ಅಪರೂಪದಲ್ಲಿ ಅಪರೂದ ವರಧಿಯ ವಿಶೇಷ.
ಪರಶುರಾಂಪುರ ಜನಧ್ವನಿ ವಾರ್ತೆ ಅ.28. ಕೋತಿಯ ಹಾವಳಿಗೆ ಕುರಿ ಪಾಲಕ ತತ್ತರಿಸಿ ಹೋಗಿದ್ದು ಮಂಗನ ದಾಳಿಗೆ ನಿದ್ದೆಕೆಡಿಸಿ ಆತಂಕವನ್ನುಂಟು ಮಾಡಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಪರಶರಾಂಪುರ ಸಮೀಪದ ಕರೆಕಲ್ಲಟ್ಟಿಯ ಈರಣ್ಣ ಇವರ ಕುರಿಹಟ್ಟಿಯಲ್ಲಿರವ ಕುರಿ ಹಿಂಡಿನ ಮೇಲೆ ಕೆಲದಿನಗಳಿಂದ ರಾತ್ರಿ ಹೊತ್ತು ಕುರಿಗಳ ಮೇಲೆ ದಾಳಿ ನಡೆಸುವ ಈ ಹುಚ್ಚು ಕೋತಿ, ಕುರಿಹಟ್ಟಿಯಲ್ಲಿರುವ ಕುರಿಗಳನ್ನು ಹೆಚ್ಚು ಟಾರ್ಗೆಟ್ ಮಾಡಿ ಗಾಯಗೊಳಿಸಿದ್ದು ಕೋತಿಯ ಹುಟ್ಟಾಟ ಹಾಗೂ ದಾಳಿಗೆ ಸಿಲುಕಿ 10 ಕುರಿಗಳು ಗಾಯಗೊಂಡು ಒಂದು ಟಗರ್ ಮೃತಪಟ್ಟಿದೆ. ಕುರಿಗಳ ಮೇಲೆ ನಾಯಿ, ಚಿರತೆ,ತೋಳಗಳು ದಾಳಿ ಮಾಡವುದನ್ನು ಕಂಡಿದ್ದೇವೆ ಇದೇ ಮೊದಲು ಕೋತಿಯೊಂದು ಅದರಲ್ಲೂ ರಾತ್ರಿವೇಳೆ ದಾಳಿ ಮಾಡುತ್ತಿರುವು ಆಶ್ಚರ್ಯ ಒಂದು ಕಡೆಯಾದರೆ ಮಳೆ ಬೆಳೆಯಿಲ್ಲದೆ ಮೇವಿನ ಕೊರತೆ ಹಾಗೂ ಬಿಸಿನ ತಾಪದಲ್ಲಿ ಅವುಗಳ ಪಾಲನೆ ಪೋಷಣೆ ಮಾಡಲು ಕುರಿಗಾಹಿಗಳಿಗೆ ಸಂಕಷ್ಚ ಇದರ ನಡುವೆ ಈಗ ಏಕಾ ಏಕಿ ಕೋತಿಯೊಂದು ಗ್ರಾಮದಲ್ಲಿ ಕುರಿಗಳ ಮೇಲೆ ದಾಳಿ ನಡೆಸಿ ಮಾರಣಾಂತಿಕ ಗಾಯಗೊಳಿಸುವುದರಿಂದ ಕುರಿ ಸಾಕಾಣಿಕೆ ದಾರರಿಗೆ ನಿದ್ದೆ ಗೆಡಿಸುವಂತೆ ಮಾಡಿ ಆತಂಕಕ್ಕೆ ದೂಡಿದೆ.
ಹಗಲಲ್ಲಿ ಎಲ್ಲಿಯೂ ದಾಳಿ ಮಾಡದೆ ಜನರ ಕಣ್ಣಿಗೆ ಕಾಣದ ,ಜನರ ಮೇಲೆ ಎರಗದ ಹಾಗೂ ಯಾರಿಗೂ ತೊಂದರೆ ಕೊಡದ ಕೋತಿ ರಾತ್ರಿಯಾದರೆ ಸಾಕು ಕುರಿಯಗಳ ಹಿಂಡಿನ ಮೇಲೆ ದಾಳಿ ಮಾಡಲು ಮುಂದಾಗುತ್ತದೆ.
ಟಗರ್ ಹಾಗೂ ಮೇಕೆಗಳಲೇ ಕೋತಿಯ ಟಾರ್ಗೇಟ್.
ಈ ಕೋತಿ ಕುರಿ ಜತೆ ಮರಿಗಳ ಮೇಲೆ ದಾಳಿ ನಡೆಸುವುದಿಲ್ಲ ಅದರ ಬದಲು ಟಗರು ಇಲ್ಲವೆ ಮೇಕೆ ಓತದ ಮೇಲೆ ದಾಳಿ ನಡೆಸಿ ಅದರ ತೊಡೆ ಭಾಗಕ್ಕೆ ಮಾತ್ರ ದಾಳಿ ನಡೆಸುತ್ತದೆ ಮಂಗನ್ನು ಓಡಿಸಲು ಹೋದರೆ ಗುರ್ರ್ ಎಂದು ಮೇಲೆರಗುವಂತೆ ಭಯ ಹುಟ್ಟಿಸತ್ತದೆ. ಪ್ರತಿ ದಿನ ರಾತ್ರಿ ಎರಡ್ಮೂರು ಘಂಟೆಗೆ ಬಂದು ಇಲ್ಲಿಯ ತನಕ ಹತ್ತು ಕುರಿ ಟಗರಿನ ತೊಡೆಯ ಭಾಗಕ್ಕೆ ( ಬೀಜದ ಭಾಗಕ್ಕೆ )ದಾಳಿ ನಡೆಸುತ್ತದೆ.ಅದರಲ್ಲಿ ಈಗಾಗಲೇ ಒಂದು ಸಾವನ್ನಪ್ಪಿದೆ. ವೈದ್ಯರಿಂದ ಚಿಕಿತ್ಸೆ ನೀಡಿದರು ಬದುಕಲಿಲ್ಲಾ ಎಂದು ಕುರಿಸಾಕಣಿ ರೈತ ಈರಣ್ಣ ಅಳಲು ತೋಡಿಕೊಂಡಿದ್ದಾರೆ.
ಈಗಲಾದರೂ ಸಂಬಂಧ ಇಲಾಖೆ ಕುರಿಗಳ ಮೇಲೆ ದಾಳಿ ಮಾಡುವ ಕೋತಿಯ ಕಡಿವಾಣಕ್ಕೆ ಮುಂದಾಗುವರೇ ಕಾದು ನೋಡ ಬೇಕಿದೆ.
ಕುರಿಗಳ ಮೇಲೆ ನಾಯಿ, ಚಿರತೆ,ತೋಳ ದಾಳಿ ಮಾಡವುದನ್ನು ಕಂಡಿದ್ದೇವೆ ಇಲ್ಲೊಂದು ಕೋತಿ ರಾತ್ರಿಯಾದರೆ ಸಾಕು ಟಗರ್ ಮೇಕೆಗಳ ಟಾರ್ಗೇಟ್ ಮಾಡಿ ದಾಳಿ ನಡೆಸಿ ಆತಂಕ ಸೃಷ್ಠಿಮಾಡಿದೆ..
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments