ಹೊಸಹಟ್ಟಿಸರ್ಕಾರಿಶಾಲೆಯ ಮಕ್ಕಳಿಗೆ ಯುರೋಕಿಡ್ ಶಾಲೆಯಿಂದ ತಟ್ಟೆಲೋಟ ವಿತರಣೆಯ ಕಾರ್ಯಕ್ರಮ

by | 25/11/22 | ಸುದ್ದಿ

ಹಿರಿಯೂರು :
ಈ ದಾನ ಉತ್ಸವದಂತಹ ಕಾರ್ಯಕ್ರಮಗಳು, ಮಕ್ಕಳಲ್ಲಿ ಪರಸ್ಪರ ಉತ್ತಮ ಬಾಂಧವ್ಯ ಮೂಡಿಸುವುದರ ಜೊತೆಗೆ ವಿದ್ಯಾರ್ಥಿಗಳನ್ನು ಸಮಾಜದ ದುರ್ಬಲರಿಗೆ ಅಗತ್ಯ ನೆರವು ನೀಡಲು ಪ್ರೇರೇಪಿಸುತ್ತದೆ ಎಂಬುದಾಗಿ ಬಿಇಟಿ ಯುರೋ ಇಂಟರ್ನ್ಯಾಷನಲ್ ಸಂಸ್ಥೆಯ ಅಧ್ಯಕ್ಷರಾದ ಘನಶಂಕರ್ ಹೇಳಿದರು.
ತಾಲ್ಲೂಕಿನ ಹೊಸಹಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ನಗರದ ಬಿಇಟಿ ಯುರೋ ಇಂಟರ್ನ್ಯಾಷನಲ್ ಶಾಲೆ ವತಿಯಿಂದ ಆಯೋಜಿಸಲಾಗಿದ್ದ “ದಾನ ಉತ್ಸವ” ಕಾರ್ಯಕ್ರಮದಡಿ ಮಕ್ಕಳಿಗೆ ತಟ್ಟೆಲೋಟವನ್ನು ಯುರೋಇಂಟರ್ನ್ಯಾಷನಲ್ ಶಾಲೆಯ ಮಕ್ಕಳಿಂದ ದಾನ ಕೊಡಿಸಿ, ನಂತರ ಅವರು ಮಾತನಾಡಿದರು.
ಜೀವನದಲ್ಲಿ ನಮ್ಮ ಅವಶ್ಯಕತೆಗಳನ್ನು ಪೂರ್ಣಗೊಳಿಸಿಕೊಳ್ಳುವ ಜೊತೆಗೆ ನಮ್ಮ ಕೈಲಾದಷ್ಟು ಸಹಾಯವನ್ನು ಸಮಾಜದ ದುರ್ಬಲರಿಗೆ ಪೂರೈಸಿಕೊಡುವ ನಿಟ್ಟಿನಲ್ಲಿ ಇಂತಹ ದಾನಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆಯಲ್ಲದೆ, ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ಬಾಲ್ಯದಲ್ಲಿಯೇ ರೂಢಿಸಿಕೊಳ್ಳಲು ಸಹಾಯಕವಾಗಿದೆ ಎಂಬುದಾಗಿ ಹೇಳಿದರು.
ಸಂಸ್ಥೆಯ ಚೇರ್ ಪರ್ಸನ್ ಹಾಗೂ ಸಮಾಜಸೇವಕಿ ಶ್ರೀಮತಿ ಶಶಿಕಲಾ ರವಿಶಂಕರ್ ಮಾತನಾಡಿ, ಸಮಾಜದಲ್ಲಿ ನಾವುಗಳು ಉತ್ತಮ ಶಿಕ್ಷಣ ಪಡೆದು, ಉತ್ತಮ ಉದ್ಯೋಗ ಆಯ್ಕೆ ಮಾಡಿಕೊಂಡ ನಂತರ ಸಮಾಜದ ದುರ್ಬಲರಿಗೆ ಸಹಾಯಹಸ್ತ ಚಾಚುವ ಮೂಲಕ ಅವರ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಬಿಇಟಿ ಯುರೋ ಇಂಟರ್ನ್ಯಾಷನಲ್ ಸಂಸ್ಥೆಯ ಅಧ್ಯಕ್ಷರಾದ ಘನಶಂಕರ್ ರವರನ್ನು ಹೊಸಹಟ್ಟಿ ಗ್ರಾಮದ ಸರ್ಕಾರಿ ಶಾಲೆಯ ವತಿಯಿಂದ ಶಾಲು ಹೊದಿಸಿ, ಪುಷ್ಪಮಾಲೆ ಹಾಕಿ ಸನ್ಮಾನಿಸಿ, ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಚ್.ಯು.ಘನಶಂಕರ್, ಶ್ರೀಮತಿ ಕೀರ್ತನಾ ಘನಶಂಕರ್, ಸಮಾಜ ಸೇವಕಿ ಹಾಗೂ ಸಂಸ್ಥೆಯ ಚೇರ್ ಪರ್ಸನ್ ಶ್ರೀಮತಿ ಶಶಿಕಲಾ ರವಿಶಂಕರ್, ತಾಲ್ಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಮಹೇಶ್ವರರೆಡ್ಡಿ, ಹೊಸಹಟ್ಟಿ ಶಾಲೆಯ ಮುಖ್ಯೋಪಾಧ್ಯಾಯರಾದ ಪರಮೇಶ್ವರಪ್ಪ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಪ್ರಸನ್ನ, ಚಿದಾನಂದ, ಚರಣ್, ಸೇರಿದಂತೆ ಶಾಲೆಯ ಮಕ್ಕಳು ಅಧ್ಯಾಪಕರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *