ಚಳ್ಳಕೆರೆ ನ. 17 ರೈತರು ಬಿತ್ತನೆ ಮಾಡಿದ ಬೆಳೆಗಳು ಅತಿ ವೃಷ್ಠಿ- ಅನಾವೃಷ್ಠಿಗೆ ಸಿಲುಕಿ ಹಾನಿಗೀಡಾಗಿ ಉಸಿರುಗಟ್ಟುವ ಬದುಕಿನಲ್ಲಿ ಕಾಲತಳ್ಳುತ್ತಿರುವ ರೈತರುಗೆ ಸಹಾಯಧನದಡಿ ಕಳಪೆ ದರ್ಜೆ ಸ್ಪಿಂಕ್ಲರ್ ಸೆಟ್ ಪೈಪ್ ಗಳನ್ನು ವಿತರಿಸಿ ವಂಚಿರುವ ಪ್ರಕರ ಬಯಲಾಗಿದ್ದ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ರೈತರಿಗೆ ಕೃಷಿ ಇಲಾಖೆಯಿಂದ ಸರಕಾರ ಸಹಾಯಧನದ ಹೆಸರಿನಲ್ಲಿ ಸ್ಪ್ರಿಂಕ್ಲರ್ ಸೆಟ್ ಹಾಗೂ ಡ್ರಿಪ್ ಇರಿಗೇಶನ್ ಸಾಮಗ್ರಿಗಳನ್ನು ಕಡಿಮೆ ನೀರಿನಲ್ಲಿ ತುಂತುರಿ ಹನಿ ಬಳಕೆ ಮಾಡಿಕೊಂಡು ಉತ್ತಮ ಇಳುವರಿ ಪಡೆಯಲು ಸಹಕಾರಿಯಾಗಲೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನದಿಂದ ಸ್ಪಿಂಕ್ಲರ್ ಸೆಟ್ ಹಾಗೂ ಡ್ರಿಪ್ ಇರಿಗೇಶನ್ ಕಳಪೆಯಾಗಿದ್ದು ಹೊಡೆದು ಹೋಗಿ ಉಪಯೋಗಕ್ಕೆ ಬಾರದಂತಾಗಿವೆ. ರೈತರಿಗೆ ವಿತರಣೆ ಮಾಡುವ ಮುನ್ನ ವಸ್ತುಗಳು ಗುಣಮಟ್ಟವಾಗಿದೆಯೇ ಅಥವಾ ಇಲ್ಲ ಎಂದು ಕೃಷಿ ಅಧಿಕಾರಿಗಳು ಗುಣ ಮಟ್ಟ ಪರಿಶೀಲನೆ ಮಾಡಿ ಕೊಡಬೇಕು ಈಗಾಗಲೆ ರೈತಲು ಬರಗಾಲಕ್ಕೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಅನ್ನದಾತರ ಹೆಸರಿನಲ್ಲಿ ಕಳಪೆ ಗುಣಮಟ್ಟದ ಪೈಪ್ ವಿತರಣೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಡಿದೆ. ಕೃಷಿ ಇಲಾಖೆಯ ಸರ್ಕಾರದ ಸಹಾಯಧನ ಯೋಜನೆಯಲ್ಲಿ ಬಡ ರೈತರಿಗಾಗಿ ನೀಡಬೇಕಾಗಿರುವ ಪೈಪಗಳ (ಸಿಂಕ್ಲರ್ ಪೈಪ್) ಗಳನ್ನು ಸರಬರಾಜು ಮಾಡಲು ಟೆಂಡರ್ ಪಡೆದು ಕೃಷಿ ಇಲಾಖೆಯ ವತಿಯಿಂದ ಸಹಾಯಧನದ ಮೂಲಕ ಸಿಂಪರಣೆ ಪೈಪ್‌ಗಳು(ಸ್ಪಿಂಕ್ಲರ್) ಸರಬರಾಜು ಮಾಡಿದ ನಿಯಮನುಸಾರ ಸರಕಾರದ ಐಎಸ್‌ಐ ಗುಣಮಟ್ಟದ ಪೈಪ್‌ಗಳನ್ನು ಸರಬರಾಜು ಮಾಡಬೇಕಾಗಿದ್ದು ಎಲ್ಲಾ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಕಳಪೆ ಮಟ್ಟದ ಪೈಪುಗಳನ್ನು ಸರಬರಾಜು ಮಾಡಿ, ಸರ್ಕರಕ್ಕೆ ಮತ್ತು ಫಲಾನುಭವಿ ರೈತರುಗಳಿಗೆ ಮೋಸ ಮಾಡಿ ರೈತರಿಗೆ ಪೈಪ್ ವಿತರಣೆ ಏಜೆನ್ಸಿಯವರು ಪಂಗನಾಮ ಹಾಕಿರುತ್ತಾರೆ ಎಂದು ರೈತರ ಅರೋಪವಾಗಿದೆ.

ಕೃಷಿ ಇಲಾಖೆಯಿಂದ ರೈತರಿಗೆ ಸ್ಪ್ರಿಂಕ್ಲರ್ ಸೆಟ್ ಹಾಗೂ ಡ್ರಿಪ್ ಇರಿಗೇಶನ್ ಸಾಮಗ್ರಿಗಳನ್ನು ರೈತರಿಗೆ ಅನುಕೂಲ ಆಗುವಂತೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಅನುದಾನದಿಂದ ನೀವು ಕೆಲವೊಂದು ಕಂಪನಿ ಗಳಿಂದ ಪಡೆದು ರೈತರಿಗೆ ಸರಬರಾಜು ಮಾಡಲಾಗಿದೆ. ರೈತರು ಬಳಸುವಂತಹ ಅಂದರೆ ನೀವು ಕೊಡುವಂತಹ ಸ್ಪಿಂಕ್ಲರ್ ಸೆಟ್ ಹಾಗೂ ಡ್ರಿಪ್ ಇರಿಗೇಶನ್ ವಸ್ತುಗಳು ಗುಣಮಟ್ಟವಾಗಿದೆಯೇ ಅಥವಾ ಇಲ್ಲ ಎಂದು ನೀವು ಸಂಪೂರ್ಣವಾಗಿ ಟೆಸ್ಟ್ ಮಾಡಿ ಕೊಟ್ಟಿರ್ತೀರ ಆದರೆ ರೈತರು ಪಡೆದಿರುವಂತಹ ವಸ್ತುಗಳು ಕಳಪೆ ಗುಣಮಟ್ಟದಿಂದ ಒಡೆದು ಹೋಗಿರುತ್ತದೆ.
ಡಿಸೆಂಬರ್ 2022ರ ಸಾಲಿನಲ್ಲಿ ರೈತರಿಗೆ ಕೊಟ್ಟಿರುವಂತಹ ಕೆಲವು ದಾಖಲೆಗಳೊಂದಿಗೆ ಈ ದೂರಿನಲ್ಲಿ ಲಗತ್ತಿಸಿದ್ದೇನೆ.
2022ರ ಸಾಲಿನಲ್ಲಿ ಯಾರೆಲ್ಲಾ ರೈತರು ಪಡೆದಿದ್ದಾರೆ ಅವರ ಮಾಹಿತಿಯನ್ನು ಪಡೆದುಕೊಂಡು ಅವರಿಗೂ ಇದೇ ರೀತಿಯ ಸಮಸ್ಯೆ ಆಗಿದ್ದಲ್ಲಿ ಅವರಿಗೂ ಸಹ ಸ್ಪಂದಿಸಿ ಮತ್ತು ಕಳಪೆ ಗುಣಮಟ್ಟ ಸಪ್ಲೈ ಮಾಡಿರುವಂತಹ ಕಂಪನಿಗಳ ಮೇಲೆ ಕಾನೂನು ಕ್ರಮವನ್ನು ಜರುಗಿಸಬೇಕು ಎಂದು ಈ ಮೂಲಕ ಮನವಿ ಮಾಡುತ್ತಿದ್ದೇನೆ.
ಈ ವಾಟ್ಸಾಪ್ ಮನವಿಯನ್ನು ಅಧಿಕೃತ ದೂರು ಎಂದು ಪರಿಗಣಿಸಿ.
🙏 ಮಹೇಶ್ ಸಿ ನಗರಂಗೆರೆ ರಾಜ್ಯ ಸಂಘಟನಾ ಕಾರ್ಯದರ್ಶಿ ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಕಳಪೆ ಪೈಪ್ ವಿತರಿಸಿದ ಕಂಪನಿಯವರ ವಿರುದ್ದ ಕ್ರಮ ಹಾಗೂ ಅನ್ಯಾಯಕ್ಕೊಳಗಾದ ರೈತರಿಗೆ ನ್ಯಾಯ ಕೊಡಿಸುವರೇ ಕಾದು ನೋಡ ಬೇಕಿದೆ.
0 Comments