ಸಾಂಸ್ಕೃತಿಕ

ಕರ್ನಾಟಕ ಜ್ಯೋತಿ ರಥಯಾತ್ರೆ”: ಜುಲೈ 12 ರಂದು ಚಳ್ಳಕೆರೆ ನಗರದಲ್ಲಿ ಜಾನಪದ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆ ತಹಶೀಲ್ದಾರ್ ರೇಹಾನ್ ಪಾಷ.


ಚಳ್ಳಕೆರೆ ಜುಲೈ.9
ಕರ್ನಾಟಕ ಸಂಭ್ರಮ-50ರ ಅಂಗವಾಗಿ ರಾಜ್ಯಾಧ್ಯಂತ ಸಂಚರಿಸುತ್ತಿರುವ ಕರ್ನಾಟಕ ಜ್ಯೋತಿ ರಥಯಾತ್ರೆಯು ನಾಯಕನಹಟ್ಟಿ ಮಾರ್ಗವಾಗಿ ಜುಲೈ 12 ರ ಬೆಳಗ್ಗೆ 10 ಗಂಟೆಗೆ ನಗರ ದೇವತಿ ಶ್ರೀಚಳ್ಳಕೆರೆಮ್ಮ ದೇವಸ್ಥಾನ ಬಳಿ ಬರಮಾಡಿಕೊಳ್ಳಲಾಗುವುದು.


ರಥಯಾತ್ರೆಗೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಲಿದ್ದು ಪ್ರಮು ರಸ್ತೆಯ ಮೂಲಕ ನೆಹರು ವೃತ್ತ, ಅಂಬೇಡ್ಕರ್ ವೃತ್ತ, ವಾಲ್ಮೀಕಿ ವೃತ್ತದ ಮೂಲ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಮಾಡುವ ಮೂಲಕ ಪ್ರವಾಸಿ ಮಂದಿರದಿಂದ ಬೀಳ್ಕೊಡುವ ಮಾಡಲಾಗುವುದು.
ಕರ್ನಾಟಕ ಜ್ಯೋತಿ ರಥಯಾತ್ರೆಯಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಕನ್ನಡ ಪರ ಸಂಘಟನೆಗಳು, ರೈತರ ಸಂಘಟನೆ, ವಿದ್ಯಾರ್ಥಿಗಳು, ಅಂಗನಾಡಿ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಸಂಘಟನೆಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕರ್ನಾಟಕ ಜ್ಯೋತಿ ರಥಯಾತ್ರೆಯನ್ನು ಯಶಸ್ವಿಗೊಳಿಸುವಂತೆ ತಹಶೀಲ್ದಾರ್ ರೇಹಾನ್ ಪಾಷ ತಿಳಿಸಿದ್ದಾರೆ.

ಆರ್ಥಿಕವಾಗಿ ಸದಢರಾಗಲು ಸಂಘಟನೆ ಅತ್ಯವಶ್ಯ. ಸ್ತ್ರೀಯರು ಉಳಿತಾಯ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಸ್ವಾವಲಂಭಿ ಯಾಗಬೇಕು ನ್ಯಾಯವಾದಿ ಸುಮಲತ.

ಚಳ್ಳಕೆರೆ ಜನಧ್ವನಿ ವಾರ್ತೆ ಜೂ.30 ಚಳ್ಳಕ್ಕೆರೆ ತಾಲೂಕಿನ ಸಾಣೀಕೆರೆ ವಲಯದ ಗಂಜಿಗುಂಟೆ ಕಾರ್ಯಕ್ಷೇತ್ರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯಡಿ ರಚನೆಯಾಗಿರುವ ಭೂಮಿಕಾ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮ ನೆರವೇರಿತು.

ಸಂಪಂನ್ಮೂಲ ವ್ಯಕ್ತಿ ಹಾಗೂ ನ್ಯಾವಾದಿ ಸುಮಲತ ಮಾತನಾಡಿ ಆರ್ಥಿಕವಾಗಿ ಸದಢರಾಗಲು ಸಂಘಟನೆ ಅತ್ಯವಶ್ಯ. ಸ್ತ್ರೀಯರು ಉಳಿತಾಯ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಸ್ವಾವಲಂಭಿ ಯಾಗಬೇಕು. ಸ್ವಸಹಾಯ ಸಂಘದಲ್ಲಿರುವ ಸದಸ್ಯರು ಪರಸ್ಪರ ಸಹಕಾರ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಗ್ರಾಮ ಪಂಚಾಯತ್ ಸದಸ್ಯೆ ಶೈಲಮ್ಮ ದೀಪಾ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು ಕೇಂದ್ರ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.ಒಕ್ಕೂಟದ ಅಧ್ಯಕ್ಷೆ ಲತಾ ಜ್ಞಾನವಿಕಾಸ ಸಮನ್ವಧಿಕಾರಿ ಭವಾನಿ, ಸೇವಾಪ್ರತಿನಿಧಿ ಹೇಮಲತಾ ಹಾಗೂ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು

ಶಿಕ್ಷಣದ ಬಲವರ್ಧನೆಯಲ್ಲಿ ಮಹಿಳೆಯರ ಪ್ರಗತಿಪರ ಬದಲಾವಣೆ ಕಂಡುಕೊಳ್ಳಬೇಕಿದೆ ಎಂದು ಹಿರಿಯ ವಕೀಲ ಬಿ.ಕೆ. ರಹಮತ್‌ವುಲ್ಲಾ.


ಚಿತ್ರದುರ್ಗ ಮಾ.17
ಶಿಕ್ಷಣದ ಬಲವರ್ಧನೆಯಲ್ಲಿ ಮಹಿಳೆಯರ ಪ್ರಗತಿಪರ ಬದಲಾವಣೆ ಕಂಡುಕೊಳ್ಳಬೇಕಿದೆ ಎಂದು ಹಿರಿಯ ವಕೀಲ ಬಿ.ಕೆ. ರಹಮತ್‌ವುಲ್ಲಾ ಹೇಳಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಶನಿವಾರ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಗಾನಯೋಗಿ ಸಂಗೀತ ಬಳಗ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಮತ್ತು ತಿಂಗಳ ವಿಶೇಷ ವ್ಯಕ್ತಿ ಪರಿಚಯ, ಕವಿಗೋಷ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕುಟುಂಬ ನಿರ್ವಹಣೆ ಜಾಣ್ಮೆ ಇರುವ ಮಹಿಳೆಯರು ಸಾಕ್ಷರತರಾಗಿ ಬೆಳೆಯಬೇಕಿದೆ. ಉದ್ಯೋಗಸ್ಥರಾಗುವ ಮೂಲಕ ಸಮಾನ ಅವಕಾಶಗಳಲ್ಲಿ ಸ್ವಾವಲಂಬಿಗಳಾಗಿ ಭದ್ರತೆ ಕಂಡುಕೊಳ್ಳಬೇಕು. ಆಸ್ತಿಯಲ್ಲಿ ಸಮಾನ ಹಕ್ಕುದಾರರಾಗಿರುವ ಮಹಿಳೆಯರು ತಮ್ಮ ಇರುವ ಕಾನೂನಿನ ನಿಯಮಗಳನ್ನು ಸದುಪಯೋಗ ಮಾಡಿಕೊಳ್ಳುವಲ್ಲಿ ಜಾಗೃತರಾಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿ ಕರ‍್ಲಕುಂಟೆ ತಿಪ್ಪೇಸ್ವಾಮಿ, ಮಹಿಳೆಯರ ಪ್ರಗತಿಪರ ಬೆಳವಣ ಗೆಗೆ ಕುಟುಂಬದ ಕಟ್ಟುಪಾಡುಗಳಲ್ಲಿ ಸಡಿಲತೆ ಸಿಗಬೇಕು. ಬಸವಣ್ಣನವರ ಲಿಂಗಬೇಧ ತಾರತಮ್ಯ ಚಳುವಳಿ ಮತ್ತು ಅಂಬೇಡ್ಕರ್ ಅವರ ಸಮಸಮಾಜ ನಿರ್ಮಾಣ ನನಸಾಗಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟದ ನೆಲೆಯಲ್ಲಿ ಮಹಿಳಾ ಶಕ್ತಿ ಬೆಳೆಯಬೇಕು. ಸಂವಿಧಾನಬದ್ದ ಅವಕಾಶಗಳಲ್ಲಿ ಸಮಾನತೆ ಕಂಡುಕೊಳ್ಳುತ್ತಿರುವ ಮಹಿಳೆ ಸಂಘಟಿತವಾಗಬೇಕು. ರಾಜಕೀಯವಾಗಿ ಜಾರಿಯಾಗಿರುವ ಶೇ.೩೩ರಷ್ಟು ಮೀಸಲಾತಿ ಬಲಿಷ್ಠ ಕುಟುಂಬದ ಮಹಿಳೆಯರಿಗೆ ಸೀಮಿತವಾಗದಂತೆ ಜಾಗೃತವಹಿಸಬೇಕು. ಪುರುಷ ಪ್ರಧಾನ ಸಮಾಜದಲ್ಲಿ ಪ್ರಶ್ನೆ ಮಾಡುವ ಜಾಗೃತಿಯಲ್ಲಿ ತನ್ನ ಅಸ್ತಿತ್ವ ಕಾಪಾಡಿಕೊಳ್ಳಬೇಕು. ದೇಶದಲ್ಲಿ ಸಮರ್ಥವಾಗಿ ಆಡಳಿತ ಮಾಡಿದ ಇಂದಿರಾ ಗಾಂಧಿ, ರಾಷ್ಟçಪತಿ ಸ್ಥಾನ ಪಡೆದ ದ್ರೌಪದಿ ಮುರ್ಮ, ನಿರ್ಮಲಾ ಸೀತಾರಾಮನ್ ಸಾಧಕಿಯರ ಬದುಕಿನ ಅನುಕರಣೆ ಮಹಿಳೆಯರು ರೂಢಿಸಿಕೊಳ್ಳಬೇಕಿದೆ ಎಂದು ಹೇಳಿದರು.


ಉಪನ್ಯಾಸ ನೀಡಿದ ಕವಿಯತ್ರಿ ಶಬ್ರಿನಾ ಮಹಮ್ಮದ್ ಅಲಿ, ಮಹಿಳೆಯ ಪ್ರಗತಿಯಲ್ಲಿ ಸಮಾಜದ ಪ್ರಗತಿ ಕಾಣಬಹುದು ಎಂದಿರುವ ಅಂಬೇಡ್ಕರ್ ಅವರ ಆಶಯದಂತೆ ಮಹಿಳೆ ಜಾಗೃತವಾಗಬೇಕು. ಎಳೆ ಮಗುವಿನ ಸುಧಾರಣೆ ಮತ್ತು ಅಕ್ಷರ ತಿಳಿಸುವ ಹೃದಯವಂತಿಕೆ ಇರುವ ಮಹಿಳೆ ಅಂಗನವಾಡಿಯಲ್ಲಿ ಶಿಕ್ಷಕಿ ಸೇವೆ ಮಾಡುತ್ತಾಳೆ. ತೊಟ್ಟಿಲು ತೂಗುವ ಕೈ ಜಗತ್ತನ್ನು ಆಳಬಲ್ಲಳು ಎನ್ನುವುದಕ್ಕೆ ಇತಿಹಾಸದಲ್ಲಿ ಮಹಿಳೆಯ ಸಾಧನೆ ಕಾಣುತ್ತೇವೆ. ಸ್ವಯಂಪ್ರೇರಿತ ಶಕ್ತಿಯಲ್ಲಿ ತಮ್ಮ ಮೇಲಿನ ಹಲ್ಲೆ, ದೌರ್ಜನ್ಯ, ದಬ್ಬಾಳಿಕೆ ರಕ್ಷಣೆ ಮಾಡಿಕೊಳ್ಳುವ ರೀತಿಯಲ್ಲಿ ಮಹಿಳೆ ಬೆಳೆಯಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅನಾಥಾಶ್ರಮ ಸ್ಥಾಪನೆ ಮಾಡಿ ಸಮಾಜ ಸೇವೆ ಮಾಡುತ್ತಿರುವ ನಿವೃತ್ತ ಶಿಕ್ಷಕಿ ಎಸ್. ಮಂಜುಳ, ಚಿನ್ಮೂಲಾದ್ರಿ ಸಂಸ್ಥಾಪಕಿ ಆರ್. ದಯಾಪುತ್ತೂರ್ಕರ್ ಅವರನ್ನು ಅಭಿನಂದಿಸಲಾಯಿತು. ವೇದಿಕೆ ಅಧ್ಯಕ್ಷ ಡಾ.ಎಸ್.ಎಚ್. ಶಫೀವುಲ್ಲಾ, ಕೆ.ಟಿ. ಶಾಂತಮ್ಮ, ಸುಮಾರಾಜಶೇಖರ್, ಸೌಮ್ಯಪುತ್ರನ್ ಮತ್ತಿತರರು ಇದ್ದರು.


ಕವಿಗೋಷ್ಟಿಯಲ್ಲಿ ಮುರುಳಿ, ಸುಮರಾಜಶೇಖರ್, ಶೋಭಾ ಮಲ್ಲಿಕಾರ್ಜುನ್, ಕೆ.ಎಸ್. ತಿಪ್ಪಮ್ಮ, ಮಂಜಮ್ಮ, ಡಿ.ಎನ್. ಅನಿತಾ, ರಾಜೇಶ್ವರಿ, ಮೀರಾನಾಡಿಗ್, ಮೀನಾಕ್ಷಿ, ಉಷಾರಾಣ , ಸುಜಾತ, ನಿರ್ಮಲಾ, ಶಿವರುದ್ರಪ್ಪ, ತ್ರಿವೇಣ , ಅಶ್ವಿನಿ, ಜಯಶೀಲಾ, ನಾಗಲಾಂಭಿಕಾ, ಸತ್ಯಪ್ರಭಾ, ಜಿ.ಯು. ಹೇಮಲತಾ, ಕೆ.ಎಚ್. ಮಮತಾ, ಜಯಪ್ರಕಾಶ್, ಎಚ್. ನಾಗೇಂದ್ರಪ್ಪ, ಎಂ.ಜೆ. ಕೋಕಿಲಾ, ಅಶ್ವಿನಿ, ಗೀತಾಸಿಂಗ್, ಜ್ಯೋತಿ ಕವಿತಾ ವಾಚನ ಮಾಡಿದರು.

ದೇವರಮರಿಕುಂಟೆ ಗ್ರಾಮದಲ್ಲಿ ಮೂರು ದಿನಗಳಿಂದ ಅಹೋಬಲ ಸರಸಿಂಹಸ್ವಾಮಿ ದೇವರ ಗುಗ್ಗರಿ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು

ಚಳ್ಳಕೆರೆ ಫೆ.28 ದೇವರಮರಿಕುಂಟೆ ಗ್ರಾಮದಲ್ಲಿ ಮೂರು ದಿನಗಳಿಂದ ಅಹೋಬಲ ಸರಸಿಂಹಸ್ವಾಮಿ ದೇವರ ಗುಗ್ಗರಿ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಅಣ್ಣ-ತಂಗಿಯರು ಆಚರಿಸುವ ಹಬ್ಬ ಎಂದಾಕ್ಷಣ ಎಲ್ಲರ ನೆನಪಿಗೆ ಬರುವುದು ರಕ್ಷಾಬಂಧನ ಹಬ್ಬ. ಆದರೆ ಬಯಲು ಸೀಮೆಯ ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ನಡೆಯುವ ಗುಗ್ರಿಹಬ್ಬವನ್ನು ಅಣ್ಣ ತಂಗಿಯರ ಸಮಾಗಮನದ ಹಬ್ಬವೆಂದೇ ಕರೆಯಲಾಗುತ್ತಿದೆ.
ಗುಗ್ರಿಹಬ್ಬದಂದು ಗ್ರಾಮದ ಅಹೋಬಲ ನರಸಿಂಹಸ್ವಾಮಿ ದೇಗುಲದ ಮುಂಭಾಗದಲ್ಲಿರುವ ಒಂಟಿ ಕಂಬದ ಮೇಲಿರುವ ದೀಪಕ್ಕೆ ಎಣ್ಣೆ ಎರೆಯುವ ಮೂಲಕ ಆಚರಿಸಲಾಗುತ್ತದೆ. ಆ ದೀಪ ಎಷ್ಟು ಚೆನ್ನಾಗಿ ಉರಿಯುತ್ತೋ ಅಷ್ಟು ಗ್ರಾಮಸ್ಥರಿಗೆ ಒಳ್ಳೆಯದಾಗುತ್ತದೆ. ಅಲ್ಲದೇ ಅಣ್ಣ-ತಂಗಿಯರ ಸಂಬಂಧ ಗಟ್ಟಿಯಾಗಿ ಉಳಿಯುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿ ಮನೆ ಮಾತಾಗಿದೆ. ಹೀಗಾಗಿ ತವರು ಮನೆಯಿಂದ ಮದುವೆಯಾಗಿ ಹೋದ ಪ್ರತಿಯೊಬ್ಬ ಹೆಣ್ಣು ಮಕ್ಕಳು ಈ ಹಬ್ಬಕ್ಕೆ ಆಗಮಿಸುವ ಪ್ರತೀತಿ ಪೂರ್ವಜನರ ಕಾಲದಿಂದಲೂ ನಡೆದು ಕೊಂಡು ಬಂದಿದೆ.
ದೇವರಮರಿಕುಂಟೆಯ ಅಹೋಬಸ್ವಾಮಿ ದೇವರು ಗ್ರಾಮದಲ್ಲಿ ನೆಲೆನಿಂತಿದ್ದು, ಸ್ವಾಮಿಯ ತಂಗಿ ಗೂಲೋಬಮ್ಮ ಪಾವಗಡ ತಾಲೂಕಿನಲ್ಲಿ ನಿಡುಗಲ್ಲು ಬೆಟ್ಟದಲ್ಲಿ ಪ್ರತಿಷ್ಠಾಪಿತಳಾಗಿರುತ್ತಾಳೆ. ಹೀಗಾಗಿ ಆಕೆ ತನ್ನ ತವರೂರಿಗೆ ಬರಲಾಗದೆ, ಹಬ್ಬದ ಆಚರಣೆಯನ್ನು ದೇಗುಲದಮುಂದೆ ಹಚ್ಚುವ ದೀಪದ ಮೂಲಕ ನನ್ನ ಅಣ್ಣ ಹಬ್ಬ ಆಚರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿಯುತ್ತಾಳೆ. ಆಮೂಲಕ ದೇವಿಯು ಅಲ್ಲಿಂದಲೇ ಖುಷಿ ಪಡುತ್ತಾಳೆ ಎಂಬುದು ಐತಿಹ್ಯ ಇದೆ.
ಅಹೋಬಲ ನರಸಿಂಹ ಸ್ವಾಮಿಗೆ ಬೆಲ್ಲವೇ ಇಷ್ಟವಾದ ನೈವೇದ್ಯ. ಆದ್ದರಿಂದ ಭಕ್ತರೆಲ್ಲರೂ ಬೆಲ್ಲವನ್ನೇ ತಂದು ಸ್ವಾಮಿಗೆ ನೈವೇದ್ಯ ಮಾಡಿ ಹರಕೆ ತೀರಿಸುತ್ತಾರೆ. ಈ ವರ್ಷ ಕಟ್ಟಿಕೊಂಡ ಹರಕೆ, ಇಷ್ಟಾರ್ಥ ನೆರವೇರಿದ ಬಳಿಕ ಮುಂದಿನ ವರ್ಷ ಬೆಲ್ಲವನ್ನು ಸ್ವಾಮಿಗೆ ಅರ್ಪಣೆ ಮಾಡೋದ್ರಿಂದ ತಮ್ಮ ಹರಕೆ ಸಲ್ಲಿಸುವ ಸಂಪ್ರದಾಯ ಇಲ್ಲಿದೆ. ಹೀಗಾಗಿ ವಿವಿಧೆಡೆಗಳಿಂದ ಅಹೋಬಲ ಸ್ವಾಮಿಯ ಗುಗ್ಗರಿ ಹಬ್ಬಕ್ಕೆ ಆಗಮಿಸುವ ಭಕ್ತರು ಬೆಲ್ಲವನ್ನು ದೇವರಿಗೆ ಸಮರ್ಪಿಸಿ, ಕಂಬದಮೇಲೆಹಚ್ಚುವ ದೀಪಕ್ಕೆ ಎಣ್ಣೆ ಎರೆಯುವ ಮೂಲಕ ಅಣ್ಣ ತಂಗಿಯರ ಹಬ್ಬವನ್ನು ಆಚರಿಸಿ ಸಂಭ್ರಮಿಸುತ್ತಾರೆ.

ರಾಮದುರ್ಗ ಗ್ರಾಮದಲ್ಲಿ ವಿಜೃಂಭಣೆಯಿಂದ ಅದ್ದೂರಿಯಾಗಿ ಜರುಗಿದ ಶ್ರೀಮಂದ ಬೊಮ್ಮಲಿಂಗೇಶ್ವರ ಸ್ವಾಮಿಯ ಜಾತ್ರೋತ್ಸವ.

ನಾಯಕನಹಟ್ಟಿ ಡಿ.24: ಹೋಬಳಿಯ ನಲಗೇತನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ರಾಮದುರ್ಗ ಗ್ರಾಮದಲ್ಲಿ ಕಳೆದ ಮೂರು ದಿನಗಳ ಕಾಲ ಅದ್ದೂರಿಯಾಗಿ ಶ್ರೀಮಂದ ಬೊಮ್ಮಲಿಂಗೇಶ್ವರ ಸ್ವಾಮಿಯ ಜಾತ್ರೋತ್ಸವ ಜರುಗಿದೆ.
ಎಂದು ಗ್ರಾಮ ಪಂಚಾಯತಿಯ ಸದಸ್ಯ ಬಂಗಾರಪ್ಪ ಹೇಳಿದ್ದಾರೆ.


ಅವರು ಭಾನುವಾರ ಶ್ರೀಮಂದ ಬೊಮ್ಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ್ದಾರೆ ನಮ್ಮ ಗ್ರಾಮದ ಹೊರವಲಯದಲ್ಲಿರುವ ದೊಣೆ ಎಂಬ ಸ್ಥಳಕ್ಕೆ ನಮ್ಮ ಪೂರ್ವಜರು ದೊಣೆಮಂಡಲಹಟ್ಟಿ ಎಂಬ ಹೆಸರು ನಾಮಕರಣವಾಗಿದೆ.
ಪ್ರತಿ ವರ್ಷವೂ ಬುಡಕಟ್ಟು ಸಂಸ್ಕೃತಿಯ ಆಚಾರ ವಿಚಾರಗಳ ಸಂಪ್ರದಾಯದಂತೆ ಕಳೆದ ಮೂರು ದಿನಗಳಿಂದ ಶ್ರೀಮಂದ ಬೊಮ್ಮಲಿಂಗೇಶ್ವರ ಸ್ವಾಮಿಯ ಜಾತ್ರೋತ್ಸವ ಸಂಭ್ರಮ ಸಡಗರದಿಂದ ಆಚರಿಸಲಾಗಿದೆ ಭಾನುವಾರ ಮೂರನೇ ದಿನವಾದರಿಂದ ಗ್ರಾಮಕ್ಕೆ ಶ್ರೀ ಮಂದ ಬೊಮ್ಮಲಿಂಗೇಶ್ವರ ಸ್ವಾಮಿಯ ವಿವಿಧ ಮಂಗಳವಾದ್ಯಗಳೊಂದಿಗೆ ಅದ್ದೂರಿಯಾಗಿ ಗ್ರಾಮಕ್ಕೆ ಕರೆತರಲಾಗುತ್ತದೆ ನಮ್ಮ ಮ್ಯಾಸ ನಾಯಕ ಬುಡಕಟ್ಟು ಸಂಸ್ಕೃತಿಯ ಆರಾಧ್ಯ ದೈವ ಶ್ರೀಮಂದ ಬೊಮ್ಮಲಿಂಗೇಶ್ವರ ಮೂಲಸ್ಥಾನ ನಮ್ಮ ಗ್ರಾಮದ ಸಮೀಪದಲ್ಲಿರುವ ( ಬಿ ಆರ್ ಸಿ) ಹತ್ತಿರದ ಸ್ಥಳ ಈ ಸ್ಥಳದಲ್ಲಿ ನಮ್ಮ ನಾಯಕ ಜನಾಂಗದವರು ವಾಸ ಮಾಡಿರುವಂತ ಸ್ಥಳವಾಗಿದೆ ನಮ್ಮ ಪೂರ್ವಜರು ಆ ಸ್ಥಳಕ್ಕೆ (ಸಣ್ಣಗಂಬಲದಿನ್ನಿ) ಎಂಬ ಹೆಸರನ್ನ ಕರೆಯುತ್ತಾರೆ.


ಅಲ್ಲಿ ನಮ್ಮ ಮ್ಯಾಸ ನಾಯಕ ಸಮುದಾಯದವರು ಪ್ರತಿ ಮೂರು ಮತ್ತು ಐದು ವರ್ಷಕ್ಕೊಮ್ಮೆ ಈ ಸ್ಥಳದಲ್ಲಿ ಬುಡಕಟ್ಟು ಸಂಸ್ಕೃತಿಯ ಆರಾಧ್ಯ ದೈವ ಶ್ರೀ ಮಂದ ಬೊಮ್ಮಲಿಂಗೇಶ್ವರ ನಡೆಸುತ್ತಾ ಬಂದಿದ್ದಾರೆ ಅದರಂತೆ ಇಂದು ಗ್ರಾಮದ ಹೊರವಲಯದಲ್ಲಿರುವ ದೋಣಿ ಎಂಬ ಸ್ಥಳದಲ್ಲಿ ಕಳೆದ ಮೂರು ದಿನಗಳ ಕಾಲ ಶ್ರೀ ಮಂದ ಬೊಮ್ಮಲಿಂಗೇಶ್ವರ ಸ್ವಾಮಿಯ ದೇವರ ಪೂಜಾ ಕೈಕಾರ್ಯಗಳು ನೆರವೇರಿಸಲಾಗಿದೆ ಗ್ರಾಮದ ಸರ್ವ ಭಕ್ತಾದಿಗಳು ಸಂಭ್ರಮ ಸಡಗರದಿಂದ ಆಚರಣೆ ಮಾಡಿದ್ದಾರೆ ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ರಾಮದುರ್ಗ ಗ್ರಾಮದ ಆರಾಧ್ಯ ದೈವ ಶ್ರೀ ಮಂದ ಬೊಮ್ಮಲಿಂಗೇಶ್ವರ ಸ್ವಾಮಿಯ ಗುಡಿಕಟ್ಟಿನ ಅಣ್ಣತಮ್ಮಂದಿರು ಸಮಸ್ತ ಊರಿನ ಗ್ರಾಮಸ್ಥರು ಇದ್ದರು

ಸಾಲು ಸಾಲು ಎತ್ತಿನಗಾಡಿಗಳ ಸೊಬಗು ಮಿಂಚೇರಿ ಜಾತ್ರೆಯತ್ತ ಸಾಗಿದ ಬಂಡಿಗಳು.


ಚಿತ್ರದುರ್ಗ ಡಿ.23. ಎತ್ನತಿ ಗಾಡಿ ಏರೋಣ ಬನ್ನಿ ಮಿಂಚೇರಿ ಯಾತ್ರೆ ಮಾಡೋಣ ಬನ್ನಿ’ ಎಂಬ ಹರ್ಷೋದ್ಘಾರದೊಂದಿಗೆ ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿಯ ಮ್ಯಾಸ ನಾಯಕ ಸಮುದಾಯದವರು ಮಿಂಚೇರಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಶನಿವಾರ ಎತ್ತಿನಗಾಡಿಗಳಲ್ಲಿ ತೆರಳಿದರು.ಬಚ್ಚಬೋರನಹಟ್ಟಿ ಮಾರ್ಗವಾಗಿ ಗೋನೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಚಿತ್ರದುರ್ಗ, ಸೀಬಾರ, ಗೂಳಯ್ಯನಹಟ್ಟಿ, ಕ್ಯಾಸಾಪುರ, ಕಡ್ಲೆಗುದ್ದು, ಮೇಗಳಹಟ್ಟಿ, ಕೋಣನೂರು, ಚುಕ್ಕೇನಹಳ್ಳಿ, ಸಿರಿಗೆರೆ, ಮದಕರಿಪುರ ಹಾಗೂ ಮಿಂಚೇರಿಪುರದವರೆಗೆ ಎತ್ತಿನಬಂಡಿ ಯಾತ್ರೆ ನಡೆಯಲಿದೆ. ಮ್ಯಾಸ ನಾಯಕ ಸಮುದಾಯದ ಸಾಂಸ್ಕೃತಿಕ ವೀರ ಗಾದ್ರಿಪಾಲ ನಾಯಕ ಸ್ವಾಮಿಯ ಹೆಸರಿನಲ್ಲಿ ಸಾಲು ಸಾಲಾಗಿ ಹೊರಟ ಎತ್ತಿನ ಗಾಡಿಗಳು ಕಣ್ಮನ ಸೆಳೆದವು.ಗಾದ್ರಿ ಪಾಲನಾಯಕ ಸ್ವಾಮಿಯ ಸಾಲು ಸಾಲು ಎತ್ತಿನ ಗಾಡಿಗಳೊಂದಿಗೆ ಹಳ್ಳಿಯ ಸೊಬಗಿನಿಂದ ಕಂಗೊಳಿಸುವ ಮಿಂಚೇರಿ ಜಾತ್ರಾ ಮಹೋತ್ಸವ.

ಚಿತ್ರದುರ್ಗ ತಾಲ್ಲೂಕಿನ ಬಚ್ಚಬೋರನಹಟ್ಟಿ ಗ್ರಾಮದ ಮ್ಯಾಸ ನಾಯಕ ಸಮುದಾಯದವರು ತಮ್ಮ ಆರಾಧ್ಯ ಧೈವ ಹಾಗೂ ಸಾಂಸ್ಕೃತಿಕ ವೀರ ಎಂದೇ ಖ್ಯಾತಿ ಗಳಿಸಿರುವ ಗಾದ್ರಿ ಪಾಲನಾಯಕ ಸ್ವಾಮಿಯ ಹೆಸರಿನಲ್ಲಿ ಮಿಂಚೇರಿ ಯಾತ್ರೆಯ ಮಹೋತ್ಸವ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುತ್ತದೆ. ಈ ಮಹೋತ್ಸವದಲ್ಲಿ ಎತ್ತಿನ ಗಾಡಿಗಳನ್ನು ಶೃಂಗಾರ ಮಾಡಿಕೊಂಡು ಸಿರಿಗೆರೆ ಸಮೀಪದ ಹೊಳಲ್ಕೆರೆ ತಾಲೂಕು ಮಿಂಚೇರಿ ಗುಡ್ಡದ ಗಾದ್ರಿಪಾಲನಾಯಕನ ಸನ್ನಿಧಾನಕ್ಕೆ ನೂರಾರು ಎತ್ತಿನ ಗಾಡಿಗಳೊಂದಿಗೆ ಪಯಣ ಬೆಳೆಸುತ್ತಾರೆ.

ಬುಡಕಟ್ಟು ಸಂಸ್ಕೃತಿಯ ಆಚರಣೆಗಳಲ್ಲಿ ಒಂದಾಗಿರುವ ಗಾದ್ರಿಪಾಲನಾಯಕ ಸ್ವಾಮಿಯ ಮಿಂಚೇರಿ ಯಾತ್ರೆಯನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಶತ ಶತಮಾನಗಳಿಂದಲೂ ಆಚರಿಸುತ್ತಾ ಬಂದಿದ್ದಾರೆ.

ಆರು ದಿನಗಳ ಉತ್ಸವ : ಈ ಬಾರಿಯ ಮಿಂಚೆರಿ ಜಾತ್ರಾ ಮಹೋತ್ಸವ 2023ರ ಡಿಸೆಂಬರ್ 23 ರಿಂದ 28 ರವರೆಗೆ ನಡೆಯಲಿದೆ. ಈ ಮಿಂಚೇರಿ ಯಾತ್ರಾ ಮಹೋತ್ಸವದಲ್ಲಿ ವಿಶಿಷ್ಟ ಆಚರಣೆಯನ್ನು ಕಾಣಬಹುದಾಗಿದ್ದು, ಬುಡಕಟ್ಟು ಸಂಸ್ಕೃತಿಯ ವೈಭವ ಮೇಳೈಸಲಿದೆ.
ಡಿಸೆಂಬರ್ 23ರಂದು ಶನಿವಾರ ಉದಯ ಕಾಲಕ್ಕೆ ದೇವರ ಮುತ್ತಯ್ಯಗಳ ಆಗಮನವಾದ ನಂತರ ಬೆಳಿಗ್ಗೆ 7ಕ್ಕೆ ದೇವರ ಮಜ್ಜನಬಾವಿಯಲ್ಲಿ ಗುರು-ಹಿರಿಯರೊಂದಿಗೆ ಗಂಗಾಪೂಜೆ ಹಾಗೂ ಬೆಳಿಗ್ಗೆ 11.30ಕ್ಕೆ ಮಿಂಚೇರಿ ಯಾತ್ರಾ ಮಹೋತ್ಸವ ಆರಂಭವಾಗಲಿದೆ. ದೇವರ ಮುತ್ತಯ್ಯಗಳೊಂದಿಗೆ ಊರಿನಿಂದ ನಿರ್ಗಮಿಸಿ ಅಲ್ಲಿಂದ ಕಕ್ಕಲು ಬೆಂಚಲ್ಲಿ ಪೂಜೆ ಸಲ್ಲಿಸಿ, ಯಾತ್ರೆ ಮುಂದುವರೆಯುವುದು. ಅಂದು ಸಂಜೆ 7ಕ್ಕೆ ಕ್ಯಾಸಾಪುರದ ಬಯಲಿನಲ್ಲಿ ಸ್ವಾಮಿಗೆ ಪೂಜೆ ನಂತರ ಬೀಡು ಬೀಡುವುದು. ನಂತರ ರಾತ್ರಿ ಭಜನೆ, ಕೋಲಾಟ, ಸೋಬಾನೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು.
ಡಿಸೆಂಬರ್ 24ರಂದು ಬೆಳಿಗ್ಗೆ 7ಕ್ಕೆ ಸಕಲ ಸದ್ಭಕ್ತರಿಂದ ಸ್ವಾಮಿಯ ಪೂಜೆ ನಂತರ ಯಾತ್ರೆ ಮುಂದುವರೆಯುವುದು. ಮಧ್ಯಾಹ್ನ 12ಕ್ಕೆ ಸಿರಿಗೆರೆ ಡಿ.ಮೇದಕೇರಿಪುರ ವರತಿನಾಯಕನ ಕೆರೆಯ ದಂಡೆಯಲ್ಲಿ ವಿಶ್ರಾಂತಿ.
ನಂತರ ಕೆರೆಯ ದಂಡೆಯಲ್ಲಿ ಪೂಜೆ ಮುಗಿಸಿಕೊಂಡು ಪಶುಪಾಲಕರಾದ ಗಾದ್ರಿಪಾಲನಾಯಕ ಸ್ವಾಮಿಯ ಸುಕ್ಷೇತ್ರ ಮಿಂಚೇರಿಗೆ ಪಯಣ. ಸಂಜೆ 5ಕ್ಕೆ ಸ್ವಾಮಿಯ ಮೀಸಲು ಹಾಲಿನ ಕಂಬಿಯ ಪೂಜೆ. ರಾತ್ರಿ ಗುರು-ಹಿರಿಯರ ಸಾಂಪ್ರದಾಯಿಕ ಪೂಜೆ ನಂತರ ಬೀಡು ಬಿಡಲಾಗುವುದು. ಮಧ್ಯರಾತ್ರಿ ಕಂಚವ್ವ ಕಾಮವ್ವರ ಚಿಲುಮೆ ಗಂಗಮ್ಮನ ಮಹಾಪೂಜೆ. ಕೋಲಾಟ, ಭಜನೆ, ಸೋಬಾನೆ ಹಾಗೂ ಇತರೆ ಕಾರ್ಯಕ್ರಮಗಳು ನಡೆಯುತ್ತವೆ.ಡಿಸೆಂಬರ್ 25ರಂದು ಬೆಳಿಗ್ಗೆ 5ಕ್ಕೆ ಸ್ವಾಮಿಯ ಪೂರ್ವಿಕರ ವಿಧಿ-ವಿಧಾನಗಳೊಂದಿಗೆ ಹುಲಿರಾಯನ ಸಮಾಧಿಗೆ ಪೂಜೆ. ನಾಯಕನ ಸಮಾಧಿಗೆ ಪೂಜೆ ಹಾಗೂ ಮಣಿವು ಕಾರ್ಯಕ್ರಮ. ನಂತರ ಮಧ್ಯಾಹ್ನ 2ಕ್ಕೆ ಸ್ವಾಮಿಯ ಸನ್ನಿಧಿಯಲ್ಲಿ ಬಸವಂತರಿಗೆ ಹಾಗೂ ಚೌಕು ಮಣೆವು ಕಾರ್ಯಕ್ರಮ. ಸಂಜೆ 4ಕ್ಕೆ ಕಣಿವೆ ಮಾರಮ್ಮ, ಮಲಿಯಮ್ಮ ಹಾಗೂ ಕೊಲ್ಲಪುರದಮ್ಮನವರ ಗಂಗಾಪೂಜೆ. ಸಂಜೆ 7ಕ್ಕೆ ಸ್ವಾಮಿಗೆ ಪೂಜೆ ನಂತರ ಭಕ್ತಾಧಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.ಡಿಸೆಂಬರ್ 26ರಂದು ಬೆಳಿಗ್ಗೆ 7ಕ್ಕೆ ಸ್ವಾಮಿಯು ಜಂಗಮ ಸ್ವರೂಪಿಯಾಗಿ ಭಿಕ್ಷೆ ಸ್ವೀಕಾರ ಕಾರ್ಯಕ್ರಮ. ಬೆಳಿಗ್ಗೆ 11ಕ್ಕೆ ಸ್ವಾಮಿಯ ಸನ್ನಿಧಿಯಲ್ಲಿ ಪ್ರಸಾದ ದಾಸೋಹ. ಮಧ್ಯಾಹ್ನ 2ಕ್ಕೆ ಮಿಂಚೇರಿ ಸುಕ್ಷೇತ್ರದಿಂದ ನಿರ್ಗಮನ. ರಾತ್ರಿ 7ಕ್ಕೆ ಕಡ್ಲೇಗುದ್ದು ಬಳಿಯ ಸಿದ್ದರ ಗುಂಡಿಗೆ ಆಗಮನ. ನಂತರ ಸ್ವಾಮಿಗೆ ಪೂಜೆ ಸಲ್ಲಿಸಿ ಬೀಡು ಬಿಡುವುದು.ಡಿಸೆಂಬರ್ 27ರಂದು ಬೆಳಿಗ್ಗೆ 7ಕ್ಕೆ ಸ್ವಾಮಿಗೆ ಪೂಜೆ ಸಲ್ಲಿಸಿ ಬೆಳಿಗ್ಗೆ 10ಕ್ಕೆ ಕ್ಯಾಸಾಪುರ ಹತ್ತಿರ ಜನಿಗಿಹಳ್ಳದ ದಂಡೆಯಲ್ಲಿ ವಿಶ್ರಾಂತಿ ಮತ್ತು ಸ್ವಾಮಿಯ ಸಂಪ್ರಾದಾಯದಂತೆ ಜನಿಗಿ ಹಳ್ಳಕ್ಕೆ ಗಂಗಾಪೂಜೆ ನಡೆಯುತ್ತದೆ. ನಂತರ ಯಾತ್ರೆ ಮುಂದುವರೆಯಲಿದೆ. ಮಧ್ಯಾಹ್ನ 2ಕ್ಕೆ ಗಂಡುಮೆಟ್ಟಿದ ನಾಡು ಚಿತ್ರದುರ್ಗಕ್ಕೆ ಮಿಂಚೇರಿ ಮಹೋತ್ಸವದ ಮೆರವಣಿಗೆ ಆಗಮನ. ನಂತರ ರಾಜಾ ಬೀದಿಗಳಲ್ಲಿ ಸ್ವಾಮಿಯ ಮೆರವಣಿಗೆ ಆಗಮನ. ನಂತರ ರಾಜಾ ಬೀದಿಗಳಲ್ಲಿ ಸ್ವಾಮಿಯ ಮೆರವಣಿಗೆ, ಕೋಲಾಟ, ಭಜನೆ, ಉರುಮೆ, ಕುಣಿತ, ತಮಟೆ, ವಾದ್ಯಗಳೊಂದಿಗೆ ಕಹಳೆಯ ನಾದದೊಂದಿಗೆ ಜನಪದ ನೃತ್ಯಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ 7ಕ್ಕೆ ಸುಕ್ಷೇತ್ ಕಕ್ಕಲು ಬೆಂಚಿನಲ್ಲಿ ಬೀಡು ಬಿಡುವುದು.ಡಿಸೆಂಬರ್ 28ರಂದು ಸಂಜೆ 7ಕ್ಕೆ ಸ್ವಾಮಿಯ ಗ್ರಾಮದ ಹೊಸ್ತಿಲು ಪೂಜೆಯೊಂದಿಗೆ ಸ್ವಸ್ಥಾನಕ್ಕೆ ಮರಳುವುದು. ಗುರು-ಹಿರಿಯರೊಂದಿಗೆ ದೇವರ ಮುತ್ತಯ್ಯಗಳ ಬೀಳ್ಕೊಡುಗೆ ನಡೆಯಲಿದೆ.

ಜಾತ್ರೆ ಹಿನ್ನಲೆ :
ನಾಯಕ ಜನಾಂಗದ ಸಾಂಸ್ಕೃತಿಕ ವೀರ ಎಂದೇ ಹೆಸರಾಗಿರುವ ಗಾದ್ರಿಪಾಲನಾಯಕ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ಸಿರಿಗೆರೆ ಬಳಿಯ ಡಿ. ಮೆದಕೇರಿಪುರ ಗ್ರಾಮದ ಬಳಿಯ ಕಾಡಿನಲ್ಲಿ ಗಾದ್ರಿಪಾಲನಾಯಕ ಗೋ ಸಂರಕ್ಷಕ. ಆತನಿಗೆ ಕಂಚವ್ವ, ಕಾಮವ್ವರೆಂಬ ಇಬ್ಬರು ಪತ್ನಿಯರು. ಅಡವಿಯಲ್ಲಿ ಪಶುಪಾಲನೆ ಸಂದರ್ಭದಲ್ಲಿ ಹುಲಿಯೊಂದಿಗೆ ಅನೋನ್ಯ ಒಪ್ಪಂದದಿಂದಾಗಿ ಹುಲಿಮರಿಗಳನ್ನು ಹಸು ಕರುಗಳ ರೊಪ್ಪದಲ್ಲಿಯೇ ಬಿಡಲಾಗಿತ್ತು. ಒಮ್ಮೆ ಗಾದ್ರಿಪಾಲನಾಯಕನ ಭಾವ ಮೈದುನರಾದ ಚಿತ್ತಯ್ಯ, ಕಾಟಯ್ಯ ರೊಪ್ಪಕ್ಕೆ ಬರುತ್ತಾರೆ. ಯಾರೂ ಕಾಣದಿದ್ದಾಗ ರೊಪ್ಪದಲ್ಲಿದ್ದ ಹುಲಿಮರಿಯನ್ನು ಕೊಲ್ಲುತ್ತಾರೆ. ಇದರಿಂದ ಗಾದ್ರಿಪಾಲನಾಯಕ ವಚನಭ್ರಷ್ಟನಾದೆನೆಂದು ದುಃಖಿಸುತ್ತಾನೆ. ಕೊನೆಗೆ ಹುಲಿಯೊಂದಿಗೆ ಕಾದಾಡಿ ಹುಲಿ ಮತ್ತು ಗಾದ್ರಿಪಾಲನಾಯಕ ಸಾವನ್ನಪ್ಪುತ್ತಾರೆ. ಹುಲಿ ಹಾಗೂ ಗಾದ್ರಿಪಾಲನಾಯಕ ಸಮಾಧಿಗಳು ಇಂದಿಗೂ ಮಿಂಚೇರಿ ಬೆಟ್ಟದಲ್ಲಿ ಇವೆ.

ಗಾದ್ರಿಪಾಲನಾಯಕನ ನೆಲವೀಡು ಮಿಂಚೇರಿ: ಮಿಂಚೇರಿ ಬೆಟ್ಟ-ಗುಡ್ಡಗಳಿಂದ ಕೂಡಿದ ಪ್ರದೇಶ ಮಾತ್ರವಲ್ಲದೇ ಧಾರ್ಮಿಕ ಕೇಂದ್ರವೂ ಹೌದು. ಮಿಂಚೇರಿ ಬೆಟ್ಟ ಮ್ಯಾಸ ನಾಯಕರ ಆರಾಧ್ಯ ದೈವ ಗಾದ್ರಿಪಾಲನಾಯಕನ ನೆಲವೀಡಾಗಿದೆ. ಇಲ್ಲಿಗೆ ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ. ಸಮೃದ್ಧ ಮಳೆ-ಬೆಳೆಗಾಗಿ ಪ್ರಾರ್ಥಿಸಲಾಗುತ್ತದೆ.
ಸಜ್ಜೆ ರೊಟ್ಟೆ, ಗಾರ್ಗೆ, ಕರಜೀಕಾಯಿ,ಸಜ್ಜೆ ರೊಟ್ಟೆ, ಗಾರ್ಗೆ, ಕರಜೀಕಾಯಿ ಮಿಂಚೇರಿ ಮಹೋತ್ಸವದ ವಿಶೇಷ ಖಾದ್ಯವಾಗಿದೆ.

ಯಾತ್ರೆ ಸಾಗುವ ಮಾರ್ಗ: ಚಿತ್ರದುರ್ಗ ತಾಲ್ಲೂಕಿನ ಬಚ್ಚಬೋರನಹಟ್ಟಿ ಗ್ರಾಮದಿಂದ ಆರಂಭವಾದ ಮಿಂಚೇರಿ ಮಹೋತ್ಸವವು ಗೋನೂರು, ಚಿತ್ರದುರ್ಗ, ಸೀಬಾರ, ಗೂಳಯ್ಯನಹಟ್ಟಿ, ಕ್ಯಾಸಾಪುರ, ಕಡ್ಲೇಗುದ್ದು, ಕೋಣನೂರು, ಚಿಕ್ಕೇನಹಳ್ಳಿ, ಸಿರಿಗೆರೆ, ಡಿ.ಮೇದಕೆರಿಪುರ, ಮಿಂಚೇರಿಪುರದವರಗೆ ಯಾತ್ರೆ ಸಾಗಲಿದೆ. ಈ ಜಾತ್ರೆಯಲ್ಲಿ ಹಲವು ಮಠಾದೀಶರು.ಗಣ್ಯರು ಪಾಲ್ಗೊಳಲಿದ್ದಾರೆ.

ಬ್ಯಾಡರಹಳ್ಳಿಗ್ರಾಮದ ಶ್ರೀಪಾರ್ಥಲಿಂಗೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳು ಜಾನಪದನೃತ್ಯದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ .


ಚಿತ್ರದುರ್ಗ :
ನಗರದ ಮಹಾರಾಣಿ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜಾನಪದ ನೃತ್ಯದಲ್ಲಿ ಹಿರಿಯೂರು ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದ ಶ್ರೀಪಾರ್ಥಲಿಂಗೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ಅನುಪ್ರಿಯಾ, ಹರ್ಷನಾಯಕ, ಯಶವಂತ್ ಕುಮಾರ್, ತರುಣ್ ಗೌಡ, ಸೃಜನ್, ಕುಮಾರ, ಇವರುಗಳು ವೀರಗಾಸೆ ನೃತ್ಯ ಪ್ರದರ್ಶನ ನೀಡುವ ಮೂಲಕ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಚಿತ್ರಕಲಾ ಶಿಕ್ಷಕರಾದ ಮಲ್ಲೇಶಪ್ಪ ಸುಣ್ಣಗಾರ್ ರವರು ಮಾರ್ಗದರ್ಶನ ನೀಡಿದ್ದು, ವಿದ್ಯಾರ್ಥಿಗಳು ಸತತ ಪರಿಶ್ರಮ ವಹಿಸಿ, ಅಭ್ಯಾಸ ಮಾಡುವ ಮೂಲಕ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ, ರಾಜ್ಯಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿರುವುದಕ್ಕೆ ಶಾಲಾ ಆಡಳಿತ ಮಂಡಳಿಯವರು ಹಾಗೂ ಶಾಲಾ ಸಿಬ್ಬಂದಿವರ್ಗದವರು ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ, ಶಾರದಾ ಎಜುಕೇಶನ್ ಟ್ರಸ್ಟ್ ಆಡಳಿತ ಮಂಡಳಿ ಮುಖ್ಯಸ್ಥರಾದ ಶ್ರೀಯುತ ಹೆಚ್.ವಿ.ಗೋಪಾಲಪ್ಪ, ಶಾಲೆಯ ಮುಖ್ಯಶಿಕ್ಷಕರಾದ ಪ್ರಭಾಕರ್, ವಿದ್ಯಾಸಂಸ್ಥೆಯ ಶಿಕ್ಷಕರುಗಳಾದ ಶಂಷುದ್ದೀನ್, ಮೂಡ್ಲಪ್ಪ, ಭರತ, ಶಿವಮೂರ್ತಿ, ತ್ರಿವೇಣಿ, ತಿಪ್ಪೇಸ್ವಾಮಿ, ಗೋಸಿಕೆರೆರಂಗನಾಥ್, ತಿಮ್ಮರಾಜು, ತಾಲ್ಲೂಕು ರೈತಸಂಘದ ಅಧ್ಯಕ್ಷರಾದ ಬಿ.ಓ.ಶಿವಕುಮಾರ್, ಸೇರಿದಂತೆ ಬ್ಯಾಡರಹಳ್ಳಿ, ಆರ್.ಎಸ್.ಉಪ್ಪಾರಹಟ್ಟಿ, ಕೂಡ್ಲಹಳ್ಳಿ ಗ್ರಾಮಸ್ಥರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಅನ್ವರ್ ಭಾಷಾ ಮಕ್ಕಳ ಪ್ರತಿಭೆ ಗುರುತಿಸಿ, ಪ್ರೋತ್ಸಾಹ ನೀಡಿ .


ಚಿತ್ರದುರ್ಗ ಡಿ.21:
ಪ್ರತಿಯೊಂದು ಮಕ್ಕಳಲ್ಲಿ ಪ್ರತಿಭೆ ಹಾಗೂ ಕ್ರಿಯಾಶೀಲತೆ ಇರುತ್ತದೆ, ಅಂತಹ ಪ್ರತಿಭೆಯನ್ನು ಶಿಕ್ಷಕರು ಹಾಗೂ ಪೋಷಕರು ಗುರುತಿಸಿ, ಕಲೆ ಅನಾವರಣಗೊಳಿಸಲು ಪ್ರೋತ್ಸಾಹ ನೀಡಬೇಕು ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಅನ್ವರ್ ಭಾಷಾ ಹೇಳಿದರು.
ನಗರದ ಮಹಾರಾಣಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯ ಆಡಳಿತ ವ್ಯವಸ್ಥೆ, ವಿದ್ಯಾಭ್ಯಾಸ ಹಾಗೂ ಪ್ರತಿಭೆಗಳಲ್ಲಿ ಕ್ರಿಯಾಶೀಲತೆಯಿಂದ ಕೂಡಿದೆ. ಯಾರಲ್ಲಿ ಒಳ್ಳೆಯ ಪ್ರತಿಭೆ ಇರುತ್ತದೆಯೋ ಅಂತಹವರನ್ನು ಗುರುತಿಸಿ ಆಯ್ಕೆ ಮಾಡಬೇಕು. ಇದರಲ್ಲಿ ಯಾವುದೇ ತಾರತಮ್ಯ ಆಗಬಾರದು. ವಿದ್ಯಾರ್ಥಿಗಳು ಬಹಳ ನಿರೀಕ್ಷೆಯೊಂದಿಗೆ ಆಸೆ ಇಟ್ಟುಕೊಂಡು ಈ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿರುತ್ತಾರೆ, ಅವರಿಗೆ ನಿರಾಸೆ ಆಗಬಾರದು, ನೈಜವಾದ, ನ್ಯಾಯಬದ್ಧವಾದ ತೀರ್ಪು ನೀಡಬೇಕು ಎಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಕಲೆ, ಸಾಹಿತ್ಯ, ಸಂಪ್ರದಾಯಕ್ಕೆ ಹೆಸರುವಾಸಿಯಾಗಿದೆ. ಮಕ್ಕಳಲ್ಲಿ ಉತ್ತಮ ಪ್ರತಿಭೆ ಇದೆ, ಮಕ್ಕಳ ಸಾಮಥ್ರ್ಯವನ್ನು ಕೇವಲ ಅಂಕಪಟ್ಟಿಯಿಂದ ಅಳೆಯುವಂತಾಗಬಾರದು, ಪ್ರತಿಭೆಗಳಿಂದಲೂ ಜೀವನ ಕಟ್ಟಿಕೊಳ್ಳಬಹುದು. ಹೀಗಾಗಿ ಮಕ್ಕಳು ಯಾವುದೇ ಹಂತದಲ್ಲಿ ಆತ್ಮಸೈರ್ಯ ಕಳೆದುಕೊಳ್ಳಬಾರದು ಎಂದರು. ಮಕ್ಕಳಲ್ಲಿರುವ ಕಲೆಯನ್ನು ಗುರುತಿಸಿ ಹೊರ ಹಾಕಬೇಕು, ಆಗ ಮಾತ್ರ ಉತ್ತಮ ನಾಗರಿಕ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆಗಳನ್ನು ಹೊರ ಹಾಕಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪೋಷಕರು, ಶಿಕ್ಷಕರು, ಮಕ್ಕಳಿಗೆ ನೈತಿಕವಾಗಿ ಊರುಗೋಲು ಆಗಿ ನಿಲ್ಲಬೇಕು ಎಂದರು. ಚಿತ್ರದುರ್ಗ ಜಿಲ್ಲೆಯಲ್ಲಿ ಅಪಾರ ಜ್ಞಾನ ಹಾಗೂ ಕಲೆ ಹೊಂದಿರುವ ಮಕ್ಕಳು ಇದ್ದಾರೆ. ಹೀಗಾಗಿ ಮಕ್ಕಳು ಪ್ರತಿಯೊಂದು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳಿಸಬೇಕೆಂಬ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ. ಕುಮಾರಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವುದಕ್ಕೆ ಇದು ಒಂದು ವೇದಿಕೆಯಾಗಿದೆ. ಮಕ್ಕಳಲ್ಲಿ ಇರುವಂತಹ ಪ್ರತಿಭೆಗಳನ್ನು ಬೆಳಕಿಗೆ ತರಬೇಕು. ಶಿಕ್ಷಕರು ಶಾಲೆಯಿಂದಲೇ ಮಕ್ಕಳ ಕಲೆಗಳನ್ನು ಗುರುತಿಸಿ ಅವರನ್ನು ಉನ್ನತಸ್ಥಾನಗಳಿಗೆ ಕೊಂಡೊಯ್ಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ 05 ರಿಂದ 07 ತರಗತಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಾದ ಕಂಠಪಾಠ, ಕವನ, ಪದ್ಯ, ವಾಚನ, ಕಥೆ ಹೇಳುವುದು, ಕಂಠಪಾಠ-ಇಂಗ್ಲೀಷ್, ಕಂಠಪಾಠ-ಹಿಂದಿ, ಕಂಠಪಾಠ-ಉರ್ದು, ಆಶು ಭಾಷಣ, ಧಾರ್ಮಿಕ ಪಠಣ-ಸಂಸ್ಕøತ, ಧಾರ್ಮಿಕ ಪಠಣ-ಅರೇಬಿಕ್, ಅಭಿನಯ ಗೀತೆ, ಲಘು ಸಂಗೀತ, ಭಕ್ತಿ ಗೀತೆ, ಛದ್ಮವೇಷ, ಮಿಮಿಕ್ರಿ ಸ್ಪರ್ಧೆಗಳು ನಡೆದವು.
08 ರಿಂದ 12 ತರಗತಿ ವಿದ್ಯಾರ್ಥಿಗಳಿಗೆ ಭಾಷಣ-ಕನ್ನಡ, ಕವನ, ಪದ್ಯ, ವಾಚನ, ಭಾಷಣ-ಇಂಗ್ಲೀಷ್, ಚರ್ಚಾ ಸ್ಪರ್ಧೆ, ಆಶು ಭಾಷಣ, ಭಾಷಣ-ಹಿಂದಿ, ಧಾರ್ಮಿಕ ಪಠಣ-ಸಂಸ್ಕøತ, ಭರತನಾಟ್ಯ, ಗಝಲ್ ಧಾರ್ಮಿಕ ಪಠಣ-ಅರೇಬಿಕ್, ಕವ್ವಾಲಿ ಧಾರ್ಮಿಕ ಪಠಣ-ಅರೇಬಿಕ್, ಭಾವಗೀತೆ, ಜಾನಪದ ಗೀತೆ, ಜಾನಪದ ನೃತ್ಯ, ಛದ್ಮವೇಷ, ಮಿಮಿಕ್ರಿ, ಕ್ಷಿಜ್ ಸ್ಪರ್ಧೆಗಳು ಜರುಗಿದವು.
ವಿವಿಧ ಶಾಲೆಗಳ ವಿದ್ಯಾರ್ಥಿಗಳು ಆಸಕ್ತಿಯಿಂದ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಪಾಲ್ಗೊಂಡು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದು, ನೋಡುಗರ ಗಮನ ಸೆಳೆಯಿತು.
ಮದಕರಿ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಸಮಗ್ರ ಶಿಕ್ಷಣ ಅಭಿಯಾನದ ಸಮನ್ವಯಾಧಿಕಾರಿ ವೆಂಕಟೇಶ್, ಎಸ್‍ಎಸ್‍ಎಲ್‍ಸಿ ನೋಡಲ್ ಅಧಿಕಾರಿ ಎನ್.ಆರ್.ತಿಪ್ಪೇಸ್ವಾಮಿ, ಶಾಲಾ ಶಿಕ್ಷಣ ಇಲಾಖೆ ವಿದ್ಯಾಧಿಕಾರಿ ಸಿದ್ದಪ್ಪ, ಜಿಲ್ಲಾ ಸಹ ಶಿಕ್ಷಕ ಸಂಘದ ಅಧ್ಯಕ್ಷ ಶಿವಣ್ಣ, ತಾಲ್ಲೂಕು ಸಹ ಶಿಕ್ಷಕ ಸಂಘದ ಅಧ್ಯಕ್ಷ ಬಸವರಾಜಪ್ಪ, ವಿಜ್ಞಾನ ವಿಷಯದ ಪರಿವೀಕ್ಷಕ ಗೋವಿಂದಪ್ಪ, ಗಣಿತ ವಿಷಯದ ಪರಿವೀಕ್ಷಕಿ ಸವಿತಾ, ಕನ್ನಡ ವಿಷಯದ ಪರಿವೀಕ್ಷಕ ಶಿವಣ್ಣ ಸೇರಿದಂತೆ ತೀರ್ಪುಗಾರರು ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಹಿಳಾ ಒಕ್ಕೂಟದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ನೃತ್ಯಪ್ರದರ್ಶಿಸಿದ ಮಹಿಳಾ ಸದಸ್ಯರು.

ಚಳ್ಳಕೆರೆ ಡಿ.17 ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಸಾಂಸ್ಕೃತಿಕ ಪ್ರತಿಭೆ ಅಡಗಿರುತ್ತದೆ. ಅನಾವರಣಗೊಳಿಸಲು ಇಂತಹ ವೇದಿಕೆಗಳು ಸಹಕಾರಿಯಾಗಲಿದೆ ಎಂದು ವಲಯ ಅಧಿಕಾರಿ ಭರತ್ ಹೇಳಿದರು. ಚಳ್ಳಕ್ಕೆರೆ ತಾಲೂಕಿನ ಸಾಣೀಕೆರೆ ವಲಯದ ನಾರಾಯಣಪುರ ಕಾರ್ಯಕ್ಷೇತ್ರದ ಜ್ಞಾನಜ್ಯೋತಿ jvk ಕೇಂದ್ರದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು


ಮಹಿಳೆಯರು ಅಡುಗೆ ಮನೆಗೆ ಸೀಮಿತವಾಹಿದ್ದ ಗೃಹಿಣಿಯರು ಶ್ರೀ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಸಂಸ್ಥೆಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡು ಸಾಲ ಪಡೆಯುವ ಮೂಲಕ ಸ್ವ ಉದ್ಯೋಗ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಿದ್ದಾರೆ. ಒಕ್ಕೂಟದ ವಾರ್ಷಿಕೋತ್ಸವ ಅಂಗವಾಗಿ ಮಹಿಳಾ ಸದಸ್ಯರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ವೇಧಿಕೆಯಲ್ಲಿ ಮಹಿಳೆಯರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕುವ ಮೂಲಕ ಮನರಂಜಿಸಿದರು.

ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಉಮಾದೇವಿ ವಹಿಸಿದ್ದರು . ಮುಖಂಡ ರುದ್ರಮುನಿ ಹಾಗೂ ಒಕ್ಕೂಟದ ಸದಸ್ಯರು ಗ್ರಾಮದ ಮುಖಂಡರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧಯಲ್ಲಿ ಭಾಗವಹಿಸಿ ವುಜೇತರಾದ ಮಹಿಳೆಯರಿಗೆ ಬಹುಮಾನ. ವಿತರಣೆ ಮಾಡಲಾಯಿತು ಕೇಂದ್ರದ. ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು ಸಮನ್ವಯಧಿಕಾರಿ ಭವಾನಿ ಸೇವಾಪ್ರತಿನಿಧಿ ಅಶ್ವಿನಿ ಹಾಗೂ ಕೇಂದ್ರದ. ಸದಸ್ಯರು ಹಾಜರಿದ್ದರು .=”” width=”4254″ height=”2408″ class=”aligncenter size-full wp-image-20629″ />

ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್., ರೆಡ್ ಕ್ರಾಸ್ರೋ ವರ್ಸ್ & ರೇಂಜರ್ ಚಟುವಟಿಕೆಗಳ ಶನಿವಾರ ಉದ್ಘಾಟನಾ ಸಮಾರಂಭ ಚನ್ನಗಿರಿ.

ಚನ್ನಗಿರಿ ನ.23. ಕರ್ನಾಟಕ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, ಚನ್ನಗಿರಿ ಐವತ್ತನೇ ಸುವರ್ಣ ಮಹೋತ್ಸವ ಅಂಗವಾಗಿ
2023-24ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್., ರೆಡ್ ಕ್ರಾಸ್ರೋ ವರ್ಸ್ & ರೇಂಜರ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ
25 ನೇ ಶನಿವಾರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಕಾಲೇಜು ಆವರಣದಲ್ಲಿ‌ಆಯೋಜಲಾಗಿರುವ ಕಾರ್ಯಕ್ರಮವನ್ನು ಶಾಸಕ ಬಸವರಾಜು ವಿ. ಶಿವಗಂಗಾ ಅಧ್ಯಕ್ಷರು, ಕಾಲೇಜು ಅಭಿವೃದ್ಧಿ ಸಮಿತಿ, ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿ :ವಿನಯ್ ಕುಮಾರ್‌ ಜಿ.ಬಿ. ಇನ್ಸೆಟ್ಸ್ ಐಎಎಸ್ ಸಂಸ್ಥಾಪಕರು ಮತ್ತು ನಿರ್ದೇಶಕರು.ವಿಶೇಷ ಆಹ್ವಾನಿತರು ಪೃಥ್ವಿ ಶಾಮನೂರು ಚಲನಚಿತ್ರ ಯುವ ನಾಯಕ ನಟಮಾಸ್ಟರ್ ನವೀನ್ ಕುಮಾರ್ ಇತರರು ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You cannot copy content of this page