ಚಳ್ಳಕೆರೆ ಆ17 ತಾಲೂಕಿನ ಜಾಜೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗುಡುಗು ಮಿಂಚು ಮಿಶ್ರಿತ ಮಳೆಯಾಗಿದ್ದು, ಸಿಡಿಲು ಬಡಿದ ಪರಿಣಾಮ ನೂರಕ್ಕು ಹೆಚ್ಚು ಕುರಿಗಳು ಬಲಿಯಾದ ಘಟನಾ ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮದ ಆಂಜನೇಯ 90ಹಾಗೂ ಓಬಣ್ಣ16ಇವರಿಗೆ ಸೇರಿದ ಕುರಿಗಳು ಕುರಿಹಟ್ಟಿಯಲ್ಲಿದ್ದ ಕುರಿಗಳ ಹಿಂಡಿಗೆ ಗುಡುಗು ಸಹಿತ ಮಳೆಯಿಂದಾಗಿ ಸಿಡಿಲು ಬಡಿತಕ್ಕೆ ಸಿಲುಕಿ ಕುರಿಗಳು ಮೃತ ಮಪಟ್ಟಿವೆ. ಕಂದಾಯ ಹಾಗೂ ಪಶುಸಂಗೋಪನೆ ಹಾಗೂ ಪರಶುರಾಂಪುರ ಪೋಲಿಸ್ ಜಂಟಿ ಪರಿಶೀಲನೆ ನಡೆಸಿದ್ದು ಮೃತಪಟ್ಟ ತಲಾ ಒಂದು ಕುರಿಗೆ 5 ಸಾವಿರ ರೂ ಪರಿಹಾರ ಸಿಗಲಿದೆ ಎಂದು ತಹಶೀಲ್ದಾರ್ ರೇಹಾನ್ ಪಾಷ ತಿಳಿಸಿದ್ದಾರೆ.
0 Comments