ಹಟ್ಟಿ ತಿಪ್ಪೇಶನ ತೇರಿಗೆ ಹರಿದು ಬಂದ ಜನಸಾಗರ ಹರಕೆ ತೀರಿಸಿದ ಭಕ್ತರು

by | 10/03/23 | Uncategorized, ಕರ್ನಾಟಕ, ಚರಿತ್ರೆ


ಚಳ್ಳಕೆರೆ.ಜನಧ್ವನಿ ವಾರ್ತೆ ಮಾ.10
ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಜನಸಾಗರ ನಡುವೆ ಸಡಗರ ಸಂಭ್ರಮದೊAದಗೆ ಗುರುವಾರ ಮಧ್ಯಾಹ್ನ 3.30 ಗಂಟೆಗೆ ಸರಿಯಾಗಿ ಜರುಗಿತು.
ರಥೋತ್ಸವ ನಡೆಯುವ ಮುನ್ನ ಬೆಳಿಗ್ಗೆ 9 ಗಂಟೆಯಿAದ ಚಿಕ್ಕ ರಥೋತ್ಸವ ನಡೆಯಿತು. ಮಧ್ಯಾಹ್ನ ೧೨ ಗಂಟೆಯಿAದ ದೊಡ್ಡರಥೋತ್ಸವಕ್ಕೆ ಎಳೆಯುವ ಮುನ್ನ ವಿಶೇಷ ಪೂಜೆ ಪುರಸ್ಕಾರಗಳೊಂದಿಗೆ ಸಿದ್ದತೆಗಳು ನಡೆದವು
ಫಣಿಯಪ್ಪನ ವಂಶಜರಾದ ಪೂಜಾರಿ ಮನೆಯಲ್ಲಿ ವಿಧಿವತ್ತಾಗಿ ತಯಾರಿಸಿದ ಬಲಿ ಅನ್ನವನ್ನು ಹೊತ್ತ ಗೊಂಚಿಕಾರರು ಅಲಂಕೃತಗೊAಡ ಬಸವ ಬಸವಿಯರು ಉತ್ಸವಮೂರ್ತಿ ಪ್ರತಿಷ್ಟಾಪಿಸಿ ವಿಶೇಷವಾಗಿ ಅಲಂಕರಿಸಿದ ಪಲ್ಲಕ್ಕಿಯೊಂದಿಗೆ ಮಂಗಳವಾಧ್ಯ, ನಂದಿಕೋಲು, ಗೊರವನಕುಣಿತ, ಆಯಗಾರರ ದಂಡಿನೊಂದಿಗೆ ಭಕ್ತರ ಹಿಂಡು ತೇರಿನ ಬಳಿ ಮಡಿಯಲ್ಲಿ ಬರುತ್ತಾರೆ.


ಬಾಬುದಾರರಾದ ತಳವಾರನಾಯಕ, ಮಣಿಗಾರರು, ಜೋಗಿಹಟ್ಟಿಯವರು, ದೈವದ ಹೆಸರಿನಲ್ಲಿ ನಾಲ್ಕು ದಿಕ್ಕಿನ ರಥದ ಗಾಲಿಗಳಿಗೆ ಬಲಿ ಅನ್ನ ಹಾಕಿದ ನಂತರ ಶಾಸ್ತೊçÃಕ್ತವಾಗಿ ಪೂಜೆ ಪುಣ್ಯಾನ ಶಾಶ್ತçಗಳಿಂದ ಮೊದಲು ಕುಪ್ಪಿನಕೆರೆ ಆಂಜನೇಯಸ್ವಾಮಿಗೆ ಮಹಾಮಂಗಳಾರತಿ ಸಲ್ಲಿಸಿದ ನಂತರ ಶ್ರೀ ತಿಪ್ಪೇಸ್ವಾಮಿಗೆ ಮಹಾಮಂಗಳಾರತಿ ಸಲ್ಲಿಸಿ ಮುಕ್ತಿ ಬಾವುಟ ಹರಾಜು ಮಾಡಲಾಡಲಾಯಿತು. ಮುಕ್ತಿ ಬಾವುಟವನ್ನು ಸಿ.ವೀರಭದ್ರಬಾಬು ಕೆಎಂಎಫ್ ನಿರ್ದೇಶಕ ೨೬ ಲಕ್ಷ ರೂಗಳಿಗೆ ಹರಾಜಿನಲ್ಲಿ ತಮ್ಮಗಾಗಿಸಿಕೊಂಡರು.
ನAತರ ಮಣಿ ಕೊಡುವ ಭಕ್ತರು ಮನ್ನೆಕೋಟೆ, ತಳಕು ದೈವದವರು ಹೆಸರು ಕೂಗಿ ಕರೆದು ಸ್ವಾಮಿಯ ರಥದ ಹಗ್ಗಕ್ಕೆ ಕೈಹಾಕುತ್ತಿದ್ದಂತೆ ಸುಮಾರು ೮೦ ಟನ್ ತೂಕದ ೮೦ ಅಡಿ ಎತ್ತರದ ಐದು ಗಾಲಿಗಳು 9 ಮಜಲಿನ ದೊಡ್ಡದಾದ ಶ್ರೀ ತಿಪ್ಪೇರುದ್ರಸ್ವಾಮಿಗೆ ಜಯವಾಗಲಿ ಎಂಬ ಕೂಗೂ ಮುಗಿಲು ಮುಟ್ಟುತ್ತಲೆ ಬೃಹತ್ ರಥ ಮುಂದೆ ಸಾಗಿತು. ಭಕ್ತರು ಸ್ವಾಮಿಯ ರಥಕ್ಕೆ ಬಾಳೆಹಣ್ಣು, ಸೂರು ಬೆಲ್ಲ ಮೆಣಸು, ತೂರುವ ಮೂಲಕ ಸ್ವಾಮಿಗೆ ಅರಕೆಯನ್ನು ತೀರಿಸಿದರು.
ವ್ಯಾಪಾರ ಬಲು ಜೋರು

ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲಿ ಒಂದಾದ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ರಾಜ್ಯದ ವಿವಿದ ಭಾಗಗಳಿಂದ ಬಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬಿಸಿಲ ದಗೆಯನ್ನು ತೀರಿಸಿಕೊಳ್ಳಲು ತಂಪು ಪಾನಿಯ, ಎಳೆನೀರು, ಮಜ್ಜಿಗೆ, ಕಲ್ಲಂಗಡಿಹಣ್ಣು, ಐಸ್‌ಸ್ಕ್ರೀಂ ಪಾನಕ, ಸೋಡ ಕಬ್ಬಿನ ಹಾಲು ಅಂಗಡಿಗಳ ಮಾಲಿಕರಿಗೆ ಬರ್ಜರಿ ವ್ಯಾಪವಾಗುತ್ತಿತ್ತು. ಜಾತ್ರಗೆ ಬಂದ ಭಕ್ತರು ಬರಿಗೈಲಿ ಮರಳದೆ ಕಾರ ಮಂಡಕ್ಕಿ, ಬೆಂಡು-ಬೆತ್ತಾಸು, ಮಕ್ಕಳ ಆಟಿಕೆ ಸಾಮಾಗ್ರಿಗಳು, ಮಹಿಳೆಯರು ಬಳೆ ಸರ ಖರೀದಿರುವ ಜತೆಗೆ ವಿಭೂತಿ, ಶ್ರೀ ತಿಪ್ಪೇಸ್ವಾಮಿಯ ಪೋಟೊ ಭಕ್ತಿಗೀತೆಗಳ ಕ್ಯಾಸೆಟ್ ರೈತರು ಎತ್ತುಗಳ ಅಲಂಕಾರಕ್ಕೆ ಬೇಕಾದ ವಸ್ತುಗಳನ್ನು ಬರ್ಜರಿ ಖರೀದಿ ಮಾಡುತ್ತಿರುವುದು ಸಾಮಾನ್ಯ ದೃಷ್ಯವಾಗಿತ್ತು.
ಎತ್ತಿನ ಗಾಡಿಗಳ ಸಾಲು ಸಾಲು
ತಿಪ್ಪೇರುದ್ರ ಸ್ವಾಮಿ ಜಾತ್ರೆ ಹಾಗು ಎತ್ತಿನ ಗಾಡಿಗಳಿಗೆ ಅವಿನಾಭಾವ ಸಂಭAಧ. ಹುಣ್ಣಿಮೆಯ ಸಂದರ್ಭದಲ್ಲಿ ಜಾತ್ರೆ ನಡೆಯುವುದರಿಂದ ಚಂದ್ರನ ಬೆಳಕಿನಲ್ಲಿ ಇಡೀ ರಾತ್ರಿ ಎತ್ತಿನ ಗಾಡಿಗಳು ಜಾತ್ರೆಗೆ ಆಗಮಿಸಿದ್ದವು. ಗ್ರಾಮದ ಸುತ್ತಲಿನ ನೀರು , ನೆರಳಿರುವ ತೋಟಗಳ ಪ್ರದೇಶ ಹಾಗು ಬಯಲು ಪ್ರದೇಶಗಳಲ್ಲಿ ಎತ್ತಿನ ಗಾಡಿಗಳು ಬಿಡಾರ ಹೂಡಿದ್ದವು ಪ್ರೌಢಶಾಲೆ ಆವರಣ ಸೇರಿದಂತೆ ವಿವಿದ ಭಾಗದಲ್ಲಿ ಎತ್ತಿನಗಾಡಿಗಳಿಂದ ತುಂಬಿಹೋಗಿತ್ತು.
ಎರಡು ದಿನಗಳ ಹಿಂದೆ ಸುತ್ತಲಿನ ಜಿಲ್ಲೆಗಳು ಹಾಗು ನೆರೆಯ ಆಂದ್ರ ಪ್ರದೇಶದಿಂದಲೂ ಜಾತ್ರೆಗೆ ಭಕ್ತರು ಎತ್ತಿನ ಗಾಡಿಗಳಲ್ಲಿ ಆಗಮಿಸಿದ್ದರು. ಜಾತ್ರೆಯ ನಂತರ ಒಂದೆರಡು ದಿನಗಳ ಕಾಲ ತಂಗಿದ್ದು ದೇವರಿಗೆ ಎಡೆ ನೀಡಿ ಜಾತ್ರೆ ಮಾಡಿಕೊಂಡು ಹಿಂದಿರುಗುತ್ತಾರೆ. ಕೆಲವು ರೈತರು ಹಳೆಯ ಮಾದರಿಯ ಚಕ್ಕಡಿಗಳನ್ನು ಬಳಸಿದರೆ ಇನ್ನೂ ಕೆಲವು ರೈತರು ಆಧುನಿಕ ಸ್ಪರ್ಶದ ಟೈರ್ ಗಾಡಿಗಳಲ್ಲಿ ಜಾತ್ರೆಗೆ ಆಗಮಿಸಿದ್ದರು.ಎತ್ತುಗಳ ಕಾಲಿಗೆ ಗೆಜ್ಜೆ, ಮೈಮೇಲೆ ಬಣ್ಣಬಣ್ಣದ ಬಟ್ಟೆ, ಕೊಂಬುಗಳಿಗೆ ನಾನಾ ಬಣ್ಣದ ಟೇಪುಗಳನ್ನು ಕಟ್ಟಿ ಅಲಂಕರಿಸಿರುವುದು ವಿಶೇಷವಾಗಿತ್ತು.

ಬ್ಯಾರಿಕೇಡ್ ನಿರ್ಮಾಣ
ಪುಣ್ಯ ಕ್ಷೇತ್ರವಾದ ತಿಪ್ಪೇಸ್ವಾಮಿಯ ಮಠಕ್ಕೆ ಬರುವ ಭಕ್ತರಿಗೆ ದಾಸೋಹ ನಡೆಯುತ್ತಿದೆ ಆದ್ದರಿಂದ ಒಳಮಠ ಮತ್ತು ಹೊರ ಮಠದಲ್ಲಿ ಲಕ್ಷಾಂತರ ಭಕ್ತರು ತೆಂಗಿನಕಾಯಿ, ಅಕ್ಕಿ ಬೇಳೆ ಇಷ್ಟಾರ್ಥದಂತೆ ತಮ್ಮ ಹರಕೆಗಳನ್ನು ಸಲ್ಲಿಸಲು ಹಾಗೂ ಸ್ವಾಮಿಯ ದರ್ಶನ ಪಡೆಯಲು ಸಾಲಿನಲ್ಲಿ ಹೋಗಲು ಎರಡು ದೇವಾಲಯಗಳ ಆವರಣದಲ್ಲಿ ಭಕ್ತರು ಸಾಲಿನಲ್ಲಿ ತೆರಳಲು ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು. ಇದೇ ರೀತಿ ಗ್ರಾಮದ ಒಳಭಾಗದಲ್ಲಿ ವಾಹನಗಳ ಪ್ರವೇಶ ನಿಷೇದಿಸಲಾಗಿತ್ತು. ತೇರು ಬೀದಿ, ಒಳಮಠದ ರಸ್ತೆಗಳಲ್ಲಿ ಬ್ಯಾರಿಕೇಟ್ ನಿರ್ಮಾಣಮಾಡಲಾಗಿತ್ತು.
ಕೊಬ್ಬರಿ ಹರಕೆ


ಪೂರ್ವಕಾಲದಿಂದಲೂ ಭಕ್ತರು ಕೊಬ್ಬರಿ ಸುಡುವುದು ಒಂದು ಸಂಪ್ರದಾಯ ಆದರೆ ದೇವಾಸ್ಥಾನ ಸಮಿತಿಯವರು ಕೊಬ್ಬರಿಯನ್ನು ಅರಕೆಗೆ ಸ್ವಲ್ಪ ಮಾತ್ರ ಹಾಕಿ ಉಳಿದ ಕೊಬ್ಬರಿಯನ್ನು ದೇವಾಸ್ಥಾನದ ಅನ್ನದಾಸೋಹಕ್ಕೆ ನೀಡಿ ಎಂದು ಪ್ರಚಾರ ಹಾಗೂ ನಾಪ ಫಲಕಗಳನ್ನೂ ಹಾಕಿದರೂ ಸಹ ವಿಶೇಷವಾಗಿ ನಿರ್ಮಿಸಿದ ಅಗ್ನಿಕುಂಡಕ್ಕೆ ಭಕ್ತರು ತಮ್ಮ ತಮ್ಮ ಹರಕೆಯಂತೆ 10 ರೂ ದಿಂದ 100 ರೂ ವರೆಗೆ ಸೂಮಾರು ಟನ್‌ಗಳಷ್ಟು ಕೊಬ್ಬರಿ ಭಕ್ತರು ಅಗ್ನಿ ಕುಂಡಕ್ಕೆ ಹಾಕಿ ತಮ್ಮ ತಮ್ಮ ಹರಕೆ ತೀರಿಸಿಕೊಂಡರು.
ಜಾತ್ರೆಯಲ್ಲಿ ವಸ್ತು ಪ್ರದರ್ಶನ
ಪಶುಸಂಗೋಪನಾ, ಕೃಷಿ ಇಲಾಖೆ, ರೇಷ್ಮೆ, ತೋಟಗಾರಿಕಾ ಇಲಾಖೆ, ಮತ್ತು ಅರೋಗ್ಯ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಪ್ರದರ್ಶನ ವಿವಿದ ಹಳ್ಳಿಂದ ಎತ್ತುಗಳನ್ನು ಸಿಂಗರಿಕೊAಡು ಪ್ರದರ್ಶನ ನೋಡುಗರ ಕಣ್ಣಿಗೆ ಆಕರ್ಷಣೆಯಾಗಿತ್ತು.
ಜಾತ್ರೆಗೆ ಬಂದ ಭಕ್ತಾಧಿಗಳಿಗೆ ಸುಡು ಬಿಸಿಲಿನಲ್ಲಿ ಬಾಯಾರಿಕೆಯಾದವರಿಗೆ ಸಂಘ ಸಂಸ್ಥೆಯವರು ಉಚಿತ ಮಜ್ಜಿಗೆ ಹಾಗೂ ಕುಡಿಯವ ನೀರಿನ ವ್ಯಸ್ಥೆ ಕಲ್ಲಿಸಲಾಗಿತ್ತು.
ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ಅಡಚಣೆಯಾಗದೆಂತೆ ಕಂದಾಯ ಇಲಾಖೆ, ಆರೋಗ್ಯ ಇಲಾಖೆ ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿತ್ತು, ಪೋಲಿಸ್ ಇಲಾಖೆ ಎಲ್ಲಾ ಮುಂಜಾಗ್ರತೆಯನ್ನು ವ್ಯವಸ್ಥೆ ಕಲ್ಪಿಸಲಾಗಿತ್ತು.
ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಢಳಿತ, ಪೋಲಿಸ್ ಇಲಾಖೆ ಮುಂಜಾಗೃತ ಕ್ರಮ ವಹಿಸಿತ್ತು ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಟ್ಯಾಂಕರ್‌ಗಳು ಮೂಲಕ ನೀರು ಸರಬರಾಜು ಹಾಗೂ ವಿವಿಧ ಸಮಾಜ ಸೇವಕರು ಕುಡಿಯುವ ನೀರಿನ ಬಾಟಲಿ, ಪಾಕೇಟ್ ಹಾಗೂ ಮಜ್ಜಿಗೆ ಉಚಿತವಾಗಿ ವಿತರಣೆ ಮಾಡುವ ವ್ಯವಸ್ಥೆ ಮಾಡಲಾಗಿತ್ತು.
ಮುಕ್ತಿ ಬಾವುಟ ಹರಾಜು.ರಥೋತ್ಸವ ಪ್ರಾರಂಭವಾಗುವ ಮುನ್ನ ಮುಕ್ತಿ ಬಾವುಟ ಹಾರಾಜು ಮಾಡುವ ಪ್ರಕ್ರಿಯ ನಡೆಯಿತು ಮಾಜಿ ಸಚಿವ ಡಿ. ಸುಧಾಕರ್ ಮುಕ್ತಿ ಬಾವುಟ ಹಾರಾಜಿನಲ್ಲಿ ಭಾಗವಹಿಸಿ೫೫ಲಕ್ಷ ರೂಗಳಿಗೆ ತನ್ನಾಗಿಸಿಕೊಂಡರು.


ಜಾತ್ರೆಯಲ್ಲಿ ಸಚಿವ ಬಿ.ಶ್ರೀರಾಮುಲು, ಶಾಸಕ ಟಿ.ರಘುಮೂರ್ತಿ, ಆಂದ್ರ ರಾಯದುರ್ಗಂ ಶಾಸಕ ಕಾಪು ರಾಮಚಂದ್ರರೆಡ್ಡಿ, ಮಾಜಿ ಶಾಸಕ ತಿಪ್ಪೇಸ್ವಾಮಿ, ವಿವಿಧ ಪಕ್ಷದ ಟಿಕೇಟ್ ಆಕಾಂಕ್ಷಿಗಳಾದ ಅನಿಲ್‌ಕುಮಾರ್, ಎಂ,ರವೀಶ್, ಕುಮಾರಸ್ವಾಮಿ, ಡಾ.ಯೋಗೇಶ್ ಬಾಬ್, ಪ್ರಭಾಕರ ಮ್ಯಾಸನಾಯಕ,ವೀರಭದ್ರಪ್ಪ,ಎನ್.ರಘುಮೂರ್ತಿ ಜಿಲ್ಲಾಧಿಕಾರಿ ದೀವ್ಯಪ್ರಭು , ಜಿಲ್ಲಾ ರಕ್ಷಣಾಧಿಕಾರಿ ಪರಶುರಾಂ, ಅಪ್ರಾರ ಜಿಲ್ಲಾಧಿಕಾರಿ, ತಹಶೀಲ್ದಾರ್ ಸಂಧ್ಯಾ, ತಾಪಂ ಇಒ ಹೊನ್ನಯ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು .

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page