“ಸಹಕಾರ” ವಿಷಯ ಕುರಿತು ಪ್ರಬಂಧ ಸ್ಪರ್ಧೆ-ಸೂಕ್ತ ಬಹುಮಾನ

by | 25/10/23 | ಸುದ್ದಿ

ಚಿತ್ರದುರ್ಗ ಅ.25:
70ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ 2023ರ ನವೆಂಬರ್ 14 ರಿಂದ 20 ರವರೆಗೆ ಭಾರತ ದೇಶಾದ್ಯಂತ ಅರ್ಥಪೂರ್ಣವಾಗಿ ಸಪ್ತಾಹದಾಚರಣೆಯನ್ನು ಆಚರಿಸಲಾಗುವುದು. ಇದರ ಅಂಗವಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ವತಿಯಿಂದ ಸಪ್ತಾಹದ ಧ್ಯೇಯ ಹಾಗೂ ಚಿಂತನ ಮಂಥನ ವಿಷಯಗಳ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ.
ಸ್ಪರ್ಧೆಯ ನಿಬಂಧನೆಗಳು: 8 ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಆಯಕೆ ಮಾಡಿಕೊಂಡು ಪುಲ್‍ಸ್ಕೇಪ್ ಆಧಾರದ 4 ಪುಟಗಳಿಗೆ ಮೀರದಂತೆ ಪ್ರಬಂಧವನ್ನು ಬರೆಯುವುದು, ಪ್ರಬಂಧ ಸ್ಪರ್ಧೆಯಲ್ಲಿ ಲೇಖನಗಳು ಸ್ವಂತ ಚಿಂತನೆಯಿಂದ ಮೂಡಿರಬೇಕು ಕೃತಿಚೌರ್ಯ ಆಗಬಾರದು. ಕನ್ನಡ ಅಥವಾ ಇಂಗ್ಲೀಷ್‍ನಲ್ಲಿ ಬರೆಯಬಹುದು. ಪ್ರಬಂಧ ಸ್ಪರ್ಧೆಯಲ್ಲಿ ಪ್ರತಿಯೊಬ್ಬ ಸಾರ್ವಜನಿಕರು ಭಾಗವಹಿಸಬಹುದು, ಪ್ರಬಂಧವನ್ನು 2023ರ ನವೆಂಬರ್ 5ರ ಒಳಗಾಗಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ನಂ.32, ರೇಸ್‍ಕೋರ್ಸ್ ರಸ್ತೆ, ಬೆಂಗಳೂರು-560001 ಈ ವಿಳಾಸಕ್ಕೆ ಕಳುಹಿಸಬೇಕು. ತಜ್ಞರಿಂದ ಆಯ್ಕೆಯಾದ ಪ್ರಬಂಧಕ್ಕೆ ಸೂಕ್ತ ಸಂಭಾವನೆಯನ್ನು ನೀಡಲಾಗುವುದು ಹಾಗೂ ಸಹಕಾರ ವಾರ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
70ನೇ ಅಖಿಲ ಭಾರತ ಸಹಕಾರ ಸಪ್ತಾಹದ 7 ದಿನಗಳ ಆಚರಣೆಯ ಚಿಂತನ ಮಂಥನ ವಿಷಯಗಳು ಇಂತಿವೆ. ನವೆಂಬರ್ 14ರಂದು ಸಹಕಾರ ಸಂಘ ಸಂಸ್ಥೆಗಳಲ್ಲಿನ ಇತ್ತೀಚಿನ ಬೆಳವಣಿಗೆಗಳು, ನ.15ರಂದು ಸಾಲೇತರ ಸಂಘಗಳ ಪುನಶ್ಚೇತನ ಹಾಗೂ ಆರ್ಥಿಕ ಸೇರ್ಪಡೆ, ನ.16ರಂದು ಸಹಕಾರ ಸಂಸ್ಥೆಗಳನ್ನು ಡಿಜಿಟಲೀಕರಣಗೊಳಿಸಲು ತಾಂತ್ರಿಕತೆಯ ಅಳವಡಿಕೆ ಮತ್ತು ಉನ್ನತೀಕರಣ, ನ.17ರಂದು ಸಹಕಾರ ಸಂಸ್ಥೆಗಳಲ್ಲಿ ಸರಳ ವ್ಯಾಪಾರ ಪ್ರಕಿಯೆ ಮತ್ತು ಉದಯೋನ್ಮುಖ ವಲಯಗಳು, ನ.18ರಂದು ಸಾರ್ವಜನಿಕ-ಖಾಸಗಿ-ಸಹಕಾರಿ ಸಹಭಾಗಿತ್ವವನ್ನು ಬಲಪಡಿಸುವುದು, ನ.19ರಂದು ಮಹಿಳೆಯರು, ಯುವಜನ ಮತ್ತು ಅಬಲ ವರ್ಗಕ್ಕೆ ಸಹಕಾರ ಸಂಸ್ಥೆಗಳು, ನ.20ರಂದು ಸಹಕಾರ ಶಿಕ್ಷಣ, ತರಬೇತಿಯ ಪರಿಷ್ಕರಣೆ ವಿಷಯಗಳ ಚಿಂತನ ಮಂಥನ ನಡೆಯಲಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ ಪಾಟೀಲ್ ತಿಳಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *