ಸುಸ್ಥಿರ ಗಣಿಗಾರಿಕೆ ಕಲ್ಲು ಉದ್ಯಮದ ದೊಡ್ಡ ಹೊಣೆಗಾರಿಕೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

by | 18/02/23 | ಸುದ್ದಿ

ಬೆಂಗಳೂರು : ಸುಸ್ಥಿರ ಗಣಿಗಾರಿಕೆ ಮಾಡುವುದು ಈ ಉದ್ಯಮದ ಬಹಳ ದೊಡ್ಡ ಹೊಣೆಗಾರಿಕೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಭಾರತೀಯ ಗ್ರಾನೈಟ್ ಮತ್ತು ಗಣಿ ಉದ್ಯಮದ ಒಕ್ಕೂಟ ಆಯೋಜಿಸಿರುವ ಸ್ಟೋನಾ- STONA- 2023 15 ನೇ ಅಂತರರಾಷ್ಟ್ರೀಯ ಗ್ರಾನೈಟ್ ಮತ್ತು ಕಲ್ಲುಗಳ ವಸ್ತುಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಆಧುನಿಕ ತಂತ್ರಜ್ಞಾನದಿಂದ ಗರಿಷ್ಠ ಬಳಕೆ ಕನಿಷ್ಠ ತ್ಯಾಜ್ಯ :

ಈ ವೇದಿಕೆಯಲ್ಲಿ ಈ ಬಗ್ಗೆ ಚರ್ಚೆ ಯಾಗಬೇಕು.ಆಧುನಿಕ ತಂತ್ರಜ್ಞಾನ ದಿಂದ ಗರಿಷ್ಠ ಬಳಕೆ ಹಾಗೂ ಕನಿಷ್ಠ ತ್ಯಾಜ್ಯ ಉತ್ಪಾದನೆಯಾಗಬೇಕು. ಸರ್ಕಾರಿ ನೀತಿಗಳನ್ನು ಸರಳೀಕರಣಗೊಳಿಸುತ್ತಿದ್ದು, ಗಣಿಗಾರಿಕೆ ಉದ್ಯಮ ಬೆಳೆಯಬೇಕು. ಪರವಾನಗಿ ಮುಂತಾದವುಗಳನ್ನು ಮುಖ್ಯವಾಹಿನಿಗೆ ತರಬೇಕು. ಇದರಿಂದಾಗಿ ಯಾವ ಉದ್ಯಮಿಗೂ ಅನಗತ್ಯ ಕಿರುಕುಳ ಆಗಬಾರದು. ತೊಡಕಿನ ವಿಧಾನಗಳನ್ನು ತೆಗೆದುಹಾಕಲಾಗುವುದು. ಉದ್ಯಮವು ಇದರೊಂದಿಗೆ ಕಾರ್ಯನಿರ್ವಹಿಸಲು ಸಿದ್ಧರಿದ್ದರೆ, ಪಾರದರ್ಶಕತೆ ಹಾಗೂ ದಕ್ಷತೆ ತರಬಹುದಾಗಿದೆ. ಯಂತ್ರೋಪಕರಣಗಳ ಅಭಿವೃದ್ಧಿ ಯಾಗಿದ್ದು, ಇಟಲಿ ದೇಶ ಈ ನಿಟ್ಟಿನಲ್ಲಿ ಬಹಳ ದೊಡ್ಡ ಸಾಧನೆ ಮಾಡಿದೆ ಎಂದರು.

ಮಾಹಿತಿ ವಿನಿಮಯದ ವೇದಿಕೆಯಾಗಬೇಕು :

ರಾಜಸ್ಥಾನ ಹಾಗೂ ಗುಜರಾತ್ ರಾಜ್ಯಗಳಿಗಿಂತ ಭಿನ್ನವಾದ ನೀತಿ ನಮ್ಮದಾಗಿದ್ದು, ಇಲ್ಲಿನ ಗಣಿಗಳಿಗೂ ಅಲ್ಲಿನ ಗಣಿಗಳಿಗೂ ಬಹಳ ವ್ಯತ್ಯಾಸವಿದೆ. ನಮ್ಮದೇ ಆದ್ಯತೆಗಳಿವೆ. ನಮ್ಮಲ್ಲಿ ವಿಶ್ವದಲ್ಲಿಯೇ ಅತ್ಯುತ್ತಮ ಕಬ್ಬಿಣದ ಅದಿರು ಲಭ್ಯವಿದೆ. ಉದ್ಯಮ ಸ್ನೇಹಿ ನೀತಿಗಳನ್ನು ರೂಪಿಸಲಾಗಿದ್ದು ರಾಜ್ಯದಲ್ಲಿ ಸುಲಭವಾಗಿ ವ್ಯವಹಾರ ಸಾಧ್ಯವಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಕಾಯ್ದುಕೊಳ್ಳಬೇಕು. ಅದಕ್ಕಾಗಿ ಒಕ್ಕೂಟ ಮಾಹಿತಿ ವಿನಿಮಯದ ವೇದಿಕೆಯನ್ನು ಒದಗಿಸಿ,ಉತ್ಪಾದನೆ ಹಾಗೂ ಮಾರಾಟದಲ್ಲಿ ಸುಧಾರಣೆ ತರಲು ಪ್ರಯತ್ನಿಸಬೇಕು. ದೇಶವನ್ನು ಸಧೃಢಗೊಳಿಸಲು ಈ ವೇದಿಕೆ ಕಾರಣವಾಗಬೇಕೆಂದು ಹೇಳಿದರು.

ಭವಿಷ್ಯದಿಂದ ಕದ್ದಂತೆ :

ಸುಸ್ಥಿರ ಗಣಿಗಾರಿಕೆಯನ್ನು ಕೈಗೊಳ್ಳಬೇಕು. ಹಾಗೆ ಮಾಡಿದಾಗ ದೇಶ, ಗಣಿಗಾರಿಕೆ ಹಾಗೂ ಆರ್ಥಿಕತೆಗೆ ಒಳ್ಳೆಯದು. ಮಿತಿಯಿಲ್ಲದ ಗಣಿಗಾರಿಕೆ ಮಾಡಿದರೆ ಭವಿಷ್ಯದಿಂದ ಕದ್ದಂತೆ ಆಗುವುದು. ಇದನ್ನು ಆಧುನಿಕ ತಂತ್ರಜ್ಞಾನ, ಯಂತ್ರೋಪಕರಣಗಳ ಬಳಕೆಯಿಂದ ಉದ್ಯಮದ ತ್ಯಾಜ್ಯ ಕಡಿಮೆಯಾಗಬೇಕು. ಅವೈಜ್ಞಾನಿಕ ಗಣಿಗಾರಿಕೆ ಸಾಕಷ್ಟು ತ್ಯಾಜ್ಯ ಉತ್ಪಾದನೆಗೆ ಕಾರಣವಾಗಿದೆ. ಇದು ಆರ್ಥಿಕತೆ ಹಾಗೂ ಮಾಲೀಕನಿಗೆ ನಷ್ಟ ಉಂಟುಮಾಡುತ್ತದೆ ಎಂದರು.

ಕಲ್ಲುಗಣಿಗಾರಿಕೆಗೆ ಅವಕಾಶಗಳನ್ನು ಒದಗಿಸುವ ವೇದಿಕೆಯಾಗಿ ಸ್ಟೋನಾ ಕಾರ್ಯನಿರ್ವಹಿಸುತ್ತಿದೆ. ಕಲ್ಲು ಸೃಷ್ಟಿಯಾಗಲು ಸಾವಿರಾರು ವರ್ಷಗಳು ಬೇಕು. ಕಲ್ಲಿನ ಸೃಷ್ಟಿ ಯಲ್ಲಿ ನಿಸರ್ಗ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಲ್ಲು ಭೂಮಿಗೆ ಬಲ ನೀಡಿದೆ. ಮಾನವ ಅಭಿವೃದ್ಧಿಯಲ್ಲಿ ಕಲ್ಲು ಮುಖ್ಯ ಪಾತ್ರ ವಹಿಸಿದೆ. ಮಾನವ ಹಾಗೂ ಕಲ್ಲಿನ ಸಂಬಂಧ ಅತ್ಯಂತ ಪ್ರಾಚೀನವಾದುದು. ಕಲ್ಲಿನಿಂದ ನಾವು ಮನೆ, ಬಂಗಲೆ ಹಾಗೂ ದೇಶವನ್ನು ಕಟ್ಟಿಕೊಂಡಿದ್ದೇವೆ ಎಂದರು.

ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್, ಒಕ್ಕೂಟದ ಅಧ್ಯಕ್ಷ ಇಶಿಂದರ್ ಸಿಂಗ್, ಕಾರ್ಯದರ್ಶಿ ಕೃಷ್ಣ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Latest News >>

ಹಾಸ್ಯನಟ ಸಂಗೀತ ನಿರ್ದೇಶಕ ಸಾಧುಕೋಕಿಲ ಸೂರನಹಳ್ಳಿ ಗ್ರಾಮಕ್ಕೆ ಭೇಟಿ.

ಚಳ್ಳಕೆರೆ ಜು.14ಚಳ್ಳಕೆರೆ ತಾಲೂಕಿನ‌ ಸೂರನಹಳ್ಳಿ‌ಗ್ರಾಮದ ಶ್ರೀ ಆಂಜನೇಸ್ವಾಮಿ ದೇವಸ್ಥಾನ ಕ್ಕೆ ಹಾಸ್ಯನಟ, ಸಂಗೀತಗಾರ, ಚಲನಚಿತ್ರ ನಿರ್ದೇಶಕ...

ಮೊಳಕಾಲ್ಮೂರಿಗೆ ಇಎಸ್ ಐ ಆಸ್ಪತ್ರೆ ಹಾಗೂ ಜವಳಿ ಪಾರ್ಕ್ ಮಂಜುರಾತಿ ನೀಡುವಂತೆ ಕೇಂದ್ರ ಸಚಿವರಿಗೆ ಜೆ.ಡಿ.ಎಸ್ ಮುಖಂಡ ಟಿ.ವೀರಭದ್ರಪ್ಪ ಮನವಿ

ಬೆಂಗಳೂರು ಜು. 14ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರವು ತುಂಬಾ ಹಿಂದುಳಿದ ಪ್ರದೇಶವಾಗಿದ್ದು ಹಾಗೂ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ ಇಲ್ಲಿ...

ಗಜ್ಜುಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಮಾಳಜ್ಜಯ್ಯನವರಿಗೆ ಸನ್ಮಾನ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಪಿ. ತಿಪ್ಪೇಸ್ವಾಮಿ ,

ನಾಯಕನಹಟ್ಟಿ. ಜುಲೈ 14 . ಗಜ್ಜುಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗ್ರಾಮೀಣ ಪ್ರದೇಶದ ರೈತರಿಗೆ ಸಹಕಾರವಾಗಲಿ ಎಂದು ಪಟ್ಟಣ...

ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮತದಾನ ಮಾಡಲು ಸರತಿ ಸಾಲಿನಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಚಳ್ಳಕೆರೆ ಜು.13 ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ ಮತದಾನದ ಮೂಲಕ ಸಾಗಿದ್ದು ಮಕ್ಕಳಿಗೆ ಚಿಕ್ಕಂದಿನಿಂದಲೇ ಚುನಾವಣಾ ಮಜಲುಗಳನ್ನು...

ಲೋಕ ಅದಾಲತ್ ಮೂಲಕ ಪ್ರಕರಣಗಳು ಇತ್ಯರ್ಥ ಗೊಂಡರೆ ದ್ವೇಷ ಭಾವನೆ ದೂರವಾಗಿ ಸಂಬಂಧಗಳು ಸುಧಾರಿಸಲಿವೆ: ಕೆಎಂ ನಾಗರಾಜ್ 

ಚಳ್ಳಕೆರೆ: ಲೋಕ ಅದಾಲಾತ್ ಕಾರ್ಯಕ್ರಮವು ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಇಡೀ ದೇಶದಾದ್ಯಂತ ನಡೆಯುತ್ತಿದ್ದು ಕಕ್ಷಿದಾರರು ಇದರ...

ಕರ್ನಾಟಕರಾಜ್ಯವೆಂದು ನಾಮಾಕರಣ ಮಾಡಿ 50ವರ್ಷಗಳುಸಂದ ಹಿನ್ನಲೆಯಲ್ಲಿ ಇಂದು ಸುವರ್ಣಾಕರ್ನಾಟಕಉತ್ಸವವನ್ಆಚರಿಸುತ್ತಿದ್ದೇವೆ:ತಹಶೀಲ್ದಾರ್ ರಾಜೇಶ್ ಕುಮಾರ್

ಹಿರಿಯೂರು: ಅಂದಿನ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ನಾಮಾಕರಣ ಮಾಡಿ 50 ವರ್ಷಗಳು ಸಂದ...

ಪತ್ರಿಕಾ ದಿನಾಚರಣೆಯಲ್ಲಿ ಸಚಿವ ಡಿ.ಸುಧಾಕರ್ ಹೇಳಿಕೆಸತ್ಯಕ್ಕೆ ಹತ್ತಿರವಾದ ಸುದ್ದಿಗಳಿಗೆ ಮಾತ್ರ ಜನಮನ್ನಣೆ

ಚಿತ್ರದುರ್ಗ ಜುಲೈ.13: ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುವ ಸತ್ಯಕ್ಕೆ ಹತ್ತಿರವಾದ ಸುದ್ದಿಗಳಿಗೆ ಮಾತ್ರ ಜನಮನ್ನಣೆ...

ಅಧಿಕಾರಿಗಳ ಸಭೆಯಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸೂಚನೆ ಡೆಂಗ್ಯೂ ಪರೀಕ್ಷೆ: ಖಾಸಗಿ ಲ್ಯಾಬ್‍ಗಳು ವಿಧಿಸುವ ದರ ಸಾರ್ವಜನಿಕರಿಗೆ ಹೊರೆಯಾಗದಿರಲಿ

ಚಿತ್ರದುರ್ಗ ಜು.13 ಡೆಂಗ್ಯೂ ಪರೀಕ್ಷೆಗೆ ಖಾಸಗಿ ನರ್ಸಿಂಗ್ ಹೋಂ, ಲ್ಯಾಬ್‍ಗಳು ವಿಧಿಸುವ ದರದ ಬಗ್ಗೆ ನಿಗಾವಹಿಸಿ, ಸರ್ಕಾರ ನಿಗಧಿಪಡಿಸಿದ ದರ...

ಡಾ. ಬಾಬು ಜಗಜೀವನ್ ರಾಮ್ ಭವನ ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಹಾಗೂ ಸಂಶೋಧಕರ ಕೇಂದ್ರವಾಗಿ ಹೊರಹೊಮ್ಮಲಿ. ಹಿರಿಯ ದಲಿತ ಮುಖಂಡ ತೊರೆಕೋಲಮ್ಮನಹಳ್ಳಿ ಆರ್. ಬಸಪ್ಪ,

ನಾಯಕನಹಟ್ಟಿ:: ಜುಲೈ 13 . ಡಾ. ಬಾಬು ಜಗಜೀವನ್ ರಾಮ್ ಸಂಶೋಧನ ಕೇಂದ್ರ ರಾಜ್ಯದ ದಲಿತ ಜನಾಂಗದ ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ಅಧ್ಯಯನ...

ಪ್ರತಿಭೋತ್ಸವದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ವಿದ್ಯಾರ್ಥಿಗಳು ವೈಯಕ್ತಿಕ ಹಿತಾಸಕ್ತಿ ಅರಿತು ಉದಯೋನ್ಮುಖರಾಗಿ ಬೆಳೆಯಬೇಕು

ಚಿತ್ರದುರ್ಗ ಜುಲೈ.12: ವಿದ್ಯಾರ್ಥಿಗಳು ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ತಮ್ಮ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page