ಸಾಮಾಜಿಕ

ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಗ್ರೂಪ್ ವತಿಯಿಂದ ಕ್ಷೇತ್ರದ ಜನತೆಗೆ ಅಂಬ್ಯುಲೆನ್ಸ್ ಸೇವೆ ಯೋಜನೆಯ ಸದುಪಯೋಗ ಮಾಡಿಕೊಳ್ಳಲು ಮನವಿ.


ಜನಧ್ವನಿ ವಾರ್ತೆ ಅ.28. ಸರಿಯಾದ ಸಮಯಕ್ಕೆ ತುರ್ತು ವಾಹನ ಸೌಲಭ್ಯವಂಚಿತರಾಗಿ ಆರೋಗ್ಯ ಸೇವೆ ದೊರೆಯದೆ ಚಿಕಿತ್ಸೆ ದೊರೆಯದೆ ಸಾವಿನ ಮನೆ ಸೇರಿದ ಘಟನೆಗಳು ನಮ್ಮಕಣ್ಣು ಮುಂದೆ ಇವೆ ಇಂತಹ ಘಟನೆಗಳನ್ನು ತಡೆಯಲು ಶಾಸಕರೊಬ್ಬರು ತುರ್ತುವಾಹನ ಸೇವೆ ಮಾಡಲು ಮುಂದಾಗಿದ್ದು ಮಾನವೀಯತೆ ಮರೆದಿದ್ದಾರೆ.
ಹೌದು ಇದು ಕೋಟೆ ನಾಡು,ಬರಗಾಲದ ನಾಡು, ಬಯಲು ಸೀಮೆ ಎಂದು ಹಣೆ ಪಟ್ಟಿಕಟ್ಟಿಕೊಂಡಿರುವ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ನಗರದ ಹೊರವಯಲಯ ಕಾವಾಡಿಗರಹಟ್ಟಿಯಲ್ಲಿ ಕಲುಸಿತ ನೀರು ಸೇವಿಸಿ ಸಾವು ನೋವಿನಲ್ಲಿದ್ದಾಗ ಜರೊಂದಿಗೆ ಇದ್ದು ಅಲ್ಲಿನ ಜನರ ಚಿಕಿತ್ಸೆಗೆ ನೆರವಾಗಿ ಹೆಚ್ಚಿನ ಸಾವು ನೋವುಗಳನ್ನು ತಡೆಯಲು ಮುಂದಾದ ಬೆನ್ನಲ್ಲೇ ಈಗ ಮತ್ತೊಂದು ಕ್ಷೇತ್ರದ ಜನರ ಆರೋಗ್ಯ ಸೇವೆಗೆ ಸಕಾಲಕ್ಕೆ ಚಿಕಿತ್ಸೆ ಪಡೆದುಕೊಳ್ಳಲ್ಲು ಇದೀಗ ಆಂಬ್ಯುಲೆನ್ಸ್ ಸೇವೆ ಆರಂಭಿಸುವುದರೊಂದಿಗೆ ಇತರರಿಗೆ ಮಾದರಿಯಾಗಿದ್ದಾರೆ. ಅವರ ಅನುಪಮ ಸೇವೆ ಸದಾ ಮುಂದುವರಿಯಲಿ ಎಂದು ಕ್ಷೇತ್ರದ ಜನತೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ಅಂಬ್ಯುಲೆಸ್ಸ್ ಸೇವೆ ಹೇಗಿರುತ್ತದೆ. ದಿನದ 24 ಗಂಟೆ ನಗರ ವ್ಯಾಪ್ತಿಯಲ್ಲಿ ಉಚಿತವಾಗಿದ್ದು ಕ್ಷೇತ್ರವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ವಾಹನ ಚಾಲಕನಿಗೆ ಬ್ಯಾಟ ಹಾಗೂ ಕಿ.ಮೀ. ಲೆಕ್ಕದಂತೆ ಡೀಜೆಲ್ ಹಾಕಿಸಿದರೆ ಸಾಕು ಗರ್ಭಿಣಿ, ಬಾಣಂತಿ, ವಿಷಜಂತು, ತುರ್ತು ಚಿಕಿತ್ಸೆ. ಆಸ್ಪತ್ರೆಗೆ ದಾಖಲು ಹಾಗೂ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಹೋಗಲು ,ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟವರಿಗೂ ಸೇವೆ ನೀಡಲಿದೆ ಇದು ಕ್ಷೇತ್ರದ ಶಾಸಕ ಕೆ. ಸಿ. ವೀರೇಂದ್ರ (ಪಪ್ಪಿ) ಯವರ ಮಾರ್ಗದರ್ಶನದಲ್ಲಿ KCV GROUP’S ಚಿತ್ರದುರ್ಗ ಇವರ ವತಿಯಿಂದ ಸಾರ್ವಜನಿಕರ ದಿನದ 24 ಗಂಟೆ ಸೇವೆ ನೀಡಲಿದ್ದೇವೆ ಎಂದು ಕೆ.ಸಿ.ವಿ ಗ್ರೂಫ್ ನ ಸೇವಕರು ಮಾಹಿತಿ ನೀಡಿದ್ದಾರೆ. ಈ ದೂರವಾಣಿ ಸಂಖ್ಯೆಗೆ 8971721565 – 9916267142 7483789387 – 7406661030 ಕರೆ ಮಾಡಿ ವಿಳಾಸ ತಿಳಿಸಿದರೆ ತಕ್ಷಣ ಸೇವೆ ನೀಡಲಿದ್ದಾರೆ ಈ ಸೇವೆಯನ್ನು ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಜನರು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ.

ಗುಡಿಸಲಿಗೆ ಬೆಂಕಿ ಬಿದ್ದ ನೊರಾಶ್ರಿತ ಕುಟುಂಬಕ್ಕೆ ಜಪಾನಂದಸ್ವಾಮಿಜಿ ನೆರವು.


ಚಳ್ಳಕೆರೆ ಸೆ.21.ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿಬಿದ್ದು ಅಪಾರ ನಷ್ಟವಾದ ಕುಟುಂಬಕ್ಕೆ ಜಪಾನಂದಸ್ವಾಮಿಗಳು ನೆರವು ನೀಡಿದ್ದಾರೆ.


ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರವಿನಾರಹಟ್ಟಿಯ ಭಾಗ್ಯಮ್ಮ ಮತ್ತು ಪಾಪಯ್ಯ ಇವರ ವಾಸದ ಗುಡಿಸಲು ಬುಧವಾರ. ಸಂಜೆ ಬೆಂಕಿ ಬಿದ್ದು ದವಸ ಧಾನ್ಯ.ಬಟ್ಟೆ .ಹಣ ಸುಮಾರು ,70ರಿಂದ80 ಸಾವಿರ ರೂ ನಷ್ಟವಾಗಿ ಕುಟುಂಬ ಬೀದಿಗೆ ಬೀಳುವಂತಾಗಿತ್ತು.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ರಾಮಕೃಷ್ಣ ಮಠದ ಜಪಾನಂದ ಸ್ವಾಮಿಗಳು ನಿರಾಶ್ರಿತ ಕುಟುಂಬಕ್ಕೆ .10 ಸಾವಿರ ರೂ ಬಟ್ಟೆ ಪಾತ್ರೆ, ದಿನಬಳಕೆ ವಸ್ತುಗಳನ್ನು, ಬೆಡ್‍ಶೀಟ್, ಸೊಳ್ಳೆ ಪರದೆ ಹಾಗೂ ಟಾರ್ಪಾಲುಗಳನ್ನು ತತ್‍ಕ್ಷಣ ಪರಿಹಾರವಾಗಿ ನೀಡಿರುತ್ತಾರೆ.ಅದೇ ರೀತಿ ನನ್ನಿವಾಳ ಗ್ರಾಪಂ ವತಿಯಿಂದ 5 ಸಾವಿರ ರೂಗಳಮ್ನು ಪರಿಹಾರವಾಗಿ ನೀಡಿದ್ದಾರೆ ಇನ್ನು ಹೆಚ್ಚಿನ ನೆರವು ನೀಡುವುದಾಗಿ ಜಪಾನಂದ ಸ್ವಾಮಿಗಳು ನಿರಾಶ್ರಿತ ಕುಟುಂಬಕ್ಕೆ ಅಭಯ ನೀಡಿದ್ದಾರೆ.

ವಿಶ್ರಾಂತ ನ್ಯಾಯಾಧೀಶ ಹೆಚ್.ಬಿಲ್ಲಪ್ಪ ನಿವಾಸದಲ್ಲಿ ಸತ್ಸಂಗ ಕಾರ್ಯಕ್ರಮ.


ಹೊಸದುರ್ಗ ಸೆ.12.ಪ್ರತಿಯೊಬ್ಬರೂ ಪ್ರೀತಿ, ವಿಶ್ವಾಸದಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು’ ಎಂದು ಜಪಾನಂದ ಮಹರಾಜ್ ಸ್ವಾಮೀಜಿ ಸಲಹೆ ನೀಡಿದರು.
ಹೊಸದುರ್ಗ ಭಗೀರಥ ನಗರದ ವಿಶ್ರಾಂತ ನ್ಯಾಯಮೂರ್ತಿಗಳಾದ ಶ್ರೀ ಎಚ್ ಬಿಲ್ಲಪ್ಪ ರವರ ಮನೆಯ ಆವರಣದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಿವೃತ್ತ ನ್ಯಾಯಾಧೀಶರ ಮನೆಯಲ್ಲಿ ಸುಂಧರವಾದ ಸತ್ಸಂಗ ಕೊಠಡಿಯನ್ನು ನಿರ್ಮಿಸಿರುವುದು ಶ್ಲಾಘನೀಯ. ಸತ್ಸಂಗದಲ್ಲಿ ಭಾಗವಹಿಸುವುದರಿಂದಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಮನಸ್ಸಿಗೆ ನೆಮ್ಮದಿ.ಶಾಂತಿದೊರೆಯುತ್ತದೆ. ಆಡಂಬರದ ಭಕ್ತಿಯಿಂದ ಯಾವುದೇ ಪ್ರಯೋಜನವಿಲ್ಲ. ಸತ್ಯದ ಹಾದಿಯಲ್ಲಿ ಸಾಗಬೇಕು. ಧರ್ಮದ ನಡೆಯಲ್ಲಿಯೇ ಪಯಣಿಸಬೇಕು. ಎಲ್ಲರಲ್ಲೂ ವಿವೇಚನಾ ಶಕ್ತಿ ಇದೆ. ಆದರೆ ಸಾವಿರಾರು ಬಗೆಯ ಮನಸ್ಸುಗಳ ನಡುವೆ ಹೊಂದಿಕೊಂಡು ಜೀವಿಸುವಾಗ ತಪ್ಪುಗಳು ಸಂಭವಿಸಬಹುದು. ಅಂತಹ ಸಂದರ್ಭದಲ್ಲಿ ಮನಸ್ಸನ್ನು ಗಟ್ಟಿ ಮಾಡಿಕೊಂಡು ಸಮಚಿತ್ತದಿಂದ ವರ್ತಿಸಬೇಕಿದೆ’ ಎಂದರು.
ಸಮಚಿತ್ತದಿಂದ ಬದುಕಲು ಏಕಾಗ್ರತೆಯ ಅವಶ್ಯಕತೆಯಿದೆ. ವಿಶ್ರಾಂತ ನ್ಯಾಯಮೂರ್ತಿ ಶ್ರೀ ಹೆಚ್ ಬಿಲ್ಲಪ್ಪ ರವರ ಅಹ್ವಾನದ ಮೇರೆಗೆ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಂತಾಗಿದೆ ಎಂದರು ನಿವೃತ್ತ ನ್ಯಾಯಾಧೀಶ ಹೆಚ್.ಬಿಲ್ಲಪ್ಪನವರ ಮನೆಯಲ್ಲಿ ಸುಂದರವಾದ ಆದ್ಯಾತ್ಮಿಕ ಕೇಂದ್ರ ಸ್ಥಾಪನೆ ಮಾಡಿದ್ದು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಂಡು ನೆಮ್ಮದಿಯ ಜೀವನ ನಡೆಸುವಂತೆ ತಿಳಿಸಿದರು. . ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಬಿಲ್ಲಪ್ಪ ಪ್ಪ ಮಾತನಾಡಿ ಶ್ರೀರಾಮಕೃಷ್ಣ ಸೇವಾಶ್ರಮದ ಅತ್ಯಂತ ನನಗೆ ನಿಕಟವರ್ತಿಗಳು ಹಾಗೂ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ಮತ್ತು ಶ್ರೀ ಶಾರದಾದೇವಿ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಗಳ ಕಾನೂನು ಹಾಗೂ ಆಡಳಿತಾತ್ಮಕ ವಿಚಾರಗಳ ಮುಖ್ಯ ಸಲಹೆಗಾರರಾಗಿ ಪೂಜ್ಯ ಸ್ವಾಮೀಜಿ ಜಪಾನಂದ ಜಿ ಮಹಾರಾಜರವರಿಗೆ ಎಲ್ಲ ರೀತಿಯ ಸಹಕಾರ ಮತ್ತು ಬೆಂಬಲವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಹೊಸದುರ್ಗದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸತ್ಸಂ ಗ ಕಾರ್ಯಕ್ರಮದ ಸ್ವಾಗತ ಮಾಡಿದರು. ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಮಹಾ ಮಾತೆ ಶ್ರೀ ಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರಿಗೆ ಪೂಜೆಯನ್ನು ಸಲ್ಲಿಸಿ ನ್ಯಾಯಮೂರ್ತಿಗಳು ಸತ್ಸಂಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ತಮ್ಮ ಸಿರಿ ಕಂಠದಿಂದ ಶುಶ್ರಾವ್ಯವಾಗಿ ಅನೇಕ ಭಕ್ತಿಗೀತೆಗಳನ್ನು ಹಾಗೂ ಗೌರವಾನ್ವಿತ ನ್ಯಾಯಮೂರ್ತಿಗಳ ಇಚ್ಛೆಯಂತೆ ಸ್ವಾಮಿ ವಿವೇಕಾನಂದರು ರಚಿಸಿದ ಸನ್ಯಾಸಿ ಗೀತೆಗಳನ್ನು ವೇದಘೋಷ ಹಾಗೂ ದಾಸರ ಪದಗಳನ್ನು ಸಹ ಹಾಡಲಾಯಿತು ಸತ್ಸಂಗ ಕಾರ್ಯಕ್ರಮದಲ್ಲಿ ಹಲವರು ಭಾವವಹಿಸಿದ್ದರು.

ಎಚ್ಚೆತ್ತುಕೊಂಡು ಜಾಗೃತರಾಗಿ ಸರ್ಕಾರದಿಂದ ಬರಬೇಕಾದ ಎಲ್ಲಾ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಜಪಾನಂದ ಜೀ ಮಹರಾಜರು .

ಚಳ್ಳಕೆರೆ ಸೆ.12.ಸರಕಾರಗಳು ಅವಶ್ಯಕತೆ ಇಲ್ಲದ ಕಾರ್ಯಕ್ರಮಗಳಿಗೆಕೋಟಿ ಕೋಟಿ ಹಣ ಸುರಿಯುತ್ತವೆ ಆದರೆ ದೇಶದ ಸಂಪತ್ತು ಗೋಮಾತೆ ಎಂದು ಕರೆಯುವ ಜಾನುವಾರುಗಳಿಗೆ ಹಾಗೂ ದೇವರ ಎತ್ತುಗಳಿಗೆ ಹಿಡಿ ಮೇವು ಕೊಡಲು ಸರಕಾರಗಳು ಮುಂದೆ ಬರುತ್ತಿಲ್ಲಎಂದು ಜಪಾನಂದ ಜೀ ಮಹರಾಜರು ವಿಷಾದಿಸಿದರು.

ನಗರದ ಹೊರವಲಯದ ಶ್ರೀ ಜಗಲೂರಜ್ಜ ಸ್ವಾಮಿಯ ದೇವಾಲಯದ ಬಳಿ ಇರುವ ಬುಡಕಟ್ಟು ಸಮುದಾಯದ ದೇವರ ರಾಸುಗಳಿಗೆ ಸುಧಾ ಮೂರ್ತಿ ಫೌಂಡೇಶನ್ .ರಾಮಕೃಷ್ಣ ಆಶ್ರಮ ಸಹಯೋಗದೊಂದಿಗೆ ಉಚಿತ ಮೇವು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇವರ ಹಸುಗಳಿಗೆ ಮೇವು ನೀಡಿ ಎಂದು ಸರ್ಕಾರಕ್ಕೆ ಈಗಾಗಲೇ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಇಲ್ಲಿನ ಬುಡಕಟ್ಟು ಸಮುದಾಯದ ಕಿಲಾರಿಗಳು ತಮ್ಮ ವಂಶ ಪಾರಂಪರ್ಯವಾಗಿ ಬಂದಿರುವ ದೇವರ ಹಸುಗಳನ್ನು ಸಾಕುವ ಕಾಯಕದಲ್ಲಿ ತೊಡಗಿದ್ದಾರೆ ಇಂತಹ ಕಿಲಾರಿಗಳು ತಮ್ಮ ಆಶ್ರಮಕ್ಕೆ ಬಂದು ದೇವರ ಹಸುಗಳು ಹಸಿವಿನಿಂದ ಬಳಲುತ್ತಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿವೆ ತಮಗೆ ಉಚಿತ ಮೇವು ವಿತರಿಸಬೇಕು ಎಂದು ಕೇಳಿಕೊಂಡರು ನಾನು ಈಗಾಗಲೇ ಚಳ್ಳಕೆರೆ ಮೊಳಕಾಲ್ಮೂರು ನಾಯಕನಹಟ್ಟಿ ಕೂಡ್ಲಿಗಿ ಸೇರಿದಂತೆ ಬರಪೀಡಿತ ಪ್ರದೇಶಗಳಲ್ಲಿ ಸುಮಾರು 280 ಟನ್ ನಷ್ಟು ಮೇವು ಉಚಿತವಾಗಿ ವಿತರಿಸಿದ್ದೇನೆ ಒಬ್ಬ ಸ್ವಾಮೀಜಿಯಾಗಿ ಶ್ರೀಮತಿ ಸುಧಾ ಮೂರ್ತಿಯವರ ಮೂರ್ತಿ ಫೌಂಡೇಶನ್ ಸಹಕಾರದೊಂದಿಗೆ ನಾನು ನನ್ನ ಕೈಲಾದಷ್ಟು ಮಟ್ಟಿಗೆ ಇದುವರೆಗೂ ಇಂತಹ ದೇವರ ಹಸುಗಳನ್ನು ಸಾಕುವ ಕಿಲಾರಿಗಳಿಗೆ ಸಹಾಯ ಮಾಡುತ್ತಾ ಬಂದಿದ್ದೇನೆ ಆದರೆ ಸರ್ಕಾರ ಇಂತಹ ಬರಪೀಡಿತ ಪ್ರದೇಶಗಳಲ್ಲಿಯೂ ಸಹ ದೇವರ ಹಸುಗಳಿಗೆ ಮೇವನ್ನು ವಿತರಿಸದೆ ಸ್ವಾಮೀಜಿಯವರು ನೀಡುತ್ತಿದ್ದರೆ ಅವರ ಬಳಿಯೇ ಹೋಗಿ ಕೇಳಿ ಎಂದು ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ರಾಜಕಾರಣಿಗಳು ಉದಾಸೀನದ ಮಾತುಗಳನ್ನು ಆಡುತ್ತಿರುವುದು ನೋವು ತರಿಸಿದೆ ಎಂದರು.

ಭಿಕ್ಷೆ ಬೇಡಿ ಮೇವು ವಿತರಣೆ
. ಈಗಾಗಲೇ ರಾಜ್ಯದ ಹಲವೆಡೆ ಮಳೆ ಬಾರದೆ ಬರದ ಛಾಯೆ ಆವರಿಸಿದೆ ಮೇವಿಗಾಗಿ ಹುಲ್ಲು ಎಲ್ಲಿಯೂ ದೊರೆಯುತ್ತಿಲ್ಲ ಆದರೂ ಕಿಲಾರಿಗಳು ತಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂಬ ದೃಷ್ಟಿಯಿಂದ ದೇವರ ಹಸುಗಳನ್ನು ಸಲಹುತ್ತಿದ್ದಾರೆ ಅವರ ಈ ನಿಸ್ವಾರ್ಥ ಕಾಯಕ ಕಂಡಾಗಿನಿಂದ ಭಿಕ್ಷೆ ಬೇಡಿ ಆದರೂ ಇವರಿಗೆ ಹುಲ್ಲು ತರಿಸುವ ಪ್ರಯತ್ನ ಮಾಡುತ್ತೇನೆ ಇದುವರೆಗೂ ನಾನು ಸರ್ಕಾರದ ಯಾವ ಸಚಿವರನ್ನು ಅಥವಾ ಅಧಿಕಾರಿಗಳನ್ನು ಮೇವು ವಿತರಿಸಿ ಎಂದು ಬೇಡಿಕೊಂಡಿಲ್ಲ ಮುಂದೆಯೂ ಸಹ ಬೇಡುವುದಿಲ್ಲ ಉತ್ತಮ ಮಳೆ ಬೆಳೆ ಆಗುವವರೆಗೂ ಈ ಕಿಲಾರಿಗಳ ಹಸುಗಳು ಹಸಿವಿನಿಂದ ಸಾಯಲು ಬಿಡದೆ ಸಾಧ್ಯವಾದಷ್ಟು ಮಟ್ಟಿಗೆ ಮೇವನ್ನು ವಿತರಿಸುವ ಪ್ರಯತ್ನ ಮಾಡಲಾಗುವುದು.


ಮುಂದಿನ ದಿನಗಳಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಆಂದೋಲನದ ರೂಪದಲ್ಲಿ ಕಾರ್ಯಕ್ರಮ ರೂಪಿಸಿ ಪಶುಸಂಪತ್ತನ್ನು ಉಳಿಸುವ ಕಾಯಕ ಮಾಡಲಾಗುವುದು ಕಿಲಾರಿಗಳು ಕೇವಲ ನನ್ನ ಮೇಲೆ ಅವಲಂಬಿತರಾಗದೆ ಎಚ್ಚೆತ್ತುಕೊಂಡು ಜಾಗೃತರಾಗಿ ಸರ್ಕಾರದಿಂದ ಬರಬೇಕಾದ ಎಲ್ಲಾ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು.

ಉಪನ್ಯಾಸಕ ಓಬಣ್ಣ ಮಾತನಾಡಿ ಚಳ್ಳಕೆರೆ ಸೇರಿದಂತೆ ಸುಮಾರು 130ಕ್ಕೂ ಹೆಚ್ಚು ತಾಲೂಕುಗಳಲ್ಲಿ ಮಳೆಬಾರದೇ ಬರ ಸಂಭವಿಸಿದ್ದು ಮನುಷ್ಯರಾದ ನಾವು ಎಲ್ಲಿ ಬೇಕಾದರೂ ಬದುಕಬಹುದು ಆದರೆ ಮೂಕ ಪ್ರಾಣಿಗಳ ಹಸಿವನ್ನು ನೀಗಿಸುವವರು ಯಾರು ಎಂದು ಪ್ರಶ್ನಿಸಿದರು.

ಪಶುಸಂಪನ್ಮೂಲವನ್ನು ಉಳಿಸುವುದು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿಯಾಗಿದೆ ಬುಡಕಟ್ಟು ಸಮುದಾಯದ ಕಿಲಾರಿಗಳು ಹಸುಗಳನ್ನು ಸಾಕುತ್ತಿರುವುದು ಇಂದು ನಿನ್ನೆಯದಲ್ಲ ಸುಮಾರು ವರ್ಷಗಳ ಇತಿಹಾಸವನ್ನು ಹೊಂದಿದೆ ಇಂದಿನ ಆಧುನಿಕತೆಯ ಬದಲಾದ ಪರಿಸ್ಥಿತಿಯಲ್ಲಿ ಹಸುಗಳನ್ನು ಸಾಕುವವರನ್ನು ಕೀಳಾಗಿ ಕಾಣುವುದರಿಂದ ಇಂತಹ ಕಾಯಕದಲ್ಲಿ ತೊಡಗುತ್ತಿರುವವರ ಸಂಖ್ಯೆ ವಿರಳವಾಗಿದೆ. ನಗರೀಕರಣದ ದೃಷ್ಟಿಯಿಂದ ಪರಿಸರ ನಾಶವಾಗಿ ಮೇವು ಸಿಗದೆ ಇಂತಹ ದೇವರ ಹಸುಗಳು ಅಸು ನೀಗುತ್ತಿವೆ ಸರ್ಕಾರ ಬರಪೀಡಿತ ಪ್ರದೇಶಗಳಲ್ಲಿ ಇಂತಹ ದೇವರ ಹಸುಗಳು ಸೇರಿದಂತೆ ಕಸಾಯಿಖಾನೆ ಸೇರುವ ಹಸುಗಳನ್ನು ರಕ್ಷಿಸಿ ಮೇವು ವಿತರಿಸಿದಾಗ ಮಾತ್ರ ಪಶು ಸಂಕುಲ ಉಳಿಯಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಶ್ರೀ ರಾಮಕೃಷ್ಣ ಸೇವಾಶ್ರಮದ ಕಾರ್ಯದರ್ಶಿ ಸಿಪಿ ಮಹೇಶ್ ಸಿದ್ದೇಶ್ ಕಿಲಾರಿಗಳಾದ ಸುರೇಶ್ ಪಾಲಯ್ಯ ಪಾಪಯ್ಯ ಕ್ಯಾಸಕ್ಕಿ ಪಾಪಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವೃದ್ದಾಶ್ರಮದಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ವೈದ್ಯ ದಂಪತಿಗಳು.


ಹಿರಿಯೂರು ಸೆ.,3 ತಾಲೂಕು ಬೀಮನ ಬಂಡೆ ಶುಭೋದಯ ವೃದ್ಧಾಶ್ರಮದಲ್ಲಿ ಡಾ. ಸಂಪತ್ ಕುಮಾರ್ ಮತ್ತು ಡಾ. ವಾಸಂತಿ ಸಂಪತ್ ಕುಮಾರ್ ವೈದ್ಯ ದಂಪತಿಗಳು ತಮ್ಮ 27ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಮಾರಂಭವನ್ನು ವೃದ್ಧಾಶ್ರಮದ ಆಶ್ರಮ ವಾಸಿಗಳೊಂದಿಗೆ ಊಟ ಮಾಡಿ , ಕೇಕ್ ಕಟ್ ಮಾಡಿ ಹಣ್ಣು ತಿಂದು ಸಂಭ್ರಮ ಪಟ್ಟು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಮಾತನಾಡಿ ಕುಟುಂಬಗಳಲ್ಲಿ ಹಿರಿಯರ ಬಗ್ಗೆ ಮಕ್ಕಳಲ್ಲಿ ಗೌರವ ಮೂಡಿಸುವ ಕೆಲಸವಾಗಬೇಕು.. ಇಲ್ಲವಾದಲ್ಲಿ ವೃದ್ಧಾಶ್ರಮಗಳು ಅನಿವಾರ್ಯವಾಗುತ್ತದೆ ಇಲ್ಲಿರುವ ವೃದ್ಧರಿಗೆ ಎಲ್ಲರೂ ಸಂಬಂಧಿಕರೇ… ಆದ್ದರಿಂದಲೆ ಎಲ್ಲಾ ಕಡೆಯಿಂದ ನಾಗರಿಕ ಬಂಧುಗಳು ವೃದ್ಧಾಶ್ರಮಗಳಲ್ಲಿ ಹುಟ್ಟಿದ ಹಬ್ಬ, ವಿವಾಹ ವಾರ್ಷಿಕೋತ್ಸವ ಇನ್ನಿತರ ಕಾರ್ಯಕ್ರಮಗಳನ್ನು ಆಚರಿಸಿಕೊಳ್ಳುತ್ತಿದ್ದಾರೆ.. ನೀವ್ಯಾರು ಒಂಟಿಗಳಲ್ಲ ನಿಮ್ಮೊಂದಿಗೆ ಸಮಾಜವನ್ನು ಬೆಸೆಯಲಾಗಿದೆ. ಆದ್ದರಿಂದ ನೀವು ಇರುವಷ್ಟು ದಿನ ಸಂತೋಷದಿಂದ ಸಂಭ್ರಮದಿಂದ ಆರೋಗ್ಯದಿಂದ ಇರಬೇಕು ರಾಗ ದ್ವೇಷ ಅಸೂಯಗಳನ್ನು ಮೂಲೆಗೆ ತಳ್ಳಿ ನಗುನಗುತ ನೂರಾರು ವರ್ಷ ಸುಖವಾಗಿ ಬಾಳಿರಿ ಎಂದು ಹಾರೈಸಿದರು ಈ ಸಂದರ್ಭದಲ್ಲಿ ಡಾ. ಸಂಪತ್ ಕುಮಾರ್ ಅವರ ಕುಟುಂಬ ವರ್ಗದವರು ಹಾಗು ಆಶ್ರಮದ ಮಹಾಂತೇಶ್,, ನಂದಕುಮಾರ್, ಗಿರೀಶ್ ಬಾಬು ತಾವರೆಕೆರೆ ಹಾಗೂ ಇತರರು ಪಾಲ್ಗೊಂಡಿದ್ದರು.

ಇನ್ಹರ್ ವ್ಹೀಲ್ ಕ್ಲಬ್ ವತಿಯಿಂದ ರಸ್ತೆಬದಿ ತರಕಾರಿ ವ್ಯಾಪಾರಿಗಳಿಗೆ ಬಿಸಿಲಿನಿಂದ ರಕ್ಷಣೆಗೆ ಛತ್ರಿವಿತರಣೆ


ಹಿರಿಯೂರು :
ನಗರದಲ್ಲಿ ಬಿಸಿಲು-ಮಳೆ ಯಾವುದನ್ನೂ ಲೆಕ್ಕಿಸದೇ ದುಡಿಯುತ್ತಿರುವ ಶ್ರಮಿಕ ರಸ್ತೆಬದಿ ವ್ಯಾಪಾರಿಗಳಿಗೆ ತರಕಾರಿ ವ್ಯಾಪಾರ ಮಾಡುವ ಸಂದರ್ಭದಲ್ಲಿ ಬಿಸಿಲು ಮಳೆ ಗಾಳಿಯಿಂದ ರಕ್ಷಿಸಿಕೊಳ್ಳಲು ಅನುಕೂಲವಾಗುವಂತೆ ವ್ಯಾಪಾರಿಗಳಿಗೆ ಛತ್ರಿಗಳನ್ನು ವಿತರಿಸಲಾಗುತ್ತಿದೆ ಎಂಬುದಾಗಿ ಇನ್ಹರ್ ವ್ಹೀಲ್ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ರಾಜೇಶ್ ಹೇಳಿದರು.
ನಗರದ ರಸ್ತೆಬದಿ ತರಕಾರಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಇನ್ಹರ್ ವ್ಹೀಲ್ ಕ್ಲಬ್ ವತಿಯಿಂದ ಛತ್ರಿಗಳನ್ನು ವಿತರಿಸಿ, ನಂತರ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಇನ್ಹರ್ ವ್ಹೀಲ್ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ರಾಜೇಶ್, ಶ್ರೀಮತಿ ಸೌಮ್ಯ ಪ್ರಶಾಂತ್, ಸ್ವರ್ಣಾರೆಡ್ಡಿ, ಹರಿತ ಸೇರಿದಂತೆ ನಗರದ ರಸ್ತೆಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.

ಮನೆಯಲ್ಲಿ ಸಾಕಿದ್ದ ಜಿಂಕೆ ಅರಣ್ಯಕ್ಕೆ

ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಾಯ್ಕಲ್ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಜಿಂಕೆಮರಿಯನ್ನು ಸಾಕಿರುವ ಬಗ್ಗೆ ಡಯಲ್ 112 ಗೆ ಕರೆ ಬಂದಿದ್ದು, ಕರೆಗೆ ಕೂಡಲೇ ಸ್ಪಂದಿಸಿದ ಹೊಯ್ಸಳ ವಾಹನ-02 ರ ಅಧಿಕಾರಿ & ಸಿಬ್ಬಂದಿಯವರುಗಳು ಸ್ಥಳಕ್ಕೆ ಭೇಟಿ ನೀಡಿ, ಆ ಸಾಕಿರುವ ಜಿಂಕೆಮರಿಯನ್ನು ಅರಣ್ಯಾಧಿಕಾರಿಯವರಿಗೆ ಒಪ್ಪಿಸಿರುತ್ತಾರೆ ಹಾಗೂ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿಯನ್ನು ತಿಳಿಸಿರುತ್ತಾರೆ.

ಸಮಾಜಕ್ಕಾಗಿ ಬದುಕಿದವರು ನಾರಾಯಣ ಗುರುಗಳು*ಬ್ರಹ್ಮಶ್ರೀ ನಾರಾಯಣಗುರು ಜಯಂತಿಯಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

ಚಿತ್ರದುರ್ಗ ಆ.31:
ಕೇರಳದ ಬಸವಣ್ಣ ಎಂದೇ ಪ್ರಖ್ಯಾತಿ ಪಡೆದ ಬ್ರಹ್ಮಶ್ರೀ ನಾರಾಯಣ ಗುರುಗಳು ತಮ್ಮ ಜೀವನವನ್ನು ಸಮಾಜಕ್ಕಾಗಿ ಮುಡಿಪಾಗಿಟ್ಟವರು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.
ನಗರದ ಚಳ್ಳಕೆರೆ ರಸ್ತೆಯ ಆರ್ಯ ಈಡಿಗರ ವಿದ್ಯಾರ್ಥಿ ನಿಲಯದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
“ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ದೊಡ್ಡ ಮಾತನ್ನು ನಾವೆಲ್ಲರೂ ಪಾಲಿಸಬೇಕಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಅಂದಿನ ಕಾಲದಲ್ಲಿ ಕೆಳಜಾತಿಯವರ ಮೇಲೆ ಆಗುತ್ತಿರುವ ದೌರ್ಜನ್ಯಗಳು, ಹೆಣ್ಣು ಮಕ್ಕಳ ಮೇಲೆ ವಿಧಿಸಿರುವ ನಿಬಂಧನೆಗಳನ್ನು ಅಹಿಂಸಾತ್ಮಕವಾಗಿ ವಿರೋಧಿಸಿ, ಮಾನವಕುಲ ಒಂದೇ ಎಂಬ ಸಿದ್ದಾಂತವನ್ನು ಸಮಾಜಕ್ಕೆ ನೀಡಿದವರು. ಇಂತಹ ಮಹನೀಯರ ವಿಚಾರಧಾರೆಗಳನ್ನು ಮುಂದಿನ ದಿನಗಳಲ್ಲಿ ಪಠ್ಯಪುಸ್ತಕದಲ್ಲಿ ಸೇರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಮಹನೀಯರ ಜಯಂತಿಗಳನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದು. ನಾರಾಯಣ ಗುರುಗಳ ವಿಚಾರಧಾರೆಗಳಿಗೆ ಪ್ರತಿಯೊಬ್ಬರು ಆಕರ್ಷಿತರಾಗುತ್ತಾರೆ. ಅವರು ಮೌನಕ್ರಾಂತಿಯ ಮೂಲಕ ಸಮಾಜದ ಅರಿವು ಮತ್ತು ಉತ್ತಮ ಸಂದೇಶಗಳನ್ನು ನೀಡಿ, ಸಮಾಜವನ್ನು ಪರಿವರ್ತನೆಗೆ ತಂದವರು ನಾರಾಯಣಗುರುಗಳು ಎಂದರು.
ಅನಿಬೆಸೆಂಟ್ ಅವರು ಹೇಳುವಂತೆ ಬ್ರಹ್ಮಶ್ರೀ ನಾರಾಯಣಗುರುಗಳು ಯೋಗದಲ್ಲಿ ಪತಂಜಲಿಗೆ ಸರಿಸಮಾನರು, ಜ್ಞಾನದಲ್ಲಿ ಶಂಕರಾಚಾರ್ಯರಿಗೆ ಸರಿಸಮಾನರು, ಅದೇ ರೀತಿಯಾಗಿ ಮಾನವೀಯತೆಯಲ್ಲಿ ಏಸುಕ್ರಿಸ್ತರಿಗೆ ಸರಿಸಮಾನರು. ಅಷ್ಟೋಂದು ದೀರ್ಘಜ್ಞಾನ ಹೊಂದಿದ ಮಹಾನ್ ವ್ಯಕ್ತಿಗಳಾಗಿದ್ದಾರೆ. ಸಾಮಾನ್ಯ ಮನುಷ್ಯರಾಗಿ ಜನ್ಮತಾಳಿ, ಸಂತ ಪದವಿಗೇರಿದವರು ನಾರಾಯಣಗುರುಗಳು ಎಂದರು.
ನಾರಾಯಣಗುರು ಅವರ ತತ್ವ ಮತ್ತು ವಿಚಾರಗಳನ್ನು ನಾವು ರೂಢಿಸಿಕೊಳ್ಳುವ ಮೂಲಕ ತಮ್ಮ ಮಕ್ಕಳಿಗೂ ತಿಳಿಸಬೇಕು. ಇಂತಹ ಮಹನೀಯರನ್ನು ಪಠ್ಯದ ಮೂಲಕ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಎಸ್‍ಆರ್‍ಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಈ. ಗಂಗಾಧರ್ ಉಪನ್ಯಾಸ ನೀಡಿ, ನಾರಾಯಣಗುರುಗಳು ಸಾಮಾಜಿಕ ಕಾಳಜಿಯುಳ್ಳವರಾಗಿದ್ದವರು. ಸಮಾಜದ ಅನಿಷ್ಠ ಪದ್ಧತಿ, ತಾರತಮ್ಯ, ಮೂಢನಂಬಿಕೆ, ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ್ದರು. ಶೋಷಣೆಯ ವಿರುದ್ಧ ಹಲವಾರು ಹೋರಾಟಗಳನ್ನು ನಡೆಸಿದರು ಎಂದು ಹೇಳಿದ ಅವರು, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಆರ್.ದಿಶಾ ವಿದ್ಯಾರ್ಥಿನಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ. ಮಲ್ಲಿಕಾರ್ಜುನ್, ಆರ್ಯ ಈಡಿಗರ ಸಮಾಜದ ಜಿಲ್ಲಾ ಅಧ್ಯಕ್ಷ ಹೆಚ್.ಜೀವನ್, ಕಾರ್ಯದರ್ಶಿ ಟಿ.ಮಂಜುನಾಥ್, ನಗರಸಭೆ ಸದಸ್ಯೆ ಅನುರಾಧ ರವಿಕುಮಾರ್, ಚಿತ್ರದುರ್ಗ ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಆರ್. ಶ್ರೀನಿವಾಸ್, ಚಳ್ಳಕೆರೆ ತಾಲ್ಲೂಕು ಆರ್ಯ ಈಡಿಗ ಸಮಾಜದ ಅಧ್ಯಕ್ಷ ರವಿಕುಮಾರ್, ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ವೆಂಕಟೇಶ್ ಸೇರಿದಂತೆ ಸಮಾಜದ ಮುಖಂಡರು ಇದ್ದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನೀಯ : ಜಿಲ್ಲಾಉಸ್ತುವಾರಿಸಚಿವರಾದ ಸುಧಾಕರ್


ಹಿರಿಯೂರು :
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ತ್ರೀಶಕ್ತಿ ಸಬಲೀಕರಣಕ್ಕೆ ಪಣತೊಟ್ಟಿದ್ದು, ಮಹಿಳೆಯರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಸಬಲೀಕರಣಗೊಳಿಸುವ ಜೊತೆಗೆ ಅವರ ಕುಟುಂಬಸ್ಥರ ಆರೋಗ್ಯ ಸುರಕ್ಷತೆ, ಶಿಕ್ಷಣಕ್ಕೂ ಸಹ ನೆರವಾಗುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.
ತಾಲ್ಲೂಕಿನ ಮಸ್ಕಲ್ ಮಟ್ಟಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್, ಸಾಮೂಹಿಕ ಶ್ರೀಸತ್ಯನಾರಾಯಣಸ್ವಾಮಿ ಪೂಜಾಸಮಿತಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಸತ್ಯನಾರಾಯಣ ಪೂಜೆ ಹಾಗೂ ನೂತನ ಒಕ್ಕೂಟದ ಪದಗ್ರಹಣ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ಸೆಂದಿಲ್ ಕುಮಾರ್, ಬಿ.ಸಿ.ಟ್ರಸ್ಟ್ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ, ಪಂಚಲಿಂಗೇಶ್ವರ ಕಾಲೇಜಿನ ಪ್ರಾಂಶುಪಾಲ ಶ್ರೀ ಡಾ.ವಿ.ವೀರಣ್ಣ, ಸಹಾಯಕ ಪ್ರಾಧ್ಯಾಪಕರಾದ ಡಾ.ಪ್ರಿಯ, ಮಸ್ಕಲ್ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಕೊಲ್ಲಮ್ಮ, ಜ್ಞಾನ ವಿಕಾಸ ಪ್ರಾದೇಶಿಕ ಯೋಜನಾಧಿಕಾರಿ ಶ್ರೀಮತಿ ರತ್ನ, ಸೇರಿದಂತೆ ಗ್ರಾಮದ ಮುಖಂಡರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಶಿಕ್ಷಣದ ಜೊತೆಜೊತೆಗೆ ಮೌಲ್ಯಗಳು, ಸಂಸ್ಕಾರ-ಸಂಸ್ಕತಿಯನ್ನು ಸಹಅಳವಡಿಸಿಕೊಳ್ಳಬೇಕು ಜಿಲ್ಲಾಉಸ್ತುವಾರಿ ಸಚಿವ ಡಿ.ಸುಧಾಕರ್ ರವರಿಂದ ಕರೆ


ಹಿರಿಯೂರು :
ಇಂದಿನ ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಜೊತೆಗೆ ಮೌಲ್ಯಗಳನ್ನು, ಸಂಸ್ಕಾರ-ಸಂಸ್ಕತಿಯನ್ನು ಸಹ ಅಳವಡಿಸಿಕೊಳ್ಳುವುದು ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದು ಹೊರಬರಬೇಕು, ಈ ನಿಟ್ಟಿನಲ್ಲಿ ಶ್ರೀರಂಗನಾಥ ಪಿಯು ಕಾಲೇಜು ಗುಣಮಟ್ಟ ಶಿಕ್ಷಣವನ್ನು ಕೊಡುವ ಮೂಲಕ ನಗರದಲ್ಲಿ ಹೆಸರುಮಾಡಿದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.
ನಗರದ ಶ್ರೀ ರಂಗನಾಥ ಪಿ.ಯು ಕಾಲೇಜಿನ ಆವರಣದಲ್ಲಿ ಭಾರತೀಯ ಎಜುಕೇಶನ್ ಮತ್ತು ಕಲ್ಚರಲ್ ಅಸೋಸಿಯೇಷನ್ ನಿಂದ 2023-24ನೇ ಸಾಲಿನ ಕ್ರೀಡೆ ಮತ್ತು ಸಾಂಸ್ಕೃತಿಕ ಹಾಗೂ ಸಿ.ಇ.ಟಿ ನೀಟ್, ಜೆ.ಇ.ಇ ತರಬೇತಿ ಕಾರ್ಯಾಗಾರ ಮತ್ತು ಪ್ರಥಮ ಪಿ.ಯು. ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಕಳೆದ ವರ್ಷ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಡಾಕ್ಟರ್ ಹಾಗೂ ಇಂಜಿನಿಯರ್ ವೃತ್ತಿಕೋರ್ಸ್ ಆಯ್ಕೆಮಾಡಿಕೊಳ್ಳಲು ಪಿಯುಸಿ ಶಿಕ್ಷಣದ ಜೊತೆಜೊತೆಗೆ ಸಿ.ಇ.ಟಿ ನೀಟ್, ಜೆ.ಇ.ಇ ತರಬೇತಿ ಸಹ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಕಾಲೇಜಿನ ಆಡಳಿತ ಮಂಡಳಿಗಳು ಆರಂಭದಿಂದಲೇ ತಮ್ಮ ಕಾಲೇಜಿನಲ್ಲಿಯೇ ವಿದ್ಯಾರ್ಥಿಗಳಿಗೆ ಈ ತರಬೇತಿ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂಬುದಾಗಿ ಹೇಳಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾಕ್ಟರ್ ಶ್ರೀಶ್ರೀಬಸವರಮಾನಂದಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಆರಂಭದಿಂದಲೇ ಸತತ ಅಭ್ಯಾಸ ಮಾಡುವ ಮೂಲಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು, ಓದಿದ ಶಾಲೆಗೆ ಹೆತ್ತ ತಂದೆತಾಯಿಗಳಿಗೆ ಕೀರ್ತಿ ತರಬೇಕು ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ವೀರಕರಿಯಪ್ಪ, ಆಯುರ್ವೇದ ಯೋಗ ತಜ್ಞ ಡಾ.ಗುರು ಬಸವರಾಜ್ ಯಲಗಚ್ಚಿನ, ಕೆಪಿಸಿಸಿ ಸದಸ್ಯ ಎ.ಎಂ.ಅಮೃತೇಶ್ವರಸ್ವಾಮಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ನಂದಿನಿ ಗೌಡ,ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಲ್ಲಟ್ಟಿ ತಿಪ್ಪೇಸ್ವಾಮಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ಜಯ ರಮೇಶ್, ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಈರಲಿಂಗೇಗೌಡ, ಜಿಲ್ಲಾ ಪಂ. ಮಾಜಿ ಸದಸ್ಯ ನಾಗೇಂದ್ರ ನಾಯಕ್, ನಗರಸಭೆ ಮಾಜಿ ಅಧ್ಯಕ್ಷ ಶಿವರಂಜಿನಿ, ಎಂ.ಡಿ.ಸಣ್ಣಪ್ಪ, ಕಾಂಗ್ರೆಸ್ ಮುಖಂಡರಾದ ಪಿ.ಕೃಷ್ಣಮೂರ್ತಿ, ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು.

You cannot copy content of this page