ಹೂಳು ತುಂಬಿದ ಚರಂಡಿ ಸ್ವಚ್ವತೆಗೆ ಮುಂದಾದ ನಗರಸಭೆ ಇದು ಜನಧ್ವನಿ ವರದಿ ಎಫೆಕ್ಟ್.

by | 09/11/23 | ಇಂಪ್ಯಾಕ್ಟ್

ಜನಧ್ವನಿ ವರದಿ ಎಫೆಕ್ಟ್.
ಚಳ್ಳಕೆರೆ ನ.9. ಹೂಳು ತುಂಬಿದ ಚರಂಡಿಗಳು ಸಾಂಕ್ರಮಿಕ ರೋಗ ಭೀತಿಯಲ್ಲಿ ನಾಗರೀಕರು ಚಳ್ಳಕೆರೆ ನಗರಸಭೆ ವಿರುದ್ದ ಅಕ್ರೋಶ ಎಂಬ ತಲೆಬರಹದಡಿಯಲ್ಲಿ ಬುಧವಾರ ಸುದ್ದಿ ಬೆಳಕು ಚೆಲ್ಲಿದ ಬೆನ್ನಲ್ಲೇ ನಗರಸಭೆ ಅಧಿಕಾರಿಗಳು ಚರಂಡಿಗಳ ಸ್ವಚ್ಚತೆಗೆ ಮುಂದಾಗಿದ್ದಾರೆ.

ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದು, ಗಬ್ಬು ವಾಸನೆಯಿಂದ ಕೂಡಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ನಗರದ ಜನತೆ ಬದುಕುವಂತಾಗಿದೆ. ಎಂದು ಜನಧ್ವನಿ ಡಿಜಿಟಲ್ ಮೀಡಿಯಾ ಚರಂಡಿಗಳ ಅವ್ಯವಸ್ತೆ ಬಗ್ಗೆ ಅಧಿಕಾರಿಗಳ ಕಣ್ಣುತೆರೆಸುವಂತೆ ಮಾಡಿತ್ತು

ನಗರದ ಬೆಂಗಳೂರು ರಸ್ತೆ ಬಳ್ಳಾರಿ ರಸ್ತೆ ಸೇರಿದಂತೆ ಇತರ ಕಡೆಗಳಲ್ಲಿ ರಸ್ತೆ ಅಗಲೀಕರಣದಿಂದ ಹೊಸದಾಗಿ ನಿರ್ಮಿಸಿರುವ ಚರಂಡಿಗಳಲ್ಲಿ ಸಾರ್ವಜನಿಕರ ಬಳಕೆಗೂ ಬರುವ ಮುನ್ನವೇ ಚರಂಡಿಗಳ ಕಳಪೆ ಕಾಮಗಾರಿ ನಡೆದು ಆಪ್ ಬೆಳೆ ಸೇರಿದಂತೆ ಕಸ ಕಡ್ಡಿ ಹೂಳು ತುಂಬಿಕೊಂಡು ಸೊಳ್ಳೆ ಹಾಗೂ ಕ್ರಿಮಿ ಕೀಟಗಳ ವಾಸಸ್ಥಾನವಾಗಿದ್ದರಿಂದ ಸಾರ್ವಜನಿಕರು ಅಕ್ರೋಶ ಹೊರ ಹಾಕಿದ್ದರು. ನಗರಸಭೆ ಆರೋಗ್ಯ ನಿರೀಕ್ಷಿಕೆ ಗೀತಾ ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ಪೌರಕಾರ್ಮಿಕರ ನೆರವಿನಿಂದ ರಸ್ತೆ ಬದಿ ಚರಂಡಿಗಳನ್ನು ಸ್ವಚ್ಛಗೊಳಿಸಿದ್ದಾರೆ ನಗರದ ನಿವಾಸಿಯಾದ ಜೆ ಎಸ್ ಆನಂದ್ ನಗರಸಭೆ ಸದಸ್ಯ ಆರ್ ರುದ್ರ ನಾಯಕ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಧ್ಯಮದಲ್ಲಿ ಸಮಸ್ಯೆಗಳ ಸುದ್ದಿಗಳು ಬಂದಾಗ ಮಾತ್ರ ಅಧಿಕಾರಿಗಳು ಸ್ವಚ್ಚತೆಗೆ ಮುಂದಾಗುತ್ತಾರೆ ಇಂತಹ ಸಾಮಾಜಿಕ ಕಳಕಳಿಯ ವರದಿಗಳನ್ನು ಇನ್ನಷ್ಟು ಬಿತ್ತರಿಸುವಂತೆ ಹಾಗೂ ಚರಂಡಿ ಸ್ವಚ್ಛ ಗೊಂಡಿರುವುದಕ್ಕೆ ಅಭಿನಂದನೆ ತಿಳಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *