ಚಳ್ಳಕೆರೆ
ಇತ್ತೀಚಿನ ದಿನಗಳಲ್ಲಿ ಯುವಕರು ತಮ್ಮ ಕೆಲಸದ ಒತ್ತಡದಿಂದಾಗಿ ಹಿರಿಯ ನಾಗರಿಕರನ್ನು ಕಡೆಗಣಿಸುತ್ತಿದ್ದಾರೆ ಹಿರಿಯ ನಾಗರಿಕರು ಮಾನಸಿಕ ಧೈರ್ಯ ಹಾಗೂ ಮನೋಬಲ ತುಂಬಿಕೊಂಡು ಆಯುಷ್ ಇಲಾಖೆಯವರು ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿದ್ದಾರೆ ಇದರ ಸದ್ಬಳಕೆಯನ್ನು ನಾಗರಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಗ್ರಾಮ ಅಭಿವೃದ್ಧಿ ಅಧಿಕಾರಿ ರಜನಿಕಾಂತ್ ತಿಳಿಸಿದರು ,
ಇವರು ತಾಲೂಕಿನ ಓಬಳಾಪುರ ಗ್ರಾಮದಲ್ಲಿ ಅಯೋಜಿಸಿರುವ ರಾಷ್ಟ್ರೀಯ ಆಯುಷ್ ಅಭಿಯಾನದಡಿ ಉಚಿತ ಆರೋಗ್ಯ ಶಿಬಿರವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಇವರು
ಇತ್ತೀಚಿನ ದಿನಮಾನಗಳಲ್ಲಿ ವಯೋವೃದ್ಧರಿಗೆ ಆರೋಗ್ಯದ ಭದ್ರತೆ ಇಲ್ಲದಂತಾಗಿದೆ ಗ್ರಾಮಾಂತರ ಪ್ರದೇಶದಲ್ಲಿ ವೃದ್ಧರಿಗೆ ಬಿಪಿ, ಶುಗರ್, ಡೋಂಗಿಯು ,ಮಂಡೆ ನೋ ಗಳಂತಹ ಕಾಯಿಲೆಗಳು ಉಲ್ಬಣ ಗೊಂಡಿದ್ದರಿಂದ ವಯೋವೃದ್ಧರು ಮಾನಸಿಕ ಒತ್ತಡದಿಂದ ಹಿಂದೆ ಉಳಿದಿದ್ದಾರೆ ಈ ಕಾರಣದಿಂದಾಗಿ ಆಯುಷ್ ಇಲಾಖೆ ವತಿಯಿಂದ ಉಚಿತ ಆರೋಗ್ಯ ಶಿಬಿರವನ್ನು ಓಬಳಾಪುರ ಗ್ರಾಮದಲ್ಲಿ ನಡೆಸಿದ್ದೇವೆ, ಪ್ರತಿಯೊಬ್ಬ ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಈ ಆರೋಗ್ಯದ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು, ಇನ್ನು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಮಳೆಯಾಗಿ ಕಲುಷಿತ ನೀರಿನಿಂದ ಸೊಳ್ಳೆಗಳು ಉಲ್ಬಣಗೊಂಡು ಡೆಂಗ್ಯೂ, ಮಲೇರಿಯಾ, ಜ್ವರದಂತ, ಮಾರಕ ಕಾಯಿಲೆಗಳು ವೃದ್ಧರ ದೇಹ ಸೇರಿ ಆರೋಗ್ಯವನ್ನು ಹದಗೆರಿಸುತ್ತಿವೆ ,ಈ ಕಾರಣದಿಂದಾಗಿ ವೃದ್ಧರು ಉಚಿತ ಶಿಬಿರದಂತಹ ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯವಂತರಾಗಿರಬೇಕು ಎಂದು ತಿಳಿಸಿದರು ,
ಇನ್ನು ಈ ಸಂದರ್ಭದಲ್ಲಿ ಡಾಕ್ಟರ್ ಸಂಜೀವ್ ರೆಡ್ಡಿ, ಆಯೋಜಕರಾದ ಡಾಕ್ಟರ್ ಅನಿಲ್ ರಾಜ್, ಗ್ರಾಮಸ್ಥರಾದ ಈಶ್ವರಪ್ಪ ಕುಮಾರಸ್ವಾಮಿ ಆನಂದಪ್ಪ ಸೇರಿದಂತೆ ಅನೇಕ ಗ್ರಾಮಸ್ಥರು ಇದ್ದರು
0 Comments