ಹಿರಿಯೂರು :
ಇದುವರೆಗೂ ನಮ್ಮನ್ನಾಳಿದ ಎಲ್ಲಾ ಸರ್ಕಾರಗಳ ಇಚ್ಛಾಶಕ್ತಿಯ ಕೊರತೆಯ ಫಲವಾಗಿ ವಾಣಿವಿಲಾಸ ಸಾಗರಕ್ಕೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸಲಾಗಲಿಲ್ಲ ಎಂಬುದಾಗಿ ಮಾಜಿ ಸಂಸದ ಹಾಗೂ ಜಿಲ್ಲಾ ನೀರಾವರಿ ಹೋರಾಟಗಾರ ಪಿ.ಕೋದಂಡರಾಮಯ್ಯ ಹೇಳಿದರು.
ತಾಲ್ಲೂಕಿನ ವಾಣಿವಿಲಾಸಪುರ ಗ್ರಾಮದಲ್ಲಿ ಮಂಗಳವಾರದಂದು ನಾಗರೀಕ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾಣಿವಿಲಾಸ ಸಾಗರಕ್ಕೆ “ಬಾಗಿನ ಸಮರ್ಪಣೆ” ಹಾಗೂ ಜಿಲ್ಲಾ ನೀರಾವರಿ ಹೋರಾಟಗಾರರಿಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಬರದ ನಾಡಾಗಿದ್ದ ನಮ್ಮ ಚಿತ್ರದುರ್ಗ ಜಿಲ್ಲೆಯ ಜನರ ಹಾಗೂ ಜಿಲ್ಲಾ ನೀರಾವರಿ ಹೋರಾಟಗಾರರ, ಅನೇಕ ರೈತಮುಖಂಡರುಗಳ, ಪ್ರಗತಿಪರ ಸಂಘಟನೆಗಳ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಬಂದಿಯೇ ಹೊರತು, ಇದರಲ್ಲಿ ಯಾವುದೇ ರಾಜಕಾರಣಿಗಳ ಪರಿಶ್ರಜಮ ಇಲ್ಲ ಎಂಬುದಾಗಿ ಅವರು ಹೇಳಿದರು.
ಈ ವರ್ಷ ಮಳೆಗಾಲದಲ್ಲಿ ಹೆಚ್ಚು ಮಳೆ ಸುರಿದ ಪರಿಣಾಮ ಹಾಗೂ ವಾಣಿವಿಲಾಸ ಸಾಗರಕ್ಕೆ ಭದ್ರಾ ಜಲಾಶಯದಿಂದ ನೀರು ಹರಿಸಿದ ಪರಿಣಾಮ ಸುಮಾರು 89 ವರ್ಷಗಳ ಬಳಿಕ ವಾಣಿವಿಲಾಸ ಜಲಾಶಯ ಕೋಡಿ ಹರಿದಿದ್ದು, ಜಿಲ್ಲೆಯ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ ಎಂದರಲ್ಲದೆ,
ಅಂದಿನ ನೀರಾವರಿ ಸಚಿವರಾಗಿದ್ದ ಎಚ್.ಕೆ.ಪಾಟೀಲ್ ರವರು ನೀರಿನ ಲಭ್ಯತೆ ತೋರಿಸಿದರೆ ನೀರಿನ ಯೋಜನೆ ಮಂಜೂರು ಮಾಡುತ್ತೇನೆ ಎಂದು ಹೇಳಿದ್ದರು. ಅದರಂತೆ ಅಂಕಿ, ಅಂಶ, ಸಾಧಕ, ಬಾಧಕಗಳ ಸಮೇತ ಸಂಬಂಧಪಟ್ಟವರಿಗೆ ಮನವರಿಕೆ ಮಾಡಿದೆವು. 2003 ಸಪ್ಟೆಂಬರ್ ನಲ್ಲಿ ಭದ್ರಾ ಯೋಜನೆ ಅನುಮೋದನೆ ಆಯಿತು ಎಂಬುದಾಗಿ ಹೇಳಿದರು.
ಈ ಭಾಗದ ಜನರ ಮಹತ್ವಾಕಾಂಕ್ಷೆ ಯೋಜನೆಯಾದ ತುಮಕೂರು-ದಾವಣಗೆರೆಯಲ್ಲಿ ನೇರರೈಲು ಯೋಜನೆಯ ಕೆಲಸ ಶುರುವಾಗಿದ್ದು, ಚಿತ್ರದುರ್ಗದಲ್ಲೂ ತ್ವರಿತವಾಗಿ ಮಾಡಲು ಒತ್ತಾಯಿಸಲಾಗುವುದು. ಈ ನೇರರೈಲು ಮಾರ್ಗ ಪೂರ್ಣಗೊಂಡಲ್ಲಿ ದಾವಣಗೆರೆ-ಬೆಂಗಳೂರು ನಡುವಿನ ಅಂತರ 90 ಕಿ.ಮೀಗಳಷ್ಟು ಕಡಿಮೆಯಾಗುತ್ತದೆ ಎಂಬುದಾಗಿ ಹೇಳಿದರು.
ಸಾಹಿತಿ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿಚುನಾವಣೆ ಸಂದರ್ಭದಲ್ಲಿ ಈ ಭಾಗದ ಜನಪ್ರತಿನಿಧಿಗಳು ಭದ್ರಾ ಮೇಲ್ದಂಡೆ ಯೋಜನೆಯನ್ನ ಟ್ರಂಪ್ ಕಾರ್ಡ್ ಆಗಿ ಮಾತ್ರ ಬಳಸುತ್ತಿದ್ದರು, ಆದರೆ ಕೋದಂಡರಾಮಯ್ಯರವರು ಸಂಸತ್ತಿನಲ್ಲಿ ಖಾಸಗಿ ನಿಲುವಳಿ ಮಂಡಿಸುವ ಮೂಲಕ, ಈ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಜಾರಿಗೆ ಮೊದಲ ಪ್ರಯತ್ನ ಆರಂಭಿಸಿ, ಈ ಹೋರಾಟದಲ್ಲಿ ಕೊನೆಯವರೆಗೂ ಜೊತೆಯಲ್ಲಿದ್ದರು ಎಂಬುದಾಗಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಮುಖಂಡರುಗಳಾದ ಜಿ.ಎಸ್.ಉಜ್ಜಿನಪ್ಪ, ಕೂನಿಕೆರೆ ರಾಮಣ್ಣ, ನರೇನಳ್ಳಿ ಅರುಣ್ ಕುಮಾರ್, ನುಲೇನೂರುಶಂಕರಪ್ಪ, ಕೆ.ಟಿ.ರುದ್ರಮುನಿ, ಆರ್.ಶೇಷಣ್ಣಕುಮಾರ್, ಶಿವಪ್ರಕಾಶ್ ದಗ್ಗೆ, ಮಹೇಶ್ ಬಾಬು, ಸಿದ್ದರಾಮಣ್ಣ, ಎ.ಕೃಷ್ಣಸ್ವಾಮಿ, ಕೆ.ಸಿ.ಹೊರಕೇರಪ್ಪ, ಲಕ್ಷ್ಮಣ್, ವೇದಾ ಶಿವಕುಮಾರ್, ಕೆ.ಟಿ.ತಿಪ್ಪೇಸ್ವಾಮಿ, ಎನ್.ಲಕ್ಷ್ಮೀಕಾಂತ್, ಗುರುರಾಜ್ ಜಟಂಗಿ, ವೀರಪ್ಪ, ರುಕ್ಮಿಣಿ, ಮುರುಗೇಶ್, ಶಾಂತಿ, ತಿಮ್ಮಕ್ಕ, ನಾಗರಾಜ್, ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ರೈತಮುಖಂಡರಾದ ಸೋಮಗುದ್ದು ರಂಗಸ್ವಾಮಿ, ನುಲೇನೂರು ಶಂಕರಪ್ಪ, ರೈತಮುಖಂಡ ಕೆ.ಪಿ.ಭೂತಯ್ಯ, ಗನ್ನಾಯಕನಹಳ್ಳಿ ಮಹೇಶ್, ಡಿಸಿಸಿಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್.ಲಕ್ಷ್ಮೀಕಾಂತ್, ಸಿ.ವೀರಭದ್ರಬಾಬು, ಮೀನಾಕ್ಷಿ ನಂದೀಶ್, ಧನಂಜಯ್ ಕುಮಾರ್, ಎಂ.ಡಿ.ರವಿ, ವೇದಾ ಶಿವಕುಮಾರ್, ವಿವಿಪುರ ವಿಶ್ವನಾಥ್, ಅಷ್ಟಕ್ ಅಹಮದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸರ್ಕಾರಗಳಇಚ್ಛಾಶಕ್ತಿಯ ಕೊರತೆಯಿಂದಾಗಿ ಭದ್ರಾಮೇಲ್ದಂಡೆ ಯೋಜನೆಯನ್ನ ಜಾರಿಗೊಳಿಸಲಾಗಿರಲಿಲ್ಲ ಜಿಲ್ಲಾ ನೀರಾವರಿ ಹೋರಾಟಗಾರ ಪಿ.ಕೋದಂಡರಾಮಯ್ಯ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments