ಧಾರವಾಡ: ಹುಬ್ಬಳ್ಳಿಯ ಚೆನ್ನಮ್ಮಾ ಮೈದಾನದಲ್ಲಿ ಕನ್ನಡ ವಿರೋಧಿ ಟಿಪ್ಪು ಜಯಂತಿಗೆ ಪಾಲಿಕೆ ಅನುಮತಿ ನೀಡಬಾರದು. ಒಂದು ವೇಳೆ ಅನುಮತಿ ನೀಡಿದಲ್ಲಿ ನಾವು ಪಾಲಿಕೆಯ ನಿರ್ಧಾರದ ವಿರುದ್ಧ ಹೊರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಶ್ರೀ ರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ ಹು-ಧಾ ಮಾಹಾನಗರ ಪಾಲಿಕೆಗೆ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚೆನ್ನಮ್ಮ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ಕೋರಿ ಎಐಎಂಐಎಂ ಪಕ್ಷ ಪಾಲಿಕೆಗೆ ಈಗ ಅರ್ಜಿ ಸಲ್ಲಿಸಿದೆ, ಇದೂ ಸರಿಯಲ್ಲ ಹಾಗೂ ಇದನ್ನು ನಾವು ವಿರೋಧ ಮಾಡುತ್ತೇವೆ. ಅಲ್ಲದೆ ಪಾಲಿಕೆಯು ಇದಕ್ಕೆ ಅವಕಾಶ ನೀಡಬಾರದು ಎಂದು ನಾವು ಕೂಡಾ ಮನವಿ ಸಲ್ಲಿಸುತ್ತೇವೆ. ಅಲ್ಲದೆ ಎಐಎಂಐಎಂ ಪಕ್ಷ, ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಯವರು ದ್ವೇಷ ಮನೋಭಾವನೆಯಿಂದ ಇದನ್ನು ಮಾಡುತ್ತಿದ್ದಾರೆ. ಇದನ್ನು ನಾವು ಬಲವಾಗಿ ವಿರೋಧ ಮಾಡುತ್ತೇವೆ ಎಂದರು.
ಇಸ್ಲಾಂನಲ್ಲಿ ಅಲ್ಲಾ ಒಬ್ಬನೇ ಎಂದು ಕುರಾನನಲ್ಲಿ ಹೇಳಲಾಗಿದೆ. ಜೊತೆಗೆ ನೂರಕ್ಕೆ 90 ರಷ್ಟು ಮುಸ್ಲಿಮರು ಇದನ್ನೆ ಪಾಲಿಸುತ್ತ ಬಂದಿದ್ದಾರೆ. ವ್ಯಕ್ತಿ ಪೂಜೆ ಹಾಗೂ ಆರಾಧನೆ ಇಸ್ಲಾಂನ ಪದ್ಧತಿಯಲ್ಲಿ ಇಲ್ಲಾ. ಈಗ ಟಿಪ್ಪು ಜಯಂತಿಯನ್ನು ಚೆನ್ನಮ್ಮ ಮೈದಾನದಲ್ಲಿ ಮಾಡಲು ಮುಂದಾಗಿರುವುದು ಸರಿಯಲ್ಲ. ಟಿಪ್ಪುಗೆ ಒಳ್ಳೆತನ ಇರಲಿಲ್ಲಾ. ಜೊತೆಗೆ ಮತಾಂತರ ಮಾಡಿದ ವ್ಯಕ್ತಿ, ದೇವಸ್ಥಾನವನ್ನು ಕೆಡವಿದ ವ್ಯಕ್ತಿ ಟಿಪ್ಪು ಆಗಿದ್ದಾನೆ. ಕನ್ನಡ ವಿರೋಧಿಯಾಗಿದ್ದ ಟಿಪ್ಪು ಜಯಂತಿಯನ್ನು ಚೆನ್ನಮ್ಮ ಮೈದಾನದಲ್ಲಿ ಮಾಡಲು ನಾವು ಬೀಡುವುದಿಲ್ಲ ಎಂದು ಹೇಳಿದರು.
ಮುಸ್ಲಿಂರ ನಮಾಜ್ ಧಾರ್ಮಿಕ ಆಚರಣೆ ಆಗಿದೆ. ಹಾಗಾಗಿ ಚೆನ್ನಮ್ಮ ಮೈದಾನದಲ್ಲಿ ವರ್ಷಕ್ಕೆ ಎರಡು ಬಾರಿ ನಮಾಜ್ ಮಾಡಲು ಮೈದಾನದಲ್ಲಿ ಅವಕಾಶ ನೀಡಲಾಗಿದೆ. ನಮಾಜ್‌ಗೆ ಅವಕಾಶ ನೀಡಲು ನ್ಯಾಯಾಲಯವು ಕೂಡಾ ತಿಳಿಸಿದೆ. ಅದೇ ರೀತಿ ನಾವು ಗಣೇಶೋತ್ಸವ ಮಾಡಲು ಅವಕಾಶ ಕೇಳಿದ್ವಿ, ಅದಕ್ಕೆ ಪಾಲಿಕೆ ಷರತ್ತು ವಿಧಿಸಿ ಅನುಮತಿ ನೀಡಿತು. ಅದರಂತೆ ನಾವು ಗಣೇಶೋತ್ಸವ ಮಾಡಿದ್ದೇವೆ. ಈಗ ಅದನ್ನೇ ಮುಂದಿಟ್ಟುಕೊಂಡು ಮೈದಾನದಲ್ಲಿ ಟಿಪ್ಪು ಜಯಂತಿ ಅನುಮತಿ ಕೇಳಿರುವುದು ಸರಿಯಲ್ಲ. ಒಬ್ಬ ವ್ಯಕ್ತಿಯನ್ನು ವೈಭವಿಕರಣ ಮಾಡಲು ನಾವು ಬಿಡುವುದಿಲ್ಲ. ನೀವು ಅಲ್ಲಿ ಟಿಪ್ಪು ಜಯಂತಿ ಮಾಡಿದರೆ ನಾವು ಅಂಬೇಡ್ಕರ್, ಛತ್ರಪತಿ ಶಿವಾಜಿ, ಬಸವನ, ಸಂಗೊಳ್ಳಿ ರಾಯಣ್ಣ ಜಯಂತಿ ಮಾಡುತ್ತೇವೆ. ಒಂದು ವೇಳೆ ಟಿಪ್ಪು ಜಯಂತಿಗೆ ಅವಾಕಾಶ ನೀಡಿದಲ್ಲಿ ಅದೂ ಸಂಘರ್ಷಕ್ಕೆ ಕಾರಣ ಆಗಲಿದೆ. ಹಾಗಾಗಿ ಪಾಲಿಕೆಯು ಚೆನ್ನಮ್ಮ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಾಕಾಶ ಕೊಡಬಾರದು ಎಂದು ಅಗ್ರಹಿಸಿದರು.
0 Comments