ಸ್ತನ್ಯಪಾನ ಮಾಡಿದ ಮಕ್ಕಳಲ್ಲಿ ಮುಂದಿನ ಜೀವನದಲ್ಲಿ ರಕ್ತ ಕ್ಯಾನ್ಸರ್, ಟೈಪ್ ೧ ಡಯಾಬಿಟಿಸ್ ಮತ್ತು ಏರು ರಕ್ತದೊತ್ತಡಗಳಿಂದ ಬಳಲುವುದು ಕಡಿಮೆ. ಎದೆಹಾಲಿನಿಂದ ಮಕ್ಕಳ ಬುದ್ದಿಮತ್ತೆ ಹೆಚ್ಚಾಗತ್ತ, ತಾಯಿ ಮತ್ತು ಮಗುವಿನ ನಡುವೆ ಭಾವನಾತ್ಮಕ ಬೆಸುಗೆಯಾಗುವುದಂರಿ ಹೀಗಾಗುತ್ತದೆ. ಅಲ್ಲದೆ ಅನೇಕ ಬಗೆಯ ಫ್ಯಾಟಿ ಆಸಿಡ್‌ಗಳು ಮಗುವಿನ ಬುದ್ದಿಮತ್ತೆ ಬೆಳೆಯಲು ಕಾರಣವಾಗತ್ತೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸಿ ಹರಿಪ್ರಸಾದ್ ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಅಂಗನವಾಡಿ ಗಳ ಸಹಯೋಗದೊಂದಿಗೆ ನಗರದ ರಾಮಬಾಯಿ ಸಮುದಾಯ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಯ ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಿ ಮಾತನಾಡಿ,ನವಜಾತ ಶಿಶುವನ್ನು ನೋಡಿಕೊಳ್ಳುವುದು, ಅದು ತೋರುವಷ್ಟು ಕಡಿಮೆ ಮೌಲ್ಯಯುತವಾಗಿದೆ, ಇದು ಉತ್ತಮ ಆರೋಗ್ಯಕರ ಜೀವನಕ್ಕೆ ಅಡಿಪಾಯವನ್ನು ಹಾಕುತ್ತದೆ. ಸ್ತನ್ಯಪಾನ ಮಾಡಿದ ಶಿಶುಗಳು ಅಲರ್ಜಿಗಳಿಗೆ ಹೆಚ್ಚಿನ ಪ್ರತಿರಕ್ಷೆಯನ್ನು ಹೊಂದಿದ್ದಾರೆ ಮತ್ತು ಬಾಟಲಿಯಿಂದ ತಿನ್ನುವ ಶಿಶುಗಳಿಗೆ ಹೋಲಿಸಿದರೆ ಸೋಂಕುಗಳಿಗೆ ಕಡಿಮೆ ದುರ್ಬಲರಾಗಿದ್ದಾರೆ ಆದಕಾರಣ ಪ್ರತಿಯೊಬ್ಬ ಅಂಗನವಾಡಿ ಶಿಕ್ಷಕಿಯರು ಸನ್ಯಾಪಾನದ ಬಗ್ಗೆ ತಾಯಂದಿರಿಗೆ ಹೆಚ್ಚು ತಿಳುವಳಿಕೆಗಳನ್ನು ನೀಡಬೇಕು, ಮೂಢನಂಬಿಕೆ ಹಾಗೂ ಸೌಂದರ್ಯ ಹಾಳಾಗುತ್ತೆ ಎನ್ನುವ ಮನಸ್ಥಿತಿ ಕೈ ಬಿಟ್ಟು ನವಜಾತ ಶಿಶು ಮಕ್ಕಳನ್ನ ಆರೈಕೆ ಮಾಡಲು ತಾಯಂದಿರರು ಹೆಚ್ಚು ಒತ್ತು ನೀಡಬೇಕು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಾಂತ ವಿರಮ್ಮ ಮಾತನಾಡಿ, ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಸ್ತನ್ಯಪಾನ ಕುರಿತು ಜಾಗೃತಿಗಳನ್ನ ಮೂಡಿಸಲಾಗುತ್ತಿದೆ. ತಾಯಂದಿರಿಗೆ ತನ್ನ ಕುರಿತು ತಿಳುವಳಿಕೆಗಳನ್ನ ನೀಡಲಾಗುತ್ತಿದೆ. ಮಗುವಿಗೆ ಕನಿಷ್ಠ ಒಂದು ವರ್ಷಕ್ಕೂ ಹೆಚ್ಚು ಕಾಲ ಸ್ತನ್ಯಪಾನ ಮಾಡಿಸುವ ತಾಯಿಯೂ ಸ್ತನ್ಯ ಕ್ಯಾನ್ಸರ್ ನಂತಹ ಮಾರುಕ ರೋಗಗಳಿಗೆ ತುತ್ತಾಗುವುದಿಲ್ಲ. ಅದಕ್ಕೆಂದೆ ಸ್ತನ್ಯಪಾನ ಹೆಚ್ಚು ಒತ್ತು ನೀಡುವಂತಹ ಪ್ರತಿ ತಾಯಿಯರು ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದರು.
ಈ ಸಾಪ್ತಹ ಕಾರ್ಯಕ್ರಮದಲ್ಲಿ
ಅಂಗನವಾಡಿ ಕಾರ್ಯಕರ್ತೆಯರಾದ ಹೆಚ್ .ಗೌರಮ್ಮ, ಶಾಮಲ ಡಿ .ಮಂಜುಳ ತುಳಸಿಬಾಯಿ. ಶಿವಮ್ಮ,ಎಸ್ ಕೆ.ಹೇಮಲತ, ಹಿಮಾಬಿಂದು,ರೀಯಾನ್,ಅಂಬುಜಾಕ್ಷಿ ನಗರ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
0 Comments