ಚಿತ್ರದುರ್ಗ.ಆಗಸ್ಟ್.03:
ಸ್ವಾತ್ಯಂತ್ರ ದಿನಾಚರಣೆ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ನೇತೃತ್ವದಲ್ಲಿ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಆಗಸ್ಟ್ 11 ರಿಂದ 13 ವರೆಗೆ ಪಥ ಸಂಚಲನದ ಕವಾಯತು ಪೂರ್ವಾಭ್ಯಾಸ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಹೇಳಿದರು.
ನಗರದ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಸ್ವಾತ್ಯಂತ್ರೋತ್ಸವದ ಪರೇಡ್ ಉಪ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೂರ್ವಾಭ್ಯಾಸದಲ್ಲಿ ಪೊಲೀಸ್, ಗೃಹ ರಕ್ಷಕ, ಅರಣ್ಯ ಹಾಗೂ ಅಬಕಾರಿ ಇಲಾಖೆಗಳ ಜೊತೆ ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ನಗರದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವರು. ಆಗಸ್ಟ್ 11 ರಿಂದ 13 ವರೆಗೆ ಪ್ರತಿದಿನ ಬೆಳಿಗ್ಗೆ 6:30ಕ್ಕೆ ಕವಾಯತು ಅಭ್ಯಾಸ ಪ್ರಾರಂಭವಾಗುವುದು. ದೈಹಿಕ ಶಿಕ್ಷಕರು ತಮ್ಮ ಶಾಲೆಯ ಮಕ್ಕಳನ್ನು ಜಾಗರೂಕತೆಯಿಂದ ಪೂರ್ವಾಭ್ಯಾಸಕ್ಕೆ ಕರೆ ತರಬೇಕು. ಸ್ವಾತಂತ್ರ ದಿನಾಚರಣೆಯಂದು ಉತ್ತಮ ಸಮವಸ್ತçಗಳ ಜೊತೆ ಮಕ್ಕಳು ಪಥಸಂಚಲನದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.
ಕನ್ನಡದಲ್ಲಿ ಫಥಸಂಚಲನದ ಆಜ್ಞೆ :
ಸ್ವಾತಂತ್ರೋತ್ಸವದ ಫಥ ಸಂಚಲನದ ಆಜ್ಞೆಗಳನ್ನು ಕನ್ನಡದಲ್ಲಿಯೇ ನೀಡಲಾಗುವುದು. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯಿಂದ ರಚಿಸಲಾಗಿರುವ ಫಥ ಸಂಚಲದ ವಾಟ್ಸ್ಪ್ ಗ್ರೂಪ್‌ನಲ್ಲಿ ಕನ್ನಡದ ಆಜ್ಞೆಗಳ ಮಾದರಿಯನ್ನು ಹಂಚಿಕೊಳ್ಳಲಾಗಿದೆ. ದೈಹಿಕ ಶಿಕ್ಷಕರು ಶಾಲೆಯಲ್ಲಿ ಮಕ್ಕಳಿಗೆ ಪ್ರತಿದಿನ ಕನ್ನಡದಲ್ಲಿಯೇ ಆಜ್ಞೆ ನೀಡಿ ಫಥ ಸಂಚಲನದ ಪೂರ್ವಾಭ್ಯಾಸಕ್ಕೆ ಸಜ್ಜುಗೊಳಿಸುವಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ ಸಭೆಯಲ್ಲಿ ತಿಳಿಸಿದರು.
ನಗರ ಸಭೆ ವತಿಯಿಂದ ಕವಾಯತು ಮೈದಾನವನ್ನು ಸ್ವಚ್ಛಗೊಳಿಸಬೇಕು. ಪೂರ್ವಾಭ್ಯಾಸ ಸೇರಿದಂತೆ ಸ್ವಾತಂತ್ರö್ಯ ದಿನಾಚರಣೆವರೆಗೆ ಕುಡಿಯುವ ನೀರು ಹಾಗೂ ಸಂಚಾರಿ ಶೌಚಾಲಯಗಳ ವ್ಯವಸ್ಥೆ ಮಾಡಬೇಕು. ಪೂರ್ವಾಭ್ಯಾಸದಲ್ಲಿ ಸುಮಾರು 700 ರಿಂದ 800 ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಇವರಿಗೆ ಮೊದಲ ದಿನ ಸಮಾಜ ಕಲ್ಯಾಣ, ಎರೆಡನೇ ದಿನ ಪರಿಶಿಷ್ಟ ವರ್ಗ ಹಾಗೂ ಮೂರನೇ ದಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿಂದ ಉಪಹಾರದ ವ್ಯವಸ್ಥೆ ಕಲ್ಪಿಸಬೇಕು. ಆಗಸ್ಟ್ 11 ಭಾನುವಾರ ಇರುವುದರಿಂದ ಎಲ್ಲಾ ಶಾಲೆಗಳ ಶಿಕ್ಷಕರು ಮಕ್ಕಳ ಪೊಷಕರಿಗೆ ಮೊದಲೆ ತಿಳಿಸಿ ಮಕ್ಕಳನ್ನು ಪೂರ್ವಾಭ್ಯಾಸಕ್ಕೆ ಕರೆ ತರಬೇಕು ಎಂದು ಎಸ್.ಜೆ.ಕುಮಾರಸ್ವಾಮಿ ನಿರ್ದೇಶನ ನೀಡಿದರು.
ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಪಥ ಸಂಚಲನದಲ್ಲಿ ಭಾಗವಹಿಸಲು ಸಮಾನ ಅವಕಾಶವಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಬಾಲಕಿ ಹಾಗೂ ಬಾಲಕರ ತಲಾ ಒಂದು ತಂಡಗಳನ್ನು ಪಥ ಸಂಚಲನಕ್ಕೆ ಕಳುಹಿಸಬಹುದು. ಒಂದು ತಂಡದಲ್ಲಿ 26 ವಿದ್ಯಾರ್ಥಿಗಳು ಇರಬೇಕು. ಎಲ್ಲಾ ಶಾಲಾ ಕಾಲೇಜುಗಳು ಸಹ 1.5 ಅಡಿ ಉದ್ದ ಹಾಗೂ 2 ಅಡಿ ಅಗಲದ ಶಾಲಾ ಫಲಗಳನ್ನು ಹಿಡಿದು ಪಥಸಂಚಲನದಲ್ಲಿ ಪಾಲ್ಗೊಳ್ಳಬೇಕು. ಅತ್ಯುತ್ತಮವಾಗಿ ಪಥಸಂಚಲ ನಡೆಸುವ 3 ತಂಡಗಳಿಗೆ ವೇದಿಕೆಯ ಮೇಲೆ ಬಹುಮಾನ ವಿತರಿಸಲಾಗುವುದು. ಭಾಗವಹಿಸಿದ ಎಲ್ಲಾ ತಂಡಗಳಿಗೆ ಸಮಾಧನಕರ ಬಹುಮಾನ ನೀಡಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಸಶಸ್ತç ಪೊಲೀಸ್ ಮೀಸಲು ಪಡೆ ಡಿವೈಸಪಿ ಗಣೇಶ್, ಜಿಲ್ಲಾ ದೈಹಿಕಶಿಕ್ಷಣಾಧಿಕಾರಿ ಚಿದಾನಂದ, ಗೃಹ ರಕ್ಷಣದಳ ಜಿಲ್ಲಾ ಕಮಾಂಡೆAಟ್ ಪಿ.ಕೆ.ಸಂಧ್ಯಾ ಸೇರಿದಂತೆ ವಿವಿಧ ಇಲಾಖೆ ಹಾಗೂ ಶಾಲಾ ಕಾಲೇಜುಗಳ ದೈಹಿಕ ಶಿಕ್ಷಕರು ಇದ್ದರು.
0 Comments