ಸಾವನ್ ಕಿ ಹರಿಯಾಲಿ, ಕಿಸಾನ್ ಕಿ ಕುಶಾಲಿ. ಬ್ಯಾಂಕ್ ಆಫ್ ಬರೋಡದಿಂದ ಆದ್ಯತಾ ವಲಯದ ಸಾಲ ವಿತರಣೆ. ವಿಜಯ್ ಕುಮಾರ್ ಸೀನಿಯರ್ ಮ್ಯಾನೇಜರ್ ಜೋನಲ್ ಬ್ರಾಂಚ್, ಮಂಗಳೂರು.
ಹಿರಿಯೂರ್ ನಗರದ ಬ್ಯಾಂಕ್ ಆಫ್ ಬರೋಡ ಶಾಖೆಯಿಂದ ಸಾವನ್ ಕಿ ಹರಿಯಾಲಿ ,ಕಿಸಾನ್ ಕಿ ಕುಶಾಲಿ ,ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಜಯ್ ಕುಮಾರ್ ಅವರು ಕೃಷಿ, ಕೃಷಿ ಕಾರ್ಮಿಕರು ಹಾಗೂ ಸ್ವ ಸಹಾಯ ಸಂಘ ಮಹಿಳೆಯರಿಗೆ ವಿಶೇಷವಾಗಿ ಶೇಕಡಾ 18 ಸಾಲ ವಿತರಣೆ ಮಾಡಲಾಗುವುದು. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ರೈತ ಮುಖಂಡ ಕಸವನಹಳ್ಳಿ ರಮೇಶ್ ಮಾತನಾಡಿ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಗ್ರಾಮೀಣ ಬ್ಯಾಂಕುಗಳಲ್ಲಿ ಮಾತ್ರ ಜನರು ಸಾಲ ಪಡೆಯಬೇಕು ಖಾಸಗಿ ಲೇವಾದೇವಿಗಾರರು, ಫೈನಾನ್ಸಿಯರ್ ಗಳು ಇತರೆ ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ ಮಾಡಿದರೆ ಬಡ್ಡಿ ಕಟ್ಟಿ ಹೈರಾಣಗಬೇಕಾಗುತ್ತದೆ. ಗ್ರಾಹಕ ಸ್ನೇಹಿ ಬಡ್ಡಿದರ ಕಡಿಮೆ ಇರುವ ಹಾಗೂ ಸಾಲ ಮರುಪಾವತಿಯಲ್ಲಿ ಸರಳ ವಿಧಾನವಿರುವ ಈ ಬ್ಯಾಂಕುಗಳಲ್ಲಿ ವಿವರಿಸಿ ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹಾಸನ ಪ್ರಾದೇಶಿಕ ಕಚೇರಿ ಕೃಷಿ ವಿಭಾಗದ ಮ್ಯಾನೇಜರ್ ಆದ ಶೈಲಜಾ ಅವರು ಸ್ವಸಹಾಯ ಸಂಘಗಳ ಮಹಿಳೆಯರಿಗೆ ಸಾಲ ವಿತರಣೆಯಲ್ಲಿರುವ ಪಂಚ ಸೂತ್ರಗಳನ್ನು ತಿಳಿಸಿದರು. ಸಂಘದ ವ್ಯವಹಾರಗಳ ಒಟ್ಟು ಮೊತ್ತದ 4 ಪಟ್ಟು ನಾವು ಬ್ಯಾಂಕ್ನಿಂದ ಕಡಿಮೆ ಬಡ್ಡಿಗೆ ಸಾಲ ವಿತರಿಸುತ್ತೇವೆ ಇದರ ಸದುಪಯೋಗ ಪಡಿಬೇಕು ಅಲ್ಲದೆ ಸರ್ಕಾರದಿಂದಲೂ ಸಹ ಸಹಾಯಧನ ಇತರೆ ಸೌಲಭ್ಯಗಳು ಸಿಗುತ್ತವೆ ಎಂದು ಹೇಳಿದರು. ಚಿಲ್ಲಹಳ್ಳಿ ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ಆದ ಶರಣಪ್ಪ ಅವರು ಕೃಷಿ ಸಾಲಗಳು ರೈತರ ಬದುಕಿಗೆ ಬೆಳಕು ನೀಡುತ್ತವೆ. ವಾರ್ಷಿಕವಾಗಿ ಕೇವಲ ಬಡ್ಡಿ ಕಟ್ಟಿದರೆ ರಿನಿವಲ್ ಮಾಡುತ್ತೇವೆ ಅಲ್ಲದೇ ಶೇಕಡ 4 ಬಡ್ಡಿ ದರದಲ್ಲಿ ಸಾಲ ವಿತರಿಸುತ್ತೇವೆ ಹಾಗೂ ನಮ್ಮ ಬ್ಯಾಂಕ್ ಗ್ರಾಮೀಣ ಭಾಗದ ಮಸ್ಕಲ್, ಚಿಲ್ಲಹಳ್ಳಿ, ಧರ್ಮಪುರ, ಕೋಡಿಹಳ್ಳಿ ಶಾಖೆಯನ್ನು ತೆರೆದು ಗ್ರಾಮೀಣ ಜನರಿಗೆ ಅನುಕೂಲ ಮಾಡಿದೆ ಎಂದು ತಿಳಿಸಿದರು. ಹಿರಿಯೂರ್ ಬ್ಯಾಂಕ್ ಮ್ಯಾನೇಜರ್ ವೆಟ್ರಿ ವೇಲಾಯುದನ್ ವಿವಿಧ ಬ್ಯಾಂಕ್ ಆಫ್ ಬರೋಡ ಶಾಖೆಗಳ ರೈತರಿಗೆ ಸ್ವ ಸಹಾಯ ಸಂಘದ ಮಹಿಳೆಯರಿಗೆ ಸಾಲ ವಿತರಣೆ ಮಾಡಿದರು
. ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಬ್ಯಾಡ್ರಳ್ಳಿ ಹನುಮಂತರಾಯ, ಚಿಲ್ಲಹಳ್ಳಿ ಮ್ಯಾನೇಜರ್ ಶರಣಪ್ಪ, ಚಳ್ಳಕೆರೆ, ಧರ್ಮಪುರ, ಕೋಡಿಹಳ್ಳಿ, ಮಸ್ಕಲ್ ಶಾಖೆಯ ಅನಿಲ್, ದರ್ಮಪುರ ಶಾಖೆಯ ವೇಣುಗೋಪಾಲ್, ಮ್ಯಾನೇಜರ್ಗಳು , ಜಯಪ್ರಕಾಶ ಕೆ.ಕೆ .ಹಟ್ಟಿ,ಜಗದೀಶ್ ಹೆಚ್ಚ್.ಎನ್. .ರೈತರು ಸ್ವಸಹಾಯ ಸಂಘಗಳ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments