ಹಿರಿಯೂರು ಆ.28.
ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರಪೀಡಿತ ಪಟ್ಟಿಯಲ್ಲಿ ಹಿರಿಯೂರ್ ತಾಲೂಕ್ ಹೊರಗಿಟ್ಟಿರುವುದು ಅತ್ಯಂತ ಖಂಡನೀಯ ಎಂದು ರೈತ ಹೋರಾಟಗಾರ ಕಸವನಹಳ್ಳಿ ರಮೇಶ್ ಆರೋಪಿಸಿದ್ದಾರೆ.


ಹಿರಿಯೂರು ತಾಲೂಕಿನಲ್ಲಿರುವ ಮಳೆಮಾಪನ ಕೇಂದ್ರಗಳ ವರದಿಗಳ ಆಧಾರದ ಮೇಲೆ ಬರಗಾಲವನ್ನು ನಿರ್ಧರಿಸುವುದಾದರೆ ಅಧಿಕಾರಿಗಳ ಕೆಲಸವೇನು ?
ಕೇವಲ ಕಚೇರಿಯಲ್ಲಿ ಕುಳಿತು, ಮೇಲಾಧಿಕಾರಿಗಳ ಸಭೆಯಲ್ಲಿ ಹಾಜರಿ ಹಾಕಿ, ಕೃಷಿ ಭೂಮಿಯಲ್ಲಿ ಮಳೆಯ ಅಭಾವದಿಂದ ಉಂಟಾಗಿರುವ ಪರಿಣಾಮಗಳನ್ನು ಕ್ಷೇತ್ರ ಭೇಟಿಯ ಮೂಲಕ ಅಭ್ಯಾಸವನ್ನು ಮಾಡದೆ ಕೇವಲ ಕೈ ಕೆಳಗಿನ ಅಧಿಕಾರಿಗಳು ಸಿಬ್ಬಂದಿ ವರ್ಗದವರನ್ನು ಬಳಸಿಕೊಂಡು ವರದಿಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿ ತಮ್ಮ ಕೆಲಸ ಮುಗಿಯಿತು ಎಂದು ಕುಳಿತುಕೊಳ್ಳುವುದಾದರೆ ಇಂತಹ ಘನಂದಾರಿ ಕೆಲಸಕ್ಕೆ ಲಕ್ಷಾಂತರ ರೂಪಾಯಿ ಸಂಬಳ, ಕಾರು ,ಸಿಬ್ಬಂದಿ ವರ್ಗ ಇವರಿಗೆ ಯಾಕೆ ಕೊಡಬೇಕು ? ಹಿರಿಯೂರ್ ತಾಲೂಕನ್ನು ಬರಗಾಲ ಪಟ್ಟಿಯಲ್ಲಿ ಸೇರಿಸಲು ಈ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮನಸ್ಸು ಮಾಡಬೇಕೆಂದು ಮನವಿ ಮಾಡಿದರು
0 Comments