ಹೂಳು ತುಂಬಿದ ಚರಂಡಿಗಳು ಸಾಂಕ್ರಮಿಕ ರೋಗ ಬೀತಿಯಲ್ಲಿ ಚನ್ನಗಾನಹಳ್ಳಿ ಗ್ರಾಮಸ್ಥರು.
by ಗೋಪನಹಳ್ಳಿಶಿವಣ್ಣ | 16/09/23 | ಆರೋಗ್ಯ
ಚಳ್ಳಕೆರೆ ಜನಧ್ವನಿ ವಾರ್ತೆ ಸೆ.16 ಹೂಳು ತುಂಬಿದ ಚರಂಡಿಗಳು ಸೊಳ್ಳೆಗಳ ಉತ್ಪ
ತ್ತಿ ಕೇಂದ್ರವಾಗಿಗೊಬ್ಬು ವಾಸವೆ ಸಾಂಕ್ರಮಿಕ ರೋಗ ಬೀತಿಯಲ್ಲಿ ಗ್ರಾಮಸ್ಥರು.
ಹೌದು ಇದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಘಟಪರ್ತಿ ಗ್ರಾಪಂ ವ್ಯಾಪ್ತಿಯ ಚನ್ನಗಾನಹಳ್ಳಿ ಗ್ರಾಮದ ಮುಸ್ಲೀಂ ಸಮಾದ ಬೀದಿಯಲ್ಲಿರು ಚರಂಡಿ ಹೂಳು ತುಂಬಿ ಸುಮಾರು ತಿಂಗಳುಗಳೆ ಕಳೆದಿವೆ ಈ ಬಗ್ಗೆ ಗ್ರಾಪಂ ಅಧಿಕಾರಿಗಳ ಗಮನ ಸೆಳೆದರೂ ನಮಗೂ ಇದಕ್ಕು ಸಂಬಂಧವಿಲ್ಲ ಎನ್ನುವಂತೆ ನಿವಾಸಿಗಳ ಮನವಿ ಅವರ ಕಿವಿಗೆ ಬೀಳದೆ ಸ್ವಚ್ಚತೆ ಮಾಡಲು ಮಾತ್ರ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ನಿವಾಸಿ ತಿಪ್ಪುಜನಧ್ವನಿ ಡಿಜಿಟಲ್ ಮೀಡಿಯಾ ದೊಂದಿಗೆ ಮನವಿ ಮಾಡಿಕೊಂಡಿದ್ದಾರೆ.
ಗ್ರಾಮಗಳ ಅಭಿವೃದ್ದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಸ್ವಚ್ಚತೆಗೆ ಸಾಕಷ್ಟು ಅನುದಾನ ಬರುತ್ತಿದೆ ಸಂಪೂರ್ಣ ನೈರ್ಮಲ್ಯ. ಸ್ವಚ್ಚ ಭಾರತ.ಸೇರಿದಂತೆ ಸ್ವಚ್ಚತೆಗಾಗಿ ವಿವಿಧ ಯೋಜನೆಗಳಡಿ ಗ್ರಾಮಗಳ ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡುತ್ತದೆ.

ಈಗಾಗಲೆ ರಾಜ್ಯದಲ್ಲಿ ಡೆಂಗ್ಯೂ ಜ್ವರದಿಂದ ಮೃತ ಪಟ್ಟವರ ಸಂಖ್ಯೆ ಹೆಚ್ಚಾಗುತ್ತಿದ್ದು ಜಿಲ್ಲೆಯ ಕಾವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರಿನಿಂದ ಮೃತ ಪಟ್ಟ ಘಟನೆಯಲ್ಲಿ ಜಿಲ್ಲೆಯಲ್ಲಿ ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಂತೆ ಜಿಲ್ಲಾಧಿಕಾರಿಗಳು ಜಿಲ್ಲಾಪಂಚಾಯತ್ ಎಚ್ಚರಿಕೆ ನೀಡಿದರೂ ಸಹ ಗ್ರಾಮಗಳಲ್ಲಿ ಚರಂಡಿಗಳ ಸ್ವಚ್ಚತೆಗೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಒಂದು ಕಡೆ ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಿರಿ ಎಂದು ಜನರಲ್ಲಿ ಗ್ರಾಮ ಪಂಚಾಯಿತಿಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಮತ್ತೊಂದೆಡೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಹಳ್ಳಿಗಳಲ್ಲಿ ಚರಂಡಿಗಳು ಕೊಳಚೆ ತಾಣಗಳಾಗಿವೆ’ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಘಟಪರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಗಾನಹಳ್ಳಿ ಗ್ರಾಮದಲ್ಲಿ ಇರುವುದು ಒಂದೇ ಚರಂಡಿಯಿದ್ದರೂ ಸ್ವಚ್ಛತೆ ಮರೀಚಿಕೆಯಾಗಿದೆ. ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ಹೋಗಿವೆ. ಸಂಜೆಯಾಗುತ್ತಿದ್ದಂತೆ ದುರ್ವಾಸನೆ ಬೀರಲಾರಂಭಿಸುತ್ತವೆ. ಚರಂಡಿಗಳಲ್ಲಿನ ನೀರು ಸರಾಗವಾಗಿ ಮುಂದೆ ಹರಿಯಲಿಕ್ಕೆ ಸಾಧ್ಯವಾಗದೇ ನಿಂತಲ್ಲೆ ನಿಂತಿರುತ್ತದೆ. ಇದರಿಂದ ಜನರು ನೆಮ್ಮದಿಯಿಂದ ಜೀವನ ಮಾಡಲಿಕ್ಕೂ ಕಷ್ಟವಾಗಿದೆ ಚರಂಡಿ ಸ್ವಚ್ಚಗೊಳಿಸದೆ ಇರುವುದರಿಂದ ಗಿಡಗೆಂಟೆಗಳು ಬೆಳೆದು ವಿಷಜಂತುಗಳ ಹಾವಳಿ ಹೆಚ್ಚಾಗಿ . ಚರಂಡಿ ಸ್ವಚ್ಛಗೊಳಿಸಲ್ಲ. ಬ್ಲೀಚಿಂಗ್ ಪೌಡರ್ ಹಾಕಲ್ಲ. ರಾಸಾಯನಿಕಗಳನ್ನು ಸಿಂಪಡಣೆ ಮಾಡಲ್ಲ. ಈ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸಾಕಷ್ಟು ಬಾರಿಗೆ ತಿಳಿದರೂ ಪ್ರಯೋಜನವಾಗಿಲ್ಲ. .
ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡಿ, ಜನರಿಗೆ ಸಂಕಷ್ಟ ಎದುರಾದರೆ ಅಧಿಕಾರಿಗಳೇ ನೇರವಾಗಿ ಹೊಣೆಗಾರರಾಗುತ್ತಾರೆ’ ಎಂದು ಚನ್ನಗಾನಗಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಸ್ವಚ್ಚತೆಗೆ ಮುಂದಸಗುವರೇ ಕಾದು ನೋಡ ಬೇಕಿದೆ.
0 Comments