ಇಂಪ್ಯಾಕ್ಟ್

ಜನಧ್ವನಿ ವರದಿ ಯಲ್ಲದಕೆರೆ-ಹಿರಿಯೂರು ಮಾರ್ಗಕ್ಕೆ ಬಸ್ ಸೌಲಭ್ಯ


ಹಿರಿಯೂರು ಆ. 16
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಯಲ್ಲದಕೆರೆ-ಹಿರಿಯೂರು ಮಾರ್ಗದಲ್ಲಿ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ ಜಿಲ್ಲಾ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಮೂರ್ತಿ ತಿಳಿಸಿದ್ದಾರೆ.
ಯಲ್ಲದಕೆರೆ-ಹಿರಿಯೂರು ಮಾರ್ಗದಲ್ಲಿ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗಿದೆ ಎಂಬುದಾಗಿ ಕೆಲ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿರುತ್ತದೆ. ಹಿರಿಯೂರು-ದಿಂಡಾವರ-ಚಿಗಳಿಕಟ್ಟೆ-ಯಲ್ಲದಕೆರೆ ಮಾರ್ಗದಲ್ಲಿ 2 ಸಿಂಗಲ್ ಹಾಗೂ ಹಿರಿಯೂರು-ಯಲ್ಲದಕೆರೆ-ಕೆ.ಕೆ.ಹಟ್ಟಿ-ಚಿಗಳಿಕಟ್ಟೆ-ಬ್ಯಾರಮಡು-ಶೇಷಪ್ಪನಹಳ್ಳಿ-ದಸೂಡಿ-ಹೊಯ್ಸಳಕಟ್ಟೆ ಮಾರ್ಗದಲ್ಲಿ 06 ಸಿಂಗಲ್ ಸಾರಿಗೆ ಸೌಲಭ್ಯ ಕಲ್ಪಿಸಲಾಗಿರುತ್ತದೆ.
ಚಿತ್ರದುರ್ಗ-ಹಿರಿಯೂರು-ಹುಳಿಯಾರು ಮಾರ್ಗವಾಗಿ ಮೈಸೂರಿಗೆ ಕಾರ್ಯಾಚರಣೆಯಾಗುವ ಎಲ್ಲ ಸಾರಿಗೆಗಳು ಯಲ್ಲದಕೆರೆಯಲ್ಲಿ ನಿಲುಗಡೆ ಸೌಲಭ್ಯ ಕಲ್ಪಿಸಲಾಗಿರುತ್ತದೆ. ವಿಭಾಗದಲ್ಲಿ ಸಂಪನ್ಮೂಲಗಳ ಕೊರತೆ ಇರುವುದರಿಂದ ಸಂಪನ್ಮೂಲಗಳ ಲಭ್ಯತೆ ಮೇರೆಗೆ ಹಿರಿಯೂರು-ಹುಳಿಯಾರು ಮಾರ್ಗದಲ್ಲಿ ಹೆಚ್ಚುವರಿ ಸಾರಿಗೆ ಸೌಲಭ್ಯ ಕಲ್ಪಿಸಲು ಪರಿಶೀಲಿಸಲಾಗುತ್ತಿದೆ ಎಂದು ಕೆಎಸ್‍ಆರ್‍ಟಿಸಿ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮ ಸೋಮವಾರ ದಿಢೀರ್ ರದ್ದು


ಚಳ್ಳಕೆರೆ ಜು.29 ಜನಧ್ವನಿ ಡಿಜಿಟಲ್ ಮೀಡಿಯಾ ಎಫೆಕ್ಟ್ ಸರಕಾರಿ ಕಾರ‍್ಯಕ್ರಮಗಳನ್ನು ಹಾಗೂ ಸರಕಾರಿ ಕಾಮಗಾರಿಗಳನ್ನು ಉದ್ಘಾಟನೆ ಕಾರ್ಯಕ್ರಮ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಬಿಜೆಪಿ ಮಂಡಲ ಅಧ್ಯಕ್ಷ ರಾಮರೆಡ್ಡಿ ಆರೋಪಿಸಿದ ಸುದ್ದಿ ಬಿತ್ತರಿಸಿದ ಬೆನ್ನಲ್ಲೆ ಸೋಮವಾರ ಮೊಳ್ಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನಾಯಕನಹಟ್ಟಿ.ತಳಕು. ಕೊಂಡ್ಲಹಳ್ಳಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಗೋವಿಂದ ಕಾರಜೋಳ ಹಾಗೂ ವಿಧಾನ ಪರಿಷತ್ ಸದಸ್ಯ ನವೀನ್ ಇವರ ಗಮನಕ್ಕೂ ತಾರದೆ ಆಹ್ವಾನ ನೀಡದೆ ಸ್ಥಳಿಯ ಶಾಸಕರು ಉದ್ಘಾಟನೆ ಮಾಡುವ ಮೂಲಕ‌ ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಸ್ಥಳೀಯ ಬಿಜೆಪಿ ಮುಖಂಡರ ವಿರೋಧ ನಡುವೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ ಬೆನ್ನಲ್ಲೇ ದಿಢೀರನೆ ಉದ್ಘಾಟನೆ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ ಎಂಬ ಮಾಹಿತಿತನ್ನು ಅಧಿಕಾರಿಯೊಬ್ಬರು ಜನಧ್ವನಿ ಡಿಜಿಟಲ್ ಮೀಡಿಯಾ ಗೆ ಮಾಹಿತಿ ನೀಡಿದ್ದಾರೆ.

ಜನಧ್ವನಿ ಸುದ್ದಿ ಎಫೆಕ್ಟ್- ಖಾಲಿಯಾಗಿದ್ದ ಅಕ್ಕಿ ಸುದ್ದಿ ಬಿತ್ತರಿಸಿದ ಬೆನ್ನಲ್ಲೆ ಬಂತು ಅಕ್ಕಿ ಪಡಿತರದಾರು ಪುಲ್ ಖುಷ್…

ಚಳ್ಳಕೆರೆ ಜು.19, ಜನಧ್ವನಿ ಡಿಜಿಟಲ್ ಮೀಡಿಯಾ ವರದ ಫಲಶೃತಿ ಚಳ್ಳಕೆರೆ ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೃಷಿಪತ್ತಿನ ಸಹಕಾರ ಸಂಘ ಪಡಿತರ ದಾರರಿಗೆ ಸರಕಾರಿ ಅಕ್ಕಿ ನೀಡುತ್ತಿಲ್ಲ ಅಕ್ಕಿಗಾಗಿ ಕೂಲಿ ನಾಲಿ ಬಿಟ್ಟು ಅಕ್ಕಿ ಗಾಗಿ ಪಡಿತರದಾರರು ಕಾಯುತ್ತಿರುವ ಬಗ್ಗೆ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಶುಕ್ರವಾರ ಕೃಷಿಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ 30 ಪಾಕೇಟ್ ಅಕ್ಕಿ ಗೂಡ್ಸ್ ವಾಹನದಲ್ಲಿ ಹಾಕಿಕೊಂಡು ಬಂದಿದ್ದನ್ನು ಗಮನಿಸಿದ ಪಡಿತರ ದಾರರು ಇಷ್ಟುದಿನ ಇಲ್ಲದ ಅಕ್ಕಿ ಈವತ್ತು ಹೇಗೆ ಬಂತು..? ಮಾಧ್ಯಮದಲ್ಲಿ ಸುದ್ದಿ ಬಿತ್ತರಿಸಿದ ಮೇಲೆ ಹಾಕಿಕೊಂಡು ಬಂದಿದ್ದಾರಾ..? ಬಡವರಿಗೆ ಅಕ್ಕಿ ನೀಡನೆ ಮೋಸ ಮಾಡ್ತೀರಾ ಎಂದು ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿಗಳು ದೌಡಾಯಿ ಪರಿಶೀಲನೆ ಮಾಡಲು ಮುಂದಾಗಿದ್ದಾರೆ.

ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟ ಅಧಿಜಾರಿಗಳು ಮುಂದಾಗಬೇಕಿದೆ.

ಮೂರೇ ತಿಂಗಳಿಗೆ ಕಿತ್ತು ಹೋದ ರಸ್ತೆ-ಜನಧ್ವನಿ ಸುದ್ದಿ ಬೆಳಕು ಚೆಲ್ಲಿದ ಬೆನ್ನಲ್ಲೇ ದುರಸ್ಥಿ ಭಾಗ್ಯ ಕಂಡ ರಸ್ತೆ….


ನಾಯಕನಹಟ್ಟಿ ಜೂ30 ಜನಧ್ವನಿ ವರದಿ ಎಫೆಕ್ಟ್ ದುರಸ್ಥಿ ಭಾಗ್ಯ ಕಂಡ ರಸ್ತೆ. . ಸುದ್ದಿ ಬೆಳಕು ಚೆಲ್ಲುವ ಮುನ್ನ
ಹೌದು ಇದು ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣದ ಶ್ರೀಗುರುತಿಪ್ಪೇರುದ್ರಸ್ವಾಮಿ ಒಳ ಮಠದ ಮುಂಭಾಗದ ರಾಷ್ಟ್ರೀಯ ಹೆದ್ದಾರಿ45 ರ ರಸ್ತೆ ಸುಮಾರು 50 ಲಕ್ಷರೂ ವೆಚ್ಚದ ಸೇತುವೆ ಹಾಗೂ ರಸ್ತೆ ದುರಸ್ಥಿ ಕಾಮಗಾರಿ ಮೂರೆ ತಿಂಗಳಿಗೆ ಕಿತ್ತುಹೋದ ರಸ್ತೆ ಎಂಬ ತಲೆ ಬರಹದಡಿಯಲ್ಲಿ ಸುದ್ದಿ ಬೆಳಕು ಚೆಲ್ಲಿದ ಬೆನ್ನಲ್ಲೇ ರಸ್ತೆ ದುರಸ್ಥಿ ಭಾಗ್ಯ ಕಂಡಿದೆ ಇದು ಜನಧ್ವನಿ ವರದಿ ಫಲಶೃತಿ

ಜನಧ್ವನಿ ಡಿಜಿಟಲ್ ಮೀಡಿಯ ವರದಿ ಫಲಶೃತಿ ಚರಂಡಿಯಲ್ಲಿ ಹರಿಯದ ನೀರು ರಸ್ತೆಮೇಲೆ ಹರಿಯುತ್ತಿದ್ದ ನೀರು ಸ್ವಚ್ಚತೆಗೆ ಮುಂದಾದ ಅಧಿಕಾರಿಗಳು ಓಬಳಾಪುರ .


ಚಳ್ಳಕೆರೆ ಜನಧ್ವನಿ ವಾರ್ತೆ ಜೂ.12. ಜನಧ್ವನಿ ಡಿಜಿಟಲ್ ಮೀಡಿಯ ವರದಿ ಫಲಶೃತಿ ಚರಂಡಿಯಲ್ಲಿ ಹರಿಯದ ನೀರು ರಸ್ತೆ ಮೇಲೆ ಸಾಂಕ್ರಮಿಕ ರೋಗ ಭೀತಿಯಲ್ಲಿ ಓಬಳಾಪುರ ಗ್ರಾಮಸ್ಥರು ಎಂಬ ತಲೆಬರಹಡಿಯಲ್ಲಿ ಮಂಗಳವಾರ ವರದಿ ಬಿತ್ತರಿಸಿದ ಬೆನ್ನಲ್ಲೇ ಬುಧವಾರ ಗ್ರಾಪಂ ಪಿಡಿಒ ಬೆಳ್ಳಂ ಬೆಳಗ್ಗೆ ರಸ್ತೆ ಹಾಗೂ ಚರಂಡಿ ಸ್ವಚ್ಚತೆ ಮಾಡಿಸಲು ಮುಂದಾಗಿದ್ದಾರೆ. ಸುದ್ದಿ ಪ್ರಕಟಿಸಿದಾಗ
ರಸ್ತೆಯಲ್ಲೇ ನಿಂತ ಚರಂಡಿ ನೀರು ಮೂಗು ಮುಚ್ಚಿಕೊಂಡು ಒಡಾಡುತ್ತಿರುವ ಜನರು ಸಾಂಕ್ರಮಿಕ ರೋಗ ಬೀತಿಯಲ್ಲಿ ಗ್ರಾಮಸ್ಥರು. ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಚಳ್ಳಕೆರೆ ತಾಲೂಕಿನ ಓಬಳಾಪುರ ಗ್ರಾಪಂ ಕೇಂದ್ರ ಸ್ಥಳವಾದ ಈಶ್ವರದೇವಸ್ಥಾನ .ಬಸ್ ನಿಲ್ದಾಣದಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಚರಂಡಿ ಮುಚ್ಚಿಹೋಗಿದ್ದು ಚರಂಡಿ ನೀರು ಹಾಗೂ ಮಳೆ ನೀರು ನಿಂದು ಸೊಳ್ಳೆ. ವಿಷಜಂತುಗಳ ಹಾವಳಿ ಗೊಬ್ಬು ವಾಸನೆಯಿಂದ ಸಾಂಕ್ರಮಿಕ ರೋಗಗಳಿಗೆ ಕೈಬೀಸಿ ಕರೆಯುವಂತಿದೆ. ಎಂದು ಸುದ್ದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಸ್ವಚ್ಚತೆ ಮುಂದಾಗಿದ್ದಾರೆ ಇದು ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಎಫೆಕ್ಟ್

ಸುದ್ದಿ ಪ್ರಕಟಿಸಿದಾಗ ಸ್ವಚ್ಚತೆ ಮಾಡುತ್ತಿರುವುದು

ಜನಧ್ವನಿ ವರದಿ ಎಫೆಕ್ಟ್ ಸರ್ವೆ ಇಲಾಖೆ ಕಚೇರಿ ಮಿನಿವಿಧಾನ ಸೌಧಕ್ಕೆ ಸ್ಥಳಾಂತರ.


ಚಳ್ಳಕೆರೆ ಜೂ.11 ಜನಧ್ವನಿ ವರದಿ ಫಲಶೃತಿ. ಸೋರುತಿಹುದು ಸರ್ವೇ ಇಲಾಖೆ ಕಟ್ಟಡ ..ಮಳೆ ನೀರು ಹೊರ ಹಾಕುತ್ತಿರುವ ಸಿಬ್ಬಂದಿ ಎಂಬ ತಲೆಬರಹದಡಿ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಹೈಟೆಕ್ ಮಿನಿವಿಧಾನ ಸೌಧದ ಮೂರನೆ ಮಹಡಿಗೆ ಸರ್ವೆ ಇಲಾಖೆಯನ್ನು ಸ್ಥಳಾಂತರ ಮಾಡಲು ಮುಂದಾಗಿದ್ದಾರೆ.

ಸುಮಾರು ವರ್ಷಗಳಿಂದ ಶಿಥಿಲವಾದ ಕಟ್ಟಡದಲ್ಲಿ ಹಾಗೂ ಮಳೆ ಬಂದರೆ ಸೋರುತ್ತಿದ್ದು ಸಾರ್ವಜನಿಕರ ಆಸ್ತಿಯ ದಾಖಲೆಗಳಿಗಿಲ್ಲ‌ ರಕ್ಷಣೆ ಎಂದು ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಬಿತ್ತರಿಸಲಾಗಿತ್ತು. ನೂತನ ತಾಲೂಕು ಕಚೇರಿಗೆ ಭೂಮಾಪನ ಇಲಾಖೆ ದಾಖಲೆ ಹಾಗೂ ಪೀಠೋಪಕರಣಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಇದು ಜನಧ್ವನಿ ವರದಿ ಎಫೆಕ್ಟ್

ಜನಧ್ವನಿ ನ್ಯೂಸ್ ಎಫೆಕ್ಟ್ ಸ್ಮಶಾನ ಭೂಮಿ ಒತ್ತುವರಿ ತೆರವುಗೊಳಿಸಿದ ಅಧಿಕಾರಿಗಳು.


ಜನಧ್ವನಿ ನ್ಯೂಸ್ ವರದಿ ಫಲಶೃತಿ. ಚಳ್ಳಕೆರೆ ತಾಲೂಕಿನ ಮಿರಸಾಬಿಹಳ್ಳಿ ಗ್ರಾಪಂ ವ್ಯಾಪ್ತಿಯ ವಿಶ್ವೇಶ್ವರ ಪುರ ಗ್ರಾಮದ ಸ್ನಶಾನ ಭೂಮಿ ಒತ್ತುವರಿ ಮನುಷ್ಯ ಬದುಕಿದ್ದಾಗ ಸ್ವಂತ ಭೂಮಿ, ಮನೆ
ಇಲ್ಲದಿದ್ದರೂ ಸತ್ತಾಗಲಾದರೂ ಆರಡಿ ಮೂರಡಿ
ಜಾಗ ಬೇಕು. ಆದರೆ, ಇಲ್ಲಿ ಸ್ಮಶಾನವನ್ನು ಬಿಡದೆ
ಅಕ್ರಮವಾಗಿ ಮನೆ, ಸ್ಮಶಾನ ಭೂಮಿ ಉಳುಮೆ ಮಾಡಿಕೊಂಡು ಕೊಟ್ಟಿಗೆಗಳನ್ನು ನಿರ್ಮಿಸಿಕೊಂಡು
ಅಂತ್ಯಸಂಸ್ಕಾರಕ್ಕೂ ಸ್ಥಳವಿಲ್ಲದಂತೆ ಮಾಡಿದ್ದಾರೆ ಎಂದು ವರದಿ ಬಿತ್ತರಿಸಿದ ಬೆನ್ನಲ್ಲೇ ಗುರುವಾರ ಕಂದಾಯ ನಿರೀಕ್ಷಕ ಲಿಂಗೇಗೌಡ. ಪಿಡಿಒ ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಸ್ಥಳಕ್ಕೆ ಭೇಟಿ ಜೆಸಿಬಿ ಯಂತ್ರದಿಂದ ಒತ್ತುವರಿ ತೆರವುಗೊಳಿಲು ಮುಂದಾಗಿದ್ದಾರೆ.

.
ತೆರವು ಕಾರ್ಯಕ್ಕೆ ಗ್ರಾಮಸ್ಥರು ಜನಧ್ವನಿ‌ ನ್ಯೂಸ್ ಹಾಗೂ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ತಾಲೂಕು ಪಂಚಾಯತ್ ಕಚೇರಿ ಮುಂದೆ ಗುರುವಾರ ಕಳುವಾಗಿದ್ದ ಬೈಕ್ ಬಳ್ಳಾರಿಯಲ್ಲಿ ಪತ್ತೆ..


ಚಳ್ಳಕೆರೆ ಜನಧ್ವನಿ ವಾರ್ತೆ ಮೇ 31 ತಾಲೂಕು ಪಂಚಾಯಿತಿ ಕಚೇರಿ ಮುಂದೆ ನಿಲ್ಲಿಸಿದ್ದ ಬೈಕ್ ಬಳ್ಳಾರಿಯಲ್ಲಿ ಪತ್ತೆಯಾಗಿರುವ ಘಟನೆ ಬೆಳೆಕಿಗೆ ಬಂದಿದೆ.


ತಾಲೂಕು ಪಂಚಾಯತ್ ಕಚೇರಿಯ ಸಂಜೀವಿನಿ ಮಹಿಳಾ ಒಕ್ಕೂಟದ ತಾಲೂಕು ಸಂಯೋಜಕ ಬಾಲರಾಜು ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಕಚೇರಿ ಮುಂದೆ ನಿಲ್ಲಿಸಿ ಕರ್ತವ್ಯ ಮಾಡಿ ಹೊರ ಬಂದಾಗ ಬೈಕ್ ಕಳವಾಗಿರುವ ಬಗ್ಗೆ ಆತಂಕಕ್ಕೆ ಸಿಲುಕುವಂತೆ ಮಾಡಿತ್ತು.
ಬೈಕ್ ಹಾಗೂ ಕಳ್ಳ ಸಮೇತ ಬಳ್ಳಾರಿಯಲ್ಲಿ ಸಿಕ್ಕಿದ್ದು ತಳಕು ಪೊಲೀಸ್ ಠಾಣೆಯಿಂದ ಬಾಲರಾಜ್ ಕರೆ ಮಾಡಿ ನಿಮ್ಮಬೈಕ್ ನಂಬರ್ ಹೇಳಿ , ಎಲ್ಲಿ ನಿಲ್ಲಿಸಿದ್ದಿರು ಎಂಬ ಮಾಹಿತಿಯನ್ನು ಪಡೆದು ತನಿಖೆ ಮುಗಿದ ನಂತರ ನಿಮಗೆ ಕರೆ ಮಾಡುತ್ತಾರೆ ಬಳ್ಳಾರಿಗೆ ಹೋಗಿ ನಿಮ್ಮ ಬೈಕ್ ಪಡೆದು ಕೊಂಡು ಬನ್ನಿ ಎಂದು ಮಾಹಿತಿ ನೀಡಿದಾಗ ನಿಟ್ಟುಸಿರು ಬಿಟ್ಟು ನನ್ನ ಬೈಕ್ ಸದಸ್ಯ ಪತ್ತೆಯಾಯಿತು ಎಂದು ನಗೆ ಬೀರಿದ್ದಾರೆ.
ಒಟ್ಟಾರೆ ನಗರದಲ್ಲಿ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದ್ದು ನಾಗರೀಕರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ ಕಳೆದ ವಾರದಲ್ಲಿ ಪರಶುರಾಂಪುರ ಠಾಣೆವ್ಯಾಪ್ತಿಯಲ್ಲಿ ನಗರ ಸೇರಿದಂತೆ ವಿವಿಧೆ ಕಳುವಾಗಿದ್ದ ಸುಮಾರು 30 ಕ್ಕೂ ಹೆಚ್ಚು ಬೈಕ್ ಹಾಗೂ ಕಳ್ಳರನ್ನು ಬಂದಿಸಿರುವುದು ವರದಿಯಾಗಿದೆ.

ಜನಧ್ವನಿ ವರದಿ ಫಲಶೈತಿ ಕಸಮುದ್ರ ಗ್ರಾಮದ ಸ್ಮಶಾನ ಒತ್ತುವರೊ ತೆರವುಗೊಳಿಸಲಾಗುವುದು ಎಂದು ತಹಶೀಲ್ದಾರ್ ರೇಹಾನ್ ಪಾಷ

ಚಳ್ಳಕೆರೆ ಜನಧ್ವನಿ ವಾರ್ತೆ ಮೇ‌30 ಮೃತರ ಅಂತ್ಯಕ್ರಿಯೆಗೆ ಸ್ಮಶಾನ ವಿಲ್ಲದೆ ಪರದಾಡುವಂತಾಗಿದೆ ಎಂದು ಜನಧ್ವನಿ ಡಿಜಿಟಲ್ ಮೀಡಿಯಾ ಸುದ್ದಿ ಬಿತ್ತರಿಸಿದ ಕೆಲವೇ ಗಂಟೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಕಚೇರಿಯಿಂದ ಸ್ಪಂದನೆ.. ಹೌದು ಇದು ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಪಂ ವ್ಯಾಪ್ತಿಗೆ ಸೇರಿದ ಗ್ರಾಮದಲ್ಲಿ ಸುಮಾರು 800 ಮನೆಗಳಿದ್ದರೂ ಮೃತರ ಅಂತ್ಯಕ್ರಿಯೆಗೆ ಸ್ಮಾಶಾನವಿಲ್ಲದೆ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡುತ್ತಾರೆ ಆದರೆ ಜಮೀನು ಇಲ್ಲದವರು ಎಲ್ಲಿ ಅಂತ್ಯ ಕ್ರಿಯೆ ಮಾಡಬೇಕೆ ಎಂಬ ಪ್ರಶ್ನೆಯಾಗಿದೆ. ಇಂದು ಗ್ರಾಮದಲ್ಲಿ ವೃದ್ದೆಯೊಬ್ಬಳು ಮೃತಪಟ್ಟಿದ್ದು ಅಂತ್ಯ ಸಂಸ್ಕಾರ ಮಾಡಲು ಸ್ಥಳವಿಲ್ಲದೆ ವೇದಾವತಿ ನಂದಿ ಸಂಡೆಯಲ್ಲಿ ಅಂತ್ಯಕ್ರಿಯೆ ಮಾಡಿದ ಪ್ರಸಂಗ ಜರುಗಿದೆ. ಎಂಬ ಸುದ್ದಿ ಬೆಳಕು ಚೆಲ್ಲಾಗಿತ್ತು

ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ ಕಾಮಸಮುದ್ರ ಗ್ರಾಮದ ರಿ.ಸಂ134 ರಲ್ಲಿ ಸ್ಮಶಾನಕ್ಕೆಂದು ಮೂರು ಎಕರೆ ಜಾಗ ಮೀಸಲಿರಿಸಲಾಗಿದೆ ನಾಳೆಯೇ ಗ್ರಾಮಕ್ಕೆ ಭೇಟಿ ನೀಡಿ ಒತ್ತುವರಿ ತೆರವುಗೊಳಿಸಿ ಅಂತ್ಯಸಂಸ್ಕಾರ ಮಾಡಲು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಜನಧ್ವನಿ ನ್ಯೂಸ್ ವರದಿ ಬಿತ್ತರಿಸಿದ ಬೆನ್ನಲ್ಲೇ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೊಮ್ಮಸಮುದ್ರ ಕೆರೆಯಲ್ಲಿನ ಸುರಂಗ ಹಾಗೂ ಗುಂಡಿಗಳನ್ನು ಮುಚ್ಚಿಸಲು ಮುಂದಾಗಿದ್ದಾರೆ.


ಜನಧ್ವನಿ ವರದಿ ಫಲಶೃತಿ
ಚಳ್ಳಕೆರೆ ಮೇ 15 ಜೀವದ ಹಂಗು ತೊರೆದು ಕೆರೆಯಲ್ಲಿ ಸುರಂಗ ಕೊರೆದು ಮರಳು ತುಂಬುತ್ತಿರುವ ದೃಶ್ಯ ನೋಡಿದರೆ ಜೀವ ಝಲ್ ಎನ್ನುವಂತಿದೆ ಎಂಬ ತಲೆಬರಹದಡಿಯಲ್ಲಿ ಜನಧ್ವನಿ ನ್ಯೂಸ್ ವರದಿ ಬಿತ್ತರಿಸಿದ ಬೆನ್ನಲ್ಲೇ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೆರೆಯಲ್ಲಿನ ಸುರಂಗ ಹಾಗೂ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದಾರೆ.


ಜನಧ್ವನಿ ನ್ಯೂಸ್ ವರದಿ ಬಿತ್ತಿರಿಸಿದಾಗ
ಹೌದು ಇದು ಚಳ್ಳಕೆರೆ ನಗರ ಸಮೀಪದ ಬೊಮ್ಮಸಂದ್ರ ಕೆರೆಯಲ್ಲಿ ನಗರ ಸೇರಿದಂತೆ ವಿವಿಧ ಗ್ರಾಮಗಳಿಂದ ಸುಮಾರು 10 ರಿಂದ 15 ಎತ್ತಿನಗಾಡಿಯಲ್ಲಿ ಮರಳು ಸಾಗಾಟ ಮಾಡುತ್ತಿದ್ದು. ಮೇಲಿನ ಕಪ್ಪು ಮಣ್ಣು ತೆಗೆದು ಸುಮಾರು 5 ರಿಂದ 8 ಅಡಿಯವರೆಗೆ ಸುರಂಗಕೊರೆದು ಮರಳು ತೆಗೆಯುತ್ತಾರೆ ಎಂದು ಸುದ್ದಿ ಬಿತ್ತಿರಿಸಿದ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.


ಜನಧ್ವನಿ ಸುದ್ದಿ ಬೆಳಕು ಚೆಲ್ಲಿದ ನಂತರ ಪೊಲೀಸ್ ಸಿಬ್ಬಂದಿಗಳು ಕೆರೆಯಲ್ಲಿನ ಗುಂಡಿ ಮರಳು ತುಂಬಲು ತೆಗೆದ ಸುರಂಗಗಳನ್ನು ಮುಚ್ಚುತ್ತಿರುವುದು ಹಾಗೂ ಕೆರೆಗೆ ಅಕ್ರಮ ಪ್ರವೇಶ ಮಾಡದಂತೆ ಜೆಸಿಬಿ ಯಂತ್ರದಿಂದ ಟ್ರಂಚ್ ತೆಗೆಯುತ್ತಿರುವುದು,
ಕೆರೆಯಲ್ಲಿ ಅಕ್ರಮ ಮಣ್ಣು ಹಾಗೂ ಮರಳು ಸಾಗಾಟದಿಂದ ಕೆರೆಯ ಚಿತ್ರಣವೇ ಬದಲಾಗಿದ್ದು ಕೆರೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳನ್ನು ಮರಳಿನ ಸುರಂಗಮಾರ್ಗ ಗಳನ್ನು ಜೆಸಿಬಿ ಯಂತ್ರದಿಂದ ಮುಚ್ಚಿದ್ದಾರೆ. ಕೆರೆಯಲ್ಲಿ ಅಕ್ರಮ ಪ್ರವೇಶ ಮಾಡದಂತೆ ಕೆರೆಗೆ ಪ್ರವೇಶ ಮಾಡುವ ದಾರಿಗೆ ಟ್ರಚ್ ಹೊಡೆಸಿದ್ದಾರೆ.ಮರಳು ತುಂಬುವ ಎತ್ತಿನ ಗಾಡಿಗಳಿಗೆ ಮತ್ತೆ ಇತ್ತ ಸುಳಿಯ ಬಾರದು ಎಂದು ಎಚ್ಚರಿಗೆ ನೀಡಿ ಕಳಿಸಿದ್ದಾರೆ.
ಜೀವ ರಕ್ಷಣೆಯಿಲ್ಲದೆ ಸುರಂಗ ಕೊರೆದು ಮರಳು ತುಂಬುವವರಿಗೆ ಪೊಲೀಸ್ ಅಧಿಕಾರಿಗಳು ಬುದ್ದಿ ಹೇಳಿದ್ದಾರೆ. ಜನಧ್ವನಿ ನ್ಯೂಸ್ ವರಿದಿಯ ಫಲಶೃತಿಯಾಗಿದೆ.

You cannot copy content of this page