ಚಿತ್ರದುರ್ಗ ಸೆ.7:
ಚಿತ್ರದುರ್ಗ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ನ್ಯಾಕ್‍ನಿಂದ ‘ಬಿ’ ಗ್ರೇಡ್ ಸಿಜಿಪಿಎ 2.31 ಮಾನ್ಯತೆ ದೊರೆತಿದ್ದು, ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್‍ನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲೇಜಿನ ಪರವಾಗಿ ಪ್ರಾಂಶುಪಾಲ ಡಾ.ಹೆಚ್.ಗುಡ್ಡದೇಶ್ವರಪ್ಪ ಅವರಿಗೆ ಅಭಿನಂದನಾ ಪತ್ರ ಪ್ರಧಾನ ಮಾಡಿದರು.
2013-14ನೇ ಸಾಲಿನಲ್ಲಿ ಆರಂಭವಾದ ಮಹಿಳಾ ಕಾಲೇಜಿಗೆ 10 ವರ್ಷಗಳು ಆಗಿದೆ. ವಿದ್ಯಾರ್ಥಿಗಳ ಸಂಖ್ಯೆ 850 ಇದ್ದು, ಬಿ.ಎ, ಬಿ.ಕಾಂ ಪದವಿ ತರಗತಿಗಳು ನಡೆಯುತ್ತವೆ. ನ್ಯಾಕ್ ಕೌನ್ಸಿಲ್ 2023ರ ಜೂನ್ 15, 16ರಂದು ಕಾಲೇಜಿನ ಗುಣಮಟ್ಟಗಳನ್ನು ತಪಾಸಣೆ ಮಾಡಲು ನ್ಯಾಕ್ ತಂಡ ಕಳುಹಿಸಲಾಗಿತ್ತು. ಹರ್ಯಾಣದ ಕುಲಪತಿ ಡಾ. ರಾಜಕುಮಾರ್ ಮಿಟ್ಟಲ್ ಅಧ್ಯಕ್ಷತೆಯಲ್ಲಿ ಮಹಾರಾಷ್ಟ್ರದ ಡಾ. ಶುಭಾ ತಿವಾರಿ ಸದಸ್ಯ ಕಾರ್ಯದರ್ಶಿಯಾಗಿ ಕಾಲೇಜಿಗೆ ಆಗಮಿಸಿ ಪ್ರವೇಶ, ಫಲಿತಾಂಶ, ಕಟ್ಟಡ, ಮೂಲಭೂತ ಸೌಕರ್ಯ, ವಿದ್ಯಾರ್ಥಿವೇತನ, ಹಾಸ್ಟೆಲ್ ಸೌಲಭ್ಯ, ಕಛೇರಿ ನಿರ್ವಹಣೆ, ಲೆಕ್ಕಪತ್ರ ನಿರ್ವಹಣೆ, ಆಟದ ಮೈದಾನ, ಗ್ರಂಥಾಲಯ ಸೌಲಭ್ಯ, ಕ್ರೀಡಾ ಸೌಲಭ್ಯ, ಪ್ರಾಧ್ಯಾಪಕರ ಸಂಶೋಧನೆ, ಬೋಧನೆ, ಎಲ್ಲವನ್ನೂ ಪರಿಶೀಲಿಸಿ ನ್ಯಾಕ್ ಕೌನ್ಸಿಲ್‍ಗೆ ರಹಸ್ಯ ವರದಿ ನೀಡಿತ್ತು. ಸ್ವಂತ ಕಟ್ಟಡ ಇಲ್ಲದೇ ಇದ್ದಾಗ್ಯೂ ಗುಣಮಟ್ಟ ಶಿಕ್ಷಣ ಹಾಗೂ ಇತರೆ ಸೌಲಭ್ಯವನ್ನು ಗಮನಿಸಿದ ನ್ಯಾಕ್ ಕೌನ್ಸಿಲ್ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ‘ಬಿ’ ಗ್ರೇಡ್ ಸಿಜಿಪಿಎ 2.31 ನೀಡಿ ಮುಂದಿನ 5 ವರ್ಷದ ವರೆಗೆ ನ್ಯಾಕ್ ಮಾನ್ಯತೆ ನೀಡಿದೆ.
ಕಾಲೇಜು ಪ್ರಾರಂಭವಾಗಿ ಸ್ವಂತ ಕಟ್ಟಡ ಇಲ್ಲದೇ ಇದ್ದಾಗ್ಯೂ 10 ವರ್ಷದೊಳಗೆ ನ್ಯಾಕ್ ಪ್ರಕ್ರಿಯೆಗೆ ಒಳಪಟ್ಟ ಕರ್ನಾಟಕದ ಮೊದಲ ಕಾಲೇಜಾಗಿದೆ. ಇದನ್ನು ಉನ್ನತ ಶಿಕ್ಷಣ ಇಲಾಖೆಯ ಸಚಿವರ ಉಪಸ್ಥಿತಿಯಲ್ಲಿ ಅಭಿನಂದನಾ ಪತ್ರ ಪ್ರಧಾನ ಮಾಡಲಾಯಿತು.
ಸಮಾರಂಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕ ಡಾ.ಶಿವಣ್ಣ ಇದ್ದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ನ್ಯಾಕ್‍ನಿಂದ ‘ಬಿ’ ಗ್ರೇಡ್ ಮಾನ್ಯತೆ ಮುಖ್ಯಮಂತ್ರಿಗಳಿಂದ ಅಭಿನಂದನಾ ಪತ್ರ ಪ್ರಧಾನ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments