ಸಾಮಾಜಿಕ ಮತ್ತು ಆರ್ಥಿಕ ಭದ್ರತಾ ಯೋಜನೆಯಡಿ ಮಾಶಾಸನ ಪಡೆಯುತ್ತಿರುವ ಚಳ್ಳಕೆರೆ ತಾಲ್ಲೂಕಿನ ಫಲಾನುಭವಿಗಳು ಕಡ್ಡಾಯವಾಗಿ ಅ.20 ರೊಳಗೆ ಪಿಂಚಣಿ ಜೋಡಣೆಯೊಂದಿಗೆ ಎನ್.ಪಿ.ಸಿ.ಐ. ಕಡ್ಡಾಯ ತಹಶೀಲ್ದಾರ್ ರೇಹಾನ್ ಪಾಷ.

by | 11/10/23 | ಆರ್ಥಿಕ

ಚಳ್ಳಕೆರೆ ಅ.11. ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಪಿಂಚಿಣಿದಾರರು ಅ.20ರೊಳಗೆ ಬ್ಯಾಂಕ್ ಖಾತೆ ಆಧಾರ್ ಲಿಂಕ್ ಹಾಗೂ ಎನ್ ಪಿ ಸಿ ಐ ಮಾಡಿಸುವಂತೆ ತಹಶೀಲ್ದಾರ್ ರೇಹಾನ್ ಪಾಷ ತಿಳಿಸಿದ್ದಾರೆ.
ಚಳ್ಳಕೆರೆ ತಾಲ್ಲೂಕಿನಲ್ಲಿ ಸಾಮಾಜಿಕ ಮತ್ತು ಆರ್ಥಿಕ ಭದ್ರತಾ ಯೋಜನೆಯಡಿ ಮಾಶಾಸನ
ಪಡೆಯುತ್ತಿರುವ ಚಳ್ಳಕೆರೆ ತಾಲ್ಲೂಕಿನ ಫಲಾನುಭವಿಗಳು ಕಡ್ಡಾಯವಾಗಿ :20-10-2023ರ ಒಳಗೆ ಪಿಂಚಣಿ
ಜೋಡಣೆಯೊಂದಿಗೆ ಎನ್.ಪಿ.ಸಿ.ಐ. ಕಡ್ಡಾಯವಾಗಿ
ಪಾವತಿಸುವ ಬ್ಯಾಂಕ್‌ಗಳಿಗೆ ತೆರಳಿ
ಮಾಡಿಸಿಕೊಳ್ಳುವ ಬಗ್ಗೆ ದಿ:10-10-2023ರ ಕಂದಾಯ ಸಚಿವರ ಸಭೆಯಲ್ಲಿ ನಿರ್ದೇಶನ ನೀಡಿರುವ
ಮೌಖಿಕ ಆದೇಶದಂತೆ ಮಾನ್ಯ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ. ಚಳ್ಳಕೆರೆ ತಾಲ್ಲೂಕಿನ ಸಾಮಾಜಿಕ ಭದ್ರತಾ ಯೋಜನಾಡಳಿಯಲ್ಲಿ ಇಂದಿರಾಗಾಂಧಿ
ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ನಿರ್ಗತಿಕ ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ ಮತ್ತು
ಮೈತ್ರಿ ಯೋಜನೆಯಡಿ ಮಾಶಾಸನ ಮಂಜೂರಾಗಿರುವ ಫಲಾನುಭವಿಗಳಿಗೆ ಮುಂದಿನ ತಿಂಗಳಿನಿಂದ
ಡಿ.ಬಿ.ಟಿ ಮೂಲಕ ಅವರು ನೀಡಿದ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ ಮಾಡುವುದರಿಂದ
ಪಿಂಚಣಿದಾರರು ಪಿಂಚಣಿಗೆ ನೀಡಿದ ತಮ್ಮ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಗಳಿಗೆ ತೆರಳಿ ಎನ್.ಪಿ.ಸಿ.ಎ
ಮ್ಯಾಂಪಿಂಗ್ ಮಾಡಿಸುವುದು, ಕೆಲವೊಂದು ಫಲಾನುಭವಿಗಳ ಆಧಾರ್ ಕಾರ್ಡ್‌ಗಳು ಹತ್ತು ವರ್ಷಗಳಿಗೊಮ್ಮೆ
ಆಫ್ ಡೇಟ್ ಮಾಡಿಸಬೇಕಿದ್ದಲ್ಲಿ ಹತ್ತಿರದ ನಿಮ್ಮ ಪೋಸ್ಟ್ ಆಫೀಸ್ / ಬ್ಯಾಂಕ್‌ಗಳಲ್ಲಿ ಆಧಾರ್ ಕಾರ್ಡ್
ಬಯೋಮೆಟ್ರಿಕ್ (ತಂಬ್ ಕೊಡುವುದು) ಮಾಡಿಸಿ ಆಧಾರ್‌ ಕಾರ್ಡ್‌ನ್ನು ಮತ್ತೊಮ್ಮೆ ಬ್ಯಾಂಕಿಗೆ ಲಿಂಕ್ ಮಾಡಿಸಿ
ಎನ್.ಪಿ.ಸಿ.ಐ ಮ್ಯಾಪಿಂಗ್ ಮಾಡಿಸುವುದು. ಫಲಾನುಭವಿಗಳ ಆಧಾರ್‌ ಸಂಖ್ಯೆಯನ್ನು ಪೋಸ್ಟ್/ಬ್ಯಾಂಕ್‌ಗಳಲ್ಲಿ
ಪೂರ್ಣ ಸಂಖ್ಯೆಯನ್ನು ಎಂಟ್ರಿ ಮಾಡದೆ ಇದ್ದಲ್ಲಿ ಆಧಾರ್ ಕಾರ್ಡ್ ಇನ್‌ವ್ಯಾಲಿಡ್ ಆಗಿರುತ್ತದೆ. ಅಂತಹ
ಪ್ರಕರಣಗಳನ್ನು ನಿಮಗೆ ಪಾವತಿಯಾಗುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ಗಳಲ್ಲಿ ಸರಿಪಡಿಸಿಕೊಂಡು
ಎನ್.ಪಿ.ಸಿ.ಐ ಮ್ಯಾಪಿಂಗ್‌ನ್ನು ಕಡ್ಡಾಯವಾಗಿ ದಿ:20-10-2023ರ ಒಳಗಾಗಿ ಮಾಡಿಸುವುದು.
ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಎನ್.ಪಿ.ಸಿ.ಐ ಮ್ಯಾಪಿಂಗ್ ಬಗ್ಗೆ ಹೆಚ್ಚಿನ ಮಾಹಿತಿ
ಬೇಕಿದ್ದಲ್ಲಿ ನಿಮ್ಮ ಫೀರ್ಕಾದ ಗ್ರಾಮಾಡಳಿತಾಧಿಕಾರಿ/ ಕಂದಾಯ ನಿರೀಕ್ಷಕರನ್ನು ಸಂಪರ್ಕ ಮಾಡಿ ಮಾಹಿತಿ
ಪಡೆದುಕೊಂಡು ಎನ್.ಪಿ.ಸಿ.ಐ ಮ್ಯಾಪಿಂಗ್ ಮಾಡಿಸುವುದು. ದಿ:20-10-2023ರ ಒಳಗೆ ನಿಮಗೆ ಪಿಂಚಣಿ
ಪಾವತಿಯಾಗುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಗೆ ತೆರಳಿ ಎನ್.ಪಿ.ಸಿ.ಐ ಮ್ಯಾಪಿಂಗ್ ಮಾಡಿಸದೇ
ಇದ್ದಲ್ಲಿ ನಿಮ್ಮ ಮಾಶಾಸನ ಸ್ಥಗಿತವಾದಲ್ಲಿ ಜಿಲ್ಲಾಡಳಿತ/ತಾಲ್ಲೂಕು ಆಡಳಿತ ಯಾವುದೇ ರೀತಿಯಲ್ಲಿ
ಹೊಣೆಯಾಗಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಹಶೀಲ್ದಾರ್ ರೇಹಾನ್ ಪಾಷ ತಿಳಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *