ಚಳ್ಳಕೆರೆ
ಪ್ರಸ್ತುತ ದಿನಮಾನಗಳಲ್ಲಿ ನಗರ ಪ್ರದೇಶದಲ್ಲಿ ವಿವಿಧ ಕಾರಣಗಳಿಂದ ಮತದಾನದ ಪರಿಷ್ಕರಣಿಯ ಮತದಾನದ ಪ್ರಮಾಣ ಕಡಿಮೆಯಾಗುತ್ತಿರುವುದು ವಿಷಾಧನೆಯ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು
ನಗರದ ಸೋಮ ಗುದ್ದು ರಸ್ತೆಯಲ್ಲಿ ಬರುವ ಎಚ್ ಪಿ ಸಿ ಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣೆ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಲ್ಲದೆ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಮತದಾರ ಪಟ್ಟಿಯ ಪರಿಷ್ಕರಣಿಯ ಸೇರ್ಪಡೆಗೆ ಜನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು
ಮತದಾರರು ಸರ್ಕಾರದ ಆದೇಶದ ಮೇರೆಗೆ ಹಮ್ಮಿಕೊಂಡಿರುವ ಜನ ಜಾಗೃತಿ ಜಾತವನ್ನು ನಿಮಗೋಸ್ಕರವೇ ಮಾಡಿರುತ್ತೇವೆ ಸಾರ್ವಜನಿಕರು ಯುವಕ ಯುವತಿಯರು ಗ್ರಾಮಾಂತರದ ಸಾರ್ವಜನಿಕರು ಆನ್ಲೈನ್ ಮೂಲಕ ಅಲ್ಲವೇ ಮತದಾರ ಚುನಾವಣೆ ಇಲಾಖೆಗೆ ಹೋಗಿ ನಿಮ್ಮ ಹೆಸರುಗಳನ್ನು ನೊಂದಾಯಿಸಿ ಕೊಳ್ಳಿ ವಿಶೇಷವಾಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತದಾನದ ಕುರಿತು ತಮ್ಮ ತಂದೆ ತಾಯಿಗಳಿಗೆ ಹಾಗೂ ನೆರೆ ಹೊರೆ ದವರಿಗೆ ವಿದ್ಯಾರ್ಥಿಗಳು ಜನ ಜಾಗೃತಿ ಮೂಡಿಸುವುದು ಅತ್ಯವಶ್ಯವಾಗಿರುತ್ತದೆ18 ವರ್ಷ ಮೇಲ್ಪಟ್ಟ ಯುವಕ ಯುವತಿಯರು ಹೊರಗೆ ಉಳಿಯದಂತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕು ಎಂದರು
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಪ್ರಾಚಾರ್ಯ ನರಸಿಂಹಮೂರ್ತಿ ಚಿತ್ತಯ್ಯ ನಗರಸಭೆ ಪೌರಾಯುತ್ತ ಚಂದ್ರಪ್ಪ ಹಾಗೂ ಶಾಲಾ ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು
0 Comments