ನಾಯಕನಹಟ್ಟಿ :
ಹಲಗಲಿ ಬೇಡರಂತ ಮಹನೀಯರ ಬಗ್ಗೆ ಇಂದಿನ ಯುವ ಪೀಳಿಗೆ ಹೆಚ್ಚೆಚ್ಚು ತಿಳಿದುಕೊಳ್ಳುವ ಕೆಲಸ ಆಗಬೇಕು ಎಂದು ನಿಕಟ ಪೂರ್ವ ತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ.
ಬುಧವಾರ ನಾಯಕನಹಟ್ಟಿ ಪಟ್ಟಣದ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಕಚೇರಿ ಆವರಣದಲ್ಲಿ ಹಟ್ಟಿ ಮಲ್ಲಪ್ಪ ನಾಯಕ ಸಂಘ ಹಾಗೂ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಇವರ ಸಂಯುಕ್ತಾಶ್ರಯದಲ್ಲಿ, ಸ್ವಾತಂತ್ರ ಸಂಗ್ರಾಮದಲ್ಲಿ ಹಲಗಲಿ ಬೇಡರ ಕೊಡುಗೆ ಎನ್ನುವ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಭಾರತ ದೇಶವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಬಿಡಿಸಿ, ಸ್ವಾತಂತ್ರ‍್ಯಗೊಳಿಸಲು ಹಲಗಲಿ ಬೇಡರಂತ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ, ಇಂದಿನ ಯುವ ಪೀಳಿಗೆ ಅಂತಹ ಮಹಾನೀಯರನ್ನು ಸ್ಮರಿಸುವ ಕೆಲಸವಾಗಬೇಕು ಸ್ವತಂತ್ರ ಪೂರ್ವದಲ್ಲಿ ಬ್ರಿಟೀಷರ ನಿದ್ದೆಗೆಡಿಸಿದ್ದ ಜಡಗಾ ಮತ್ತು ಬಾಲ ಸೇರಿ ನಾಲ್ವರನ್ನು ಮುಧೋಳ ನಗರದ ಸಾರ್ವಜನಿಕವಾಗಿ ಗೆಲ್ಲಿಗೇರಿಸಿದರು, ಆ ಮೂಲಕ ಬ್ರೀಟಿಷರ ವಿರುದ್ಧ ಹೋರಾಟಕ್ಕೆ ಇಳಿದಂತೆ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಕೆಲಸವನ್ನು ಬ್ರೀಟಿಷ ಸರ್ಕಾರ ಮಾಡಿತ್ತು, ಹಿಗೇ ದೇಶದ ಜನರಲ್ಲಿ ಸ್ವಾತಂತ್ರö್ಯ ಕಿಚ್ಚು ಒತ್ತಿಸಿ ಸ್ವಾಭಿಮಾನಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ ಎನ್ನುವ ಸಂದೇಶ ಸಾರಿ ಕೊನಿಗೂ ಗೆಲ್ಲಿಗೇರಿದರು, ಸ್ವಾತಂತ್ರö್ಯ ಸಂಗ್ರಾಮದಲ್ಲಿ ಹಲಗಲಿ ಬೇಡರ ಕೊಡುಗೆ ಅಪಾರವಾಗಿದ್ದು ಇಂದಿನ ಯುವ ಪೀಳಿಗೆ ಇಂತಹ ಮಹನೀಯರ ಚರಿತ್ರೆ ಓದುವಂತಹ ಕೆಲಸವಾಗಬೇಕು ಎಂದರು.
ಇದೇ ವೇಳೆ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೀಲ್ ಜಿ.ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತಾಡಿದರು, ಈ ದೇಶಕ್ಕೆ ಹಲಗಲಿ ಬೇಡರ ಕೊಡುUಯಯನ್ನು ನಾವು ಹಾಗೂ ಶಾಲಾ ಶಿಕ್ಷಕರು ತಮ್ಮ ಈಗಿನ ಯುವಪೀಳಿಗೆ ಹಲಗಲಿ ಬೇಡರ ಜೀವನದ ವಂಶದಾರ ಬಗ್ಗೆ ಪಠ್ಯಪುಸ್ತಕಗಳಲ್ಲಿ ಪ್ರಕಟವಾಗಿದ್ದು, ಇನ್ನೂ ಹೆಚ್ಚಿನದಾಗಿ ಬೇಡರ ಬಗ್ಗೆ ವಿಧ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಇನ್ನೂ ಚೌಳಕೆರೆ ಸಿ.ಬಿ. ಮೋಹನ್ ಮಾತನಾಡಿದರು ಹಲಗಲಿ ಬೇಡರು ತ್ಯಾಗ ಬಲಿದಾನದ ಗ್ರಾಮೀಣ ಪ್ರದೇಶಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಅಗಬೇಕು ಎಂದರು
ಈ. ಸಂದರ್ಭದಲ್ಲಿ ಹಟ್ಟಿ ಮಲ್ಲಪ್ಪ ನಾಯಕ ಸಂಘದ ನಿರ್ದೇಶಕರಾದ ಎಸ್. ಓಬಯ್ಯ, ನೇರಲಗುಂಟ್ಟೆ ಭೈಯಣ್ಣ, ಹನುಮಣ್ಣ, ಮಲ್ಲೂರಹಟ್ಟಿ ತಿಪ್ಪೇಸ್ವಾಮಿ ಗೌಡ್ರು, ಎಂ.ಚಿನ್ನಯ್ಯ, ನಾಗರಾಜ್, ಎಂ ವೈ ಟಿ ಸ್ವಾಮಿ, ಗುಂತಕೋಲಮ್ಮನಹಳ್ಳಿ ಎಂ.ಪಾಪಯ್ಯ, ಮಲ್ಲೂರಹಳ್ಳಿ ಭೈಯಣ್ಣ, ನಲಗೇತನಹಟ್ಟಿ ನಲ್ಲಿನ ದೊಡ್ಡ ಬೋರಯ್ಯ, ವರವು ಶಂಕರ್ ಮೂರ್ತಿ, ಜಿ.ಬಿ.ಮುದಿಯಪ್ಪ, ಗುಂತಕೋಲಮ್ಮನಹಳ್ಳಿ ಜಿ.ಎಂ. ಜಯಣ್ಣ, ಟಿ. ಬಸಪ್ಪ ನಾಯಕ, ಎಸ್ ಟಿ. ಬೋರಸ್ವಾಮಿ, ಅಬ್ಬೇನಹಳ್ಳಿ ಗ್ರಾ.ಪಂ. ಸ.ಪಡ್ಲ ಬೋರಣ್ಣ, ಗೌಡಗೆರೆ ಗ್ರಾ.ಪಂ.ಸ. ಮಾಜಿ ಅಧ್ಯಕ್ಷ ಟಿ. ರಂಗಪ್ಪ, ಕೂರಡಿಹಳ್ಳಿ ಬಿ.ಸುರೇಂದ್ರಪ್ಪ, ನಲಗೇತನಹಟ್ಟಿ ಗಾಯಕ ಕೆ.ಟಿ. ಮುತ್ತುರಾಜ್ ಸೇರಿದಂತೆ ವಿವಿಧಿ ಹಳ್ಳಿಗಳ ಗ್ರಾಮಸ್ಥರು ಶ್ರೀ ಗುರು ತಿಪ್ಪೇರುದ್ರಸ್ವಾಮಿ ವಿದ್ಯಾ ಸಂಸ್ಥೆ, ಶ್ರೀ ರಾಜಾಹಟ್ಟಿ ಮಲ್ಲಪ್ಪ ನಾಯಕ, ಡಾನ್ ಬಾಸ್ಕೋ ಶಾಲೆಯ ಶಿಕ್ಷಕ -ಶಿಕ್ಷಕಿರು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು
0 Comments