ಸ್ವಾಮಿವಿವೇಕಾನಂದರು ಯುವಕ ಯುವತಿಯರಲ್ಲಿ ಸ್ಪೂರ್ತಿ ತುಂಬಿದಮಹಾನ್ ಚೇತನ ಶಾಸಕಿಪೂರ್ಣಿಮಾಶ್ರೀನಿವಾಸ್

by | 12/01/23 | ಸುದ್ದಿ

ಹಿರಿಯೂರು :
ಸ್ವಾಮಿವಿವೇಕಾನಂದರು ತಮ್ಮ ಸಂದೇಶಗಳ ಮೂಲಕ ಯುವಕ-ಯುವತಿಯರಲ್ಲಿ ಸ್ಪೂರ್ತಿ ತುಂಬಿದ ಮಹಾನ್ ಚೇತನವಾಗಿದ್ದು, ಈ ದೇಶವನ್ನು ಸಧೃಢವಾಗಿಸುವಲ್ಲಿ ಶ್ರಮಿಸಿದ ಇವರು ಯುವಕರಲ್ಲಿ ದೇಶಪ್ರೇಮ, ಮಾನವೀಯತೆ ಮೌಲ್ಯವನ್ನು ಹುಟ್ಟುಹಾಕಿದರು, ಇಂದಿನ ಯುವಪೀಳಿಗೆ ವಿವೇಕಾನಂದರ ತತ್ವ-ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂಬುದಾಗಿ ಕ್ಷೇತ್ರದ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 1 ಕೋಟಿ ರೂಗಳ ವೆಚ್ಚದ ನೂತನ ಕಟ್ಟಡವನ್ನು ಉದ್ಘಾಟಿಸಿ, ನಂತರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಏರ್ಪಡಿಸಲಾಗಿದ್ದ ಸ್ವಾಮಿವಿವೇಕಾನಂದ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.
ವಿದ್ಯಾರ್ಥಿನಿಯರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬೇಕಾದರೆ ಸುಸಜ್ಜಿತ ಕಾಲೇಜು ಕಟ್ಟಡ ಹಾಗೂ ಮೂಲಭೂತ ಸೌಲಭ್ಯಗಳು ದೊರಕುವಂತಾಗಬೇಕು, ಈ ನಿಟ್ಟಿನಲ್ಲಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸುಮಾರು 1 ಕೋಟಿ ರೂಗಳ ವೆಚ್ಚದ ನೂತನ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿ, ಇಂದು ಉದ್ಘಾಟನೆ ಮಾಡಲಾಗುತ್ತಿದೆ ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯಪ್ರವರ್ಗ-1ರ ಜಾತಿಗಳ ಒಕ್ಕೂಟದ ಅಧ್ಯಕ್ಷರಾದ ಡಿ.ಟಿ.ಶ್ರೀನಿವಾಸ್, ನಗರಸಭೆ ಅಧ್ಯಕ್ಷೆ ಗೀತಾ ಗಂಗಾಧರ, ಸದಸ್ಯರಾದ ಸಣ್ಣಪ್ಪ, ವೈ.ಪಿ.ಡಿ ದಾದಾಪೀರ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶೋಭಾ, ಪದವಿ ಪೂರ್ವ ಕಾಲೇಜು ಉಪನಿರ್ದೇಶಕ ಯು.ಎನ್.ರಾಜು, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ನಾಗಣ್ಣ, ರಾಜ್ಯ ಸರ್ಕಾರಿ ನೌಕರರ ಸಂಘದ ಜಂಟಿ ನಿರ್ದೇಶಕ ಸಿ.ಶಿವಾನಂದ, ಪ್ರಾಂಶುಪಾಲರಾದ ಮನೋಹರ್ ಇತರರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *