ಹೂಳು ತುಂಬಿದ ಚರಂಡಿ ರಸ್ತೆ ಮೇಲೆ ಹರಿಯುತ್ತಿರುವ ಮಲೀನ ನೀರು ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ ಚಳ್ಳಕರೆ ಹೈಟೆಕ್ ಸಾರಿಗೆ ಬಸ್ ನಿಲ್ದಾಣ.
by ಗೋಪನಹಳ್ಳಿಶಿವಣ್ಣ | 30/10/23 | ಪರಿಸರ

ಚಳ್ಳಕೆರೆ ಜನಧ್ವನಿ ವಾರ್ತೆ ಅ.30.
ಚರಂಡಿ ತ್ಯಾಜ್ಯ ನೀರು ರಸ್ತೆ ಮೇಲೆ ಹರಿದರೂ ಕೇಳೋರಿಲ್ಲ..ಸಾಂಕ್ರಮಿಕ ರೋಗ ಭೀತಿಯಲ್ಲಿ ಸಾರ್ವಜನಿಕರು.
ಹೌದು ಇದು ಚಳ್ಳಕೆರೆ ನಗರದ ಜನ ಹಾಗೂ ವಾಹನ ದಟ್ಟಣೆಯಿಂದ ಕೂಡಿರುವ ಹೈಟೆಕ್ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣಕ್ಕೆ ಪ್ರವೇಶ ಮಾಡುವ ಮುಖ್ಯದ್ವಾರದಲ್ಲಿರುವ ಚರಂಡಿ ಮಲ ಮೂತ್ರ.ತ್ಯಾಜ್ಯದಿಂದ ತುಂಬಿ ಮಲೀನ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಮಲೀನ ನೀರನ್ನು ತುಳಿದು ಕೊಂಡು ಮೂಗು ಮುಚ್ಚಿಕೊಂಡು ಬಸ್ ನಿಲ್ದಾಣಕ್ಕೆ ಪ್ರವೇಶ ಮಾಡಿ ಬಸ್ ನಲ್ಲಿ ಪ್ರಯಾಣ ಮಾಡ ಬೇಕಾಗಿದೆ.
ಈ ಚರಂಡಿ ಸಮೀಪದ ಅರಮನೆ ಹೋಟೆಲ್ ಇದ್ದು ತಿಂಡಿ ಸವಿಯಲು ಹೋಟೆಲ್ ಗೆ ಅಧಿಕಾರಿಗಳು.ಜನಪ್ರತಿನಿಧಿಗಳು ಬಂದು ಹೋಗುತ್ತಾರೆ ಚರಂಡಿಯ ಮಲೀನ ನೀರು ಸುಮಾರು ತಿಂಗಳುಗಳಿಂದ ರಸ್ತೆ ಮೇಲೆ ಹರಿದು ಗೊಬ್ಬುವಾಸನೇ ಬೀರಿದರೂ ಸಹ ನಗರಸಭೆ ಅಥವಾ ಸಾರಿಗೆ ಇಲಾಖೆ ಅಧಿಕಾರಿಗಳಾಗಲಿ ಚರಂಡಿ ಅವ್ಯವಸ್ಥೆ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಮಹಾದೇವಿ ರಸ್ತೆಯಲ್ಲಿ ಕಿರಾಣಿ ಅಂಗಡಿ. ಎಣ್ಣೆ.ಬೆಲ್ಲ.ರಾಗಿ. ಅಕ್ಕಿ .ಹೋಟೆಲ್ ಹಾಗೂ ವಿವಿಧ ಸಗಟು ವ್ಯಾಪಾರಿಗಳ ಅಂಗಡಿಗಳಿದ್ದು ದಿನ ಪೂರ್ತಿ ಮೂಗು ಮುಚ್ಚಿಕೊಂಡು ವ್ಯಾಪಾರ ವಹಿವಾಟನ್ನು ಉಸಿರುಗಟ್ಟಿಸುವ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದೆ.

ಸಾರಿಗೆ ಬಸ್ ನಿಲ್ದಾಣ ದೂರದ ಬೆಟ್ಟ ನುಣ್ಣಗೆ ಎಂಬಂತೆ ಸಾರಿಗೆ ಬಸ್ ನಿಲ್ದಾಣ ದೂರದಿಂದ ನೋಡಲು ಸೊಗಲು ಆದರೆ ಒಳ ಪ್ರವೇಶ ಮಾಡುತ್ತಿದ್ದಂತೆ ಚರಂಡಿ ನೀರು ರಸ್ತೆ ಮೇಲೆ ಹರಿಯುವ ಗೊಬ್ಬುವಾಸನೆ. ಚರಂಡಿ ಅವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಪ್ರಾಯಾಣಿಕರು ಹಾಗೂ ಸಾರ್ವಜನಿಕರು ನರಕಯಾತನೆ ಅನುಭವಿಸುತ್ತಿದ್ದಾರೆ.
ಚರಂಡಿ ನೀರು ರಸ್ತೆ ಮೇಲೆ ಹರಿದರೂ ಕೇಳೋರಿಲ್ಲ ಕೇಳೋರಿಲ್ಲ ಎಂದು ಸಾರ್ವಜನಿಕರ ಆರೋಪವಾಗಿದೆ.


ಸಂಪೂರ್ಣ ನೈರ್ಮಲ್ಯ ಯೋಜನೆಯ ಸ್ವಚ್ಛ ಭಾರತ ಇಲ್ಲಿನ ಜನತೆಗೆ ಗಗನ ಕುಸುಮವಾಗಿದೆ. ಜತೆಗೆ ನಗರಸಭೆ ಅಧಿಕಾರಿಗಳು ಕಾಲಕಾಲಕ್ಕೆ ನಿಯಮಿತವಾಗಿ ಚರಂಡಿಯ ಹೂಳೆತ್ತಿ ನೈರ್ಮಲ್ಯವನ್ನು ಒದಗಿಸುವಲ್ಲಿ ವಿಫಲವಾಗಿದ್ದಾರೆ. ಕೊಳಕು ತುಂಬಿದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದು ನಗರಸಭೆ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕಲುಷಿತ ವಾತಾವರಣದಿಂದಾಗಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿದ್ದು ಸಂಜೆಯಾಗುತ್ತಿದ್ದಂತೆ ಮನುಷ್ಯರ ರಕ್ತ ಹೀರಲು ಶುರುಮಾಡುತ್ತವೆ. ಇದರಿಂದಾಗಿ ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಇಲ್ಲಿನ ನಾಗರೀಕರು ಕಾಲ ಕಳೆಯುತ್ತಿದ್ದಾರೆ.

ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಮೇಲೆ ಹರಿಯುತ್ತಿರು ಮಲೀನ ನೀರಿನ ಅವ್ಯವಸ್ಥೆ ಸರಿಪಡಿಸುವರೇ ಕಾದು ನೋಡ ಬೇಕಿದೆ.
0 Comments