ಹೊಳಲ್ಕೆರೆ ಅ.18:
ಮಕ್ಕಳು ಸೇವಾ ಮನೋಭಾವ ಮತ್ತು ಶಿಸ್ತು, ರಾಷ್ಟ್ರಪ್ರೇಮ ಬೆಳೆಸಲು ಎನ್‍ಎಸ್‍ಎಸ್ ಶಿಬಿರಗಳು ಸಹಕಾರಿಯಾಗಿವೆ ಎಂದು ಹೊಳಲ್ಕೆರೆ ಶಾಸಕರಾದ ಡಾ.ಎಂ.ಚಂದ್ರಪ್ಪ ಹೇಳಿದರು.
ಹೊಳಲ್ಕೆರೆ ತಾಲ್ಲೂಕು ಉಪ್ಪರಿಗೇನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಇತ್ತೀಚೆಗೆ ಕೆರೆಯಾಗಳಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಎನ್‍ಎಸ್‍ಎಸ್ ವಿಶೇಷ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎನ್‍ಎಸ್‍ಎಸ್ ಶಿಬಿರದ ಮೂಲಕ ಗ್ರಾಮೀಣ ಭಾಗದ ಜನರಲ್ಲಿ ಸ್ವಚ್ಚತೆ, ನೈರ್ಮಲ್ಯ, ನೀರಿನ ಮಹತ್ವ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಟಿ.ಚಂದ್ರಪ್ಪ, ಸದಸ್ಯರಾದ ಕೆ.ದ್ಯಾಮಣ್ಣ, ಎಲ್.ಪ್ರಸನ್ನಕುಮಾರ್, ಹೊನ್ನಪ್ಪ, ಮುಖಂಡರಾದ ಕೆ.ಆರ್.ಸುರೇಶ್, ಮೂರ್ತಣ್ಣ, ರಂಗಧಾಮ, ದಿನೇಶ್, ಮಂಜುನಾಥ್, ನೌಕರರ ಸಂಘದ ಕಾರ್ಯಾಧ್ಯಕ್ಷ ಎ.ಜಯಪ್ಪ, ಪ್ರಾಚಾರ್ಯರಾದ ಟಿ.ಮಹೇಶ್ವರಪ್ಪ, ಎನ್‍ಎಸ್‍ಎಸ್ ಶಿಬಿರದ ಕಾರ್ಯಕ್ರಮಾಧಿಕರಿ ಆರ್.ಚಂದ್ರಶೇಖರ್, ಉಪನ್ಯಾಸಕರಾದ ಟಿ.ಲೋಹಿತ್ ಕುಮಾರ್, ಬಿ.ವಿಜಯ್, ಸಿ.ಕೆ.ನಯಾಜ್, ಕೆ.ಹೆಚ್.ಉಮೇಶ್, ಪಿ.ಪುನೀತ್ ಇದ್ದರು.
ಸೇವಾ ಮನೋಭಾವ, ಶಿಸ್ತು ಬೆಳೆಸಲು ಎನ್‍ಎಸ್‍ಎಸ್ ಶಿಬಿರ ಸಹಕಾರಿ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments