ಹೊಸಕೋಟೆ ಕುಖ್ಯತಾ ಬೈಕ್ ಕಳ್ಳರ ಬಂಧನ 41 ಬೈಕ್ ಗಳ ವಶ ವಿಲಾಸಿ ಜೀವನಕ್ಕಾಗಿ ಬೈಕ್ ಕಳ್ಳತನ : ಹೊಸಕೋಟೆ ಪೊಲೀಸರಿಂದ ಬಂದನ

by | 19/11/23 | ಕ್ರೈಂ


ಹೊಸಕೋಟೆ ಕುಖ್ಯತಾ ಬೈಕ್ ಕಳ್ಳರ ಬಂಧನ 41 ಬೈಕ್ ಗಳ ವಶ
ವಿಲಾಸಿ ಜೀವನಕ್ಕಾಗಿ ಬೈಕ್ ಕಳ್ಳತನ : ಹೊಸಕೋಟೆ ಪೊಲೀಸರಿಂದ ಬಂದನ


ಮನೆಯ ಮುಂದೆ ಹಾಗೂ ಪಾರ್ಕಿಂಗ್ ಗಳಲ್ಲಿ ನಿಲ್ಲಿಸಲಾಗಿದ್ದ ಬೈಕ್ ಗಳನ್ನು ಕಳುವು ಮಾಡುತ್ತಿದ್ದ ಕುಖ್ಯಾತ ಬೈಕ್ ಕಳ್ಳರನ್ನು ಬಂದಿಸಿ ಸುಮಾರು 35 ಲಕ್ಷ ಬೆಲೆಬಾಳುವ ಒಟ್ಟು 41 ಬೈಕ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಹೊಸಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.


ಕೋಲಾರ ಜಿಲ್ಲೆಯ ಮಾಲೂರು ಮೂಲದ ಕಲೀಂಪಾಶ ಬಂದಿತ ಆರೋಪಿ. ಆರೋಪಿಯಿಂದ 17 ಡಿಒ ಬೈಕ್, ನಾಲ್ಕು ಬಜಾಜ್ ಡಿಸ್ಕವರಿ, ಆರು ಪಲ್ಸರ್ ಬೈಕ್, ಐದು ಸ್ಪ್ಲೆಂಡರ್ ಮೋಟಾರ್ ಸೈಕಲ್, ಆರು ಆಕ್ಟಿವ ಹೋಂಡಾ, ಒಂದು ರಾಯಲ್ ಎನ್ಫೀಲ್ಡ್, ಒಂದು ಯಮಹಾ ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ. ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 41 ಪ್ರಕರಣಗಳನ್ನು ಯಶಸ್ವಿಯಾಗಿದ್ದಾರೆ.
ಆರೋಪಿ ಕಲೀಮ್ ಪಾಷ ಮಾಲೂರು ಟೌನ್ ನಲ್ಲಿ ಒಂದು ಪಂಚರಂಗಡಿಯಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿಕೊಂಡಿದ್ದ. ಆ ಸಮಯದಲ್ಲಿ ಸುತ್ತಮುತ್ತಲ ಜನರನ್ನ ಪರಿಚಯ ಮಾಡಿಕೊಂಡಿದ್ದು, ನಂತರ ಬೆಂಗಳೂರ್ ನಗರಕ್ಕೆ ಬಂದು ನೆಲೆಸಿದ್ದ. ಬೆಂಗಳೂರಿನಲ್ಲಿ ಆತನ ಸ್ನೇಹಿತ ಜಮೀನಿನ ಜೊತೆಗೆ ಸೇರಿಕೊಂಡು ಹೊಸಕೋಟೆ ಟೌನ್ ಮಾಲೂರು ಮತ್ತು ಬೆಂಗಳೂರು ನಗರದ ಪಾರ್ಕಿಂಗ್ ಸ್ಥಳಗಳಲ್ಲಿ, ಮನೆಗಳ ಮುಂದೆ ಬೈಕ್ ನಿಲ್ಲಿಸಿ ಕೆಲಸ ಕಾರ್ಯಗಳಿಗೆ ಹೋಗುವ ಸಾರ್ವಜನಿಕರನ್ನ ಗುರಿಯಾಗಿಸಿಕೊಂಡು ಚಾಣಾಕ್ಷತನದಿಂದ ಹ್ಯಾಂಡಲ್ ಆಫ್ ಮುರಿದು ಇಗ್ನಿಷಿಯನ್ ಡೈರೆಕ್ಟ್ ಮಾಡಿಕೊಂಡು ಬೈಕ್ ಗಳನ್ನು ಕಳುವು ಮಾಡುತ್ತಿದ್ದ. ಕಳವು ಮಾಡಿದ ಬೈಕ್ ಗಳನ್ನು ಈ ಹಿಂದೆ ಕೆಲಸ ಮಾಡುತ್ತಿದ್ದ ಮಾಲೂರು ಹಾಗೂ ಸುತ್ತಮುತ್ತಲಿನ ಪರಿಚಯ ಇರುವವರಿಗೆ ಕಡಿಮೆ ಬೆಲೆಗೆ ಬೈಕುಗಳನ್ನ ದಾಖಲಾತಿಗಳನ್ನ ನಂತರ ನೀಡುವುದಾಗಿ ಹೇಳಿ ಮಾರಾಟ ಮಾಡುತ್ತಿದ್ದ ಹಾಗೂ


ಮುಂಬೈ ಹಾಗೂ ಗೋವಾ ಕ್ಯಾಸಿನೋ ಗಳಲ್ಲಿ ಮೋಜು ಮಸ್ತಿ ಗಾಗಿಬೈಕ್ ಗಳನ್ನು ಕದ್ದು ಮಾರಾಟ ಮಾಡುತ್ತಿದ್ದಂತಹ ಆರೋಪಿ ಕಲೀಮ್ ಪಾಷಾ ಗೋವಾ ಹಾಗೂ ಮುಂಬೈಗಳಲ್ಲಿ ತೆರಳಿ ಲೈವ್ ಬ್ಯಾಂಡ್ ಗಳಿಗೆ ಹಾಗೂ ಕ್ಯಾಸಿನ ಗಳಿಗೆ ಇದರಲ್ಲಿ ಆನ್ಲೈನ್ ಗೇಮಿಂಗ್ ಆಟ ಆಡಿ ಮೋಜು ಮಸ್ತಿ ಮಾಡುತ್ತಿದ್ದ. ಮೋಜು ಹಾಗು ಮಸ್ತಿ ಮಾಡಲಿಕ್ಕೆ ಎಂದು ಬೈಕ್ ಗಳನ್ನು ಕಳುವು ಮಾಡುತ್ತಿದ್ದೆ ಎಂದು ಆರೋಪಿ ಕಡಿಮೆ ಒಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡೆ ತಿಳಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *