ಚಳ್ಳಕೆರೆ ಜನಧ್ವನಿ ವಾರ್ತೆ ಅ.7. ಹಾರ ತುರಾಯಿ ಬೇಡ ನಾನು ಕಾರ್ಯಕ್ರಮಕ್ಕೆ ಬಂದಿಲ್ಲ ನಿಮ್ಮ ಸಮಸ್ಯೆಗಳನ್ನು ಹಾಲಿಸಿ ಬರ ಅಧ್ಯಯನ ತಂಡಕ್ಕೆ ಮಾಹಿತಿ ತಿಳಿಸಲು ಬಂದಿದ್ದೇನೆ ಎಂದು ಜಿಲ್ಲಾಧಿಕಾರಿ ಧೀವ್ಯಪ್ರಬು ಹೇಳಿದರ
ತಾಲೂಕಿನ ನಾಯಕನಹಟ್ಟಿ ಹೋಬಳಿಯ ನೆಲಗೇತನಹಟ್ಟಿ ಗ್ರಾಪಂ ವ್ಯಾಪ್ತಿಯ ರಾಮದುರ್ಗ ಸಮೀಪದ ಗೋಕಟ್ಟೆಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಹೂಳೆತ್ತುವ ಕಾಮಗಾರಿ ಬಳಿ ಭೇಟಿ ನೀಡಿ ಕಾರ್ಮಿಕರಿಂದ ಮಾಹಿತಿ ಪಡೆದರು.
ಮಳೆ ಬೆಳೆಯಿಲ್ಲದೆ ಕೂಲಿ ಕಾರ್ಮಿಕರು ಹಾಗೂ ರೈತರು ಕೂಲಿ ಹುಡಿಕೊಂಡು ನಗಳತ್ತ ಗುಳೆ ಹೋಗದೆ ನರೇಗಾ ಯೋಜನೆಯಡಿಯಲ್ಲಿ ನಿಮ್ಮ ಗ್ರಾಮದಲ್ಲಿ ಚರಂಡಿ, ಬದುನಿರ್ಮಾಣ, ರಸ್ತೆ, ನಮ್ಮ ಹೊಲ ನಮ್ಮದಾರಿ, ಕೆರೆ ಕಾಲುವೆ ಹೂಳೆತ್ತುವುದು,ಜಾನುವಾರು, ಕುರಿ ಶೆಡ್ಡ್, ತೋಟಗಾರಿಕೆ ಬೆಳೆಗಳ ಅಭಿವೃದ್ಧಿ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ನಿಮ್ಮ ಗ್ರಾಮದಲ್ಲಿ ನರೇಗಾ ಯೋಜನೆಡಯಿಲ್ಲಿ ಕೂಲಿ ಕೆಲಸ ಮಾಡಿ ಕೈತುಂಬ ಕೂಲಿ ಪಡೆದು ಆರ್ಥಿಕವಾಗಿ ಸದೃಢರಾಗುವಂತೆ ಕಾರ್ಮಿಕರಿಕರೆ ಮನವಿ ಮಾಡಿಕೊಂಡರು.
ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗಿರುವ ಬಗ್ಗೆ ಸರಕಾರಕ್ಕೆವರದಿಯನ್ನು ನೀಡಲಾಗಿತ್ತು ನೈಜ ವರದಿಯನ್ನು ವೀಕ್ಷಣೆ ಮಾಡಲು ಕೇಂದ್ರ ಬರ ಅಧ್ಯಯನ ತಂಡ ನಿಮ್ಮ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿಯನ್ನು ಸರಕಾರಕ್ಕೆ ತಲುಪಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರೆಹಾನ್ ಪಾಷ, ನರೇಗಾ ಸಹಾಯಕ ನಿರ್ದೇಶಕ ಸಂತೋಷ್ ,ಪಿಆರ್ ಡಿ ತಾಪಂ ಸಹಾಯಕ ನಿರ್ಧೇಶಕ ಸಂಪತ್ , ಕೃಷಿ ಅಧಿಕಾರಿಗಳು ಹಾಗೂ ಇತರರಿದ್ದರು;.
0 Comments