ಹಟ್ಟಿ ತಿಪ್ಪೇಶನ ಹುಂಡಿಯಲ್ಲಿ 40,29, ಲಕ್ಷ ರೂ ಸಂಗ್ರಹ.

by | 06/10/23 | ಸುದ್ದಿ

ನಾಯಕನಹಟ್ಟಿ ಅ.6: ಐತಿಹಾಸಿಕ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಹುಂಡಿ ಎಣಿಕೆ ಕಾರ್ಯ ನಡೆಯಿತು


ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರಮಠದ ದೇವಾಲಯದ ಆವರಣದಲ್ಲಿ ಕಂದಾಯ ಇಲಾಖೆ ಮತ್ತು ಕೆನರಾ ಬ್ಯಾಂಕ್ ಸಿಬ್ಬಂದಿಗಳು ಸಮ್ಮುಖದಲ್ಲಿ ಎಣಿಕೆ ಕಾರ್ಯ ನಡೆಯಿತು ಮೊದಲು ಹೂರಮಠ ದೇವಾಲಯದಲ್ಲಿ ಮುಜರಾಯಿ ಹಾಗೂ ತಾಲೂಕು ಕಚೇರಿ ಹಾಗೂ ದೇವಾಲಯ ಕಾರ್ಯನಿರ್ವಾಣ ಅಧಿಕಾರಿಗಳ ನೇತೃತ್ವದಲ್ಲಿ ಬೆಳಗ್ಗೆ 10 ಗಂಟೆಗೆ ಶುರುವಾದ ಎಣಿಕೆ ಕಾರ್ಯ ಮಧ್ಯಾಹ್ನ 12 ಗಂಟೆಗೆ ಮುಕ್ತಾಯವಾಯಿತು.


ನಂತರ ಒಳಮಠದಲ್ಲಿ ಆರಂಭವಾದ ಎಣಿಕೆ ಕಾರ್ಯ ಸಂಜೆ 6 ಕ್ಕೆ ಮುಕ್ತಾಯವಾಯಿತು.

ಹೊರಮಠದಲ್ಲಿ ₹6,62,132 ಲಕ್ಷ
ಒಳಮಠದಲ್ಲಿ₹ 30,94,200 ಲಕ್ಷ ದೇವಾಲಯದ ದಾಸೋಹ ₹2,72,740 ಮಂದಿರದ ಹುಂಡಿಯಲ್ಲಿ ಸಂಗ್ರಹವಾದ
₹ 40,29,072 ಲಕ್ಷ ಸಂಗ್ರಹವಾಗಿದೆ.

ವರಮಠ ಮತ್ತು ಒಳ ಮಠ ಹುಂಡಿಯಲ್ಲಿ ಕೆಲವು ಬೆಳ್ಳಿ ನಾಣ್ಯಗಳು ಬೆಳ್ಳಿ ತೊಟ್ಟಿಲುಗಳು ಬೆಳ್ಳಿ ಆಭರಣಗಳು ಸಿಕ್ಕಿದ್ದು ವಿಶೇಷವಾಗಿತ್ತು.
ಇನ್ನು ಇದೇ ವೇಳೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್ ಗಂಗಾಧರಪ್ಪ ಮಾತನಾಡಿ ಮಾನ್ಯ ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಅವರ ಆದೇಶದ ಮೇರೆಗೆ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ದೇವಸ್ಥಾನದ ಹುಂಡಿ ಎಣಿಕೆಯನ್ನು ಪ್ರಾರಂಭಿಸಲಾಗಿದೆ ಎಂದು ಮಾತನಾಡಿದರು


ಈ ಸಂದರ್ಭದಲ್ಲಿ ತಿರಸ್ತುದಾರ ದೇವಾಲಯದ ಕಾರ್ಯ ನಿರ್ವಾಣ ಅಧಿಕಾರಿ ಎಚ್ ಗಂಗಾಧರಪ್ಪ. ನಾಡಕಚೇರಿ ಉಪ ತಹಶೀಲ್ದಾರ್ ಬಿ ಶಕುಂತಲಾ, ಆರ್ ಐ ಚೇತನ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ, ಜಗದೀಶ್ ಶಂಕರ್, ಪುಷ್ಪಲತಾ, ಶರಣಬಸಪ್ಪ ,ಜೈರಾಮ್, ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ರಾಮ್ ಮೋಹನ್, ಮತ್ತು ಸಿಬ್ಬಂದಿಗಳು.
ಗ್ರಾಮ ಸಹಾಯಕರಾದ ಚನ್ನಬಸಪ್ಪ,ಓಬಣ್ಣ, ಹರೀಶ್, ಹೇಮಂತ್ ನಾಯ್ಕ, ಕುಮಾರ್, ನಾಗರಾಜ್,ಇತರರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *