ಚಳ್ಳಕೆರೆ ಆ.17 ಗೌರಸಮುದ್ರ ಮಾರಮ್ಮ ದೇವಿ ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರು, ವಿದ್ಯುತ್, ಜಾತ್ರೆ ಆವರಣದಲ್ಲಿ ಸ್ವಚ್ಛತೆ ಹಾಗೂ ಮೂಲಸೌಲಭ್ಯಗಳು ಕೊರತೆಯಾಗದಂತೆ ಸಂಬಂಧಪಟ್ಟ ಎಲ್ಲ ಇಲಾಖೆಗಳು ಕೆಲಸ ಮಾಡಬೇಕೆಂದು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ಗೌರಸಮುದ್ರ ಶ್ರೀಮಾರಮ್ಮ ದೇವಿ ಜಾತ್ರೆ ಸೆ. ರಿಂದ 4ರ ವರೆಗೂ ನಡೆಯುವ ಹಿನ್ನೆಲೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಹಾಗೂ ಗ್ರಾಪಂ ಅಧ್ಯಕ್ಷ ಸದಸ್ಯ ಮುಖಂಡರಿಗೆ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಾತ್ರೆ ಪೂರ್ವ ಸಿದ್ಧ್ದತೆ ಬಗ್ಗೆ ತಾಲೂಕು ಮಟ್ಟದ ನಾನಾ ಇಲಾಖೆ ಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.
ಜಾತ್ರೆಗೆ ಸಂಮಧ ಪಟ್ ಸಲಹೆ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳ ಬೇಕು ಈಗಾಗಲೆ ಗೌರದಮುದ್ರ ಗ್ರಾಮಕ್ಕೆ ಹೋಗುವ ರಸ್ತೆಗೆ ಡಾಂಬರೀಕರಣ ಮಾಡುತ್ತಿದ್ದು ಎಲ್ಲವೂ ಒಮ್ಮೆಯೇ ಆಗುವುದಿಲ್ಲ ಹಂತ ಹಂತವಾಗಿ ಪ್ರತಿ ಗ್ರಾಮಗಳಿಗೂ ರಸ್ತೆ ಸಂಪರ್ಕ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು. ಈಗ ಜಾತ್ರೆ ನಡೆಯುವ ತುಮ್ಮಲು ಪ್ರದೇಶ ಆಂದ್ರ ಸೇರಿದಂತೆ ಜಾತ್ರೆಗೆ ಭಕ್ತರು ಬರುವ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚುವುದು ರಸ್ತೆ ಪಕ್ಕದ ಜಂಗಲ್ ತೆತವುಗೊಳಿಸ ಬೇಕು.
ವಾಹನಗಳ ನಿಲುಗಡೆಗೆ ಸುಗಮ ಸಂಚಾರದ ವ್ಯವಸ್ಥೆ ಮಾಡಬೇಕು ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮೂಲ ಭೂತ ಸೌಲಭ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಹಶೀಲ್ದಾರ್ ರೇಹಾನ್ ಒಅಷ ಮಾತನಾಡಿ ಬಯಲುಸೀಮೆ ಜನರು ಸದಾ ಬರಗಾಲ ಎದುರಿಸುತ್ತಿದ್ದರೂ ದೇವಿಯ ಜಾತ್ರೆಯನ್ನು ಭಯ ಭಕ್ತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ಈ ಜಾತ್ರೆ ಕರ್ನಾಟಕವಲ್ಲದೆ ಆಂಧ್ರದಿಂದಲೂ ಸಾವಿರಾರು ಭಕ್ತರು ಆಗುಮಿಸಿವರು. ಜಾತ್ರೆಗೆ ಭಕ್ತರ ಜನಸಾಗರ ಹರಿದು ಬರುವುದರಿಂದ ಕುಡಿಯುವ ನೀರು, ಬೆಳಕು, ತಾತ್ಕಾಲಿಕ ಶೌಚಾಲಯ.ಚರಂಡಿ .ಬೀದಿ ದೀಪ. ಆರೋಗ್ಯ ಕೇಂದ್ರ, ಪಶು ಆರೋಗ್ಯ ಕೇಂದ್ರ, ವಾಹನಗಳ ಸಂಚಾರ ದಟ್ಟಣೆ ಸುಧಾರಣೆಗೆ ಪೊಲೀಸ್ ಬಂದೋಬಸ್ ವ್ಯವಸ್ಥೆ ಸೇರಿದಂತೆ, ಸಾರಿಗೆ ವ್ಯವಸ್ಥೆ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಮೊದಲು ಗೌರಸಮುದ್ರ ಗ್ರಾಮ ಮತ್ತು ಜಾತ್ರೆ ನಡೆಯುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವಂತೆ ತಿಳಿಸಿದರು.
ತಾಪಂ ಇಒ ಶಶಿಧರ್ ಮಾತನಾಡಿ, ಪ್ರತಿ ವರ್ಷವೂ ಶ್ರೀಮಾರಮ್ಮ ದೇವಿ ಜಾತ್ರೆ ಯಶಸ್ಸಿಯಾಗಿ ನಡೆಯುತ್ತದೆ. ಸೆ.2ರಿಂದ 4ವರೆಗೆ ಈ ಬಾರಿ ಜಾತ್ರೆ ನಡೆಯುವುದು. ರಾಜ್ಯದ ಮೂಲೆ ಮೂಲೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ದ್ವಿಚಕ್ರ ವಾಹನ ಅಲ್ಲದೆ ಎತ್ತಿನ ಗಾಡಿಗಳಲ್ಲೂ ಈ ಜಾತ್ರೆಗೆ ಭಕ್ತರು ಬರುತ್ತಾರೆ. ವಿಶೇಷವಾಗಿ ತುಮಲು ಪ್ರದೇಶದಲ್ಲಿ ಹೆಚ್ಚಿನ ಭಕ್ತರು ಬಂದು ಸೇರುತ್ತಾರೆ. ಈ ಹಿನ್ನೆಲೆಯಲ್ಲಿ ಅಗತ್ಯ ಸೌಲಭ್ಯ ಒದಗಿಸುವ ಬಗ್ಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಲೋಪವಿಲ್ಲದಂತೆ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷ ಓಬಣ್ಣ ಮಾತನಾಡಿ ಜಾತ್ರೆಗೆ ಬರುವ ಭಕ್ತರಿಗೆ ಶೌಚಾಲಯ ಮಾಡಲು ಸಾಧ್ಯವಾಗುವುದಿಲ್ಲ ಅನುದಾನದ ಕೊರತೆ ಇದೆ ಜಾತ್ರೆಗೆ ಬರುವ ವಿವಿಧಾ ಇಕಾಖೆಯ ಸಿಬ್ಬಂದಿಗಳಿಗೆ ತಾತ್ಕಾಲಿಕ ಶೌಚಾಲಯದ ವ್ಯವಸ್ಥೆ ಮಾಡಲಾಗುವುದು ಈಗಾಗಲೆ ಗ್ರಾಮಪಂಚಾಯಿತಿ ಯಿಂದ ಜಾತ್ರೆ ನಡೆಯುವ ಸ್ಥಳದಲ್ಲಿ ಕುಡಿಯುವ ನೀರು.ಸ್ವಚ್ಚತೆ.ವಿದ್ಯುತ್ ದೀಪಗಳ ವ್ಯವಸ್ಥೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಡಿವೈಎಸ್ಪಿ ರಾಜಣ್ಣ.ಪಿಐ ದೇಸಾಯಿ. ತಳಕು ಪಿಎಸ್ ಐ ಲೋಕೇಶ್. ಲೋಕೋಪಯೋಗಿ ಇಲಾಖೆ ಎಇಇ ಭಾಸ್ಕರ್. ಎಇಇ ಕಾವ್ಯ. ಆರೋಗ್ಯಾಧಿಕಾರಿ ಡಾ ಕಾಶಿ.ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು
0 Comments