ಚಳ್ಳಕೆರೆ
ದೇವರಮರಿಕುಂಟೆ ಗ್ರಾಮದ ಹಿರಿಯ ಸಾಹಿತಿ, ಚಿಂತಕ, ಕಥೆಗಾರ ಮರಿಕುಂಟೆ ತಿಪ್ಪಣ್ಣ ಇವರನ್ನು ೨೩ ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿರುವುದಕ್ಕೆ ಸಾಹಿತಿಗಳು ಚಿಂತಕರು ಅವರನ್ನು ಶಾಸಕರ ಭವನದಲ್ಲಿ ಸನ್ಮಾನಸಿ ಗೌರವಿಸಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜನವರಿ ೨೧ ಮತ್ತು ೨೨ ರಂದು ಚಳ್ಳಕೆರೆ ತಾಲೂಕಿನ ಪುಣ್ಯ ಕ್ಷೇತ್ರ ನಾಯಕನಹಟ್ಟಿ ನೆಲೆಯಲ್ಲಿ ೧೬ ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಿರುವುದು ಮತ್ತು ಸಮ್ಮೇಳನ ಅಧ್ಯಕ್ಷರನ್ನಾಗಿ ಹಿರಿಯ ಕತೆಗಾರರು ಹಾಗೂ ಸುಮಾರು ನಾಲ್ಕು ದಶಕಗಳ ಕಾಲ ನಿಸ್ವಾರ್ಥವಾಗಿ ಗ್ರಾಮೀಣ ಭಾಗದಲ್ಲಿ ‘ ಗ್ರಾಮೀಣ ಸಾಹಿತ್ಯ ಪರಿಷತ್ತು’ ಕಾರ್ಯಗಳೊಂದಿಗೆ ಸಾಹಿತ್ಯಿಕವಾಗಿ ಅನೇಕ ಪ್ರತಿಭಾವಂತರನ್ನುಗುರುತಿಸಿ, ಬೆಳೆಸಿರುವಂತ ಕೀರ್ತಿ ಇರುವ ಬಿ. ತಿಪ್ಪಣ್ಣ ಮರಿಕುಂಟೆ ಅವರನ್ನು ಆಯ್ಕೆ ಮಾಡಿರುವುದು ಸಾಹಿತ್ಯ ಪರಿಷತ್ತಿನ ಘನತೆ ಹೆಚ್ವಿಸಿದಂತಾಗಿದೆ ಎಂದು ತಿಳಿಸಿದರು.
ಸಾಹಿತಿ ನಿವೃತ್ತ ಶಿಕ್ಷಕ ತಿಪ್ಪೇಸ್ವಾಮಿ, ಸಾಹಿತಿ ಕರ‍್ಲಕುಂಟೆ ತಿಪ್ಪೇಸ್ವಾಮಿ ಸೇರಿದಂತೆ ಹಲವುಲ ಗಣ್ಯರು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರು ಮತ್ತು ಸಮಿತಿಯ ಸರ್ವ ಸದಸ್ಯರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸಾಹಿತಿ ಮರಿಕುಂಟೆ ತಪ್ಪೇಸ್ವಾಮಿಯವರನ್ನು ಕ.ಸಾಪ ಜಿಲ್ಲಾಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಕಸಾಪ ಸಮಿತಿ ಶಾಸಕ ಟಿ.ರಘುಮೂರ್ತಿ ಹಾಗೂ ಸಾಹಿತಿಗಳು ಗೌರವಿಸಿದ್ದಾರೆ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments