ಹಿರಿಯೂರು:
ತಾಲ್ಲೂಕಿನ ಹಳ್ಳಿಗಳು ಅಕ್ರಮಮದ್ಯದ ಅಡ್ಡಗಳಾಗಿದ್ದು, ಬಾರುಗಳಿಂದ ನಿರಂತರವಾಗಿ ಹಳ್ಳಿಗೆ ಅಕ್ರಮಮದ್ಯ ಸರಬರಾಜು ಆಗುತ್ತಿದೆ. ಹಳ್ಳಿಗಳ ಹೆಣ್ಣುಮಕ್ಕಳೇ ಅಕ್ರಮಮದ್ಯ ಸಾಗಾಟಗಾರರನ್ನು ಹಿಡಿದು ಪೊಲೀಸರಿಗೆ ಕೊಡುತ್ತಿದ್ದರೂ ಸಹ ಅಬಕಾರಿ ಅಧಿಕಾರಿಗಳಿಗೆ ಜಾಣಕುರುಡು ಬಂದಂತಿದೆ ಎಂಬುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕರಾದ ಕೆ.ಮಂಜುನಾಥ ಹೆಗ್ಗೆರೆ ಹೇಳಿದರು.
ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಅಬಕಾರಿ ಇಲಾಖೆಯ ಆವರಣದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವುದನ್ನು ತಡೆಗಟ್ಟುವಂತೆ ಆಗ್ರಹಿಸಿ, ಹಮ್ಮಿಕೊಳ್ಳಲಾಗಿದ್ದ ಧರಣಿಯಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟುವಂತೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ಹಳ್ಳಿಯ ಮಹಿಳೆಯರಿಗೆ ಸಿಗುವ ಅಕ್ರಮಮದ್ಯ ಮಾರಾಟಗಾರರು ಹಾಗೂ ಸರಬರಾಜುದಾರರು ಅಬಕಾರಿ ಅಧಿಕಾರಿಗಳಿಗೆ ಯಾಕೆ ಸಿಗುವುದಿಲ್ಲ. ಹಳ್ಳಿಗಳಿಗೆ ಅಕ್ರಮವಾಗಿ ಮದ್ಯಸರಬರಾಜು ಮಾಡುವ ಒಂದು ಜಾಲವೇ ಇದ್ದು ಅದನ್ನು ಎಡೆಮುರಿ ಕಟ್ಟಲು ಅಬಕಾರಿ ಅಧಿಕಾರಿಗಳಿಗೆ ಇದುವರೆಗೂ ಸಾಧ್ಯವಾಗಿಲ್ಲ ಎಂದರಲ್ಲದೆ,
ಬೈಕ್ ಗಳಲ್ಲಿ ಹಾಡುಹಗಲೇ ಹಳ್ಳಿಗಳಿಗೆ ಅಕ್ರಮಮದ್ಯ ಸಾಗಿಸುವವರನ್ನು ಪ್ರತಿನಿತ್ಯ ಸಾರ್ವಜನಿಕರು ಗಮನಿಸುತ್ತಲೇ ಇದ್ದು, ಸಮಯಕ್ಕೆ ಸರಿಯಾಗಿ ಬಾರುಗಳು ಮುಚ್ಚಿದ್ದನ್ನು ಮತ್ತು ಸಮಯಕ್ಕೆ ಸರಿಯಾಗಿ ತೆಗೆದಿದ್ದನ್ನು ನೋಡಿದವರಿಲ್ಲ, ಬೆಳಗಿನ ಜಾವವೇ ಬಾರಿನ ಕಿಟಕಿ ಹಾಗೂ ಹಿಂಬಾಗಿಲ ಬಳಿ ಮಧ್ಯ ಸಿಗುತ್ತದೆ ಎಂಬುದನ್ನು ಅಧಿಕಾರಿಗಳು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದರು.
ತಾಲ್ಲೂಕಿನಲ್ಲಿ ಓಬೇನಹಳ್ಳಿ ಗೇಟ್ ಬಳಿಯ ಮನೆಯೊಂದರಿಂದ ಆಸುಪಾಸಿನ ಹಳ್ಳಿಗಳಿಗೆ ಸತತವಾಗಿ 15 ವರ್ಷಗಳಿಂದ ಅಕ್ರಮಮದ್ಯ ಸಾಗಿಸಲಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ, ಆದರೆ ಇದುವರೆಗೂ ದಾಳಿ ನಡೆಸದೇ ಇರುವುದರ ಹಿಂದಿನ ಮರ್ಮ ತಾಲ್ಲೂಕಿನ ಜನರಿಗೆ ಗೊತ್ತಾಗಬೇಕು ಎಂಬುದಾಗಿ ಅವರು ಹೇಳಿದರು.
ತಾಲ್ಲೂಕಿನ ನೊಂದ ಮಹಿಳೆಯರಿಗೆ ನೆಮ್ಮದಿಬೇಕಾಗಿದ್ದು ಇದು ಒಂದು ದಿನದ ಸಾಂಕೇತಿಕ ಧರಣಿಯಷ್ಟೇ, ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದ ಪಕ್ಷದಲ್ಲಿ ಪ್ರತಿ ಹಳ್ಳಿಯಿಂದಲೂ ನೊಂದವರನ್ನು ಕರೆದು ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂಬುದಾಗಿ ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನಾ ಸಂಚಾಲಕರಾದ ಜಿಲ್ಲಾ ಸಂಚಾಲಕರಾದ ಡಿ.ಎನ್. ಬಿ.ಮಾರಪ್ಪ, ನಾಗರಾಜ್ ಜಡೇಕುಂಟೆ, ಸೂರೇನಹಳ್ಳಿಮಂಜುನಾಥ್, ಚಳ್ಳಮಡು ತಿಮ್ಮರಾಜು, ಗೂಳ್ಯಅಂಜಿನಪ್ಪ, ದೇವರಹಳ್ಳಿ ಸುರೇಶ್, ಚಿರುಚಿತ್ರದುರ್ಗ, ಖಜಾಂಚಿ ಎಚ್.ರಾಘವೇಂದ್ರಬಿದರಿಕೆರೆ, ಜಿಲ್ಲಾ ಸಮಿತಿ ಸದಸ್ಯರಾದ ಹುಲಿಕುಂಟೆ ಗೋವಿಂದಪ್ಪ, ಗೋರ್ಲಕಟ್ಟೆ ಇಂದ್ರೆಶ್, ವೆಂಕಟೇಶ್ ಕಾರ್ಪೆಂಟರ್, ಶಿವಣ್ಣಕಾಪರಹಳ್ಳಿ, ಬೆಳೆಗೆರೆ ಕೃಷ್ಣಮೂರ್ತಿ, ರೇಣುಕಾಪುರಆಶೋಕ್, ವೀಣಾ ಚಿತ್ರದುರ್ಗ, ನಾರಾಯಣಪ್ಪಚಿತ್ರದುರ್ಗ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments