ಹಿರಿಯೂರು :ಅ17
ಸಮಾಜದಲ್ಲಿ ವೃದ್ಧರು ಹಾಗೂ ಮಕ್ಕಳು ಇಬ್ಬರೂ ಒಂದೇ ಮನಸ್ಥಿತಿಯವರಾಗಿದ್ದು, ಅವರು ನಮ್ಮಿಂದ ಬಯಸುವುದು, ಕೇವಲ ಪ್ರೀತಿ ಹಾಗೂ ವಿಶ್ವಾಸವನ್ನು ಮಾತ್ರ, ಆದ್ದರಿಂದ ಅವರ ಬಗ್ಗೆ ನಾವು ವಿಶೇಷ ಕಾಳಜಿ ವಹಿಸುವುದು ಬಹಳ ಅವಶ್ಯಕವಾಗಿದೆ ಎಂಬುದಾಗಿ ಸಮಾಜ ಸೇವಕಿ ಶ್ರೀಮತಿ ಶಶಿಕಲಾ ರವಿಶಂಕರ್ ಹೇಳಿದರು.
ತಾಲ್ಲೂಕಿನ ಭೀಮನಬಂಡೆ ಶ್ರೀಶುಭೋದಯ ವೃದ್ಧಾಶ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ರೋಟರಿ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ ಆಶ್ರಮದ ನಿವಾಸಿಗಳಿಗೆ ಉಚಿತ ವಸ್ತ್ರಗಳ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜೀವನದಲ್ಲಿ ನೊಂದ ಹಿರಿಯ ನಾಗರೀಕರಿಗೆ ಆಶ್ರಯ ನೀಡಿರುವುದು ಈ ಶುಭೋದಯ ವೃದ್ಧಾಶ್ರಮ, ಇಲ್ಲಿನ ಹಿರಿಯರಿಗೆ ಉಚಿತವಾಗಿ ಸೀರೆ, ಧೋತಿ ಉಡುಪುಗಳನ್ನು ವಿತರಿಸುವ ಮೂಲಕ ರೆಡ್ ಕ್ರಾಸ್ ಹಾಗೂ ರೋಟರಿ ಸಂಸ್ಥೆ ನಿಮ್ಮೊಂದಿಗೆ ಇದೆ ಎಂಬ ಭರವಸೆಯಲ್ಲಿ ಅವರ ಮನಸ್ಸಿನಲ್ಲಿ ಮೂಡಿಸಲಾಗುತ್ತಿದೆ ಎಂಬುದಾಗಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ವಸ್ತ್ರದಾನಿಗಳಾದ ರೋಟರಿ ಅಧ್ಯಕ್ಷರಾದ ದೇವರಾಜ್ ಮೂರ್ತಿ, ರೊಟೇರಿಯನ್ ಗಳಾದ ಜೋಗಪ್ಪ, ರಂಗನಾಥಪ್ಪ, ಲಕ್ಷ್ಮಿ, ತ್ರಿವೇಣಿ, ಲತಾ ರವರು ಆಶ್ರಮದ ನಿವಾಸಿಗಳಿಗೆ ಸೀರೆ, ಧೋತಿ ಉಡುಪುಗಳನ್ನು ವಿತರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷರಾದ ದೇವರಾಜಮೂರ್ತಿ ವಹಿಸಿದ್ದರು. ಲಕ್ಷ್ಮೀ ರಾಜೇಶ್, ಸುರೇಶ್ ಬಾಬು, ಸಣ್ಣಭೀಮಣ್ಣ, ಪದ್ಮಜಾ ಮಹಾಬಲಶೆಟ್ಟರು, ರಂಗನಾಥಪ್ಪ, ಹೆಚ್.ಎಸ್.ಪ್ರಶಾಂತ್, ಆಶ್ರಮದ ಮುಖ್ಯಸ್ಥರಾದ ತೇಜುಮೂರ್ತಿ, ಸೇರಿದಂತೆ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.
ಹಿರಿಯ ನಾಗರೀಕರ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಅವಶ್ಯಕವಾಗಿದೆ : ಶ್ರೀಮತಿ ಶಶಿಕಲಾ ರವಿಶಂಕರ್
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments