ಮಳೆಗಾಗಿ ಮಹಿಳೆಯರಿಂದ ವಿಶೇಷ ಪೂಜೆ

by | 30/08/23 | ಜೀವನಶೈಲಿ


ಚಳ್ಳಕೆರೆ ಆ.30.ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಅನ್ನದಾತರ ಬಿತ್ತನೆ ಮಾಡಿದ ಬೆಳೆಗಳ ಒಣಗಲು ಪ್ರಾರಂಭಿಸಿದ್ದು ಇದರಿಂದ ರೈತರು ಪರಿತಪಿಸುವಂತಾಗಿದೆ. ಬೇಗನೇ ಬಾರೋ ಮಳೆರಾಯ ಎಂದು ಹತ್ತು ಹಲವು ಆಚರಣೆಗಳ ಮೂಲಕ ಪೂಜೆ ಸಲ್ಲಿಸಲು ಮುಂದಾಗಿದ್ದಾರೆ.

ಹೌದು ಇದು ಚಳ್ಳಕೆರೆ ತಾಲೂಕಿನ ಗೋಪಹಳ್ಳಿ ಗ್ರಾಮದ ಮಹಿಳೆಯರು ಗುಬ್ಬಮ್ಮ ಒಂದು ಚೆಂಬಿನಲ್ಲಿ ನೀರು ತುಂಬಿ ಅದರಲ್ಲಿ ಕಪ್ಪೆ ಹಾಕಿ ವಿಶೇಷ ಪೂಜೆಸಲ್ಲಿ ನಂತರ ಗ್ರಾಮದ ಬುಡ್ಡೆ(ಗುಡ್ಡೆ)ಕಲ್ಲಿಗೆ ಐದು ಕೊಡ ನೀರು .ಐದು ತರದ ಹೂವು
ಐದು ಕೊಡ ನೀರು ಹಾಕಿ ವಿಶೇಷ ಪೂಜೆ ಸಲ್ಲಿನ ನಂತರ ಗ್ರಾಮದಲ್ಲಿನ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಿ ಪೋಜೆ ಸಲ್ಲಿ ಗ್ರಾಮದಲ್ಲಿ ಪ್ರತಿ ಮನೆಗಳಿಗೆ ಮೂರು ತೆರಳಿ ಗುಬ್ಬಮ್ಮ ನ್ನು ಒತ್ತ ಮಹಿಳೆಗೆ ಗುಬ್ಬನಿಗೆ ಹರಿಶಿನ ಕುಂಕುಮ ಹೂವು ಮುಡಿಸಿ ಪೂಜಿಸಿ ಗುಬ್ಬಮ್ಮನ ತಲೆ ಮೇಲೆ ನೀರು ಹಾಕುತ್ತಾರೆ ಮಹಿಳೆಯರು ಮಳೆರಾಯನನ್ನು ಆಹ್ವಾನಿಸುತ್ತಾರೆ.

ಮಹಿಳೆಯರು ಗುಬ್ಬಮ್ಮ ಗುಬ್ಬಮ್ಮ ಎಲ್ಲಾಡಿ ಬಂದೆ. ಹಳ್ಳಕೊಳ್ಳ ಸುತ್ತಾಡಿ ಬಂದೆ. ನೀರಿಂತಾಡಿ ನಿಂತಾಡಿ ಬಂದೆ ಮಳೆಯೋ.. ಸುರಿ ಸುರಿ ಸುರಿಯೋ ಮಳೆರಾಯ, ಬಣ್ಣ ಕೊಡ್ತೇನಿ ಬಾರಲೇ ಮಳೆಯೇ ಸುಣ್ಣ ಕೊಡ್ತೇನಿ ಸುರಿಯಲೇ ಮಳೆಯೇ’ ಎಂದು ಮಹಿಳೆಯರು ಹಾಡುತ್ತಿರುವ ದೃಶ್ಯ ಕಂಡುಬಂದಿತು.
ಗ್ರಾಮದಲ್ಲಿ ಮನೆಗಳನ್ನು ಸುತ್ತಾಡಿ ಮನೆಯವರು ನೀಡಿದ ರಾಗಿ ಇಟ್ಟು. ಅಕ್ಕಿ.ತರಕಾರಿ ಸೇರಿದಂತೆ ಇತರೆ ದವಸ ಧಾನ್ಯಗಳಿಂದ ಅಡುಗೆ ಮಾಡಿಕೊಂಡು ಊರ ಹೊರಗೆ ಹೋಗಿ ಮಳೆರಾಯನಿಗೆ ವಿಶೇಷ ಪೂಜೆ ಸಲ್ಲಿಸಿ ಮಕ್ಕಳಿಗೆ ಸೇರಿದಂತೆ ದೊಡ್ಡವರಿಗೆ ಪ್ರಸಾದ ಬಡಿಸಿ ಅಲ್ಲಿಂದ ಊರಿನ ಒಳಗೆ ಮಕ್ಕಳು ಬಸಯಿಬಡಿಕೊಂಡು ಬಾರೋ ಬಾರೋ ಮಳೆರಾಯ ಎಂದು ಕೂಗುತ್ತಾ ಊರೊಳಗೆ ಪ್ರವೇಶ ಮಾಡುತ್ತಾರೆ. ಮಳೆ ಕೈಕೊಟ್ಟಾಗ. ಕತ್ತೆಗಳ ಮದುವೆ. ಗ್ರಾಮದೇವರಲ್ಲಿ ವೀರಾಟ ಪರ್ವ. ಗುಡ್ಡೆಕಲ್ಲಿಗೆ ನೀರು ಹಾಕುವುದು. ಗುಬ್ಬಮ್ಮನ ಪೂಜೆ ಹೀಗೆ ಹತ್ತು ಹಲವು ಪೂಜೆಗಳನ್ನು ಆಚರಣೆ ಮಾಡಿದಾಗ ಮಳೆ ಬರುತ್ತದೆ ಎಂಬ ನಂಬಿಕೆ ಅದರಂತೆ ಪೂರ್ವಜರು ಆಚರಣೆ ಮಾಡಿಕೊಂಡ ಪದ್ದತಿಯನ್ನು ನಾವೂ ಕೂಡ ಮಾಡಿಕೊಂಡು ಬಂದ್ದೀವೆ ಮಳೆ ಬರುತ್ತದೆ ಎಂಬ ನಂಬಿಕೆ ನಮಗಿದೆ ಎಂದು ಏಕಾಂತಮ್ಮ ಮಾಹಿತಿ ನೀಡಿದರು. ವಿಶೇಷ ಪೂಜೆಯಲ್ಲಿ ದ್ಯಾಮಕ್ಕ.ಸುವರ್ಣಮ್ಮ. ಪಾರ್ವತಮ್ಮ.ಹನುಮಕ್ಕ.ರಂಗಮ್ಮ ಮಾರಕ್ಕ ಲಕ್ಷ್ಮಮ್ಮ ಇತರರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *