ಚಳ್ಳಕೆರ ಜನಧ್ವನಿ ವಾರ್ತೆ ಮಾ.11
ಕಾಡುಗೊಲ್ಲ ಸಮಾಜದವರಿಗೆ ಜಾತಿ ಪ್ರಮಾಣ ಪತ್ರ ಹಾಗು ಸಮುದಾಯವನ್ನು ಎಸ್ಟಿಗೆ ಸೇರಿಸದಿದ್ದರೆ ಮುಂಬರುವ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಕಾಡು ಗೊಲ್ಲ ಸಮಾಜದ ತಾಲ್ಲೂಕು ಅಧ್ಯಕ್ಷ ರಾಜಣ್ಣ ಎಚ್ಚರಿಕೆ ನೀಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಕಾಡಯಗೊಲ್ಲ ಸಮುದಾಯವತಿಯಿಂದ ಆಯೋಜಿಸಿದ್ದ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸರಕಾರದ ಆದೇಶವಿದ್ದರೂ ಅಧಿಕಾರಿಗಳು ಕಾಡುಗೊಲ್ಲ ಪ್ರಮಾಣ ಪತ್ರ ನೀಡಲು ನಿರ್ಲಕ್ಷವಹಿಸುತ್ತಿದ್ದಾರೆ ಇದೇಜಿಲ್ಲೆಯ ಪಕ್ಕದ ತಾಲೂಕು ಹಿರಿಯೂರು ತಾಲೂಕಿನಲ್ಲಿ ನೀಡುತ್ತಿದ್ದು ಜೆಲ್ಲಿಗೆ ಒಬ್ಬರ ಜಿಲ್ಲಾಧಿಕಾರಿಯಾದರೂ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡುವ ಮೂಲಕ ಕಾಡುಕೊಲ್ಲ ಸಮುದಾಯವನ್ನು ಕೆರೆಳಿಸುವಂತೆ ಮಾಡುತ್ತಿದ್ದು ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ.
ಹೊಸದುರ್ಗದಲ್ಲಿ ತಮ್ಮ ಹಕ್ಕನ್ನು ಪಡೆಯಲು ಹಗಲು ರಾತ್ರಿ ಮೌನ ಪ್ರತಿಭಟನೆ ಮಾಡಿದರೂಸಹ ಹಕ್ಕನ್ನು ನೀಡಲು ಮುಂದಾಗುತ್ತಿಲ್ಲ ಚುಣಾವಣೆ ಸಮೀಪಿಸುತ್ತಿದ್ದು ರಾಷ್ಟಿçÃಯ ಪಕ್ಷಗಳಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠಕಲಿಸಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಮಾಜಿ ಜಿಪಂ ಅಧ್ಯಕ್ಷ ರವಿಕುಮಾರ್ ಮಾತನಾಡಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಉಪಚುನಾವಣೆ ಸಂದರ್ಭದಲ್ಲಿ ಕಾಡುಗೊಲ್ಲರ ಮತಗಳನ್ನು ಪಡೆಯಲು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಿ ಅನುದಾನ ಬಿಡುಗಡೆ ಮಾಡುವುದಾಗಿ ಮತ ಪಡೆದು ಭರವಸೆಯನ್ನು ಹುಸಿ ಮಾಡಿದ್ದಾರೆ. ಚುನಾವಣೆಯ ಒಳಗೆ ಕಾಡುಗೊಲ್ಲರ ಬೇಡಿಕೆಗಳನ್ನು ಹೀಡೇರಿಸದಿದ್ದರೆ ರಾಜ್ಯಾದ್ಯಾಂತ ಪ್ರತಿ ಭಟನೆ ನಡೆಸುವ ಮೂಲಕ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಸರಕಾರದ ವಿರುದ್ದ ಗುಡುಗಿದರು.
ಬಂಜಗೆರೆ ಚಂದ್ರಣ್ಣ, ಮಂಜುನಾಥ ಮಾತನಾಡಿ ಕಾಡಿಗೊಲ್ಲ ಸಮಾಜದಲ್ಲಿ ಹಿಂದುಳಿದ ಜನರಿದ್ದ ಸರಿಯಾದ ಮೀಸಲಾತಿ ಇಲ್ಲದೆ ಇರುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ತೀವ್ರತೊಂದರೆಯಾಗುತ್ತಿದೆ ಕೂಡಲೇ ಕಾಡುಗೊಲ್ಲ ಸಮಾಜವನ್ನು ಎಸ್ಟಿಗೆ ಸೇರಿಸಬೇಕು. ಅಧಿವೇಶನಗಳಲ್ಲಿ ಕಾಡುಗೊಲ್ಲ ಸಮಾಜದ ಜನಪ್ರತಿನಿಧಿಗಳು ಇಲ್ಲದಿರುವುದರಿಂದ ಬೇಡಿಕೆಗಳು ಈಡೇರಿಸಿಕೊಳ್ಳಲು, ಸಮುದಾಯದ ಸಮಸ್ಯೆಗಳು ಯಾರಿಗೆ ಹೇಳ ಬೇಕು ಎಂಬAತಾಗಿದೆ ಕೂಡಲೇ ರಾಜ್ಯ ೪ ವಿಧಾನಸಭೆ ಕ್ಷೇತ್ರಗಲ್ಲಿ ಕಾಡುಗೊಲ್ಲ ಸಮುದಾಯದ ಅಭ್ಯರ್ಥಿಗಳು ಸ್ಪರ್ಧಿಸಲು ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಡುಗೊಲ್ಲ ಸಮಾಜದ ತಾಪಂ ಮಾಜಿ ಅಧ್ಯಕ್ಷ ಜಿ.ಟಿ.ನಾಗರಾಜ್, ರಂಗಸ್ವಾಮಿ, ಅಜ್ಜಣ್ಣ, ನಾಗರಾಜ, ವೀರಣ್ಣ, ಬೂದಿಹಳ್ಳಿ ರಾಜಣ್ಣ ಇತರರಿದ್ದರು.
ಕಾಡುಗೊಲ್ಲ ಸಮಾಜದವರಿಗೆ ಜಾತಿ ಪ್ರಮಾಣ ಪತ್ರ ಹಾಗು ಸಮುದಾಯವನ್ನು ಎಸ್ಟಿಗೆ ಸೇರಿಸದಿದ್ದರೆ ಮುಂಬರುವ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಕಾಡು ಗೊಲ್ಲ ಸಮಾಜದ ತಾಲ್ಲೂಕು ಅಧ್ಯಕ್ಷ ರಾಜಣ್ಣ ಎಚ್ಚರಿಕೆ ನೀಡಿದ್ದಾರೆ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments