ಹಿರಿಯೂರು ನ.9
ಇಂದು ಸಮಾಜದಲ್ಲಿ ಸ್ತ್ರೀಯರ ಮೇಲೆ ಕಿರುಕುಳ, ಶೋಷಣೆ, ಅತ್ಯಾಚಾರದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಿ, ಸ್ತ್ರೀಯರ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಪೋಕ್ಸೋ ಕಾಯ್ದೆ ಜಾರಿಗೊಳಿಸಲಾಗಿದ್ದು, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿಯರಿಗೆ ಈ ಕಾಯ್ದೆಯ ಬಗ್ಗೆ ಅರಿವಿರಬೇಕು ಎಂಬುದಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಟಿ.ಮಂಜಣ್ಣ ಹೇಳಿದರು.
ತಾಲ್ಲೂಕಿನ ಅಮ್ಮನಹಟ್ಟಿ ಗ್ರೀನ್ ಫ್ಯಾಶ್ಚರ್ ಪ್ರೌಢಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಅಭಿಯೋಜನಾ ಇಲಾಖೆ ಶಿಕ್ಷಣ ಇಲಾಖೆ ಪೊಲೀಸ್ ಇಲಾಖೆ ಹಿರಿಯೂರು ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕುರಿತು ಹಮ್ಮಿಕೊಳ್ಳಲಾಗಿದ್ದ “ಕಾನೂನು ಅರಿವು” ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಮೂಡಿಸಿ, ಅವರು ಮಾತನಾಡಿದರು.
ಯಾವುದೇ ವ್ಯಕ್ತಿ ವಿದ್ಯಾರ್ಥಿನಿಯರಿಗೆ ಪೋನ್ ಕರೆ ಮಾಡಿ, ಅಥವಾ ಭೇಟಿ ಮಾಡಿ ಹಿಂಸೆ ಕೊಡುವುದು, ಅಸಂಬದ್ಧವಾಗಿ ವರ್ತಿಸುವುದು ಮಾಡುವಂತಿಲ್ಲ, ಅಂತಹ ಯಾವುದೇ ಪ್ರಕರಣಗಳು ಪೋಲೀಸ್ ಇಲಾಖೆಯಲ್ಲಿ ಪುರುಷರ ಮೇಲೆ ದಾಖಲಾದರೆ ಅವರು ಕಠಿಣಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂಬುದಾಗಿ ಅವರು ಹೇಳಿದರು.
ಈಕಾರ್ಯಕ್ರಮವನ್ನು ತಾಲ್ಲೂಕು ವಕೀಲರಸಂಘದ ಅಧ್ಯಕ್ಷರಾದ ರಂಗೇನಹಳ್ಳಿರಾಮಚಂದ್ರಪ್ಪರವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರೀನ್ ಫ್ಯಾಕ್ಚರ್ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ತಿಪ್ಪೇರುದ್ರಪ್ಪ, ಸಹಾಯಕ ಸರ್ಕಾರಿ ಅಭಿಯೋಜಕರಾದ ಟಿ.ಮಂಜಣ್ಣ, ವಕೀಲರಾದ ಸಿ.ಶಿವಕುಮಾರ್, ವಕೀಲರಾದ ಶ್ರೀಮತಿ ಲಕ್ಷ್ಮಿ ಇತರರು ಉಪಸ್ಥಿತರಿದ್ದರು.
ಸ್ತ್ರೀಯರ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಪೋಕ್ಸೋ ಕಾಯ್ದೆಜಾರಿಗೊಳಿಸಲಾಗಿದೆ :ಅಭಿಯೋಜಕ ಮಂಜಣ್ಣ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments