ಸರಕಾರಿ ಶಾಲಾ ಮಕ್ಕಳಿಗೆ ಮೂಲ ಭೂತ ಸೌಲಭ್ಯಗಳನ್ನು ಒದಗಿಸಲು ದತ್ತು ಪಡೆಯಲು ಮುಂದಾಸದ ಸಂಸ್ಥೆ

by | 14/02/23 | ಸುದ್ದಿ

ಚಳ್ಳಕೆರೆ ಫೆ 14ಎಲಿಮೆಂಟ್ ಪೋರ್ಟಿನ್ ಕಂಪನಿಯಿAದ ತಾಲ್ಲೂಕಿನ ೬ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳು ಕಲ್ಪಿಸಲಾಗುವುದು ಎಂದು ಕಂಪನಿಯ ವಿವೇಕ ಅಗ್ರವಾಲ್ ನಗರದಲ್ಲಿ ಮಾಹಿತಿ ನೀಡಿದರು.
ನಗರದ ಪ್ರವಾಸಿ ಮಂದಿರಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಎಲ್ಮೆಂಟ್ ಪೊರ್ಟಿನ್ ಕಂಪಿಯು ತಾಲ್ಲೂಕಿನಲ್ಲಿ ಶಿಕ್ಷಣ ಕ್ರಾಂತಿ ಮಾಡುತ್ತಿದೆ. ತಾಲ್ಲೂಕಿನ ನನ್ನಿವಾಳ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ, ಬಂಗಾರದೇವರಹಟ್ಟಿ ಸ.ಹಿ.ಪ್ರಾ.ಶಾಲೆ, ಜಾಜೂರು, ಭರಮಸಾಗರ, ಹುಲಿಕುಂಟೆ, ಚನ್ನಮ್ಮನಾಗತಿಹಳ್ಳಿ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಂದು ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಿ ಒಂದು ಕಂಪ್ಯೂಟರ್, ಪ್ರಜಕ್ಟರ್ ಕಲ್ಪಿಸಲಾಗುವುದು. ಶಾಲೆಗಳಲ್ಲಿರುವ ಶೌಚಾಲಯಗಳ್ನು ಅಭಿವೃದ್ಧಿ ಪಡಿಸಲಾಗುವುದು ಹಾಗೂ ಶಾಲಾ ಮಕ್ಕಳಿಗೆ ಶುದ್ದ ಕುಡಿಯುವ ನೀರಿನ ಘಟಕ, ಮಕ್ಕಳ ಕಲಿಕೆಗಾಗಿ ನಲಿ-ಕಲಿ ಡೆಸ್ಕ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಈ ವೇಳೆ ಎಲ್ಮೆಂಟ್ ಕಂಪನಿಯ ಕಿರಣ ಕುಮಾರ್, ರಾಜೇಶ್, ಶ್ರೀದೇವಿ, ಶೃತಿ ಸೇರಿದಂತೆ ಮುಂತಾದವರು ಇದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *