ಸಾಮಾಜಿಕ

ಸರಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡಿದ ಸಮಾಜಸೇವಕ ಹೆಗ್ಗೆರೆ ಎಸ್.ಜಯಣ್ಣ.


ಚಳ್ಳಕೆರೆ ಜನಧ್ವನಿ ವಾರ್ತೆ ಜೂ.28 ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವಂತೆ ಸಮಾಜ ಸೇವಕ , ರಾಘವೇಂದ್ರೆಂಟರ್ ಪ್ರೈಸಸ್ ಹೆಗ್ಗೆರೆಎಸ್.ಜಯಣ್ಣ ಕಿವಿಮಾತು ಹೇಳಿದರು.
ತಾಲೂಕಿನ ಗೋಪನಹಳ್ಳಿ,ಹೆಗ್ಗೆರೆ,ಸಾಣಿಕೆರೆ,ಕಾಪರಹಳ್ಳಿ, ಜಡೆಕುಂಟೆ, ಗೊರ್ಲತ್ತು, ಕಲಮರಹಳ್ಳಿ, ಚಿಕ್ಕೇನಹಳ್ಳಿ,ರೆಡ್ಡಿಹಳ್ಳಿ, ಗ್ರಾಮಗಳ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ನೇತರಗತಿಯವರೆಗೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಿಸಿ ಮಾತನಾಡಿದರು.
ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಬಿಸಿಯೂಟ, ಶೂ, ಸಮವಸ್ತ್ರ, ಮೊಟ್ಟೆ , ಹಾಲು, ಬಾಳೆಹಣ್ಣು, ರಾಗಿಮಾಲ್ಟ್, ಉಚಿತ ಪಠ್ಯ ಪುಸ್ತಕಗಳನ್ನು ನೀಡುತ್ತಿದ್ದು ಪಾಲಕರು ತಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡುವುದರ ಮೂಲಕ ಶಿಕ್ಷಣ ಕೊಡಿಸಲು ಮುಂದಾಗಬೇಕು. ಗುರುಗಳು ಹೇಳಿ ಕೊಟ್ಟ ಪಾಠವನ್ನು ಅರ್ಥಮಾಡಿಕೊಂಡು ಚನ್ನಾಗಿ ಓದಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆ ಹಾಗೂ ಪೋಷಕರಿಗೆ ಕೀರ್ತಿ ತರುವಂತಾಗ ಬೇಕು ಎಂದು ತಿಳಿಸಿದರು.
ಕ್ಷೇತ್ರಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾತನಾಡಿ ಸರಕಾರಿ ಶಾಲೆಗಳಲ್ಲಿ ಬಡ ಕುಟುಂಬದ ಮಕ್ಕಳು ವ್ಯಾಸಂಗ ಮಾಡುವುದರಿಂದ ಸಂಘ ಸಂಸ್ಥೆ, ಸರಕಾರಿ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ಸೇರಿದಂತೆ ದಾನಿಗಳು ನೆರವು ನೀಡಿದಾಗ ಮಾತ್ರ ಸರಕಾರಿ ಕನ್ನಡ ಶಾಲೆಗಳು ಉಳಿಯಲು ಸಾಧ್ಯ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ತಿಳಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ರಾಧಮ್ಮ, ಹೆಗ್ಗೆರೆ ರಾಮಚಂದ್ರಪ್ಪ ಮುಖ್ಯ ಶಿಕ್ಷಕ ಹೊನ್ನೂರಪ್ಪ ಸಹ ಶಿಕ್ಷಕರು ಉಪಸ್ಥಿತರಿದ್ದರು.

ಕೊರಟಗೆರೆ,- ನಿರಾಶ್ರಿತ ಕುಟುಂಬಗಳಿಗೆ ಅಗತ್ಯ ಪರಿಕರವಿತರಿಸಿ ನೆರವಾದ ಶ್ರೀಜಪಾನಂದಸ್ವಾಮೀಜಿ.


ಕೊರಟಗೆರೆ ಏ.28 ಆಕಸ್ಮಿಕ ಬೆಂಕಿತಗುಲಿ ತಾಲೂಕಿನ ಹೊಲವನಹಳ್ಳಿ ಹೋಬಳಿ ಸುಟ್ಟು ಕರಕಲಾದ ನಿರಾಶ್ರಿತ ಕುಟುಂಬಗಳಿಗೆ ನೆರವು ನೀಡಿದ ಸಂತ ಶ್ರೀಜಪನಾಂದಸ್ವಾಜಿ. ಕೊರಟಗೆರೆ ತಾಲೂಕಿನ ಹೂಲವನಹಳ್ಳಿ ಗ್ರಾಮದಲ್ಲಿ ಏ 26 ರಂದು ಲೋಕಸಭಾ ಚುನಾವಣೆ ಮತಚಲಾಯಿಸಲು ದೋದ ಸಂದರ್ಭದಲ್ಲಿ ಗುಡಿಸಲಿಗೆ ಬೆಂಕಿ ಬಿದ್ದ ಕಾರಣ 11ಗುಡಿಸಲು ಬಸ್ಮವಾಗಿದ್ದು ದಿ‌ನ ಬಳಕೆಯ ದವಸ ಧಾನ್ಯ.ಬಟ್ಟೆ.ಪಾತ್ರೆ ಸೇರಿದಂತೆ ಅಗತ್ಯ ಸಾಮಾಗ್ರಿಗಳು ಸುಟ್ಟು ಕರಕಲಾಗಿದ್ದು ಕುಟುಂಬಗಳು ಬೀದಿಗೆ ಬೀಳುವಂತಾಗಿತ್ತು.

ಸುಮಾರು 30 ಲಕ್ಷಕ್ಕೂ ಮಿಗಿಲಾದ ನಷ್ಟ ಉಂಟಾಗಿದ್ದು ಜರಪರಿಸ್ಥಿತಿ ಅತ್ಯಂತ ದಾರುಣವಾಗಿದ್ದು ಈ ಸ್ಥಿತಿಯನ್ನು ಹಿರಿಯರು ಹಾಗೂ ಮಾಧ್ಯಮ ಮಿತ್ರರು ಕೊರಟಗೆರೆ ರವರು ದೂರವಾಣಿ ಯಲ್ಲಿ ಪೂಜ್ಯ ಸ್ವಾಮಿ ಜಪನಂದಾಜಿ ರವರಿಗೆ ತಿಳಿಸಿದಾಕ್ಷಣ ಸ್ವಾಮೀಜಿ ರವರು ಭಾನುವಾರ ಮುಂಜಾನೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ನಿರಾಶ್ರಿತರ ಕುಟುಂಬಗಳಿಗೆ ಪಾತ್ರೆ, ಬಟ್ಟೆಗಳು, ಬೆಡ್ಶೀಟ್ ಗಳು, ಸೋಲಾರ್ ಲೈಟ್, ಬಕೇಟ್ಗಳು, ಸೀರೆ, ಪಂಚೆ, ಟವೆಲ್, ಅಕ್ಕಿ, ಬೇಳೆ, ಸಕ್ಕರೆ, ಸಾಂಬಾರು ಪದಾರ್ಥಗಳು, ದೊಡ್ಡಸೈಜ್ ತಾರ್ಪಲು, ಸೊಳ್ಳೆಪರದ್ದೆ,ಬಿಂದಿಗೆ, ಕೈಪಾತ್ರೆ ಅಗತ್ಯ ಸಾಮಾಗ್ರಿಗಳನ್ನು ವಿತರಿಸಿದರು. ಸ್ಥಳೀಯ ಜನರು,ಮುಖಂಡರು ಪೂಜ್ಯ ಸ್ವಾಮಿ ಜಪಾನಂದಾಜಿ ಮಹಾರಾಜರಿಗೆ ನೇರವಾದರು ಮತ್ತೂ ಅನೇಕ ವರುಷಗಳಿಂದ ಪೂಜ್ಯರ ಕಾರ್ಯಯೋಜನೆಗಳು ಕೊರಟಗೆರೆ, ಮಧುಗಿರಿ ಮುಂತಾದ ತಾಲೂಕಗಳಿಗೆ ಸದಾ ದೊರೆಯುತ್ತಿರುವುದನ್ನು ಮುಕ್ತ ಕಂಠದಿಂದ ಶ್ಲಾಗಿಸಿ ಗೌರವಿಸಿದರು. ಸಂತ್ರಸ್ತರು ಮಾತನಾಡಿ ಪೂಜ್ಯರ ಸಮ ಯೋಚಿತ ಸೇವಾಯಜ್ಞವನ್ನು ತಾವೆಂದುಮರೆಯಲಾರೆವು ಎಂದು ತಮ್ಮ ಕೃತಜ್ಞತೆಗಳನ್ನು ಸಮರ್ಪಿಸಿದರು.

ಜಾನುವಾರುಗಳಿಗೆ ಉಚಿತ ಮೇವು ನೀಡುವ ಜತೆಗೆ ಪಕ್ಷಿಗಳ ದಾಹ ನೀಗಿಸಲು ಮುಂದಾದ ಸಂತ ಜಪಾನಂದಸ್ವಾಮೀಜಿ.

ಪಾವಗಡ ಜನಧ್ವನಿ ವಾರ್ತೆ ಏ 16 ತೀವ್ರ ಬರಗಾಲ ಎದುರಾಗಿ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಪ್ರಾಣಿ, ಪಕ್ಷಿಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ನೀರು ಒದಗಿಸುವ ಮೂಲಕ ಜಪಾನಂದಸ್ವಾಮೀಜಿಗಳು ಮಾನವೀಯತೆ ಮೆರೆದಿದ್ದಾರೆ.
ಹೌದು ಇದು ಪಾವಗಡ ನಗರದ ಹೊರವಲಯದಲ್ಲಿರುವ ಶ್ರೀರಾಮಕೃಷ್ಣಾಶ್ರಮ ಹಾಗೂ ಸುಧಾಮೂರ್ತಿಯವರ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನವಿಲುಧಾಮ, ಪ್ರಾಣಿ ಪಕ್ಷಿಗಳಿಗೆ ನೀರು, ಹಣ್ಣು ,, ಧಾನ್ಯ ವಿತರಿಸಿ ಮಾತನಾಡಿದರು.


ಮನುಷ್ಯನಿಗೆ ಬಾಯಾರಿಕೆಯಾದ ತಕ್ಷಣ ತಂಪು ಪಾನಿಯ , ಮಜ್ಜಿಗೆ , ಎಳೆನೀರು, ನೀರು ಸೇರಿದಂತೆ ವಿವಿಧ ಪಾನಿಯಾಗಳ ಮೊರೆಹೋಗುತ್ತಾರೆ ಆದರೆ ಪ್ರಾಣಿ ಪಕ್ಷಿಗಳಿಗೆ ಬಾಯಾರಿಕೆಯಾದರೆ ಯಾರನ್ನುಕೇಳ ಬೇಕು ನೀರು ಆಹಾರವಿಲ್ಲವೆಂದರೆ ಸಾವೇ ಗತಿ ಆದ್ದರಿಂದ ಸುಮಾರು ವರ್ಷಗಳಿಂದ ದೇವರ ಎತ್ತುಗಳಿಗೆ ಹಾಗೂ ರೈತರ ಜಾನುವಾರುಗಳಿಗೆ ಉಚಿತ ಮೇವು ವಿತರಣೆ ಹಾಗೂ ಮೇವು ಬ್ಯಾಂಕ್ ಮಾಡಿ ಗೋ ಸಂತತಿಯ ಉಳಿವಿಗಾಗಿ ಸರಕಾರ ಮಾಡದ ಕೆಲಸ ಸಂತ ಜಪಾನಂದಸ್ವಾಮೀಜಿ ಮಾಡಿಕೊಂಡು ಬರುವ ಜತಗೆ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಯ ತೀರಿಸುವ ಮೂಲಕ ಸಾಮಾಜಕ್ಕೆ ಮಾದರಿ ವ್ಯಕ್ತಿಯಾಗಿದ್ದಾರೆ
ಬೇಸಿಗೆಯಲ್ಲಿ ಟ್ಯಾಂಕರ್ ,ಮೂಲಕ ಮೂರು ದಿನಗಳಿಗೊಮ್ಮೆ ನೀರನ್ನು ಹಾಗೂ ಜೋಳ, ಬಾಳೆಹಣ್ಣು ಮತ್ತು ಇತರ ಧಾನ್ಯ ಕಾಳುಗಳನ್ನು ವಾರಕ್ಕೊಮ್ಮೆ ಒಂದು ಲೋಡು ಮೇವು ಹಾಗೂ ಮೂರು ದಿನಗಳಿಗೊಮ್ಮೆ ನವಿಲುಧಾಮಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗಾಗಿ ಹೊಂಡಕ್ಕೆ ನೀರನ್ನು ತುಂಬಿಸಲಾಗುತ್ತಿದೆ.
ಇದೇ ರೀತಿ ಅರಣ್ಯ ಇಲಾಖೆ ಹಾಗೂ ವಿವಿಧ ಸಂಘಟನೆಗಳು, ಸಾಮಾಜಸೇವಕರು ಸಹ ಅರಣ್ಯ ಪ್ರದೇಶದಲ್ಲಿ, ಗುಂಡಿ, ಹಾಗೂ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಟ್ಯಾಂಕರ್ ಮೂಲಕ ನೀರು ತುಂಬಿಸುವ ಕೆಲಸ ಮಾಡಿದರೆ ಪ್ರಾಣೀ ,ಪಕ್ಷಿಗಳ ಬಾಯಾರಿಕೆ ನೀರಿಸುವ ಜತೆಗೆ ಅವುಗಳ ಸಂತತಿಯೂ ಉಳಿಯಲು ಸಾಧ್ಯವಾಗುತ್ತದೆ.
ಬೇಸಿಗೆ ಬಂತೆಂದರೆ ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗುತ್ತದೆ. ಜಲಮೂಲಗಳು, ನೀರಿನ ಸಂಗ್ರಹಗಳು ಬರಿದಾಗಿ, ಜನಜಾನುವಾರು ಮತ್ತು ಪಕ್ಷಿಗಳು ನೀರಿನ ಸಮಸ್ಯೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.


ಬಿಸಿಲಿನ ತಾಪಕ್ಕೆ ಪ್ರಾಣಿ, ಪಕ್ಷಿಗಳು ನೀರನ್ನು ಆರಿಸಿ ಪರಿತಪಿಸುತ್ತಿವೆ. ಆಹಾರ ಸಿಗದೆ ಪರದಾಡುತ್ತಿವೆ. ಮಾನವೀಯತೆಯಿಂದ ಅವುಗಳ ರಕ್ಷಣೆಗೆ ಎಲ್ಲರೂ ಮುಂದಾಗ ಬೇಕಾಗಿದೆ. ಇದರಿಂದ ಅವುಗಳ ಸಂಕುಲ ಉಳಿಯುತ್ತವೆ.
. ಪಾವಗಡ ತಾಲ್ಲೂಕಿನ ಕೆ.ರಾಂಪುರ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯನ್ನು ಶ್ರೀ ರಾಮಕೃಷ್ಣ ಸೇವಾಶ್ರಮ ದತ್ತು ಪಡೆದಿದೆ ಹಾಗೂ ಪ್ರತೀ ವರ್ಷ ಶಾಲೆಗೆ ಬೇಕಾಗಿರುವ ಕಲಿಕಾ ಸಾಮಗ್ರಿಗಳು, ಸ್ಕೂಲ್ ಬ್ಯಾಗ್, ಪುಸ್ತಕಗಳು, ಊಟದ ತಟ್ಟೆ, ಕ್ರೀಡಾ ಸಾಮಾಗ್ರಿಗಳು ಇತ್ಯಾದಿಗಳನ್ನು ವಿತರಿಸಲಾಗುತ್ತಿದೆ. ಎಂದು ಜಪಾನಂದಸ್ವಾಮೀಜಿ ತಿಳಿಸಿದರು.
ವೈ.ಎನ್ ಹೊಸಕೋಟೆಯಲ್ಲಿ ರೈತರ ಜಾನುವಾರುಗಳಿಗೆ ಉಚಿತ ಮೇವು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಅಧ್ಯಕ್ಷ ನಾಗೇಶ್, ಶ್ರೀ ರಾಮಕೃಷ್ಣ ಸೇವಾಶ್ರಮದ ಕಾನೂನು ಸಲಹೆಗಾರ ಭಗವಂತಪ್ಪ , ಮಹೇಂದ್ರ ಹಾಗೂ ರೈತರು ಉಪಸ್ಥಿತರಿದ್ದರು.

ಈ ಸ್ವತ್ತು ಖಾತೆ ವಿಳಂಭ ಅಧಿಕಾರಿಗಳ ವಿರುದ್ದ ಕಿಡಿಕಾರಿದ ಶಾಸಕ ಕೆ.ಸಿ.ವೀರೇಂದ್ರಪಪ್ಪಿ

ಚಿತ್ರದುರ್ಗ ನಗರಸಭೆ ವ್ಯಾಪ್ತಿಯ ಜನರಿಗೆ ಆಸ್ತಿ ಈ ಸ್ವತ್ತು ನೀಡುವಲ್ಲಿ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು. ಚಿತ್ರದುರ್ಗ ನಗರಸಭೆ ಸಭಾಂಗಣದಲ್ಲಿ ನಡೆದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಕುರಿತಂತೆ ಸಭೆ ಕರೆಯಲಾಗಿತ್ತು.ಈ ವೇಳೆ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ನಗರಸಭೆ ಅಧಿಕಾರಿಗಳಿ ಶಾಸಕರು ಬಿಸಿಮುಟ್ಟಿಸಿದ್ದಾರೆ

ಈ ಸ್ವತ್ತು ನೀಡುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದೀರಿ ಅಂತಾ ಸಾರ್ವಜನಿಕರು ದೂರು ಹೇಳಿದ್ದಾರೆ. ಇನ್ನು ಹೆಚ್ಚು ಹಣ ಪಡೆಯುತ್ತಿದ್ದಾರೆ ಅಂತಾ ಹೇಳುತ್ತಿದ್ದಾರೆ. ವಿನಾಕಾರಣ ಈ ಸ್ವತ್ತಿಗೆ ಸಾರ್ವಜನಿಕರನ್ನು ಯಾಕೆ ಅಲೆದಾಡಸ್ತೀರಿ….? ನಿಗದಿತ ಸಮಯದಲ್ಲಿ ಅವರಿಗೆ ಈ ಸ್ವತ್ತು ಕೊಡುವ ವ್ಯವಸ್ಥೆ ಮಾಡಿ ಅಂತಾ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮೀಣ ಪ್ರದೇಶದಿಂದ ವಿವಿಧ ಸೌಲತ್ತು ಪಡೆಯಲು ಹಾಗೂ ವಿದ್ಯಾರ್ಥಿಗಳು ರೈತರು ನಗರಕ್ಕೆ ಬರುವ ಸಾರ್ವಜನಿಕರಿಗೆ ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ದಾಹ ತೀರಿಸಲು ಉಚಿತ ನೀರಿನ ಅರವಟಿಕೆ ಸ್ಥಾಪಿಸಲು ಮುಂದಾಗಿರುವುದು ಶ್ಲಾಘನೀಯ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ ಜನಧ್ವನಿ ಮಾ.4 ಗ್ರಾಮೀಣ ಪ್ರದೇಶದಿಂದ ವಿವಿಧ ಸೌಲತ್ತು ಪಡೆಯಲು ಹಾಗೂ ವಿದ್ಯಾರ್ಥಿಗಳು ರೈತರು ನಗರಕ್ಕೆ ಬರುವ, ಸಾರ್ವಜನಿಕರಿಗೆ ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ದಾಹ ತೀರಿಸಲು ಉಚಿತ ನೀರಿನ ಅರವಟಿಕೆ ಸ್ಥಾಪಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ತಾಲೂಕು ಕಚೇರಿ ಮುಂಭಾಗದ ಮುಖ್ಯ ರಸ್ತೆ ಬದಿಯ ಪಾದಚಾರಿ ರಸ್ತೆಯಲ್ಲಿ ನಾಯಕ ನೌಕರರ ಸಂಘದಿಂದ ಸಾರ್ವಜನಿಕರಿಗೆ ಆಯೋಜಿಸಿರುವ ಉಚಿತ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.


ಬೇಸಿಗೆ ಮುನ್ನವೇ ಬಿಸಿಲಿನ ತಾಪ ಹೆಚ್ಚಾಗಿದ್ದು ಜನ ಜಾನುವಾರಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಮುಂಜಾಗ್ರತೆ ಕ್ರಮ ವಹಿಸಿಲು ಹಾಗೂ ನೀರಿನ ಸಮಸ್ಯೆ ನೀಗಿಲು ತಾಲೂಕು ಕಚೇರಿಯಲ್ಲಿ ಸಹಾಯವಾಣಿ ತೆರೆದಿದೆ.
ಕೆಲ ವರ್ಷಗಳಿಂದ ನಾಯಕ ನೌಕರರ ಸಂಘ ಹಳ್ಳಿಯಿಂದ ಬಂದ ಜನರಿಗೆ ಕುಡಿವ ನೀರಿನ ಸಮಸ್ಯೆ ನೀಗಿದಲು ಅರವಟಿಕೆ ಪ್ರಾರಂಭಿಸುವ ಮೂಲಕ ನೀರಿನ ದಾಹ ನೀಗಿಸುತ್ತಿರುವುದು ಇದೇ ರೀತಿ ವರ್ತಕರು, ಹಲವು ಸಂಘ ಸಂಸ್ಥೆಗಳು ನಗರದ ಎಲ್ಲಾ ರಸ್ತೆಯ ಬದಿಯಲ್ಲಿ ಶುದ್ದಕುಡಿಯುವ ನೀರಿನ ಅರವಟಿಕೆಗಳನ್ನು ಪ್ರಾರಂಭಿಸಲು ಮುಂದಾಗುವಂತೆ ತಿಳಿಸಿದರು.
ನಾಯಕ ನೌಕರ ಜಿ.ಟಿ.ವೀರಭದ್ರಪ್ಪ ಮಾತನಾಡಿ, ಬೇಸಿಗೆ ಸಂದರ್ಭದಲ್ಲಿ ಮಳೆರ ಬರುವ ತನಕರ ನಾಯಕ ನೌಕರರ ಸಂಘದೆವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಸಹ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಯನ್ನು ಪ್ರಾರಂಭಿಸಿ ನೀರಿನ ದಾಹ ನೀಗಿಸಲು ಮುಂದಾಗಿದ್ದೇವೆ. ತಾಲೂಕು ಕಚೇರಿ, ಪೊಲೀಸ್ ಠಾಣೆ , ಉಪನೋಂದಾಣಾಧಿಕಾರಿಗಳ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸೇರಿದಂತೆ ಶಾಲಾ ಕಾಲೇಜುಗಳೀಗೆ ಹೋಗುವ ವಿದ್ಯಾರ್ಥಿಗಳ ಕುಡಿಯುವ ನೀರು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ಬಿಇಒ ಕೆ.ಎಸ್. ಸುರೇಶ್ ಸೇರಿದಂತೆ ನಾಯಕ ನೌಕರರ ಸಂಘದ ಪದಾಧಿಕಾರಿಗಳು ನೌಕಕರರು ಉಪಸ್ಥಿತರಿದ್ದರು.

ಕರಡಿ ಬಗ್ಗೆ ಆತಂಕ ಬೇಡ- ಕರಡಿ ದಾಳಿಗೆ ಸಿಲುಕಿ ಗಾಯಗೊಂಡ ಮಂಜಮ್ಮನ ಚಿಕಿತ್ಸೆ ವೆಚ್ಚ ಅರಣ್ಯ ಇಲಾಖೆ ನೀಡಲಿದೆ ಪ್ರಾದೇಶಿಕ ಅರಣ್ಯಾಧಿಕಾರಿ ಬಹುಗುಣ ಭರವಸೆ.


ಚಳ್ಳಕೆರೆ ಜನಧ್ವನಿ ವಾರ್ತೆ ಡಿ.24 ಗ್ರಾಮಸ್ಥರು ಕರಡಿಗಳ ಬಗ್ಗೆ ಯಾವುದೇ ಆತಂಕ ಬೇಡ ಅವುಗಳು ಒಂದೇ ಕಡೆವಾಸ ಮಾಡುವುದಲ್ಲಿ ಅವು ಸಂಚಾರಿಯಾಗಿರುತ್ತವೆ ಮತ್ತೊಮ್ಮೆ ಕರಡಿ ಕಾಣಿಸಿಕೊಂಡ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಪ್ರಾದೇಶಿಕ ಅರಣ್ಯಾಧಿಕಾರಿ ಬಹುಗುಣ ಗ್ರಾಮಸ್ಥರಿಗೆ ಅಭಯ ನೀಡಿದ್ದಾರೆ.


ಚಳ್ಳಕೆರೆ ತಾಲೂಕಿನ ಡೊಡ್ಡ ಉಳ್ಳಾರ್ತೆ ಗ್ರಾಮದ ಮಂಜಮ್ಮ ಎಂದಿನಳತೆ ಊರ ಹೊರಗೆ ರೊಪ್ಪದಲ್ಲಿ ಎರಡು ಸಿಂದಿ ಹಸುಗಳನ್ನು ಸಾಕಿದ್ದು ಬೆಳೆಗ್ಗೆ 6 ಗಂಟೆ ಸುಮಾರಿನಲ್ಲಿ ಹಾಲು ಕರೆಯಲು ಹೋದಾಗ ಕರಡಿ ಹಾಗೂ ಎರಡು ಮರಿಗಳೊಂದಿಗೆ ಸಂಚರಿಸುವಾಗ ಮಂಜಮ್ಮ ಕರಡಿನೋಡಿ ಕಿರುಕಿಕೊಂಡಾಗ ದಾಳಿ ನಡೆಸಿದೆ ಕರಡಿಗಳು ಏಕಾ ಏಕಿ ದಾಳಿ ನಡೆಸುವುದಿಲ್ಲ ಅವುಗಳನ್ನು ಗಾಬರಿ ಮಾಡಿದಾಗ ಅವುಗಳು ಮನುಷ್ಯರ ಮೇಲೆ ದಾಳಿ ನಡೆಸಲು ಮುಂದಾಗುತ್ತವೆ.
ಓಬಳಾಪುರ ಗ್ರಾಮದ ಸುತ್ತ ಮುತ್ತ ಕಡರಳಿಗಳಿವೆ ಹಾಗೂ ದೊಡ್ಡ ಉಳ್ಳಾರ್ತಿ ಬಾರ್ಕ್ ಅರಣ್ಯ ಪ್ರದೇಶದಲ್ಲಿ ಒಂದು ಕರಡಿ ಇದೆ ಮತ್ತೊಮ್ಮೆಕರಡಿಗಳು ಕಾಣಿಸಿಕೊಂಡರೆ ಬೋನ್ ಇಟ್ಟು ಅವುಗಳನ್ನಿಡಿಯಲಾಗುವುದು ಗ್ರಾಮಸ್ಥರು ಯಾವುದೇ ಆತಂಕ ಭೀತಿ ಪಡುವುದು ಬೇಡ ಕರಳಿಗಳು ಕಂಡ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಗ್ರಾಮಸ್ಥರಲ್ಲಿ ದೈರ್ಯ ತುಂಬಿದ್ದಾರೆ.


ನಂತರ ಜಿಲ್ಲಾಸ್ಪತ್ರೆಯಲ್ಲಿ ಗಾಯಗೊಂಡಿ ಚಿಕಿತ್ಸೆ ಪಡೆಯುತ್ತಿರುವ ಮಂಜುಳಮ್ಮನನ್ನು ಭೇಟಿ ನೀಡಿ ಮಾಹಿತಿ ಪಡೆದು ಮಹಳೆ ಹಾಗೂ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಆಸ್ಪತ್ರೆಯ ವೆಚ್ಚ ಎಷ್ಟೇ ಖರ್ಚಾಗಲಿ ಅರಣ್ಯ ಇಲಾಖೆ ಬರಿಸಲಿದೆ ಆಸ್ಪತ್ರೆಗೆ ವೆಚ್ಚ ಮಾಡಿದ ಬಿಲ್ ಗಳನ್ನು ಪಡೆಯಿರಿ ಒಂದು ವೇಳೆ ಚಿಕಿತ್ಸೆಗೆ ಇಲ್ಲಿ ಆಗದಿದ್ದರೆ ಎಲ್ಲೇ ಚಿಕಿತ್ಸೆಪಡೆದರೂ ಅದರ ಬಿಲ್ ನೀಡಿದರೆ ಚಿಕಿತ್ಸೆ ವೆಚ್ಚ ನೀಡಲಾಗುವುದು ನೀವು ಯಾವದೇ ಆತಂಕವನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಬೇಗನೇ ಗುಣ ಮುಖರಾಗಿ ಬರುವಂತೆ ಶುಭ ಹಾರೈಸಿದ್ದಾರೆ.
ಇದೇ ಸಂದರ್ಭದಲ್ಲಿ ವೈದ್ಯರನ್ನು ಭೇಟಿ ನೀಡಿ ಮಾಹಿತಿ ಪಡೆದಿದ್ದು ಮಹಿಳೆಗೆ ಯಾವುದೇ ಪ್ರಾಣ ಹಾನಿ ಇಲ್ಲ ಬೇಗನೇ ಗುಣಮುಖರಾಗುತ್ತಾರೆ ಆತಂಕ ಪಡುವ ಅಗತ್ಯ ವಿಲ್ಲ ಎಂದು ತಿಳಿಸಿದ್ದಾರೆ.

ತಮಿಳುನಾಡು ಚಂಡಮಾರುತ ನಿರಾಶ್ರಿತರಿಗೆ ಅಗತ್ಯ ದಿನಬಳಕೆ ವಸ್ತುಗಳ ವಿತರಣೆಗೆ ಶ್ರೀಜಪಾನಂದಸ್ವಾಮಿ ಸಿದ್ದತೆ.


ಪಾವಗಡ ಡಿ7 ತಮಿಳುನಾಡು ಚಂಡಮಾರುತದಿಂದ ಜಲಾವೃತಗೊಂಡ ನಿರಾಶ್ರಿತರಿಗೆ ಅಗತ್ಯ ದಿನಬಳಕೆ ವಸ್ತುಗಳನ್ನು ನೀಡಲು ಸಿದ್ದತೆ ಮಾಡಿಕೊಳ್ಳುತ್ತಿರುವ ಶ್ರೀ ಜಪಾನಂದಸ್ವಾಮಿಗಳು. ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡಕ್ಕೆ, ಕಳೆದ ಒಂದು ವಾರದಿಂದ ಏಕಪ್ರಕಾರವಾಗಿ ತಮಿಳುನಾಡಿನಿಂದ ಅದರಲ್ಲಿಯೂ ಮದ್ರಾಸ್ ಮಹಾನಗರದ ತಾಮ್ರಂ, ಏರ್ಪೋರ್ಟ್, ಮಲ್ಲಿಯಂಕರಣೆ, ಕಾಂಚಿಪುರಂ ,ಮುಂತಾದ ಪ್ರದೇಶಗಳಿಂದ ನಿರಂತರವಾಗಿ ದೂರವಾಣಿ ಕರೆ ಹಾಗೂ ಪತ್ರಗಳು ಬರುತ್ತವೆ . ಇದಕ್ಕೆ ಕಾರಣ ಈ ಹಿಂದೆ ಅಂದರೆ ಎರಡು ಸಾವಿರದ ಹದಿನೈದನೇ ಇಸವಿಯಲ್ಲಿ ಬಂದಂತಹ ಪ್ರಳಯ ಹಾಗೂ 2018ನೇ ಇಸ್ವಿಯಲ್ಲಿ ಬಂದಂತಹ ಗಜ ಚಂಡಮಾರುತದಲ್ಲಿ ಪೂಜ್ಯ ಸ್ವಾಮಿ ಜಪಾನಂದ ಜಿ ಅವರು ಕೈಗೊಂಡ ಪರಿಹಾರ ಕಾರ್ಯ ಇಂದಿಗೂ ಆ ಜನರು ಮರೆತಿಲ್ಲ .ಕೋಟ್ಯಾಂತರ ರೂಪಾಯಿಗಳ ಪರಿಹಾರ ಕಾರ್ಯವನ್ನು ಅನೇಕ ಸಂಘ ಸಂಸ್ಥೆಗಳ ಹಾಗೂ ಮುಖ್ಯವಾಗಿ ಇನ್ಫೋಸಿಸ್ ಫೌಂಡೇಶನ್ ರವರ ಸಹಕಾರದಿಂದ ಸಹಸ್ರ ಸಹಸ್ರ ಜನರಿಗೆ ನಿರಂತರವಾಗಿ ಆಪತ್ಬಾಂಧವರಾಗಿ ಶ್ರೀರಾಮಕೃಷ್ಣ ಸೇವಾಶ್ರಮ ಪಾವಗಡ ಕಾರ್ಯವೈಸಿದ್ದು, ಇಂದಿಗೂ ಆ ಜನರ ಹೃದಯದಲ್ಲಿ ಮತ್ತು ಮನದಲ್ಲಿ ಅಚ್ಚಳಿಯದೆ ಉಳಿದಿದೆ . ಈ ಕಾರಣದಿಂದ ಪೂಜ್ಯ ಸ್ವಾಮಿ ಜಪಾನಂದ ಜೀ ರವರನ್ನು ಮತ್ತೆ ಈ ಸೇವ ಕಾರ್ಯಗಳನ್ನು ಕೈಗೊಳ್ಳಬೇಕೆಂದು ವಿನಂತಿಸಿ ಕೊಂಡಿರುವ ಈ ಜನರಿಗೆ ಪೂಜ್ಯ ಸ್ವಾಮೀಜಿಯವರು ಅವರ ಆ ಕಷ್ಟವನ್ನು ನೋಡಲಾರದೆ ಮತ್ತೆ ಚಂಡಮಾರುತ ಪರಿಹಾರ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ತಾಮ್ರಮ್ ಹಾಗೂ ಚೆನ್ನೈ ಮಹಾನಗರದ ಲಯನ್ಸ್ ಕ್ಲಬ್ಬಿನ ಸ್ವಯಂಸೇವಕರಿಗೆ ಸೇವಾ ಕಾರ್ಯವನ್ನು ಮಾಡಬೇಕೆಂದು ತಿಳಿಸಿರುತ್ತಾರೆ. ಈ ಯೋಜನೆ ಬಹುಶಹ ಒಂದು ಕೋಟಿಯನ್ನು ದಾಟುವಂತಿದೆ ಈಗಾಗಲೇ ಪ್ರತಿಯೊಂದು ಕುಟುಂಬಕ್ಕೆ ಎಲ್ಲ ರೀತಿಯ ದಿನಸಿ ಅಕ್ಕಿ ಸಕ್ಕರೆ ರವೆ ಗೋಧಿಹಿಟ್ಟು ಬೇಳೆ ಮುಂತಾದವುಗಳ ಜೊತೆ ನೂತನ ವಸ್ತ್ರಗಳು, ಹೊದಿಕೆಗಳು ,ಇತ್ಯಾದಿಗಳನ್ನು ಅಣಿ ಮಾಡಲು ಪ್ರಾರಂಭಿಸಿದ್ದಾರೆ .ಚೆನ್ನೈ ಮಹಾನಗರದ ಇನ್ಫೋಸಿಸ್ ಸಂಸ್ಥೆಯ ಸ್ವಯಂಸೇವಕರು ಈ ಯೋಜನೆಯಲ್ಲಿ ಸಹಕಾರ ನೀಡಲಿದ್ದಾರೆ . ಪೂಜ್ಯ ಸ್ವಾಮೀಜಿಯವರು ಈ ಬಾರಿ ಸರಿಸುಮಾರು ನಾಲ್ಕು ಸಹಸ್ರ ಕುಟುಂಬದವರಿಗೆ ತತ್ ಕ್ಷಣದ ಸಹಾಯವನ್ನು ನೀಡಲು ಸಜ್ಜಾಗಿದ್ದು ಈಗಾಗಲೇ ಚೆನ್ನೈ ಮಹಾನಗರಕ್ಕೆ ಪ್ರಯಾಣ ಬೆಳೆಸಲು ತಯಾರಾಗಿದ್ದಾರೆ ತಮ್ಮ ಸ್ವಯಂಸೇವಕ ರ ತಂಡದೊಂದಿಗೆ ಈ ಮಹಾನ್ ಕಾರ್ಯವನ್ನು ಕೈಗೊಳ್ಳಲು ಧುಮುಕಿದ್ದಾರೆ, ಇದೇ ಅಲ್ಲವೇ ನಿಜವಾದ ಆಪದ್ಬಾಂಧವ ಎನಿಸಿಕೊಳ್ಳುವಂತಹ ತಂಡ ಈ ತಂಡದ ರೂವಾರಿಯಾಗಿರುವ ಪೂಜ್ಯ ಸ್ವಾಮಿ ಜಪಾನಂದಜಿಯರವರಿಗೆ ಎಲ್ಲ ಆಶ್ರಮದ ಹಿತೈಷಿಗಳು ಭಕ್ತರು ಹಾಗೂ ಬೆಂಗಳೂರಿನ ಮತ್ತು ಇತರ ನಗರಗಳ ಹಿತೈಷಿಗಳು ಸ್ವಯಂಸೇವಕರು ಸ್ವಾಮೀಜಿಯವರಿಗೆ ಬೆನ್ನೆಲುಬಾಗಿ ನಿಂತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು ಸ್ವಾಮಿ ವಿವೇಕಾನಂದರ ಸೇನಾನಿಯಾಗಿ ಸ್ವಾಮಿ ಜಪಾನಂದರು ಎಲ್ಲ ರೀತಿಯ ಕಷ್ಟಕಾರ್ಪಣ್ಯಗಳನ್ನು ಎದುರಿಸಿ ಸಹಸ್ತ್ರ ಸಹಸ್ರ ಜನರಿಗೆ ಸಹಾಯ ಹಸ್ತವನ್ನು ನೀಡಲು ಮುಂದಾಗುತ್ತಿರುವುದು ಸ್ವಾಮಿ ವಿವೇಕಾನಂದರ ಶಕ್ತಿ ಅಲ್ಲದೆ ಬೇರೇನೂ ಇಲ್ಲ ಎನ್ನಬಹುದು ಈ ಭಯಾನಕ ಹಾಗೂ ಅಪಾಯಕರವಾದ ಸ್ಥಿತಿಗಳನ್ನು ಸರಿಯಾದ ನಿದ್ರೆ ಊಟ ಮತ್ತಿತರ ವ್ಯವಸ್ಥೆಗಳನ್ನು ಪಕ್ಕಕ್ಕಿಟ್ಟು ಕಷ್ಟದಲ್ಲಿರುವ ಜನರ ಕೈ ಹಿಡಿದು ಮೇಲೆತ್ತುವ ಈ ಸನ್ಯಾಸಿಗೆ ,ಜನತೆ ,ಯುವಕರು ಹಾಗೂ ಸಾರ್ವಜನಿಕರು ಪೂರ್ಣ ಸಹಕಾರ ನೀಡಬೇಕೆಂದು ಆಶ್ರಮದ ಅಧಿಕಾರಿ ವರ್ಗದವರು ಮನವಿ ಮಾಡಿರುತ್ತಾರೆ . ಇದೇ ಸಂದರ್ಭದಲ್ಲಿ ಜೀವನಕ್ಕೆ ಅಪಾಯವಾಗುವಂತಹ ಪರಿಸ್ಥಿತಿಯಲ್ಲಿಯೂ ಸಹ ಪೂಜ್ಯ ಸ್ವಾಮೀಜಿಯವರು ಯಾವುದನ್ನು ಲೆಕ್ಕಿಸದೆ ಕಳೆದ 30 ವರ್ಷಗಳಿಂದ ಏಕಪ್ರಕಾರವಾಗಿ ಅಂದರೆ ಗುಜರಾತಿನ ಭೂಕಂಪದಿಂದ ಹಿಡಿದು ಸುನಾಮಿ ,ಗಜ, ಹಾಗೂ ಭಯಂಕರವಾದ ಕೋವಿಡ್ ಸಂದರ್ಭದಲ್ಲಿಯೂ ಆರು ರಾಜ್ಯಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದು, ಕೆಚ್ಚೆದೆಯ ಪೂಜ್ಯ ಸ್ವಾಮಿ ಜಪಾನಂದ ಜೇವರಿಗೆ ಅವರಿಗೆ ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಸಂಸ್ಥೆ ಹಾಗೂ ಇನ್ನಿತರ ಸಹೋದರ ಸಂಸ್ಥೆಗಳ ಪರವಾಗಿ ಎಲ್ಲ ಕಾರ್ಯಕರ್ತರು ಶುಭಾಶಯವನ್ನು ಕೋರಿದ್ದಾರೆ.

ಇಂದಿನ ಯುವಪೀಳಿಗೆ ನಾಡಿನ ಅಭ್ಯುದಯದ ಸಾಂಸ್ಕೃತಿಕ ರಾಯಭಾರಿಗಳು : ಶ್ರೀಮತಿ ಶಶಿಕಲಾ ರವಿಶಂಕರ್ ಹೇಳಿಕೆ


ಹಿರಿಯೂರು :
ಯುವ ಪೀಳಿಗೆಯನ್ನು ಸರಿದಾರಿಯಲ್ಲಿ ನಡೆಸುವ ಜವಾಬ್ದಾರಿ ಇಂದಿನ ಸಮಾಜದ್ದಷ್ಟೇ ಅಲ್ಲದೇ ಪೋಷಕರು ಹಾಗೂ ಶಿಕ್ಷಕರ ಮೇಲೆಯೂ ಇದ್ದು, ವಿದ್ಯಾರ್ಥಿಗಳು ಸಹ ಸ್ವಯಂ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು ಎಂಬುದಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರು, ಯುವರೆಡ್ ಕ್ರಾಸ್ ನ ಮುಖ್ಯಸ್ಥರಾದ ಶ್ರೀಮತಿ ಶಶಿಕಲಾ ರವಿಶಂಕರ್ ಹೇಳಿದರು.
ನಗರದ ಸರ್ಕಾರೀ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ರಾಷ್ಟ್ರೀಯ ಐಕ್ಯತಾ ದಿನಾಚರಣೆಯ ಅಂಗವಾಗಿ ಪ್ರಾಂಶುಪಾಲರಾದ ವಾಸುದೇವ್ ರವರ ಮಾರ್ಗದರ್ಶನದಲ್ಲಿ ನಡೆದ ಲಿಂಗವರ್ಗಜಾತಿ ಭೇದಗಳನ್ನು ತೊಡೆದು ಹಾಕಿ ಸಮಗ್ರ ಭಾರತದ ಐಕ್ಯಮತ್ಯ ಸಾಧಿಸುವ ಸಲುವಾಗಿ ರಾಷ್ಟ್ರೀಯ ಐಕ್ಯತಾ ದಿನ ಕಾರ್ಯಕ್ರಮದಲ್ಲಿ ಪ್ರಮಾಣ ವಚನವನ್ನು ಬೋಧಿಸಿ, ಅವರು ಮಾತನಾಡಿದರು.
ಉತ್ತಮ ಗುಣಮಟ್ಟದ ಶಿಕ್ಷಣ, ಉತ್ತಮ ಮಾನಸಿಕ ಹಾಗೂ ದೈಹಿಕ ಆರೋಗ್ಯ, ಸಮಾಜಮುಖೀ ಧನಾತ್ಮಕ ಆಲೋಚನೆಗಳನ್ನು ಹೊಂದಿರುವ ಧೃಢ ವ್ಯಕ್ತಿತ್ವದ ಇಂದಿನ ಯುವಪೀಳಿಗೆ ನಾಡಿನ ಅಭ್ಯುದಯದ ಸಾಂಸ್ಕೃತಿಕ ರಾಯಭಾರಿಗಳಾಗಿದ್ದು, ಈ ನಿಟ್ಟಿನಲ್ಲಿ ಯುವ ವಿದ್ಯಾರ್ಥಿ ಸಮೂಹ ಪಠ್ಯಕ್ರಮಗಳ ಜೊತೆಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡಾ ಸಕ್ರಿಯರಾಗಿರಬೇಕು ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಚೈತ್ರ, ಆರೋಗ್ಯ ಸಹಾಯಕರಾದ ವಿನಯ್ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ಪ್ರಾಂಶುಪಾಲರಾದ ಬಸವರಾಜ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ನವೀನ್ ಕುಮಾರ್, ಪವನ್, ರಮೇಶ್, ಸುಷ್ಮಾ, ಸವಿತಾ, ಚೇತನ್, ಇತರರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಶ್ವೇತಾರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಸರಕಾರಿ ಶಾಲೆಗೆ ರಾಷ್ಟ್ರನಾಯಕರ ಭಾವಚಿತ್ರಗನ್ನು ಕೊಡುಗೆ ನೀಡಿದ ಗ್ರಾಪಂ ಅಧ್ಯಕ್ಷ ವೆಂಕಟೇಶ್.


ಚಳ್ಳಕೆರೆ ನ.16 ನಾಡು ನುಡಿ.ಜಲ .ಭಾಷೆ ದೇಶ ಉಳಿವಿಗಾಗಿ
ದೇಶಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸಿದ ರಾಷ್ಟ್ರನಾಯಕರ ಸಂದೇಶಗಳನ್ನು ಮಕ್ಕಳು ಅನುಸರಿಸಬೇಕು ಎಂದು ಗ್ರಾಪಂ ಅಧ್ಯಕ್ಚ ಜಿ.ಎನ್ .ವೆಂಕಟೇಶ್ ಕಿವಿಮಾತು ಹೇಳಿದರು
ತಾಲೂಕಿನ ದೊಡ್ಡೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದೊಡ್ಢೇರಿ ಗ್ರಾಪಂ ಅಧ್ಯಕ್ಚ ಜಿ.ಎನ್.ವೆಂಕಟೇಶ್ ರಾಷ್ಟ್ರನಾಯಕರ ಪೋಟೊಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು. ಶಿಕ್ಷಕರು ಅವರಿಗೆ ರಾಷ್ಟ್ರ ನಾಯಕರು ದೇಶಕ್ಕಾಗಿ ತ್ಯಾಗ ಮಾಡಿದ ಇತಿಹಾಸವ್ನು ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ಬೋಧಿಸಬೇಕು ಎಂದು ಇದೇ ಸಂದರ್ಭದಲ್ಲಿ ಶಿಕ್ಷಕರಿಗೆ ಒತ್ತಿ ಹೇಳಿದರು.

ಮುಖ್ಯಶಿಕ್ಷಕ ನಾಗರಾಜ್ ಮಾತನಾಡಿ ದೇಶಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸಿದ ರಾಷ್ಟ್ರನಾಯಕರ ಸಂದೇಶಗಳನ್ನು ಮಕ್ಕಳಿಗೆ ತಿಳಿಸಲು ಈ ಭಾವ ಚಿತ್ರಗಳನ್ನು ಮಕ್ಕಳಿಗೆ ಸಹಕಾರಿಯಾಗಲಿವೆ ದಾನಿಗಳು ನೀಡಿದ ರಾಷ್ಟ್ರನಾಯಕರ ಪೋಟೋಗಳನ್ನು ರಕ್ಷಣೆ ಮಾಡುವ ಜತೆಗೆ ಅವರ ಇತಿಹಾಸ ಮಕ್ಕಳಿಗೆ ತಿಳಿಸಲಾಗುವುದು ಎಂದು ತಿಳಿಸಿದರು. ಸಿ ಆರ್ ಪಿ ರಾಧಾ ಶಾಲಾ ಸಹಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನಗರದಲ್ಲಿ ದೀಪಾವಳಿ ಹಬ್ಬದ ಸಡಗರ-ಸಂಭ್ರಮ ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವುಹಣ್ಣು ಬೆಲೆ


ಹಿರಿಯೂರು :
ನಮ್ಮ ಕರುನಾಡಿನ ಶ್ರೇಷ್ಠ ಹಬ್ಬಗಳಲ್ಲಿ ಒಂದಾದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಸಡಗರ–ಸಂಭ್ರಮಾ ನಗರದಲ್ಲಿ ಎಲ್ಲೆಲ್ಲೂ ಕಂಡು ಬಂದಿದ್ದು, ನಗರದ ಜನತೆ ಹಬ್ಬಕ್ಕಾಗಿ ಮಾರುಕಟ್ಟೆಯಲ್ಲಿ ಹಣ್ಣು-ಹಂಪಲು, ಹೂಗಳು ಸೇರಿದಂತೆ ಬಾಳೆಕಂದು, ಆಕಾಶಬುಟ್ಟಿ, ದೀಪಗಳು, ಪಟಾಕಿಗಳು ಹಾಗೂ ಹಣತೆಗಳನ್ನು ಕೊಂಡುಕೊಳ್ಳುತ್ತಿರುವ ದೃಶ್ಯ ಕಂಡುಬಂತು.
ಈ ದೀಪಾವಳಿ ಹಬ್ಬಕ್ಕಾಗಿ ಈ ಬಾರಿ ನಗರದ ನೆಹರೂ ಮಾರುಕಟ್ಟೆ ಆವರಣ, ಗಾಂಧಿಸರ್ಕಲ್, ಖಾಸಗಿಬಸ್ ಸ್ಟ್ಯಾಂಡ್, ನೆಹರೂ ಸರ್ಕಲ್, ಹುಳಿಯಾರು ರಸ್ತೆ, ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್, ಗುರುಭವನದ ಮುಂಭಾಗ ಸೇರಿದಂತೆ ಎಲ್ಲೆಲ್ಲೂ ಪುಟ್ ಪಾತ್ ತುಂಬೆಲ್ಲಾ ಹಣ್ಣು-ಹಂಪಲು, ಹೂಗಳು, ದೀಪಗಳು ರಾಶಿ ರಾಶಿ ಹಾಕಲಾಗಿದೆ.
ಈಗಾಗಲೇ ದಸರಾ ಹಬ್ಬ ಮುಗಿದ ನಂತರ ಕುಸಿದಿದ್ದ ಹೂವಿನ ಬೆಲೆ ಇದೀಗ ಚೇತರಿಸಿಕೊಂಡು ಗಗನಕ್ಕೆ ಏರಿಕೆಯಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಹೂವು, ಹಣ್ಣು, ತರಕಾರಿಗಳು ಬಾಳೆಕಂಬ, ಪೂಜಾಸಾಮಾಗ್ರಿಗಳ, ಬೆಲೆ ಏರಿಕೆಯಾಗಿದ್ದರೂ ಸಾರ್ವಜನಿಕರಲ್ಲಿ ಹಬ್ಬದ ಸಡಗರ ಸಂಭ್ರಮ ಕಡಿಮೆಯಾಗಿಲ್ಲ.
ಈ ದೀಪಾವಳಿ ಹಬ್ಬದಲ್ಲಿ ಪ್ರತಿಯೊಬ್ಬರ ಮನೆಯ ಮುಂದೆ ತಳಿರುತೋರಣಗಳಿಂದ ಸಿಂಗರಿಸಿ, ದೀಪಗಳನ್ನು ಬೆಳಗಿಸುವ ಮೂಲಕ ಮನೆಯಲ್ಲಿನ ಕತ್ತಲನ್ನು ದೂರಮಾಡಿ, ಬೆಳಕನ್ನು ಪಡೆಯುವ ಈ ಹಬ್ಬದಲ್ಲಿ ಮನೆಯ ಹಿರಿಯರು-ಕಿರಿಯರು ಹೊಸಬಟ್ಟೆ ಹಾಕಿಕೊಂಡು ಸಿಹಿ ಊಟ ಮಾಡಿ, ಪಟಾಕಿ ಸಿಡಿಸಿ, ಸುರುಸುರುಬತ್ತಿ, ಹೂಕುಂಡ, ಭೂಚಕ್ರಗಳನ್ನು ಹಚ್ಚುವ ಮೂಲಕ ಸಡಗರಸಂಭ್ರಮಗಳಿಂದ ಆಚರಿಸುವುದು ಈ ಹಬ್ಬದ ವಿಶೇಷವಾಗಿದೆ.

You cannot copy content of this page