ಚಿತ್ರದುರ್ಗ ಆ.13ಟೆಕ್ಸಾಸ್ ಇನ್‌ಸ್ಟೃಮೆಂಟಲ್ ಅಂಡ್ ಯೂತ್ ಫಾರ್ ಸೇವಾ ಆರ್ಗನೈಸೇಷನ್ ವತಿಯಿಂದ ಸಜ್ಜನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್ಸ್ ಮತ್ತು ಲೇಖನಿ ಸಾಮಗ್ರಿಗಳ ವಿತರಣೆ
ಸರ್ಕಾರೇತರ ಸಂಘ ಸಂಸ್ಥೆಗಳೂ ಸೇರಿದಂತೆ ವಿವಿಧ ಸಮುದಾಯಗಳ ಉಳ್ಳವರು ಅವರವರ ಗ್ರಾಮಗಳ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಅಗತ್ಯ ಪ್ರೋತ್ಸಾಹ ಸಹಕಾರ ನೀಡಬೇಕು ಎಂದು ಟೆಕ್ಸಾಸ್ ಇನ್‌ಸ್ಟೃಮೆಂಟಲ್ ಅಂಡ್ ಯೂತ್ ಫಾರ್ ಸೇವಾ ಆರ್ಗನೈಸೇಷನ್ ಸಂಸ್ಥೆಯ ಸಂಯೋಜಕ ಆಂಜನೇಯ ದೀಕ್ಷಿತ್ ಹೇಳಿದರು
ಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ಸಜ್ಜನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಟೆಕ್ಸಾಸ್ ಇನ್‌ಸ್ಟೃಮೆಂಟಲ್ ಅಂಡ್ ಯೂತ್ ಫಾರ್ ಸೇವಾ ಆರ್ಗನೈಸೇಷನ್, ಗ್ರಾಮದ ಹಳೇವಿದ್ಯಾರ್ಥಿಗಳ ಸಂಘ ಶಾಲಾ ಶಿಕ್ಷಣ ಇಲಾಖೆ, ಶಾಲಾ ಸಮಿತಿಯ ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳ ವಿತರಣಾ ಸಮಾರಂಭ ಹಾಗೂ ಸಮುದಾಯದ ಜನರಲ್ಲಿ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಲೇಖನಿ ಸಾಮಗ್ರಿಗಳ ವಿತರಿಸಿ ಮಾತನಾಡಿದರು
ಗಡಿಭಾಗದ ಶಾಲೆಗೆ ಲೇಖನಿ ಸಾಮಗ್ರಿಗಳ ಪೂರೈಕೆ, ಮೂಲ ಸೌಲಭ್ಯಗಳನ್ನು ಪೂರೈಸುವ ಮೂಲಕ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಶಿಕ್ಷಕರ ಮನೋಸ್ಥೈರ್ಯವನ್ನು ಹೆಚ್ಚಿಸಿದ್ದಾರೆ ಇಂತಹ ಉಪಯುಕ್ತ ಕೆಲಸಗಳನ್ನು ನಾವಿಂದು ಮಾಡುವ ಉದಾರತೆ ಬೆಳೆಸಿಕೊಳ್ಳಬೇಕು ಎಂದರು
ಮುಖ್ಯಶಿಕ್ಷಕ ಎಸ್ ವೆಂಕಟೇಶ ಮಾತನಾಡಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ಸರ್ಕಾರಿ ಶಾಲೆಗಳ ಮಕ್ಕಳಿಗೆ ಬೆಲೆ ಬಾಳುವ ಲೇಖನಿ ಸಾಮಗ್ರಿಗಳು, ಶಾಲಾ ಬ್ಯಾಗ್ಸ್, ಮಕ್ಕಳಿಗೆ ಸಿಹಿಯನ್ನು ನೀಡುವ ಮುಖೇನ ಪ್ರಾದೇಶಿಕ ಅಭಿಮಾನ, ಪ್ರೀತಿಯಿಂದ ಉದಾರತೆ ಮೆರೆದಿದ್ದಾರೆ ಈ ಶೈಕ್ಷಣಿಕ ವರ್ಷದುದ್ದಕ್ಕೂ ಪ್ರಾಥಮಿಕ ಹಂತದ ಯಾವ ವಿದ್ಯಾರ್ಥಿಯೂ ಸಹ ಮತ್ತೆ ಲೇಖನಿ ಸಾಮಗ್ರಿಗಳನ್ನು ಕೊಂಡುಕೊಳ್ಳುವ ಪ್ರಮೇಯವೇ ಇಲ್ಲದಂತೆ ಸಂಘದವರು ಸಾಕಷ್ಟು ಕಲಿಕಾ ಸಾಮಗ್ರಿಗಳನ್ನು ನೀಡಿದ್ದಾರೆ ಎಂದರು
ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಶಕುಂತಲಾ, ಗೀತಾ, ರಮೇಶ, ಹಳೇವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ದೊಡ್ಡಬಸಪ್ಪ, ಶಾಲಾ ಸಮಿತಿಯ ಅಧ್ಯಕ್ಷ ನಿಂಗಪ್ಪ, ಸಿದ್ದೇಶಪ್ಪ, ಮುಖ್ಯಶಿಕ್ಷಕ ಎಸ್ ವೆಂಕಟೇಶ, ಶಿಕ್ಷಕರಾದ ಆರ್ ಸತೀಶ, ಕೆ ಬಿ ರವಿ, ಬಿ ಆರ್ ಶ್ರೀಲಕ್ಷ್ಮಿ .ಸಿ ನಿರ್ಮಲಾ, ಶಾಲಾ ಸಮಿತಿಯ ಪದಾಧಿಕಾರಿಗಳಾದ ರತನ್‌ಶೆಟ್ರು, ನೀಲಮ್ಮ, ನಾಗರತ್ನಾ, ಸಂಸ್ಥೆಯ ಪದಾಧಿಕಾರಿಗಳು ಶಾಲಾ ವಿದ್ಯಾರ್ಥಿಗಳು ಅಡುಗೆ ಸಿಬ್ಬಂದಿ ಗ್ರಾಮಸ್ಥರು ಇದ್ದರು
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments