ಚಳ್ಳಕೆರೆ ಆ.5 ದೇಶದ ರಕ್ಷಣೆಗಾಗಿ ಹೋರಾಟ ಮಾಡಿದ ಸೈನಿಕರಿಗೆ ಸರಕಾರ ಮಂಜುರಾತಿ ನೀಡಿದ ಭೂಮಿಯನ್ನು ಬೇರೆಯವರಿಗೆ ಖಾತೆಮಾಡಿದ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಕರುನಾಡ ವಿಜಯಸೇನೆ ಪ್ರತಿಭಟನೆ ನಡೆಸಿ ಅಕ್ರೋಶ ವ್ಯಕ್ತಿ ಪಡಿಸಿದ್ದಾರೆ.
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯ ಮುಸ್ಟಲಗುಮ್ಮಿ ಗ್ರಾಮದ ರಿ.ಸ.ನಂ: 20
ರಲ್ಲಿ 20 ಎಕರೆ ದರಕಾಸ್ತು ಜಮೀನಿನಲ್ಲಿ 3 ಜನ ಮಾಜಿ ಯೋದರಲ್ಲಿ ಒಬ್ಬರಾದ ಮಹಮ್ಮದ್
ರಿಯಾಜ್ ಇವರ ತಂದೆಯಾದ ಮಹಮ್ಮದ್ ಗೌಸ್ ಇವರಿಗೆ ಜಮೀನು ಮಂಜೂರು
ಮಾಡಲಾಗಿತ್ತು. ಎಲ್‌ಎನ್‌ಡಿ ಸಿಆರ್:
25/90-91 ರಂತೆ ನಮ್ಮ ಮಹಮ್ಮದ್ ರಿಯಾಜ್ ಇವರ ತಂದೆ ಮಹಮ್ಮದ್ ಗೌಸ್ ಇವರನ್ನು
ಸೇರಿಸಿಕೊಂಡು ಒಟ್ಟು ಮೂರು ಜನ ಮಾಜಿ ಯೋಧರಿಗೆ ನೀಡಿದ ಭೂಮಿಯನ್ನು ಚಳ್ಳಕೆರೆ ನಗರದ ಸೈನಿಕ ಆಸ್ಪತ್ರೆಯ ಎಸ್.ಟಿ.ಬಸವರಾಜರೆಡ್ಡಿ,
ಮಹಮ್ಮದ್ ಗೌಸ್, ಸಿ.ಪಿ.ಷಫಿ ಅಹಮ್ಮದ್, ಮುಸ್ಟಲಗುಮ್ಮಿ ಗ್ರಾಮದ ರಿ.ಸ.ನಂ: 20 ರಲ್ಲಿ ಒಟ್ಟು 20 ಎಕರೆ ಜಮೀನು
ಮಂಜೂರಾಗಿದ್ದು, ಇದರಲ್ಲಿ ಮಹಮ್ಮದ್ ರಿಯಾಜ್ ಇವರ ತಂದೆ ಮಹಮ್ಮದ್ ಗೌಸ್ ಇವರ
ಹೆಸರಿಗೆ ಇರುವ ಮೇಲ್ಕಂಡ ರಿ.ಸ.ನಂ ಜಮೀನನ್ನು ಮಹಮ್ಮದ್ ಗೌಸ್ ಇವರ ಹೆಸರಿಗೆ ಭಾಗ
ಇರುತ್ತದೆ ಆದರೆ ಇವರು ಮರಣ ಹೊಂದಿರುತ್ತಾರೆ. ಮೃತನ ಕುಟುಂಬದ ಗಮನಕ್ಕೂ ಹಾಗೂಇವರ ಮಕ್ಕಳ ಅನುಮತಿ ಇಲ್ಲದೇಸಬ್ ರಿಜಿಸ್ಟರ್ ಕಛೇರಿಯಿಂದ ಡಿ.ಎಸ್.ಮಂಜುಳಮ್ಮ ಕೋಂ ಲೇಟ್ ಬಸವರೆಡ್ಡಿ ಇವರಿಗೆ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ
ಕ್ರಯಪತ್ರದ ಮಾರಾಟವಾಗಿ ಜಮೀನು
ಕಛೇರಿಯಲ್ಲಿ ರಿಜಿಸ್ಟರ್ ಆಗಿರುತ್ತದೆ.
ಉಪ ನೊಂದಣಾಧಿಕಾರಿಗಳು ಸರ್ಕಾರದ ಆದೇಶ ಪತ್ರವನ್ನು ಗಮನಿಸದೇ
ಜಮೀನನ್ನು ಕ್ರಯ ಮಾಡಿಕೊಟ್ಟಿರುತ್ತಾರೆ. ಆದ್ದರಿಂದ ಈ ವಿವಾದದಲ್ಲಿ ಉಪ ನೊಂದಣಾಧಿಕಾರಿಗಳು
ಚಳ್ಳಕೆರೆ ಆದ ಇವರು ಸಹ ಹೊಣೆಗಾರರಾಗಿರುತ್ತಾರೆ. ಸದರಿ ಜಮೀನನ್ನು ಅಕ್ರಮವಾಗಿ ಮಹಮ್ಮದ್ ರಿಯಾಜ್ ಇವರ ತಂದೆ ಮಹಮ್ಮದ್ ಗೌಸ್ ಇವರಿಗೆ ಮೋಸದಿಂದ ಕ್ರಯ ಮಾಡಿಸಿಕೊಂಡಿರುವುದರಿಂದ ಮೃತ ಸೈನಿಕ ರಿಯಾಜ್ ಕುಟುಂಬಕ್ಕೆ ಅನ್ಯಾಯವಾಗಿರುತ್ತದೆ.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಧ್ಯಪ್ರವೇಶ ಮಾಡಿ ಅಕ್ರಮ ಖಾತೆ ಮಾಡಿಕೊಂಡವರಿಂದ ಮೃತ ಯೋದರ ಕುಟುಂಬ ನ್ಯಾಯಕೊಡಿಸ ಬೇಕು ಅಕ್ರಮಖಾತೆ ಮಾಡಿರುವ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಕರುನಾಡು ವಿಜಯ ಸೇನೆಯ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್.ತಾಲೂಕು ಅಧ್ಯಕ್ಷ ಪಾಂಡು .ಜಗದೀಶ್ ಸಿ.ಜಿಲ್ಲಾ ಕಾರ್ಯದರ್
ರಾಕೇಶ್. ಅಣ್ಣಪ್ಪ.ವೀರೇಶ.ವೀಣಾ ಗೌರಣ್ಣ ಮಂಜುಪ್ರಸಾದ್ ಇತರರು ಆಗ್ರಹಿಸಿದ್ದಾರೆ
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments