ಜನಧ್ವನಿ ಚಳ್ಳಕೆರೆ6 ರಾಷ್ಟ್ರೀಯ ಹೆದ್ದಾರಿ ಚಳ್ಳಕೆರೆ ಬೆಂಗಳೂರು ಮಾರ್ಗಗವಾಗಿ ಹೋಗುವರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 13 ಕಿ.ಮೀ ದೂರದಲ್ಲಿ ಸಿಗುವ ಸಾಣೀಕೆರೆಗ್ರಾಮ ಹತ್ತು ಹಲವು ವಿಶಿಷ್ಟ ಪಡೆದು ಕೂಡಿದ್ದು. ಪುರಾತನ ಇತಿಹಾಸ ಈ ಗ್ರಾಮದೊಂದಿಗೆ ತಳಕುಹಾಕಿಕೊಂಡಿದೆ. ಇಲ್ಲಿನ ಜನರರಿಂದ ಲಭ್ಯವಾಗುವ ಮಾಹಿತಿಗಳಿಂದ ಸ್ಥಳಿಯ ಪರಂಪರೆ ಅನಾವರಣಗೊಳ್ಳುತ್ತಾ ಹೋಗುತ್ತದೆ.
ಹಿನ್ನೆಲೆ
ಗ್ರಾಮದಲ್ಲಿ ನೆಲೆಸಿರುವ ಪ್ರಾಚೀನ ದೇವತೆ ಗಂಜಿಗುAಟಮ್ಮ ಈ ಭಾಗದ ಹತ್ತಾರು ಹಳ್ಳಿಗಳ ಭಕ್ತರನ್ನು ತನ್ನಡೆಗೆ ಸೆಳೆದುಕೊಂಡು ಅಪಾರ ಭಕ್ತ ಸಮುಹ ಹೊಂದಿದ್ದಾಳೆ ಇದಲ್ಲದೆ ಈ ಗ್ರಾಮ ಅನೇಕ ಐತಿಹಾಸಿಕ ಕುರುಗಳುಳ್ಳ ಕೋಟೆ, ಕೊತ್ತಲ, ಬುರುಜು ಬತೇರಿ, ಮಂಟಪಗಳು, ಉಯ್ಯಾಲೆ ಕಂಬ, ವೀರಗಲ್ಲು, ಸಪ್ತಮಾತೃಕೆಯರ(ಏಳುಮಂದಿ ಅಕ್ಕಮ್ಮ) ಕಲ್ಲುಗಳು ಇಲ್ಲಿನ ಇತಿಹಾಸಕ್ಕೆ ಕನ್ನಡಿ ಹಿಡಿಯುತ್ತಿವೆ.
ಸಾಣ Ãಕೆರೆ ಮಧ್ಯಭಾಗದಲ್ಲಿ ಸುಮಾರು ವರ್ಷಗಳ ಹಿಂದೆ ಬಂದು ನೆಲೆಸಿರುವ ಗಂಜಿಗುAಟಮ್ಮ ಗ್ರಾಮದ ಜನರ ಆರಾಧ್ಯ ದೇವತೆಯಾಗಿ ಇಂದಿಗೂ ಕಂಗೊಳಿಸುತ್ತಿದ್ದಾರೆ. ಈ ದೇವತೆ ಸಾಣೀಕೆರೆಗೆ ಬಂದು ನೆಲಸಿದ ಬಗ್ಗೆ ಯಾವುದೇ ಸ್ಪಷ್ಟ ಕುರುಗಳು ಇಲ್ಲವಾದರೂ ಹಿಂದಿನ ಕಾಲದ ಹಿರಿಯ ವಯಸ್ಕರು ಹೇಳುವ ಜನಪದ ಕತೆಗಳನ್ನು ಆಧರಿಸಿ ಗ್ರಾಮದ ಸಾಣ Ãಕೆರೆ ಸಾಹಿತಿ ಹಾಗೂ ಗ್ರಂಥಪಾಲಕ ಪತ್ರಿಕೆಗೆ ಮಾಹಿತಿ ನೀಡುತ್ತಾ ೨೫೦ ವರ್ಷಗಳ ಹಿಂದೆ ಸಾಣೀಕೆರೆಗೆ ಬಂದು ನೆಲೆಸಿದ್ದಾಳೆ ಎಂಬ ಮಾಹಿತಿ ನೀಡುತ್ತಾರೆ.
ದೇವಿಯ ಪೂರ್ವ ಇತಿಹಾಸದ ಕುರಿತು ಜನರಿಂದ ಮಾಹಿತಿ ಸಂಗ್ರಹಿಸಿದ ರಘು ಅನೇಕ ಜನಪದ ಕತೆಗಳನ್ನು ಹೇಳುತ್ತಾರೆ. ದೈವೀಸ್ವರೂಪಿ ದೇವಿಯು ಹೊಳೆಯಲ್ಲಿ ತೇಲುತ್ತಾ ಎಲ್ಲಿದಂಲೋ ಬಂದು ಸಾಣೀಕೆರೆ ಪಕ್ಕದ ಗಂಜಿಗುಂಟೆ ಗರಣಿ ಹಳ್ಳದ ದಡದಲ್ಲಿರುವ ಒಂದು ಪೊದೆಯಲ್ಲಿ ನೆಲೆಯೂರುತ್ತಾಳೆ. ದನಗಾಹಿ ಹುಡುಗರು ಹಳ್ಳದಲ್ಲಿ ನೀರು ಕುಡಿಸಲು ದನಗಳನ್ನು ಹೊಡೆದುಕೊಂಡು ಹೋದಾಗ ನಾನು ನಿಮ್ಮ ಜತೆ ಬರುತ್ತೇನೆ ಎಂಬ ವಿಚಿತ್ರ ದ್ವನಿಯೊಂದು ಕೇಳಿಸಿಕೊಂಡ ಹುಡುಗರು ಭಯಭೀತರಾಗಿ ಮನೆಯ ಹಿರಿಯರಿಗೆ ವಿಷಯ ತಿಳಿಸುತ್ತಾರೆ.
ಗಂಜಿ ಗುಂಟೆ ಗ್ರಾಮದ ಜಡಿಯಾರ ನಿಂಗಪ್ಪನ ಮಗನ ಕನಸಿನಲ್ಲಿ ಬಂದ ದೇವತೆ ನಿಮ್ಮ ಮನೆಗೆ ಬರುವುದಾಗಿ ಕೋರಿಕೊಳ್ಳುತ್ತಾಳೆ. ಅಂದಿನಿಂದ ಗಂಜಿಗುಂಟೆಯಲ್ಲಿದ್ದ ದೇವಿ ನಂತರದ ದಿನಗಳಲ್ಲಿ ಸಾಣ ಸಾಣೀಕೆರೆಯಲ್ಲಿ ಬಂದು ನೆಲೆಯೂರಿದಳು ಎಂಬ ಕತೆ ಕೇಳಿಬರುತ್ತದೆ. ಗಂಜಿಗುಂಟಮ್ಮ ದೇವಿಯನ್ನು ಕರಿಯಮ್ಮ ದೇವಿ ಎಂಬ ಹೆಸರಿನಿಂದಲೂ ಕರೆಯುವುದು ವಾಡಿಕೆಯಾಗಿದೆ. ಇಂತಹ ದೇವತೆಗೆ ಮೂರು ವರ್ಷಕೊಮ್ಮೆ ಸಾಣೀಕೆರೆ ಗ್ರಾಮಸ್ಥರು ಸೇರಿದಂತೆ ಸುತ್ತ ಮುತ್ತಲ ಹಳ್ಳಿಗಳ ಜನರು ದೊಡ್ಡ ಜಾತ್ತಾ ಮಹೋತ್ಸವ ನಡೆಸುತ್ತಾರೆ. ಒಂದು ವಾರಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಬುಡಕಟ್ಟು ಸಮುದಾಯದ ಅನೇಕ ಆಚರಣೆಗಳನ್ನು ಇಲ್ಲಿ ಮುಂದುವರಿಸಲಾಗುತ್ತಿದೆ.
ಜಾತ್ರೆ ಪ್ರಾರಂಭಕ್ಕೂ ಮುನ್ನ ದೇವಿಯನ್ನು ಗಂಜಿಗುಂಟೆ ಗರಣಿ ಹಳ್ಳಕ್ಕೆ ಕರೆದೊಯ್ದು ಹಳ್ಳದಲ್ಲಿ ಎರೆಡು ಚಿಲುಮೆ ತೋಡಿ ದೇವಿಗೆ ಗಂಗಾಸ್ಣಾನ, ಅಭಿಷೇಕ, ನಂತರ ಏಳು ಜನ ಈರಗಾರರು ಮತ್ತು ದೇವಿಯ ಪಟ್ಟದ ಪೂಜಾರಿ ಉಪವಾಸ ನಡೆಮುಡಿಯಲ್ಲಿ ಬಂದು ಮಧ್ಯರಾತ್ರಿಯಲ್ಲಿ ದೇವಿಯ ಅಗ್ನಿಕುಂಡದಲ್ಲಿ ನಡೆದು ಹೋಗುವುದು ರೋಮಾಂಚನವನ್ನುಂಟು ಮಾಡುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಸಾಣೀಕೆರೆ ಗ್ರಾಮದಲ್ಲಿ ನೆಲೆಸಿರುವ ಗಂಜಿಗುಂಟೆಮ್ಮ ಇತಿಹಾಸ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments