ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಕೇಂದ್ರ ಸರ್ಕಾರ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಸಹಕಾರಿ ಕ್ಷೇತ್ರದಲ್ಲಿ ಸ್ವಾರ್ಥ ಮನೋಭಾವನೆಯಿಂದ ಅಭಿವೃದ್ಧಿ ಸಾಧಿಸಲು ಅಸಾಧ್ಯ: ಕೆಎಸ್ ನವೀನ್ ಅಭಿಮತ

by | 18/11/23 | ಸುದ್ದಿ


ಚಳ್ಳಕೆರೆ ನ18:ಸಹಕಾರಿ ಕ್ಷೇತ್ರದಲ್ಲಿ ವ್ಯಾಪಾರಿ ಮನೋಭಾವ ಅಥವಾ ವೈಯಕ್ತಿಕ ಲಾಭ ಮಾಡಬೇಕು ಎಂದು ಬಯಸುವವರು ಸಹಕಾರ ಕ್ಷೇತ್ರಕ್ಕೆ ಬರಬಾರದು. ತಾನು ನಿರ್ವಹಿಸುವ ಸಹಕಾರಿ ಕ್ಷೇತ್ರದ ಎಲ್ಲಾ ಸದಸ್ಯರಿಗೂ ಒಳ್ಳೆಯದಾಗಲಿ ಎಂದು ಬಯಸುವ ಮನೋಭಾವ ಹೊಂದಿದ್ದರೆ ಮಾತ್ರ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಕೆ ಎಸ್ ನವೀನ್ ಕಿವಿ ಮಾತು ಹೇಳಿದರು.

ನಗರದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಹಕಾರಿ ಕ್ಷೇತ್ರದ ಬೆಳವಣಿಗೆಯಲ್ಲಿ ಸಿದ್ದಪ್ಪಗೌಡ ಪಾಟೀಲ್ ರವರ ಕೊಡುಗೆ ಅಪಾರವಾಗಿದೆ‌. ಉತ್ತರ ಕರ್ನಾಟಕದಲ್ಲಿ ಸಹಕಾರ ಕ್ಷೇತ್ರದ ಬೆಳವಣಿಗೆ ಉತ್ತಮವಾಗಿದೆ ಆದರೆ ನಮ್ಮ ಮಧ್ಯ ಕರ್ನಾಟಕದಲ್ಲಿ ಇಂತಹ ಬೆಳವಣಿಗೆ ಇತ್ತೀಚಿನ ವರ್ಷಗಳಲ್ಲಿ ಕಾಣಬಹುದಾಗಿದೆ ಹಾಲು, ಉಣ್ಣೆ, ಬ್ಯಾಂಕ್, ಸೇರಿದಂತೆ ಎಲ್ಲಾ ವಲಯಗಳಲ್ಲಿ ಸಹಕಾರ ಕ್ಷೇತ್ರ ತನ್ನ ಚಾಪನ್ನು ಮೂಡಿಸುತ್ತಾ  ಬರುತ್ತಿದೆ ಸ್ವತಂತ್ರ ಬಂದ ನಂತರ ಇಷ್ಟು ದೊಡ್ಡ ಮಟ್ಟಕ್ಕೆ ಸಹಕಾರಿ ಕ್ಷೇತ್ರ ಬೆಳೆಯುತ್ತಾ ಬಂದಿದ್ದರು ವ್ಯವಸ್ಥಿತವಾದ ರೂಪ ಕೊಡುವಲ್ಲಿ ಹಿಂದಿನ ಸರ್ಕಾರಗಳು ವಿಫಲವಾಗಿದ್ದವು. ಸಹಕಾರ ಕ್ಷೇತ್ರಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಪ್ರಥಮ ಬಾರಿಗೆ ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಸ್ಥಾಪಿಸಿದೆ ಅಲ್ಲದೆ ಸಹಕಾರ ಕ್ಷೇತ್ರದ ಅನುಕೂಲಕ್ಕಾಗಿ ಹಲವಾರು ಸುಧಾರಣ ಕಾಯ್ದೆಗಳನ್ನು ಜಾರಿಗೆ ತಂದು ಈ ಕ್ಷೇತ್ರಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಇತ್ತೀಚಿನ ದಿನಗಳಲ್ಲಿ ಸಹಕಾರಿ ಬ್ಯಾಂಕುಗಳ ಮೂಲಕ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸಲು ಚಾಲನೆ ನೀಡಲಾಗಿದೆ ಈ ಬೆಳವಣಿಗೆ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿದೆ ಇದರಿಂದಾಗಿ ಈ ಸಹಕಾರಿ ವಲಯ ಮುಂದಿನ ದಿನಗಳಲ್ಲಿ ಉತ್ತಮ ರೀತಿಯ ಬೆಳವಣಿಗೆ ಹೊಂದಲ ಅನುಕೂಲವಾಗುತ್ತದೆ


ಚಳ್ಳಕೆರೆ ತಾಲೂಕಿನ ರೈತರು ಮಳೆ ಆಧಾರವಾಗಿಟ್ಟುಕೊಂಡು ಕೃಷಿ ಮಾಡುವಂತವರಾಗಿದ್ದು ಮಳೆ ಕೈಕೊಟ್ಟಲ್ಲಿ ಅನೇಕ ರೀತಿಯ ಸಮಸ್ಯೆಗಳು ಎದುರಾಗುತ್ತವೆ ಇಂತಹ ಶ್ರಮ ಜೀವಿ ರೈತರ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಸಹಕಾರ ಕ್ಷೇತ್ರದ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸಬೇಕಿದೆ ಜಿಲ್ಲೆಯನ್ನು ಸಹಕಾರಿ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸದಾ ನಿಮ್ಮ ಜೊತೆಗಿರುತ್ತೇನೆ ಸಹಕಾರಿ ಕ್ಷೇತ್ರದ ಯಾವುದೇ ಸಮಸ್ಯೆಗಳಿದ್ದರೂ ಅಧಿಕಾರಿಗಳೊಂದಿಗೆ ಹಾಗೂ ಸರ್ಕಾರದೊಂದಿಗೆ ಚರ್ಚಿಸಲು ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಜಿಪಿ ಯಶವಂತ ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ಸಹಕಾರಿ ಕ್ಷೇತ್ರದ ಬೆಳವಣಿಗೆ ಮಾಡುತ್ತೇವೆ ಎಂದು ಕೇವಲ ವೇದಿಕೆಗಳಲ್ಲಿ ಭಾಷಣ ಮಾಡಿದರೆ ಸಾಲದು ಸಾರ್ವಜನಿಕರಿಗೆ ಸಹಕಾರ ಕ್ಷೇತ್ರದ ಅರಿವು ಮೂಡಿಸಿದಾಗ ಮಾತ್ರ ಈ ಕ್ಷೇತ್ರ ಬದಲಾವಣೆ ಕಾಣಲು ಸಾಧ್ಯ ಒಂದು ಸಹಕಾರ ಸಂಘ ಉತ್ತಮವಾಗಿ ನಡೆಯಲು ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳು ತಮ್ಮ ವೃತ್ತಿಪರತೆಯನ್ನು ತೋರಿದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಸಹಕಾರಿ ಸಂಸ್ಥೆಗಳು ಗಣಕಯಂತ್ರದ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಿದಾಗ ಜನರಲ್ಲಿ ನಂಬಿಕೆ ಉಂಟಾಗಿ ಈ ಕ್ಷೇತ್ರದ ಬಗ್ಗೆ ಜ್ಞಾನ ಬೆಳೆಸಿಕೊಳ್ಳಲು ಮುಂದಾಗುತ್ತಾರೆ ಇದರಿಂದ ಮಹಿಳಾ ಸಬಲೀಕರಣ ಸೇರಿದಂತೆ ಸಾಲ ಸೌಲಭ್ಯ ನೀಡುವುದು ಲಾಭ ಮಾಡುವುದು ಸೇರಿದಂತೆ ಎಲ್ಲವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಮಾತೃಶ್ರೀ ಎನ್ ಮಂಜುನಾಥ್ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಸಿ ವೀರಭದ್ರ ಬಾಬು ಆರ್ ರಾಮರೆಡ್ಡಿ ಆದಿ ಭಾಸ್ಕರಯ್ಯ ಶ್ರೇಷ್ಠಿ ಜಿಂಕಲ್ ಬಸವರಾಜ್ ವಿನೋದ ಸ್ವಾಮಿ ಆರ್ ಮಲ್ಲೇಶಪ್ಪ ಮಲ್ಲಿಕಾರ್ಜುನಪ್ಪ ಶರಣಪ್ಪ ಜಯಪ್ರಕಾಶ್, ಬಶೀರ್ ಖಾನ್ ದೀಪಕ್ ಸತೀಶ್ ರೆಡ್ಡಿ ನಯಾಜ್ ಎಸ್ ಜೆ ಕೃಷ್ಣಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *