ಮಳೆದ ಬಾರದೆ ಬಿತ್ತನೆ ಮಾಡಿದ ಬೆಳೆಗಳು ಬಾಡುತ್ತಿರುವುದು ರೈತರ ಆತಂಕ.

by | 10/07/24 | ಕೃಷಿ


ಚಳ್ಳಕೆರೆ ಜನಧ್ವನಿ ವಾರ್ತೆ ಜು.10 ಕಳೆದ ತಿಂಗಳು ಸ್ವಲ್ಪಮಟ್ಟಿಗೆ ಕರುಣೆ ತೋರಿದ ಮುಂಗಾರು ಮಳೆ ನಂತರ ಮಾಯವಾದ ಮಳೆರಾಯ ಬಿತ್ತನೆ ಮಾಡಿದ ಬೆಳೆ ಬಾಡುತ್ತಿದ್ದು ಮತ್ತೊಂದೆಡೆ ಬಿತ್ತನೆ ಮಾಡಲು ಭೂಮಿ ಹಸನು ಮಾಡಿಕೊಂಡು ರೈತರು ಮಳೆಗಾಗಿ ಮುಗಿಲುನೋಡುವಂತಾಗಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಬಡವರ ಬಾದಮಿ ಶೇಂಗಾ ಪರಶುರಾಂಪುರ, ನಾಯಕನಹಟ್ಟಿ ತಳಕು ಹಾಗೂ ಕಸಬ ಹೋಗಳಲ್ಲಿ ಶೇಂಗಾ ಬಿತ್ತನೆ ಅವಧಿಗೆ ಮುನ್ನವೇ ಬಿತ್ತನೆ ಮಾಡಿದ್ದು ಇನ್ನು ಅನೇಕ ರೈತರ ಬಿತ್ತನೆ ಮಾಡಲು ಬೀಜ ಗೊಬ್ಬರ ಹಾಗೂ ಭೂಮಿ ಹಸನು ಮಾಡಿಕೊಂಡು ಮಳೆ ಬಂದ ತಕ್ಷಣ ಬಿತ್ತನೆ ಮಾಡಲು ರೈತರು ಮಳೆಗಾಗಿ ದೇವರಲ್ಲಿ ಪ್ರಾರ್ಥನೆ ವಿಶೇಷ ಪೂಜೆಗಳ ಮೊರೆ ಹೋಗಿದ್ದಾರೆ.

ಬಿತ್ತನೆ ಮಾಡಲು ಭೂಮಿ ಹಸನು ಮಾಡಿಕೊಂಡು ಮಳೆಗಾಗಿ ಕಾಯುತ್ತಿರುವ ರೈತರು.
ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಗೆ ಶೇಂಗಾ, ತೊಗರಿ, ಸಾವೆ, ಬಿತ್ತನೆ ಮಾಡಿದ್ದು ಎಡೆಕುಂಟೆ ಹೊಡೆದು ಕಳೆಯುತ್ತಾರೆ ಈಗ ಮಳೆ ಕೈಗೊಟ್ಟಿದ್ದರಿಂದ ಭೂಮಿಯಲ್ಲಿ ತೇವಾಂಶ ಕೊರತೆಯಿಂದ ಬಿಸಿಲಿನ ತಾಪ ಹಾಗೂ ಗಾಳಿಗೆ ಬೆಳೆಗಳು ಬಾಡುತ್ತಿವೆ.


ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಗೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿರುವ ರೈತರ ಬೆಳೆಗಳು ಮಳೆಬಾರದೆ ಬಾಡುತ್ತಿರುವ ಬೆಳೆಗಳು.
ಮಳೆರಾಯನ ವಕ್ರದೃಷ್ಟಿಯಿಂದ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಶೇಂಗಾ ಬೆಳೆಗಳು ಸಕಾಲಕ್ಕೆ ಮಳೆ ಬಾರದೆ
ಬಿಸಿಲಿನ ತಾಪಕ್ಕೆ ಬಾಡಲು ಪ್ರಾರಂಭವಾಗಿದ್ದು ಅನ್ನದಾತ ಮಳೆರಾಯನ ಕೃಫೆಗಾಗಿ ಮುಗಿಲು ನೋಡುವಂತಾಗಿದೆ. ರೈತರು ಮುಂಗಾರು ಹಂಗಾಮಿನಲ್ಲಿ ಸುರಿದ ಕಡಿಮೆ ಪ್ರಮಾಣದ ಮಳೆಯಿಂದ ಕಡಿಮೆ ಭೂಮಿ ತೇವಾಂಶ ಹಾಗೂ ಒಣ ಭೂಮಿಗೆ ದುಬಾರಿ ಬೆಲೆಯ ಬಿತ್ತನೇ ಶೇಂಗಾ ಬಿತ್ತನೆ ಮಾಡಿದ ನಂತರ ಕಳೆದ ತಿಂಗಳಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಶೇಂಗಾ ಬೆಳೆಯಲ್ಲಿ ಹೆಚ್ಚು ಕಳೆಹುಲ್ಲು ಬೆಳೆದು ಕಳೆತೆಗೆಯಲು ಕೀಟನಾಶಕ. ಎಡೆಕುಂಟೆ ಹೊಡೆದು ಕೂಲಿ ಹಾಳುಗಳ ಸಹಾಯದಿಂದ ಕಳೆ ಹುಲ್ಲು ಸ್ವಚ್ಚ ಪಡಿಸುತ್ತಿದ್ದಾರೆ.
ಇನ್ನು ಒಂದು ವಾರದೊಳಗೆ ಮಳೆ ಬಾರದಿದ್ದರೆ ಬೆಳೆಗಳು ಸಂಪೂರ್ಣವಾಗಿ ಒಣಗಲಿದ್ದು ಈ ಬಾರಿಯೂ ಮಳೆ ಕೈಕೊಟ್ಟರೆ ತೀವ್ರ ಬರಗಾಲಕ್ಕೆ ಸಿಲುಕುವ ಆತಂಕ ರೈತರಲ್ಲಿ ಮನೆ ಮಾಡಿದೆ.
. ಆಗೊಮ್ಮೆ ಈಗೊಮ್ಮೆ ಕೆಲವು ಕಡೆ ಮಳೆ ಬಂದರೆ ಮತ್ತೊ೦ದು ಕಡೆ ಮಳೆ ಬಾರದೆ ಮುಗಿಲಿನತ್ತ ನೋಡುತ್ತ ರೈತ, ‘ಎಲ್ಲಿ ಓಡುವಿರಿ ನಿಲ್ಲಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ ಹೋಗಿ’ ಎಂದು ಪ್ರಾರ್ಥನೆ ಮಾಡಿದರೂ ಮಳೆರಾಯ ಕರುಣೆ ತೋರಿಸುತ್ತಿಲ್ಲ.

ರಾಜ್ಯ ರೈತಸಂಘದ ಹಿರಿಯ ಉಪಾಧ್ಯಕ್ಷ ರೆಡ್ಡಿಹಳ್ಳಿವೀರಣ್ಣ ಜನಧ್ವನಿಯೊಂದಿಗೆ ಮಾತಮನಾಡಿ ಬಯಲು ಸೀಮೆಯ ರೈತರು ಸುಮಾರು 15 ವರ್ಷಗಳಿಂದ ಸಕಾಲಕ್ಕೆ ಮಳೆ ಬೆಳೆಯಾಗದೇ ಅತಿವೃಷ್ಟಿ-ಅನಾವೃಷ್ಟಿಗೆ ಸಿಲುಕಿ ನಷ್ಟ ಅನುಭವಿಸುತ್ತಲೇ ಇದ್ದಾರೆ. ಬೆಳೆ ಬಾರದೆ ಇದಕ್ಕೆ ಸಂಬಂಧಿಸಿದ ವಿಮೆ ಸಹ ಬರದೇ ರೈತರು ಸಾಲದ ದವಡಗೆ ಸಿಲುಕುವಂತೆ ಮಾಡಿದೆ. ಈ ಹಿಂದೆ ಮಾಡಿರುವ ಸಾಲ ಒಂದು ಕಡೆ ಯಾದರೆ ಈಗ ಮತ್ತೆ ಮತ್ತೆ ಸಾಲ ಮಾಡಬೇಕಾದ ಸನ್ನಿವೇಶ ಎದುರಾಗುತ್ತಲೇ ಇದೆ. ಪ್ರತಿ ವರ್ಷದಂತೆ ಈ ಬಾರಿಯೂ ಈರುಳ್ಳಿ, ಶೇಂಗಾ, ತೊಗರಿ,ಸಜ್ಜೆ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದು, ಮಳೆ ಕೈಕೊಟ್ಟ ಕಾರಣ ಋಷ್ಠಿ ಭೂ ಪ್ರದೇಶಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ ಹೊಲಗಳಲ್ಲಿ ಬೆಳೆಗಳು ಒಣಗಲು ಪ್ರಾರಂಭಿಸುವ ದೃಶ್ಯ ಕಂಡುಬರುತ್ತದೆ. ರೈತರಿಗೆ ಈ ಬಾರಿಯೂ ಭರದ ಛಾಯೆ ಬರದ ಛಾಯೆ ರೈತರಲ್ಲಿ ಆತಂಕವನ್ನುಂಟು ಮಾಡಿದೆ. ಬೆಳೆ ಹಾನಿದರೂ ಅವೈಜ್ಞಾನಿಕ ಬೆಳೆ ವಿಮೆ ಪದ್ದತಿಯಿಂದ ಕಳೆದವರ್ಷ ಬಿತ್ತನೆ ಮಾಡಿದ ಶೇಂಗಾ ಬೆಳೆ ನಷ್ಟ ವಾದರೂ ಇನ್ನು ಅನೇಕ ರೈತರಿಗೆ ಬೆಳೆ ವಿಮೆ ಪಾವತಿ ಮಾಡಿಲ್ಲ ಎಂದು ತಿಳಿಸಿದರು.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page