ಹರಿಪ್ರಸಾದ್ ಸಾಹೇಬರಿಗೆ ಬಹಿರಂಗ ಪತ್ರ ಬರೆದ ಕಾಂಗ್ರೆಸ್ ಕಾರ್ಯಕರ್ತ ಕಂದಿಕೆರೆಸುರೇಶ್ ಬಾಬು.

by | 11/09/23 | ಇವತ್ತಿನ ಟ್ವೀಟ್


ಹಿರಿಯೂರು ಹರಿಪ್ರಸಾದ್ ಸಾಹೇಬರಿಗೆ ಬಹಿರಂಗ ಪತ್ರ ಬರೆದ ಕಾಂಗ್ರೆಸ್ ಕಾರ್ಯಕರ್ತ…
ಹರಿಪ್ರಸಾದ್ ಅವರು ಹಿಂದಿನ ಸಭೆಯಲ್ಲಿ ಹೇಳಿದಂತೆ ನಮ್ಮ ದೇಶದಲ್ಲಿ ಐದು ರಾಜ್ಯದ ಮುಖ್ಯಮಂತ್ರಿ ಮಾಡಿರೋರು ನೀವು ನಿಮಗೆ ಮುಖ್ಯಮಂತ್ರಿ ಮಾಡೋದು ಗೊತ್ತು ಇಳಿಸುವುದು ಗೊತ್ತು ಆದರೆ ಯಾಕೋ ಇತ್ತೀಚಿಗೆ ಮಂತ್ರಿ ಪದವಿ ಬಗ್ಗೆ ನಿಮ್ಮ ಸಮಾಜದ ಸಭೆ ಸಮಾರಂಭಗಳಲ್ಲಿ ಹೇಳೋದು ಸರಿ ಅನಿಸುತ್ತಿಲ್ಲ. ನೀವು ರಾಷ್ಟೀಯ ಮುಖಂಡರು. ನಿಮ್ಮಲ್ಲಿ ನನ್ನದೊಂದು ಮನವಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅತಿ ಹಿಂದುಳಿದ ಸಮಾಜದ ಸಮಾವೇಶದಲ್ಲಿ ಪರಮೇಶ್ವರ್ ರವರು ಸತೀಶ್ ಜಾರಕಿಹೊಳೆ ಅವರನ್ನ ಹಾಗೂ ಅಲ್ಪಸಂಖ್ಯಾತರನ್ನ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿ ಮಾಡಲಿಲ್ಲ ಎಂದು ಹೇಳಿದ್ದೀರಿ. ಇವರುಗಳನ್ನು ಹೈಕಮಾಂಡ್ ಉಪಮುಖ್ಯಮಂತ್ರಿ ಮಾಡಿಕೊಳ್ಳಲು ಹೇಳಿತ್ತಾ ಹೇಳಿದ್ದರೆ ಮುಖ್ಯಮಂತ್ರಿಗಳು ಯಾಕೆ ಮಾಡಿಕೊಳ್ಳಲಿಲ್ಲ ನೀವು ಆಗ ಹೈಕಮಾಂಡ್ ಮುಂದೆ ಯಾಕೆ ವಿರೋಧ ವ್ಯಕ್ತಪಡಿಸಲಿಲ್ಲ ಎಂಬುದನ್ನು ಜನಗಳ ಮುಂದೆ ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಕಂದಿಕೆರೆ ಸುರೇಶ್ ಬಾಬು ಆಗ್ರಹ ಮಾಡಿದ್ದಾರೆ.
ನಿಮ್ಮ ಗೌರವ ನೀವು ಕಳೆದು ಕೊಳ್ಳಬಾರದು ನಿಮ್ಮ ಬಗ್ಗೆ ಹಿಂದುಳಿದ ಸಮಾಜಗಳಲ್ಲಿ ಗೌರವ ಇದೆ ಅದನ್ನ ಉಳಿಸಿಕೊಳ್ಳಿ ನೀವು ಮಂತ್ರಿ ಮುಖ್ಯ ಮಂತ್ರಿ ಆದ್ರೆ ರಾಜ್ಯದ ಜನತೆಗೆ ಸಂತೋಷ ಆಗುತ್ತದೆ. ಆದರೆ ಮಂತ್ರಿ ಪದವಿ ಹಾದಿ ಬೀದಿಯಲ್ಲಿ ಸಿಗುವ ಸ್ಥಾನವಲ್ಲ ಅಂತ ನಿಮಗೂ ಗೊತ್ತು. ಯಾಕೆಂದ್ರೆ ನೀವು ಎಷ್ಟೋ ರಾಜ್ಯಗಳ ಮುಖ್ಯಮಂತ್ರಿಗಳನ್ನ ಮಾಡಿದವರು ಆ ಸ್ಥಾನದ ಬಗ್ಗೆ ನಿಮಗೂ ಗೊತ್ತು ನನ್ನಂತ ಸಣ್ಣ ಕಾರ್ಯಕರ್ತನಿಗೂ ಸಹ ಗೊತ್ತು. ನಿಮ್ಮ ಕೈಲ್ಲಿ ಹೈಕಮಾಂಡ್ ಇದೆ. ನೀವು ಮಂತ್ರಿ ಆಗೋದು ಸುಲಭ. ಆದ್ರೆ ಸಿದ್ದರಾಮಯ್ಯನಂತ ಸಾಮಾನ್ಯ ಮನುಷ್ಯ 1984ರಲ್ಲಿ ಯಾವದೇ ರಾಜಕೀಯ ಬೆಂಬಲವಿಲ್ಲದೆ ಸಾಮಾನ್ಯ ವಕೀಲನಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಪಕ್ಷೇತರನಾಗಿ ಗೆದ್ದು 2023ರವರೆಗೂ ಹೋರಾಟದ ಮೂಲಕ ಚುನಾವಣೆಯಲ್ಲಿ ಸೋಲು ಗೆಲುವನ್ನು ಕಂಡು ಎರಡು ಬಾರಿ ಉಪಮುಖ್ಯಮಂತ್ರಿ ಹಾಗೂ ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಿ ಎರಡು ಬಾರಿ ಈ ರಾಜ್ಯದ ಮುಖ್ಯಮಂತ್ರಿ ಅಗಿದ್ದಾರೆ. ಈ ರಾಜ್ಯದ ಜನಾಭಿಪ್ರಾಯ ಮತ್ತು ಶಾಸಕರ ಅಭಿಪ್ರಾಯ ಹಾಗೂ ಹೈಕಮಾಂಡ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ರಾಷ್ಟೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರ ಆಶೀರ್ವಾದದಿಂದ ಆಗಿರೋದು. ಅದು ನಿಮಗೂ ಗೊತ್ತಿದೆ. ನೀವು ಸಿದ್ದರಾಮಯ್ಯನವರನ್ನು ಜಾತಿವಾದಿ ಎಂದು ಸಮಾವೇಶದಲ್ಲಿ ಹೇಳಿದ್ದೀರಿ ನಾನು ಇಲ್ಲಿ ಸಿದ್ದರಾಮಯ್ಯನವರ ಬಗ್ಗೆ ಹೋಗಳಬೇಕಾದ ಅವಶ್ಯಕತೆ ಇಲ್ಲ. ನಾನು ಸುಮಾರು ಇಪ್ಪತ್ತುವರ್ಷಗಳ ಕಾಲ ಅವರ ಜೊತೆ ಶಿಷ್ಯನಾಗಿ ಒಡನಾಟ ಹೊಂದಿದ್ದರು ಸಹ ಅವರು ಹಿಂದೆ ಅಂದ್ರೆ 2013 ರಿಂದ 18ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನನ್ನ ಪತ್ನಿ ಚಿತ್ರದುರ್ಗ ಜಿಲ್ಲಾ ಪಂಚಾಯತಿಗೆ ಒಪ್ಪಂದ ಪ್ರಕಾರ ಅಧ್ಯಕ್ಷರಾಗುವ ಸಂದರ್ಭ ಬಂದಾಗ ಕುರುಬ ಸಮಾಜದವರು ಈಗಾಗಲೇ ಹಿಂದೆ ಜಿಲ್ಲೆಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ. ಜಿಲ್ಲೆಯಲ್ಲಿ ಉಪ್ಪಾರ ಸಮಾಜದವರಿಗೆ ಸ್ಥಾನ ಸಿಕ್ಕಿಲ್ಲ ಹಾಗಾಗಿ ಉಪ್ಪಾರ ಸಮಾಜದ ಹೆಣ್ಣು ಮಗಳಿಗೆ ಅವಕಾಶ ಮಾಡಿ ಕೊಡಿ ಎಂದು ಜಿಲ್ಲೆಯ ಪಕ್ಷದ ಮುಖಂಡರಿಗೆ ಸೂಚನೆ ನೀಡಿದ್ದರು. ಅವರು ಸ್ವಜಾತಿಯವರಿಗಿಂತ ಮೊದಲು ಬೇರೆ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ ಪಂಗಡಗಳ ಎಲ್ಲ ಶೋಷಿತ ಸಮಾಜಗಳಿಗೆ ಹೆಚ್ಚು ಸಹಾಯ ಮಾಡಿದ್ದಾರೆ. ರಾಜಕೀಯದಲ್ಲಿ ಪರಿಣಿತರಾದ ನೀವು ಜನಾಅಭಿಪ್ರಾಯದ ವಿರುದ್ಧ ಮಾತಾಡೋದು ಯಾಕೋ ನಿಮ್ಮಂತ ಕಟ್ಟಾ ಆರ್ ಎಸ್ ಎಸ್ ವಿರೋಧಿ ಹಾಗೂ ಕಟ್ಟಾ ಕಾಂಗ್ರೆಸಿಗರಾದಂತ ನಿಮಗೆ ಸರಿ ಕಾಣುವುದಿಲ್ಲ. ನೀವು ಈ ರಾಜ್ಯದಿಂದ 30 ವರ್ಷಗಳ ಕಾಲ ರಾಜ್ಯಸಭೆ ಹಾಗು ವಿಧಾನ ಪರಿಷತ್ನಲ್ಲಿ ಸಭಾನಾಯಕನ ಸ್ಥಾನವನ್ನು ಅನುಭವಿಸಿದ ನೀವು ಹಿಂದೆಯೇ ಈ ರಾಜ್ಯದಿಂದ ಮಂತ್ರಿ ಹಾಗೂ ಮುಖ್ಯಮಂತ್ರಿ ಆಗಬಹುದಿತ್ತು.? ಈಗ ಜನಾಭಿಪ್ರಯದಿಂದ ಆಯ್ಕೆ ಆಗಿರುವಂತಹ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವದು ನನ್ನಂತ ನಿಮ್ಮ ಅಭಿಮಾನಿಗೆ ನಿಮ್ಮ ಹೇಳಿಕೆ ಸರಿ ಅನಿಸಲಿಲ್ಲ ನೀವು ಸಹ ಮುಂದಿನ ಚುನಾವಣೆಯಲ್ಲಿ ಜನಪ್ರತಿನಿಧಿಯಾಗಿ ಗೆದ್ದು ಈ ರಾಜ್ಯದ ಹಿಂದುಳಿದ ನಾಯಕರಾದ ಬಂಗಾರಪ್ಪನವರಂತೆ ಸ್ವಂತ ಶ್ರಮದಿಂದ ರಾಜ್ಯದ ಮುಂದಿನ ಮಂತ್ರಿ ಹಾಗೂ ಮುಖ್ಯಮಂತ್ರಿ ಆಗಬೇಕೆಂದು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಕಂದಿಕೆರೆ ಸುರೇಶ್ ಬಾಬು ಆಶಿಸಿದ್ದಾರೆ.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page