ಜನಧ್ವನಿ

ಗುರು ಭವನಕ್ಕೆ ಸಿಗದ ಗುರುಬಲ-ಕಲ್ಯಾಣ ಮಂಟಪದಲ್ಲಿ ಶಿಕ್ಷಕರ ದಿನಾಚರಣೆ…


ಚಳ್ಳಕೆರೆ ಸೆ.4‘ಗುರುಭವನ ನಿರ್ಮಾಣಗೊಂಡರೂ ಕಾರ್ಯಕ್ರಮಗಳನ್ನು ನಡೆಸಲು ಸಿಗದ ‘ಗುರು’ಬಲ.
ಹೌದು ಇದು ಚಳ್ಳಕೆರೆ ನಗರದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಆವರದಣದಲ್ಲಿ ಬೃಹತ್ ಗುರು ಭವನ ಕಟ್ಟಡ ಕಾಮಗಾರಿ ಪೂರ್ಣಗೊಂಡು ಒಂದೆರಡು ಕಾರ್ಯಕ್ರಮ ಬಿಟ್ಟರೆ ಸುಮಾರು 6 ವರ್ಷಗಳು ಕಳೆದರೂ ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯನ್ನು ಕಲ್ಯಾಣ ಮಂಟಪದಲ್ಲಿ ಮಾಡುತ್ತಿರುವುದು ವಿಷಾದನೀಯವಾಗಿದೆ.
ಬೃಹತ್ ಕಟ್ಟಡವಿದ್ದರೂ ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲ ಎಂಬ ಕಾರಣಕ್ಕೆ ಗುರು
ಭವನವನ್ನು ಬಟ್ಟೆ ವ್ಯಾಪಾರಕ್ಕೆ ಬಾಡಿಗೆ ನೀಡಲಾಗಿದೆ.
ಕಟ್ಟಡ ಕಾಮಗಾರಿ ಪೂರ್ಣಗೊಂಡರೂ ಗುರುಭವನದ ನಿವೇಶನ ಖಾತೆ ಇಲ್ಲದೆ ಸರಕಾರಿ ಅನುದಾನ ಪಡೆಯಲು ಸಾಧ್ಯವಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.


ಗುರುಭವನ ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ಶಿಕ್ಷಕರು ದೇಣಿಗೆ ನೀಡಿದ್ದಾರೆ. ದೇಣಿಗೆ ನೀಡಿದ ಕೆಲವು ಶಿಕ್ಷಕರು ನಿವೃತ್ತಿ ಹೊಂದಿದ್ದಾರೆ.ಶಿಕ್ಷಕರ ಸಭೆ, ಸಮಾರಂಭಗಳು, ತರಬೇತಿ ಚಟುವಟಿಕೆಗಳು ಸೇರಿದಂತೆ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗೆ.ಶಿಕ್ಷಕರ ದಿನಾಚರಣೆಗೆ ಬಳಕೆಯಾಗ ಬೇಕಿದ್ದ ಗುರು ಭವನದ ಕಟ್ಟಡ ವಾಣಿಜ್ಯ ಮಳಿಗೆಯಾಗಿದೆ.
ಸಾವಿರಾರು ಸಂಖ್ಯೆಯಲ್ಲಿರುವ ಶಿಕ್ಷಕ ವರ್ಗ ಗುರುಭವನಕ್ಕೆ ಹಲವು ವರ್ಷಗಳಿಂದ ಬೇಡಿಕೆ ಇಡುತ್ತಲೇ ಬಂದಿದೆ. ಅಲ್ಲದೆ ಭವನ ನಿರ್ಮಾಣಕ್ಕೆ ಶಿಕ್ಷಕರು ವಂತಿಗೆಯನ್ನೂ ನೀಡಲಾಗುದೆ
ಆದರೂ ಸಹ ಕಟ್ಟ ಇದ್ದರೂ ಕಲ್ಯಾಣ ಮಂಟಪಬಾಡಿಗೆ ಪಡೆದು ಕಾರ್ಯಕ್ರಮ ನಡೆಸಬೇಕಾದ ಅನಿವಾರ್ಯತೆ ಇದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪಕ್ಕದ ಜಾಗವನ್ನು ಗುರುಭವನ ನಿರ್ಮಾಣದ ಉದ್ದೇಶಕ್ಕೆ ಈ ಜಾಗ ಖಾತೆ ಆಗದೆ ಇರುವುದೇ ವಿಳಂಬಕ್ಕೆ ಕಾರಣವಾಗಿದ್ದು ಗುರುಭವನ ಜಾಗಕ್ಕೆ ಖಾತೆ ಇದೀಗ ಲಭ್ಯವಾಗಿದ್ದು ಸರಕಾರಿ ಶಿಕ್ಷಕರ ಕಲ್ಯಾಣ ನಿಧಿಪಡೆಯಲು ಸಹಕಾರಿಯಾಗಲಿದೆ.
ಎಂಬ ಮಾತುಗಳು ಕೇಳಿ ಬರುತ್ತಿವೆ.
ಈಗಕಾದರೂ ಸಂಬಂಧಪಟ್ಡ ಅಧಿಕಾರಿಗಳು ಮುಂದಿನ ವರ್ಷವಾದರೂ ಶಿಕ್ಷಕರ ದಿನಾಚರಣೆ. ಸಭೆ ಸಮಾರಂಭಗಳನ್ನು ಗುರುಭವನದಲ್ಲಿ ನಡೆಸುವಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವರೇ ಕಾದು ನೋಡ ಬೇಕಿದೆ.

ಕೆರೆಯಲ್ಲಿ‌ ಅಕ್ರಮ ಉಳುಮೆ ಹೇಳೋರಿಲ್ಲ ..ಕೇಳೋರಿಲ್ಲ..ಬೊಮ್ಮಸಂದ್ರಕೆರೆ.


ಚಳ್ಳಕೆರೆ ಸೆ.4ನೀರಿಲ್ಲದೆ ಒಣಗಿದೆ ಕೆರೆ ಅಕ್ರಮ ಮರಳು ಹಾಗೂ ಭೂ ಮಾಫೀಯಾಗೆ ನಲುಗಿದ ಕೆರೆ ಒಡಲು.
ಹೌದು ಇದು ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬೊಮ್ಮ ಸಂದ್ರ ಕೆರೆ ಒಂದು ಕಾಲದಲ್ಲಿ ನಗರದ ಜನತೆಗೆ ನೀರುಣಿಸಲು ಸಹಕಾರಿಯಾಗಿದ್ದ ಕೆರೆಯಲ್ಲಿ ಈಗ ಅಕ್ರಮ ಮರಳು ದಂಧೆ ಬೆನ್ನಲ್ಲೇ ಕೆರೆಯಂಗಳದಲ್ಲಿ ಸುಮಾರು ಹತ್ತು ಎಕರೆ ಭೂಮಿಯಲ್ಲಿ ಹಚ್ಚುಕಟ್ಟು ಮಾಡಿ ಕೊಳವೆ ಬಾವಿ ಕೊರೆಸಿ ಟೊಮ್ಯಾಟೊ .ಈರುಳ್ಳಿ ಬೆಳೆಯಲು ಮುಂದಾಗಿದ್ದಾರೆ.
ಇತ್ತ ಸರಕಾರ ಸರಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಬೀಟ್ ಅ್ಯಾಪ್ ಮೂಲಕ ಸರಕಾರಿ ಭೂಮಿ ಒತ್ತುವರಿ ತೆರವುಗೊಳಲು ಕಟ್ಟು ನಿಟ್ಟಿನ ಸೂಚನೆ ಮಾಡಿದ ಬೆನ್ನಲ್ಲೇ ಕೆರೆಯಲ್ಲಿ ಅಕ್ರಮವಾಗಿ ಕೊಳವೆ ಬಾವಿ ಕೊರೆಸಿ ಉಳುಮೆ ಮಾಡಲು ಮುಂದಾಗಿದ್ದಾರೆ .
ಕೂಡಲೆ ಸಂಬಂಧಪಟ್ಟ ಅಧಿಕಾರಿಕಾರಿಗಳು ಬೊಮ್ಮಸಂದ್ರ ಕೆರೆಯಲ್ಲಿ ಅಕ್ರಮ ಉಳುಮೆಗೆ ಕಡಿವಾಣ ಹಾಕಿ ತೆರವುಗೊಳಿಸುವರೇ ಕಾದು ನೋಡ ಬೇಕಿದೆ.

ಬೀದಿ ನಾಯಿಗಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರ ಆಗ್ರಹ…


ಚಳ್ಳಕೆರೆ ಸೆ.1ಚಳ್ಳಕೆರೆ ನಗರದ ಖಾಸಗಿ ಬಸ್‌ ನಿಲ್ದಾಣದಿಂದ ಅಜ್ಜನಗುಡಿ ರಸ್ತೆಯ ಪ್ರಮುಖ ಬೀದಿಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಬೆಳಿಗ್ಗೆ ಬೀದಿ ನಾಯಿಗಳು ರಸ್ತೆಯ ತುಂಬಾ ಆಕ್ರಮಿಸಿಕೊಂಡಿರುತ್ತವೆ. ಬೀದಿ ನಾಯಿಗಳು ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುವುದರಿಂದ ಬೈಕ್‌ ಸವಾರರು ಬಿದ್ದು ಕೈಕಾಲು ನೋವು ಮಾಡಿಕೊಂಡ ಘಟನೆ ನಡೆದಿವೆ.

ಆಸ್ಪತ್ರೆಗೆ ತೆರಳುವ ರೋಗಿಗಳು, ಹೊಟೇಲ್‌ ಮತ್ತು ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಜೀವ ಕೈಲಿ ಹಿಡಿದುಕೊಂಡು ಓಡಾಡುವಂತಾಗಿದೆ.
ಈಗಾಗಲೆ ಕೆಲವು ಕಡೆ ಬೀದಿ ನಾಯಿಗಳ ದಾಳಿಯಿಂದ ಮಕ್ಕಳು.ವೃದ್ದರು ಮೃತಪಟ್ಟ ಘಟನೆಗಳು ಬೆಳಕಿಗೆ ಬಂದಿವೆ ಇಲ್ಲಿಯೂ ಅಂತಹ ಘಟನೆ ಬರುವ ಮುನ್ನವೇ ಕೂಡಲೇ ಸಂಬಂಧಿಸಿದ ಇಲಾಖೆ ಅಧಕಾರಿಗಳು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕೇಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರೈತನ ದಾಖಲೆ ಪಡೆದು ತೋಟಗಾರಿಕೆ ಇಲಾಖೆಯಲ್ಲಿ ನರೇಗಾ ಕೂಲಿ ಹಣ ವಂಚನೆ ಬೆಳಕಿಗೆ


ಚಳ್ಳಕೆರೆ ಆ29 ಗ್ರಾಮೀಣಾಭಿವೃದ್ಧಿ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಯ ಉದ್ದೇಶದಿಂದ ಜಾರಿಗೊಂಡ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನ್ನದಾತರಿಗೆ ವರದಾನ ಇದನ್ನೇ ಮಂಡವಾಳ ಮಾಡಿಕೊಂಡ ಕೆಲವರ ರೈತರ ಹೆಸರಿನಲ್ಲಿ ಹುಂಡೆ ನಾಮ ಹಾಕಿರುವುದು ಬೆಳಕಿಗೆ ಬಂದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ರೈತರ ಹೆಸರಿನಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡದೆ ಬಿಲ್ ಪಡೆದಿರುವುದು ಬೆಳಕಿಗೆ ಬಂದಿದೆ.
ಗೋಪನಹಳ್ಳಿ ಗ್ರಾಮದ ಜಿ.ಆರ್ .ತಿಪ್ಪೇಸ್ವಾಮಿ ಬಿನ್ ರಂಗಪ್ಪ ಇವರ ಜನೀನಿನ ಸರ್ವೆ ನಂ68/1ರಲ್ಲಿ ಗುಲಾಬಿ ಸಸಿ ಬೆಳೆಯಲಾಗಿದೆ ಎಂದು 58,625 ರೂ ಕೂಲಿ ಹಣ ಪಡೆದು ಬೆಳಕಿಗೆ ಬಂದಿದೆ.
ರೈತ ತಿಪ್ಪೇಸ್ವಾಮಿ ಜಮೀನಿನಲ್ಲಿ ಅಡಿಕೆ ಬೆಳೆ ಬೆಳೆದಿದ್ದು ಡ್ರಿಪ್ ಹಾಕಿಸಲು ಮುಂದಾಗಿದ್ದಾರೆ ಏಜೆನ್ಸಿ ಕಡೆಯಿಂದ ಡ್ರಿಪ್ ವೈರ್ ಅಳವಡಿದಲು ಬಂದೆ ಗೋಪನಹಳ್ಳಿ ಗ್ರಾಮದ ಯುವಕ ರೈತ ತಿಪ್ಪೇಸ್ವಾಮಿಯಿಂದ ಪಹಣಿ.ಆಧಾರ್ ಕಾರ್ಡ್ ಕೊಡಿ ನಿಮಹೆ ಡ್ರಿಪ್ ಅಳವಡಿಸಿಕೊಂಡಿರುವ ನಗ್ಗೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಬರುತ್ತದೆ ಎಂದು ನಂಬಿಸಿ ದಾಖಲೆ ಪಡೆದು ತೋಟಗಾರಿಕೆ ಇಲಾಖೆಯಲ್ಲಿ ನರೇಗಾ ಯೋಜನೆಯಡಿ ಗುಲಾಬಿ ಬೆಳೆ ಹಾಕಿರಯವ ಬಗ್ಗೆ ಯುವಕನ ಸಂಬಂಧಿಕರ ಇತರರ ಕೂಲಿ ಕಾರ್ಮಿಕರ ಕಾರ್ಡ್ ಹಾಕಿ 58,625 ರೂ ಕೂಲಿ ಹಣ ಬಿಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ರೈತ ತಿಪ್ಪೇಸ್ವಾಮಿ ನಮ್ಮ ಪಹಣಿ ಮೇಲೆ ಗುಲಾಬಿ ಬಿಲ್ ಪಡೆದಿದ್ದೀಯ ನಮಗೆ ಕೊಡು ಎಂದಾಗ ರೈತನಿಗೆ ಹುಡಾಪೆ ಉತ್ತರ ನೀಡಿ ನಾನು ಕೊಡುವುದಿಲ್ಲ ಏನಾದು ಮಾಡಿಕೊ ಇಲ್ಲವೆ ನನ್ನ ಪಹಣಿ ಕೊಡುತ್ತೇ ನೀನೂ ನರೇಗಾ ಮಾಡಿಸಿ ಹಣ ಪಡೆದುಕೋ ಎಂದು ರೈತನಿಗೆ ಹುಡಾಪೆ ಮಾಡಿದ್ದಾನೆ.
ಇದೇನು ಹೊಸದಲ್ಲಿ ಕೃಷಿ ಇಲಾಖೆ ಯಲ್ಲಿ ಕೃಷಿಹೊಂಡ
ಬುನಿರ್ಮಾಣ. ಹಾಗೂ ತೋಟಗಾರಿಗೆ ಇಲಾಖೆಯಲ್ಲಿ ಎಲೆ ಬಳ್ಳಿ. ಮಳೆಯಾಶ್ರೀತ ಪ್ರದೇಶದಲ್ಲಿ ಗುಲಾಬಿ ಸಸಿಗಳನ್ನಿಟ್ಟು ಬೋಗಸ್ ಬಿಲ್ ಪಡೆದಿರುವ ಬಗ್ಗೆ ಗುಸು ಗುಸು ಮಾತುಗಳು ಸಹ ಕೇಳಿ ಬರುತ್ತಿವೆ.
ಗುಲಾಬಿ ಬೆಳೆದು ಲಾಬ ಪಡೆಯಬೇಕಿದ್ದ ರೈತನ ಹೆಸರಿನಲ್ಲಿ ಗುಲಾಬಿ ಬೆಳೆಯದೆ ನರೇಗಾ ಕೂಲಿ ಹಣ ವಂಚನೆ ಮಾಡಿರುವ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವರೇ ಕಾದು ನೋಡ ಬೇಕಿದೆ.

ಮರದ ಕೊಂಬೆಯಲ್ಲಿ ವಿದ್ಯುತ್ ತಂತಿ ವಿದ್ಯುತ್ ಅವಘಡದ ಭೀತಿಯಲ್ಲಿ ಸಾರ್ವಜನಿಕರು.


ಚಳ್ಳಕೆರೆ ಆ27ಮರದಲ್ಲಿ ವಿದ್ಯುತ್‌ ತಂತಿ ಹಾದು ಹೋಗಿದ್ದು ವಿದ್ಯುತ್ ಅವಘಡಕ್ಕೆ ಕೈಬೀಸಿ ಕರೆಯುವಂತಾಗಿದೆ ಎಂಬ ಭೀತಿ ಸಾರ್ವಜನಿಕರಲ್ಲಿ ಮೂಡಿಸಿದೆ.

ಹೌದು ಇದು ಚಳ್ಳಕೆರೆ ನಗರದ ಸೋಮಗುದ್ದು ರಸ್ತೆಯ ತೇಜಶ್ವಿನಿ ಕಾಂಪ್ಲೆಕ್ಸ್ ಮುಂಭಾಗರದ ರಸ್ತೆಯ ಬದಿಯಲ್ಲಿರುವ ಮರಗಳಲ್ಲಿ ವಿದ್ಯುತ್ ತಂತಿ ಮಾರ್ಗ ಹಾದೂ ಹೋಗಿದ್ದು ಗಾಳಿಗೆ ವಿದ್ಯುತ್ ತಂತಿಯಿಂದ ಮರ ಸುಟ್ಟಂತಾಗಿದೆ ಇಲ್ಲಿ ನ್ಯಾಯಾಲಕ್ಕೆ ಬರುವ ಜನರು ಸೇರಿದಂತೆ ಯಾವಾಗಲು ಜನದಟ್ಟಣೆ ವಾಹನ ದಟದಟ್ಟಣೆಯಿಂದ ಕೂಡಿದ್ದು ಮರದಲ್ಲಿರುವ ವಿದ್ಯುತ್ ತಂತಿ ಯಾವುದೇ ಸಂದರ್ಭದಲ್ಲಿ ಬೀಳುವ ಸಾಧ್ಯತೆ ಇದ್ದು ಇಲ್ಲಿನ ನಿವಾಸಿಗಳು ವಿದ್ಯುತ್ ಅವಘಡದ ಭೀತಿ ಎದುರಾಗಿದೆ ಕೂಡಲೇ ಸಂಬಂಧಪಟ್ಟ ಅಧಿನಾರಿಗಳು ಮರದಲ್ಲಿ ಹಾದು ಹೋಗಿರುವ ವಿದ್ಯುತ್ ತಂತುಗೆ ತಾಗಿರುವ ಕೊಂಬೆಗಳನ್ನು ತೆರವುಗೊಳಿಸುವರೇ ಕಾದು ನೋಡ ಬೇಕಿದೆ.

{“remix_data”:[],”remix_entry_point”:”challenges”,”source_tags”:[“local”],”source_ids”:{},”source_ids_track”:{},”origin”:”unknown”,”total_draw_time”:0,”total_draw_actions”:0,”layers_used”:0,”brushes_used”:0,”photos_added”:0,”total_editor_actions”:{},”tools_used”:{“brushes”:1,”addons”:1},”is_sticker”:false,”edited_since_last_sticker_save”:true,”containsFTESticker”:false}

ಮರದ ಕೊಂಬೆಯಲ್ಲಿ

ವಾಯವಿಹಾರಿಗಳಿಗೆ ವರದಾನವಾಗಬೇಕಿದ್ದ ಪಾರ್ಕ್ ಗಳು ಅನೈತಿಕ ಚಟುವಟಿಕೆ ತಾಣ..ಸಾರ್ವಜನಿಕರ ಅಕ್ರೋಶ.


ಚಳ್ಳಕೆರೆ ಜನಧ್ವನಿ ವಾರ್ತೆ ಆ.23. ವಾಯುವಿಹಾರಿಗಳಿಗೆ ವರದಾನವಾಗ ಬೇಕಿದ್ದ ಉದ್ಯಾನವನಗಳ ನಿರ್ವಹಣೆ ಕಾರಣೆ ಅನೈತಿಕ ಚಟುವಟಿಕೆಗಳ ತಾಣವಾಗಿವೆ.


ಹೌದು ಇದು ಚಳ್ಳಕೆರೆ ನಗರದ ತ್ಯಾಗರಾಜನಗರದ ಪಿರಮಿಡ್ ಪಾರ್ಕ್ ಒಂದು ಒಂದು ಕಾಲದಲ್ಲಿ ಹಚ್ಚಹಸಿರಿನಿಂದ ಕಂಗೊಳಿಸುವ ಮೂಲಕ ಪ್ರಾಣಿ ಪಕ್ಷಿಗಳ ಕಲರವ, ವಿದ್ಯಾರ್ಥಿಗಳು ಮರದ ಕೆಳೆಗೆ ಕುಳಿತು ವ್ಯಾಸಂಗ ಮಾಡುವ ಹಾಗೂ ವೃದ್ದರು, ಮಕ್ಕಳು ಕುಟುಂಬದೊದಿಗೆ ಬಂದು ವಾಯುವಿಹಾರ ಮಾಡುತ್ತಾ ಕಾಲ ಕಳೆಯುತ್ತಿದ್ದ ಪಾರ್ಕ್ ನಿರ್ವಹಣೆ ಇಲ್ಲದೆ ಕಾಂಪೌಂಡ್ ಗೋಡೆ ಬಿದ್ದು ಮರ ಗಿಡಗಳು . ಸೀಮೆಂಟ್ ಬೆಂಚ್ ಗಳು ಕಣ್ಮರೆಯಾಗಿದ್ದು ವಾಯುವಿಹಾರಿಗಳಿಗೆ ವರದಾನವಾಗ ಬೇಕಿದ್ದ ಉದ್ಯಾನವನಗಳು ಅನೈತಿಕ ಚುಟುವಟಿಕೆಗಳ ತಾಣವಾಗಿವೆ.<

ಕಾಲೇಜು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕಾಲೇಜುಗಳಿಗೆ ಚಕ್ಕರ್ ಹೊಡೆದು ಪಾರ್ಕ್ ಗಳ ಪೊದೆಯಲ್ಲಿ ಚಕ್ಕಂದವಾಡುವ ದೃಶ್ಯ ಸಾಮಾನ್ಯವಾದರೆ ಶುಕ್ರವಾರ ಬೆಳಗ್ಗೆ 12 ಗಂಟೆ ಸುಮಾರಿನಲ್ಲಿ ಕಾಲೇಜು ವಿದ್ಯಾರ್ಥಿ /ವಿದ್ಯಾರ್ಥಿನಿ ಪಿರಮಿಡ್ ಪಾರ್ಕ್ ಮೆಟ್ಟಿಲು ಬಳಿ ಸಾರ್ವಜನಿಕ ಸ್ಥಳ ಹಾಗೂ ಅಕ್ಕ ಪಕ್ಕದಲ್ಲಿ ಮನೆಗಳಿವೆ ಎಂಬುದನ್ನು ಮೈಮರೆತು ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವ ದೃಶ್ಯವನ್ನು ಸಾರ್ವಜನಿಕರ ಮೊಬೈಲ್ ನಲ್ಲಿ ಸೆರೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ನಗರದ ಪಾರ್ಕ್ ಗಳು ವಯೋ ವೃದ್ದರ ವಿಶ್ರಾಂತಿಗೆ ಹಾಗೂ ಮಕ್ಕಳ ಆಟಗಳಿಗೆ ಮೀಸಲಾಗಿರದೆ ಕಾಲೇಜು ವಿದ್ಯಾರ್ಥಿಗಳ ರೊಮಾನ್ಸ್ ನ ಅಡ್ಡೆಗಳಾಗಿ ಮಾರ್ಪಾಡಾಗಿದ್ದು.ಚುಂಬನ ಹಾಗೂ ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವ ವೀಡಿಯೋ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಮಾಜದ ಸ್ವಾಸ್ಥ್ಯ ಹದಗೆಡುವಂತಾಗಿದೆ. ಇದರಿಂದ ಸಾರ್ವಜನಿಕರು ರೋಸಿ ಹೋಗಿ ನಗರಸಭೆ ಹಾಗೂ ಪೋಲೀಸ್ ಇಲಾಖೆಯ ಬಗ್ಗೆ ಅಸಮಾಧಾನ ಹೊರಹಾಕುತಿದ್ದಾರೆ. ಗ್ರಾಮೀಣ ಪ್ರದೇಶಗಳಿಂದ ಕಾಲೇಜುಗಳಿಗೆ ವ್ಯಾಸಂಗ ಮಾಡಲು ಕಳಿಸುತ್ತಾರೆ ಆದರೆ ಇಂತಹ ಅಸಹ್ಯಕರ ಘಟನೆಗಳನ್ನು ಕಂಡಾಗ ನಿಷ್ಟೆಯಿಂದ ಓದುವ ಪ್ರತಿಭಾವಂತ ವಿಧ್ಯಾರ್ಥಿಗಳ ಮೇಲೆ ಇದರ ಪರಿಣಾಮ ಬೀರಿ ಪೋಷಕರು ಅನುಮಾನಗೊಂಡು ವಿದ್ಯೆಯನ್ನು ಮೊಟಕುಗೊಳಿಸುತಿದ್ದಾರೆ ಇನ್ನಾದರೂ ಫೋಲೀಸ್ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಉದ್ಯಾನವಗಳತ್ತ ಗಸ್ತು ಹೆಚ್ಚಿಸಿ ಕಡಿವಾಣ ಹಾಕುವರೇ ಕಾದು ನೋಡ ಬೇಕಿದೆ.

ಟೊಮೋಟೆ ಬೆಲೆ ಕುಸಿತ ರಸ್ತೆ ಬದಿಗೆ ಸುರಿದ ಅನ್ನದಾತ.


ಚಳ್ಳಕೆರೆ _ಆ14 ಟೊಮೆಟೋ ಬೆಳೆಗೆ ದಿಢೀರನೆ ಬೆಲೆ ಕುಸಿದ ರಸ್ತೆ ಬದಿಯಲ್ಲಿ ಸುರಿದ ಅನ್ನದಾತ.
ಹೌದು ಇದು ಚಳ್ಳಕೆರೆ ತಾಲೂಕಿನ ದ್ಯಾವರನಹಳ್ಳಿ ಪಾವಗಡಕ್ಕೆ ಹೋಗುವ ರಸ್ತೆ ಬದಿಯಲ್ಲಿ ಬುಧವಾರ ಸುರಿದಿದ್ದು ರಸ್ತೆಯಲ್ಲಿ ಹೋಗುವ ದ್ವಿಚಕ್ರವಾಹನ ಸವಾರರು ನಿಲ್ಲಿಸಿ ಟೊಮ್ಯಾಟೊ ಹಣ್ಣನ್ನು ಕವರ್ ಗಳಲ್ಲಿ ತುಂಬಿಕೊಂಡು ಹೋಗುತ್ತಿರು ದೃಶ್ಯ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರವಾಹನ ಸವಾರ ಜನಧ್ವನಿ ನ್ಯೂಸ್ ಚಾನಲ್ ಗೆ ವೀಡಿಯೋ ಕಳಿಸಿದ್ದಾರೆ.
ರೈತರು ಖರೀದಿ ಮಾಡುವ ಬೀಜ.ಗೊಬ್ಬರ.ಕೃಷಿ ಪರಿಕರ. ಕೀಟನಾಷಕ ಗಳ ಮೇಲೆ ಎಂ ಆರ್ ಪಿ ಬೆಲೆ ಇರುತ್ತಾದೆ ಆದರೆ ರೈತರು ಕಷ್ಟ ಪಟ್ಟು ಶ್ರಮ ಹಕಿ ಬೆವರು ಸುರಿಸಿ ಬೆಳೆದ ಬೆಳೆಗಳಿಗೆ ಮಾತ್ರ ನಿಗಧಿತ ಬೆಲೆ ಇಲ್ಲ ಆದ್ದರಿಂದ ಬೆಳೆಯುವ ರೈತ ಬಡವನಾಗಿಯೇ ಉಳಿದರೆ ರೈತರ ಅಗತ್ಯ ವಸ್ತುಗಳ ಮಾರಾಟಗಾರ ಶ್ರೀಮಂತರಾಗಿದ್ದಾರೆ ಈಗಲಾದರೂ ಸರಕಾರ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗಧಿ ಪಡಿಸುವರೇ ಕಾದು ನೋಡ ಬೇಕಿದೆ.

ಎರಡು ರೈಲ್ ಸಂಚಾರಕ್ಕೆ ಹಾಕಿದ ಗೇಟ್- ವಾಹನ‌ಸವಾರರು ಸುಮಾರು ಒಂದು ಗಂಟೆಕಾಲ ಹೈರಾಣು…


ಚಳ್ಳಕೆರೆ ಜನಧ್ವನಿ ವಾರ್ತೆ ಆ.10 ನಗರದ ಪಾವಗಡ ರಸ್ತೆಯ ರೈಲ್ವೆ ಗೇಟಿನ ಮೇಲ್ಸೇತುವೆ ಇಲ್ಲದೆ ಶಾಲಾ, ಕಾಲೇಜು ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಹೌದು ಇದು ಚಳ್ಳಕರದ ಪವಗಡ ರಸ್ತೆಯ ಎರಡು ರೈಲುಗಳ ಸಂಚಾರವಿದ್ದ ಕಾರಣ ರೈಲ್ವೇ ಗೇಟ್ ಹಾಕಲಾಗಿತ್ತು ಸುಮಾರು ಒಂದು ಕಿ.ಮೀ ಗೂ ಹೆಚ್ಚು ಸೂರ ವಾಹನಗಳ ಸಾಲು ಸುಮಾರು ಒಂದು ಗಂಟೆಯವರಗೂ ವಾಯನಗಳ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು.


ಇಂದು ಶ್ರಾವಣ ಶನಿವಾರವಾಗಿದ್ದರಿಂದ ಪಾವಗಡ ಶನಿದೇವರ ದರ್ಶನಕ್ಕೆ ಹೋಗುವ ವಾಹನಳು. ಶಾಲೆಗಳಿಗೆ ಮಾರ್ನಿಂಗ್ ಶಾಲೆಯಾಗಿದ್ದ ಪೋಷಕರು ಮಕ್ಕಳನ್ನು ಶಾಲೆಯಿಂದ ಕರೆದುಕೊಂಡರಲು ಸೇರಿದಂತೆ ವಾಹನಗಳ ದಟ್ಟಣೆ ಹೆಚ್ಚಾಗಿದ್ದು ಸುಮಾರು ಒಂದು ಗಂಟೆ ಕಾರ ವಿವಿಧ ಕಡೆ ಹೋಗುವ ವಾಜನ ಸವಾರರು. ಪ್ರಯಾಣಿಕರು ಕಿರಿ ಕಿರಿ ಅನುಭವಿಸುಂತಾಗಿದೆ.
ಮೇಲ್ಸೇತುವೆ ಮಾಡಿಸುವಂತೆ ಅನೇಕ ಬಾರಿ ಪ್ರತಿಭಟನೆ ಹಾಗೂ ಕೇಂದ್ರ ಸರಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಈಗಲಾದರೂ ಇಲ್ಲಿ ಮೇಲ್ಸೇತುವೆ ಕಾಮಗಾರಿ ಮಾಡಿಸುವರೇ ಕಾದು ನೋಡ ಬೇಕಿದೆ.


.ಕೂಡಲೇ ಕೇಂದ್ರ ಸರಕಾರ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ರೈಲ್ವೆ ಗೇಟ್‌ ಬಳಿ ಗುರುವಾರ ಧರಣಿ ನಡೆಸಿದರು.

ಸೋಮವಾರದಿಂದಲೇ ನಿವೇಶನಕ್ಕಾಗಿ ಅರ್ಜಿ ಸಲ್ಲಿ ನಿವೇಶನ ವಂಚಿತರಿಗೆ ನಿವೇಶನ ನೀಡಲಾಗುವುದು ಅಪಾರ ಜಿಲ್ಲಾಧಿಕಾರಿ ಕುಮಾರಸ್ವಾಮಿ.


ಚಳ್ಳಕೆರೆ ಜನಧ್ವನಿ ವಾರ್ತೆ ಆ.10ಚಳ್ಳಕೆರೆ ಆ.10 ಆಶ್ರಯ ನಿವೇಶನಕ್ಕಾಗಿ ಗಂಜಿಗುಂಟೆ ಗ್ರಾಮದ ದಲಿತ. ಸಮಿದಾಯವರು ನಾಲ್ಕುದಿನಗಳಿಂದ ತಾಲೂಕು ಕಚೇರಿ ಆವರದಲ್ಲಿ ಪ್ರತಿಭಟನಾ ಸ್ಥಳಕ್ಕೆ ಅಪಾರ ಜಿಲ್ಲಾಧಿಕಾರಿ ಭೇಟಿ ನೀಡಿ ಪ್ರತಿ ಭಟನೆ ಹಿಂಪಡೆಯುವಂತೆ ಮನವೊಲಿಸಲು ಮುಂದಾದರು.


ಅಪಾರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಮಾತನಾಡಿ ಶಾಸಕ ಟಿ.ರಘುಮೂರ್ತಿ ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಾನು ಬಂದಿದ್ದು ನಿಮ್ಮ ಸಮಸ್ಯೆಗೆ ಪರಿಹಾರ ಕೊಡಲಾಗುವುದು. ಈಗಾಗಲೆ ಆಶ್ರಯ ನಿವೇಶನಕ್ಕೆಂದು5 ಎಕರೆ ಮೀಸಲಿಟ್ಟಿರುವ ಪ್ರದೇಶದಲ್ಲಿ ಕೆಲವರು ಮನೆಕಟ್ಟಿಕೊಂಡಿದ್ದಾರೆ ಎಂಬ ದೂರು ಬಂದಿದೆ. ನಿವೇಶನಕ್ಕೆಂದು ಮೀಸಲಿಟ್ಟ ಜಾಗವನ್ನು ಶುಕ್ರವಾರದಿಂದಲೇ ಜಂಗಲ್ ಸ್ವಚ್ಚತಾ ಕಾರ್ಯ ನಡೆಯಿತ್ತಿತ್ತು ಸೋಮವಾರದಿಂದಲೇ ನಿವೇನ ಹಾಗೂ ವಸತಿ ರಹಿತರ ಪಟ್ಟಿ ತಯಾರಿಸಲು ಅರ್ಜಿ ಕರೆಯಲಾಗುವುದು ನೀವುಗಳು ಸೋಮವಾರದಿಂದಲೇ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಗ್ರಾಮಸಭೆ ಮೂಲಕ ಆಯ್ಕೆ ಮಾಡಿ ವಸತಿ ಅಭಿವೃದ್ಧಿ ನಿಗಮಕ್ಕೆ ಕಳಿಸಲಾಗುವುದು ಜಿಲ್ಲಾ ಹಾಗೂ ತಾಲೂಕು ಆಡಳಿತ ನಿಮ್ಮ ಪರ ಇದೆ ಮಕ್ಕಳೊಂದಿಗೆ ಕೂಲಿ ಕೆಸ ಬಿಟ್ಟು ಪ್ರತಿ ಭಟನೆ ಮಾಡುವುದನ್ನು ಕೈಬಿಡಿ ನೊಂದವರಿಗೆ ನ್ಯಾಯಕೊಡಿಸಲಾಗುವುದು.
ಈಗಾಗಲೆ ಮನೆ ಹಾಗೂ ಗುಡಿಸಲು ಕಟ್ಟಿಕೊಂಡವರು ನಿವೇಶನರಹಿತರಾಗಿದ್ದರೆ ಮನಾವೀಯತೆಯಿಂದ ಅವರಿಗೂ ಕೊಡಬೇಕಾಕುತ್ತೆ ಹೆಚ್ವುವರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೆ ವಶಪಡಿಸಿಕೊಳ್ಳಲಾಗುವುದು ಗಂಜಿಗುಂಟೆ ಗ್ರಾಮದಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಲಾಗುವುದು ಸರಕಾರದ ಯೋಜನೆ ಹಾಗೂ ಕಾನೂನು ಅರಿವು ಮೂಡಿಸಲಾಗುವುದು ಒಂದು ವಾರದೊಳಗೆ ನಿವೇಶನ ಪ್ರಕ್ರಿಯೆ ಮುಕ್ತಾಯವಾಗಲಿದೆ ನಾನು ಸಹ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಾಗುವುದು ಎಂದು ಪ್ರತಿಭಟನಾ ಕಾರರಿಗೆ ಅಭಯ ನೀಡಿದರು.

filter: 0; fileterIntensity: 0.0; filterMask: 0; module: photo;
hw-remosaic: false;
touch: (-1.0, -1.0);
sceneMode: 2;
cct_value: 0;
AI_Scene: (200, 0);
aec_lux: 141.81381;
aec_lux_index: 0;
albedo: ;
confidence: ;
motionLevel: -1;
weatherinfo: null;
temperature: 42;

filter: 0; fileterIntensity: 0.0; filterMask: 0; module: photo;
hw-remosaic: false;
touch: (-1.0, -1.0);
sceneMode: 2;
cct_value: 0;
AI_Scene: (200, 0);
aec_lux: 138.16446;
aec_lux_index: 0;
albedo: ;
confidence: ;
motionLevel: -1;
weatherinfo: null;
temperature: 42;

filter: 0; fileterIntensity: 0.0; filterMask: 0; module: photo;
hw-remosaic: false;
touch: (-1.0, -1.0);
sceneMode: 2;
cct_value: 0;
AI_Scene: (200, 0);
aec_lux: 138.6466;
aec_lux_index: 0;
albedo: ;
confidence: ;
motionLevel: -1;
weatherinfo: null;
temperature: 42;


ಪ್ರತಿಭಟನಾ ಕಾರರು ಆಶ್ರಯ ನಿವೇಶನಕ್ಕೆಂದು ಮೀಸಲಿಟ್ಟ ಭೂಮಿ ಸ್ವಚ್ಚತೆ ಹಾಗೂ ನಿವೇಶನ ಹಂಚಿಕೆಯಾಗುವ ತನಕ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿದರು. ಅಪಾರ ಜಿಲ್ಲಾಧಿಕಾರಿ ಮಾತನಾಡಿ ನಾನು ರೈತರ ಕುಂಟುಂಬದಿಂದ ಬಂದವನು ಬಡವರ ಕೂಲಿ ಕಾರ್ಮಿಕರ ಕಷ್ಟಗೊತ್ತಿದೆ ನೀವು ಒಂದು ದಿನ ಕೂಲಿ ತಪ್ಪಿಸಿಕೊಂಡ ಜೀವನ ಕಷ್ಟ ಆದ್ದರಿಂದ ಪ್ರತಿ ಭಟನೆ ಬಿಡಿ ನಿಮಗೆ ನ್ಯಾಯ ಕೊಡಿಸಲು ನಾವು ಬದ್ದರಾಗಿದ್ದೇವೆ ಎಂದು ತಿಳಿಸಿದರು.
ಜಿಪಂ ಉಪಕಾರ್ಯದರ್ಶಿ ತಿಮ್ಮಪ್ಪ. ತಹಶೀಲ್ದಾರ್ ರೇಹಾನ್ ಪಾಷ. ತಾಪಂ ಇಒ ಶಶಿಧರ್. ಕಂದಾಯ ನಿರೀಕ್ಷಕ ತಿಪ್ಪೇಸ್ವಾಮಿ. ಗ್ರಾಮಲೆಕ್ಕಾಧಿಕಾರಿ ಕೇಶವಚಾರಿ.ಪ್ರಕಾಶ್ ಇತರರಿದ್ದರು.

ನಕಲಿ ಬೀಜ ವಿತರಣೆ ಬೆಳೆ ಕಳೆದುಕೊಂಡ ರೈತರು..


ಚಳ್ಳಕೆರೆ ಜನಧ್ವನಿ ವಾರ್ತೆ ಆ10 ನಕಲಿ ಬಿತ್ತನೆ ಬೀಜ ವಿತರಣೆ ಕಡಿವಾಣ ಹಾಕುವ ಇಲಾಖೆಯಿಂದಲೇ ರೈತರಿಗೆ ನಕಲಿ ಬೀಜ ವಿತರಣೆ ಮಾಡಿರುವುದು ಬೆಳಕಿಗೆ ಬಂದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿ ಗ್ರಾಮದ ಕಪ್ಪು ಭೂಮಿಯಲ್ಲಿ ಬಿತ್ತನೆ ಮಾಡಿದ ಸೂರ್ಯಕಾಂತಿ ಬೆಳೆ ತನೆ ಬಿಡದೆ ಮುಟರು ರೋಗ ಆವರಿಸಿ ಬೆಳೆ ಕಾಳು ಕಟ್ಟದೆ ಸಂಪೂರ್ಣ ನಷ್ಟಸಂಭವಿಸಿರುವುದು ಕಂಡು ಬಂದಿದೆ.

ಚಳ್ಳಕೆರೆ ಕೃಷಿ ಇಲಾಖೆಯಿಂದ ಕೆಬಿ ಎಸ್ ಎಚ್ 41 ತಳಿಯ ಸೂರ್ಯಕಾಂತಿ ಬೀಜ ಖರೀದುಸಿ ಬಿತ್ತನೆ ಮಾಡಲಾಗಿದ್ದು.ತೆನೆ ಬಿಟ್ಟು ಕಾಳು ಕಟ್ಟದೆ ಮುಟರು ರೋಗ ಕಾಣಿಸಿಕೊಂಡದ್ದು ಬೆಳೆ ನಾಶವಾಗಿದೆ. ಇದರಿಂದ ರೈತರು ಬಿತ್ತನೆ ಬೀಜ.ಗೊಬ್ಬರ ಹಾಕಿದ ಶ್ರಮಕ್ಕೆ ಫಲ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಇಲಾಖೆ ಕೊಟ್ಟಿರುವ ಸೂರ್ಯಕಾಂತಿ ಬೀಜ ಸಂಪೂರ್ಣ ಕಳಪೆಯಾಗಿದೆ.


ಸಕಾಲಕ್ಕೆ ಮಳೆ ಬಾರದ ಬರಗಾಲದ ಛಾಯೆ ಆವರಿಸುದ್ದು ಈಗಾಗಲೆ ರೈತರು ಅತಿವೃಷ್ಠಿ ಅನಾವೃಷ್ಠಿಗೆ ತುತ್ತಾಗಿ ಸಾಲದ ಸುಳಿಗೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿದ್ದು ಕೃಷಿ ಇಕಾಖೆಯಿಂದಲೇ ನಕಲಿ ಬಿತ್ತನೆ ಬೀಜ ಖರೀದಿಸಿ ಬೆಳೆ ಕಳೆದುಕೊಂಡ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೃಷಿ ಇಲಾಖೆಯಿಂದಲೇ ನಕಲಿ ಬಿತ್ತನೆ ಬೀಜ ವಿತರಣೆ ಮಾಡಿದರೆ ಇನ್ನು ನಕಲಿ ಬೀಜ ಗೊಬ್ಬರ ಮಾರಾಟಗಾರರ ಮೇಲೆ ಕೃಷಿ ಇಲಾಖೆ ಕಡಿವಾಣ ಹಾಕಲು ಸಾಧ್ಯವೇ ಎಂಬ ಪ್ರಶ್ನೆ ರೈತರಲ್ಲಿ ಕಾಡುತ್ತಿದೆ.
ಕೂಡಲೆ ಬೆಳೆ ನಷ್ಟವಾದ ರೈತರಿಗೆ ಪರಿಹಾರ ನೀಡುವಂತೆ ರೈತರಾದ ಓ.ಟಿ ತಿಪ್ಪೇಸ್ವಾಮಿ, ಚಿಂದಾನಂದಪ್ಪ ಗೋವಿಂದಪ್ಪ ಅಳಲು ತೋಡಿಕೊಂಡಿದ್ದಾರೆ.

You cannot copy content of this page