ಚಳ್ಳಕೆರೆ ಕೋವಿಡ್ ನಾಲ್ಕನೇ ಹಲೆ ಬರುವ ನಿರೀಕ್ಷೆಯಿಂದ ಮುಂಜಾಗ್ರತೆಯಾಗಿ ಸರಕಾರಿ ಕಚೇರಿ ಸಿಬ್ಬಂದಿ ಹಾಗೂ ಕಚೇರಿಗೆ ಬರುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು. ನಗರದ ತಾಲೂಕು ಕಚೇರಿಯಲ್ಲಿ ಕೊವಿಡ್ ನಾಲ್ಕನೇ ಹಲೆ ಮುಂಜಾಗ್ರತೆಯಾಗಿ ತಡೆಯಲು ಅಗತ್ಯ ಕ್ರಮಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು.. ಸಭೆ ಸಮಾರಂಭ. ವಿವಾಹ ನೂರಕ್ಕಿಂತ ಹೆಚ್ಚು ಜನರು ಸೇರು ಕಾರ್ಯಕ್ರಮನ್ನು ಆಚರಣೆ ಮಾಡಲು ಅನು ಮತಿ ನೀಡುವುದಿಲ್ಲ. ಹೋಟೆಲ್. ಡಾಬ. ಪಬ್. ಬಾರ್ ಮತ್ತು ರೆಷ್ಟೋರೆಂಟ್ ಗಳಲ್ಲಿ ಕೆಸಲ ಮಾಡುವ ಕಾರ್ಮಿಕರು ಕಡ್ಡಾಯವಾಗಿ ಕೋವಿಡ್ ಲಸಿಕಿ ಹಾಕಿಸಿಕೊಂಡಿರ ಬೇಕು ಜತೆ ಮಾಸ್ಕ್ ಕಡ್ಡಾಯವಾಗಿ ಧರಿಸ ಬೇಕು. ಸರಕಾರಿ ಕಚೇರಿ ಸಿಬ್ಬಂದಿ.ಪತ್ರಕರ್ತರುಬಸೇರಿದಂತೆ ಬೂಷ್ಟರ್ ಡೋಜ್ ಹಾಕಿಸಿಕೊಳ್ಳಬೇಕು. ಬುಧವಾರದಿಂದ ಎರಡು ದಿನಗಳ ಕಾಲ ಸಾರ್ವಜನಿಕರಿಗೆ ಮಾಸ್ಕ್ ಜಾಗೃತಿ ಅರಿವು ಜಾಥ ಕಾರ್ಯಕ್ರಮ ನಡೆಸಲಾಗುದು. ನಾಲಕ್ನನೆ ಹಲೆ ಕೋವಿಡ್ ಸೋಂಕು ತಡೆಯಲು ಚಳ್ಳಕೆರೆ ನಗರದ 100 ಹಾಸಿಗೆ ಆಸ್ಪತ್ರೆ ಹಾಗೂ ನಾಯಕನಹಟ್ಟಿ 30 , ಒಟ್ಟು 130 ಹಾಸಿಗೆ ಕೋವಿಡ್ ಆಸ್ಪತ್ರೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಹಾಗೂ ರಾಜ್ಯ ಸರಕಾರ ಕೋವಿಡ್ ನಿಯಂತ್ರಣಕ್ಕೆ ಜಾರಿಗೊಳಿಸಿದ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಸ್ಥಳ. ಶಾಲಾ ಕಾಲೇಜುಗಳಲ್ಲಿ ಸಾಮಾಜಿಕ ಹಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು
0 Comments