ಪರಿಸರ, ನೈರ್ಮಲ್ಯ ಹಾಗೂ ಪ್ರಕೃತಿಯ ಕಾಳಜಿ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಮೈಸೂರಿನ ಜನಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಮೂರ್ತಿ

by | 13/06/24 | ಪರಿಸರ


ಮೈಸೂರು: ಪರಿಸರ, ನೈರ್ಮಲ್ಯ ಹಾಗೂ ಪ್ರಕೃತಿಯ ಕಾಳಜಿ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಮೈಸೂರಿನ ಜನಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಮೂರ್ತಿ ಹೇಳಿದರು.

ಅವರು ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕಿನ ಹರದನಹಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವಿ ಕಾಲೇಜು ಆವರಣದಲ್ಲಿ ಮೈಸೂರಿನ ಜನಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಗ್ರಾಮ ಪಂಚಾಯಿತಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ, ಸ್ತ್ರೀ ಶಕ್ತಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಗಿಡಗಳನ್ನು ಹಾಕುವುದಕ್ಕಿಂತ ಅವುಗಳನ್ನು ಪೋಷಿಸುವುದು ಬಹಳ ದೊಡ್ಡ ಜವಾಬ್ದಾರಿಯಾದ ಕೆಲಸವಾಗಿದೆ. ಗಿಡಮರಗಳಿದ್ದರೆ ನಾವು, ಹಸಿರೀಕರಣ ಇಂದು ಬಹಳ ಅಗತ್ಯವಾಗಿದೆ. ಪರಿಸರ, ನೈರ್ಮಲ್ಯ ಹಾಗೂ ಪ್ರಕೃತಿಗಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿದಾಗ ಉತ್ತಮವಾದ ಪರಿಸರ ನಿರ್ಮಾಣವಾಗುತ್ತದೆ ಎಂದರು.

ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಮೋಹನ್ ಮಾತನಾಡಿ ಪರಿಸರವನ್ನು ಸರ್ವರೂ ಉಳಿಸಬೇಕು ಆ ಮೂಲಕ ಅದನ್ನು ಸಂರಕ್ಷಿಸಬೇಕು. ಪ್ರತಿಯೊಬ್ಬರೂ ಸಸಿಗಳನ್ನು ನೆಡಬೇಕು ಹಾಗೂ ಅವುಗಳನ್ನು ರಕ್ಷಿಸಬೇಕು. ಪರಿಸರದ ಬಗ್ಗೆ ಎಲ್ಲರೂ ಅರಿವು ಹೊಂದಬೇಕು ಜೊತೆಗೆ ಬೇರೆಯವರಲ್ಲೂ ಅದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ ವಿವಿಧ ಮಾದರಿಯ ಸಸಿಗಳನ್ನು ನೆಡಲಾಯಿತು. ಪ್ರಗತಿ ಕಲಾತಂಡದವರಿಂದ ಪರಿಸರ ಗೀತೆಗಳು ಹಾಗೂ ಅವಾರ್ಡ್ ಸಂಸ್ಥೆಯ ವತಿಯಿಂದ ಆರ್ಥಿಕ ಸಾಕ್ಷರತೆ ಕುರಿತಾದ ಅರಿವು ಮೂಡಿಸುವ ನಾಟಕ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬಿ ಆರ್ ಸಿ ವೆಂಕಟೇಶ್, ಗ್ರಾ.ಪಂ. ಸದಸ್ಯೆ ಎಸ್.ಆರ್.ಮಂಜುಳಾ ರಮೇಶ್, ಪಿಡಿಓ ಮೋಹನ್, ಕಾರ್ಯದರ್ಶಿ ಪುಷ್ಪಕಾಂತ್, ಎಸ್ ಡಿ ಎಂ ಸಿ ಸದಸ್ಯ ಜಗದೀಶ್, ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಸಿದ್ದಿವಿನಾಯಕ, ಮುಖ್ಯ ಶಿಕ್ಷಕ ಮಂಜುನಾಥ್, ಶಿಕ್ಷಕರುಗಳಾದ ರೂಪ, ಹುಷೇನ್ ಭಾಷ, ರಕ್ಷಾ, ಸುಧಾರಂಜಿನಿ, ಉಪನ್ಯಾಸಕಿ ಶೀಲಾ, ಅರೋಗ್ಯ ಇಲಾಖೆಯ ಚಂದ್ರಕಾಂತಿ, ಬಿಲ್ ಕಲೆಕ್ಟರ್ ವಸಂತ, ಆಶಾ ಕಾರ್ಯಕರ್ತೆಯರಾದ ಮಣಿಯಮ್ಮ, ಸಣ್ಣಮ್ಮ, ವಿದ್ಯಾರ್ಥಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page