಸ್ಯರಿದ್ದು ಇದರಲ್ಲಿ 15 ಜನ ಸ್ತ್ರೀಯರು ಪಾಲ್ಗೊಂಡಿರುವುದು ಅವಿಸ್ಮರಣೀಯವಾಗಿದೆ ಎಂಬುದಾಗಿ ಹೇಳಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಹಶಿಕ್ಷಕ ಹಾಗೂ ಚಿಂತಕ ಕೆ.ರಾಮಚಂದ್ರಪ್ಪ ಮಾತನಾಡಿ, ಅವಮಾನ, ಅಪಮಾನ ಸ್ವತಃ ಅನುಭವಿಸಿ ತಮಗೆ ಬಂದ ಕಷ್ಟ ದೇಶದ ಯಾವ ಪ್ರಜೆಗೂ ಬರಬಾರದೆಂದು ಚಿಂತಿಸಿ, ಹಣದ ಅಭಾವದ ಮಧ್ಯೆಯೂ ಛಲ ಬಿಡದೇ ನಿರಂತರವಾಗಿ ಓದುವ ಮೂಲಕ ವಿಶ್ವಜ್ಞಾನಿಯಾಗಿ ಸಾರ್ವಭೌಮ ಮತ್ತು ಜಾತ್ಯಾತೀತ ಭಾರತವನ್ನು ಕಟ್ಟಿದರು ಎಂದರಲ್ಲದೆ,
ಮಹಿಳಾ ಮೀಸಲಾತಿಗಾಗಿ ಹಿಂದು ಕೋಡ್ ಬಿಲ್ಲನ್ನು ರಚಿಸಿ, ಲೋಕಸಭೆಯಲ್ಲಿ ಮಂಡಿಸಿ, ಅದು ವಿಫಲವಾದಾಗ ತಮ್ಮ ಬೆಂಬಲಕ್ಕೆ ಯಾರೂ ನಿಲ್ಲದೇ ಹೋದಾಗ ಅತ್ಯಂತ ಮನನೊಂದು ಕೇಂದ್ರ ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ದೇಶದ ಏಕೈಕ ನಿಷ್ಠಾವಂತ ರಾಜಕಾರಣಿ ಎಂದರೆ ಡಾ. ಬಿ.ಆರ್ ಅಂಬೇಡ್ಕರ್ ಅವರು ಮಾತ್ರ ಎಂಬುದಾಗಿ ಅವರು ಹೇಳಿದರು.
ಡಾ. ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮದ ತಾಲ್ಲೂಕು ಸಂಚಾಲಕರಾದ ರಂಗಸ್ವಾಮಿಸಕ್ಕರ ಮಾತನಾಡಿ, ಭೂಮಿ, ಶಿಕ್ಷಣ, ನೀರು, ಜೀವವಿಮೆ ರಾಷ್ಟ್ರೀಕರಣವಾಗಬೇಕು ಅದು ದೇಶದ ಪ್ರತಿಯೊಬ್ಬರಿಗೂ ಸಮಾನವಾಗಿ ಹಂಚಿಕೆ ಆಗಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು ಆದರೆ ಸಂವಿಧಾನ ಅಳವಡಿಸಿ 75 ವರ್ಷ ಕಳೆದರೂ ಅದು ಇನ್ನೂ ಮರೀಚಿಕೆಯಾಗಿ ಉಳಿದಿರುವುದು ವಿಷಾದನೀಯ ಸಂಗತಿ ಎಂದರಲ್ಲದೆ,
ದೇಶದಲ್ಲಿ ನಿರುದ್ಯೋಗ ಬಡತನ ಹಸಿವು ನಿರಂತರವಾಗಿ ಕಾಡುತ್ತಿದ್ದು, ಭೂಮಿ ಮತ್ತು ಶಿಕ್ಷಣ ದುಬಾರಿಯಾಗುತ್ತಾ ಬಂದಿದೆ, ಸಾಮಾನ್ಯ ಜನರಿಗೆ ಅದು ದಕ್ಕದೆ ಹಾಗೆ ಉಳಿದಿದೆ ಆದುದರಿಂದ ಅಂಬೇಡ್ಕರ್ ಅವರ ಚಿಂತನೆಗಳನ್ನು ಸೀಮಿತ ದೃಷ್ಟಿಕೋನದಲ್ಲಿ ನೋಡದೆ ಸಮಷ್ಠಿಭಾವದಿಂದ ನೋಡಿದಾಗ ಮಾತ್ರ ಸಮಾನತೆಯ ಭಾರತವನ್ನು ಕಟ್ಟಲು ಸಾಧ್ಯವಿದೆ ಎಂಬುದಾಗಿ ಹೇಳಿದರು
ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಆಶಾ, ಕಾವ್ಯ, ಯಮುನಾ, ಆಶುಭಾಷಣ ಸ್ಪರ್ಧೆಯಲ್ಲಿ ಸ್ವಾತಿ, ದರ್ಶನ್, ಆಶಾ, ಕವನ ವಾಚನ ಸ್ಪರ್ಧೆಯಲ್ಲಿ ಸೋನು, ಶೋಭಾ, ವೇದಾ, ರಸಪ್ರಶ್ನೆ ಸ್ಪರ್ಧೆಯಲ್ಲಿ ಸ್ಪಂದನಾ, ಧನುಷ್, ಪವಿತ್ರ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಪಡೆದುಕೊಂಡರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ರಾಜ್ಯಶಾಸ್ತ್ರ ಉಪನ್ಯಾಸಕರಾದ ಎಂ.ರಮೇಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಹರ್ತಿಕೋಟೆ ಮಹಾಸ್ವಾಮಿ, ಮಹಮ್ಮದ್ ಷಕೀಲ್, ಎಚ್.ಎಸ್.ಲೀಲಾವತಿ, ಎಸ್.ಕೆ.ಮಂಜುನಾಥ್, ರೇಖಾ, ಕೆ.ಯಮುನಾ, ಲಲಿತ ಸೇರಿದಂತೆ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page