ಸಮಾಜ ಅಭಿವೃದ್ಧಿಯತ್ತ ಸಾಗುತ್ತಿದ್ದರು ಅಶಕ್ತರಿಗೆ ಸಮಾಜಮುಖಿ ಉಚಿತ ಸೇವೆಗಳು ಸಿಗುತ್ತಿರುವುದು ಸ್ವಾಗತಾರ್ಹ: ಡಾ. ರಾಜಾರಾಂ ಸ್ವಾಮೀಜಿ ಅಭಿಮತ 

by | 02/06/24 | ಆರೋಗ್ಯ

ಚಳ್ಳಕೆರೆ: ಇಂದಿನ ಸಮಾಜ ಅಭಿವೃದ್ಧಿಯತ್ತಾ ಸಾಗುತ್ತಿದೆ, ನಿಜ. ಆದರೆ ಮೂಲಭೂತವಾಗಿ ಬಡವ- ಶ್ರೀಮಂತ, ಅಕ್ಷರಸ್ಥ- ಅನಕ್ಷರಸ್ಥ, ಆರೋಗ್ಯ ಸೇವೆಯನ್ನು ಪಡೆಯಲು ಶಕ್ತರಾದ ಹಾಗೂ ಅಶಕ್ತರಾದ ನಡುವಿನ ಕಂದಕ ಮಾತ್ರ ಹೆಚ್ಚುತ್ತಲೆ ಸಾಗಿದೆ. ಇಂತಹ ಸನ್ನಿವೇಶದಲ್ಲಿ ಈ ರೀತಿಯ ಸಮಾಜಮುಖಿ ಉಚಿತ ಸೇವೆಗಳು ಸ್ವಾಗತಾರ್ಹ ಎಂದು ಶ್ರೀ ನರಹರೇಶ್ವರ ಆಶ್ರಮದ ಡಾ.ರಾಜಾರಾಮ್ ಸ್ವಾಮೀಜಿ ಅಭಿಪ್ರಾಯಪಟ್ಟರು

ನಗರದ ಶ್ರೀ ನರಹರಿ ಸೇವಾ ಪತಿಷ್ಠಾನ ಎಂಆರ್‌ಟಿ ಗ್ರಾಮಾಂತರ ಕಣ್ಣಿನ ಆಸ್ಪತ್ರೆ ಹಾಗೂ ವಾಸವಿ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿ ಇವರ ಸಂಯುಕ್ತ ಆಶ್ರಯದಲ್ಲಿ ನರಹರೇಶ್ವರ ದೇವಸ್ಥಾನದ ಆವರಣದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಕಣ್ಣಿನ ಶಸ್ತ್ರಚಿಕಿತ್ಸೆ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜದ ಪರಿಕಲ್ಪನೆಯಲ್ಲಿ ಜರಗುವ ಪ್ರತಿ ಕೆಲಸಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೇರಲು ಸಹಕಾರಿಯಾಗುತ್ತದೆ ಬಿಸಿ ಸಂಜೀವ್ ಮೂರ್ತಿಯವರ ಇಂತಹ ಸೇವಾ ಮನೋಭಾವದ ಪ್ರತಿ ಕಾರ್ಯಕ್ರಮಗಳು ಸದಾ ಇಂತಹ ಯೋಚನೆಗೆ ಪೂರಕವಾಗಿ ನಡೆಯುತ್ತವೆ. ಇಂದು ಜರುಗುತ್ತಿರುವ ಉಚಿತ ನೇತ್ರಾ ತಪಾಸಣಾ ಶಿಬಿರ ಯಶಸ್ವಿಗಾಗಿ ಜರುಗಲಿ.ಇಂದು ಇಂತಹ ಮನಸ್ಥಿತಿ ಹಾಗು ಧೋರಣೆಯನ್ನು ಹೊಂದಿರುವ ಬಿ .ಸಿ ಸಂಜೀವ ಮೂರ್ತಿ ಹಾಗೂ ಈ ಕಾರ್ಯಕ್ಕೆ ಎಂ ಆರ್ ಟಿ ಗ್ರಾಮಾಂತರ ಕಣ್ಣಿನ ಆಸ್ಪತ್ರೆ ವೈದ್ಯರು ಕೈಜೋಡಿಸಿರುವುದು ಸಂತೋಷದ ವಿಷಯ. ಮುಂದಿನ ದಿನಗಳಲ್ಲಿ ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದಂತೆ ಮಹಿಳೆಯರಿಗೆ ಪ್ರತ್ಯೇಕವಾಗಿ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಸೇವಾ ಕಾರ್ಯವನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು


ಜಗತ್ತಿನ ಸೌಂದರ್ಯ ಸವಿಯಲು ಕಣ್ಣು ಅತೀ ಮುಖ್ಯ. ಮಾನವನ ದೇಹದಲ್ಲಿ ಮೆದುಳಿನ ನಂತರ ಕಣ್ಣು ಅತೀ ಸೂಕ್ಷ್ಮ ಅಂಗ. ಕಣ್ಣಿನ ಆರೈಕೆಗೆ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕು. ಕಣ್ಣಿನ ಶಸ್ತ್ರ ಚಿಕಿತ್ಸೆ ನಂತರ ಸರಿಯಾದ ಮುಂಜಾಗೃತ ಕ್ರಮಗಳು ಅತೀ ಮುಖ್ಯ. ಅದನ್ನು ಸರಿಯಾಗಿ ನಿಭಾಯಿಸಬೇಕು ಎಂ ಆರ್ ಟಿ ಆಸ್ಪತ್ರೆಯ ಡಾ.ಎನ್ ವಿಜಯ್ ರವರ ಸೇವಾ ಮನೋಭಾವ ನಿಜಕ್ಕೂ ಶ್ಲಾಘನೀಯವಾದದು ಎಂದು ಬಿ.ಸಿ ಸಂಜೀವ ಮೂರ್ತಿ ತಿಳಿಸಿದರು

ಈ ವೈದ್ಯಕೀಯ ಶಿಬಿರದಲ್ಲಿ ಕಣ್ಣಿನ ಸಂಪೂರ್ಣ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ಬಗ್ಗೆ ಮಾಹಿತಿ ಕನ್ನಡಕ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಸ್ವಾಮೀಜಿ ಡಾ. ರಾಜಾರಾಂ ವೈದ್ಯರಾದ ವಿನಯ್ ಗೀತಾ ವಿನಯ್ ನಾರಾಯಣ ಮೂರ್ತಿ  ಬಿ.ಸಿ ಸಂಜೀವ್ ಮೂರ್ತಿ ದೇವರಾಜ ರೆಡ್ಡಿ ಮಂಜುನಾಥ ರಾಮಚಂದ್ರಪ್ಪ ಬಿ.ಸಿ ವೆಂಕಟೇಶ್ ಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Latest News >>

ನಗರದ ನಗರಸಭೆಗೆ ಜಿಲ್ಲಾಧಿಕಾರಿ ವೆಂಕಟೇಶ್ ಭೇಟಿ ನಗರಸಭೆಯ ಆಯುಕ್ತರು,ಅಧಿಕಾರಿಗಳೊಂದಿಗೆ ಸಭೆ

ಹಿರಿಯೂರು: ಇದೀಗ ಪ್ರಸ್ತುತ ತಿಂಗಳು ಮಳೆಗಾಲ ಆಗಿರುವುದರಿಂದ ಹಲವಾರು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದ್ದು, ನಗರದ ಜನರ ಉತ್ತಮ...

ಲಕ್ಕೇನಹಳ್ಳಿ: ಸ್ವಾಮಿತ್ವ ಯೋಜನೆಯ ಕುರಿತು ಗ್ರಾಮ ಸಭೆ ಗ್ರಾಮ ಪಂಚಾಯಿತಿಗೆ ಒಳಪಡುವ ಆಸ್ತಿಗಳಿಗೆ ಪಿ.ಆರ್.ಕಾರ್ಡ್ (ಹಕ್ಕುಪತ್ರ) ನೀಡುವ ಯೋಜನೆ

ಹಿರಿಯೂರು ಜೂ.21: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜೆ.ಜಿ.ಹಳ್ಳಿ ಹೋಬಳಿಯ ದಿಂಡಾವರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೊಳಪಡುವ...

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ಪಹಣಿಗೆ ಆಧಾರ್ ಜೋಡಣಿ: ತಿಂಗಳಾಂತ್ಯಕ್ಕೆ ಶೇ.75ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿ

ಚಿತ್ರದುರ್ಗ ಜೂನ್.21: ಪಹಣಿಗೆ ಆಧಾರ್ ಜೋಡಣೆ ಕಾರ್ಯವನ್ನು ಪ್ರಥಮಾಧ್ಯತೆಯಾಗಿ ಪರಿಗಣಿಸಿ, ತಿಂಗಳಾಂತ್ಯಕ್ಕೆ ಹಿರಿಯೂರು ತಾಲ್ಲೂಕಿನಲ್ಲಿ...

10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಅಭಿಮತ ಮಾನಸಿಕ ಸದೃಢತೆ ಹಾಗೂ ಒತ್ತಡ ಮುಕ್ತ ಜೀವನಕ್ಕೆ ಯೋಗ ಸಹಕಾರಿ

ಚಿತ್ರದುರ್ಗ ಜೂನ್21: ಯೋಗ ದೈಹಿಕವಾಗಿ ಶಕ್ತಿ ಹಾಗೂ ಚೈತನ್ಯ ತುಂಬುವದರ ಜೊತೆಗೆ ಮಾನಸಿಕವಾಗಿ ಸಹ ಸದೃಢರನ್ನಾಗಿಸುತ್ತದೆ. ಇಂದಿನ ನಿತ್ಯದ...

ವಿದ್ಯಾರ್ಥಿಗಳು ಪ್ರತಿ ದಿನ ಯೋಗಾಸನ ಮಾಡುವುದು ಅಭ್ಯಾಸ ಮಾಡಿಕೊಳ್ಳಿ ಶ್ರೀ ತಿಪ್ಪೇರುದ್ರಸ್ವಾಮಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂವೈಟಿ ಸ್ವಾಮಿ.

ನಾಯಕನಹಟ್ಟಿ:: ವಿದ್ಯಾರ್ಥಿಗಳು ಪ್ರತಿಯೊಬ್ಬರು ಯೋಗಾಸನ ಮಾಡುವುದು ರೂಡಿಸಿಕೊಂಡಾಗ ಮಾತ್ರ ಆರೋಗ್ಯವಂತರಾಗಿರಲು ಸಾಧ್ಯ. ಎಂದು ಶ್ರೀ...

ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ: -ಮುಖ್ಯಮಂತ್ರಿ ಸಿದ್ದರಾಮಯ್ಯ

ಬಳ್ಳಾರಿ,ಜೂ.20 ರಾಜ್ಯದಲ್ಲಿ ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ವಿಷಯ ಸದ್ಯ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸೋಲಿನ ಹೊಣೆಯನ್ನು ನಾನೇ ಹೊರುವೆ: ಪರಾಜಿತ ಅಭ್ಯರ್ಥಿ ಬಿ ಎನ್ ಚಂದ್ರಪ್ಪ 

ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಯು ಕಳೆದ ಹತ್ತು ವರ್ಷಗಳಿಂದ ನನ್ನ ಕರ್ಮಭೂಮಿಯಾಗಿದ್ದು ಇಲ್ಲಿನ ಜನತೆ ಮನೆ ಮಗನಂತೆ ನೋಡಿದ್ದು ಒಂದು ಬಾರಿ...

ಜಾತಿನಿಂದನೆ, ದೌರ್ಜನ್ಯಗಳಂತಹ ಆರೋಪಗಳನ್ನು ಪರಿಶಿಷ್ಟರು ಕೈಬಿಟ್ಟಾಗ ಮಾತ್ರ ಸಮಾಜದಲ್ಲಿಬೆಳೆಯಲು ಸಾಧ್ಯ: ನೂತನ ಸಂಸದರಾದ ಗೋವಿಂದ ಕಾರಜೋಳ

ಹಿರಿಯೂರು: ಜಾತಿ ನಿಂದನೆ ಮತ್ತು ದಲಿತ ದೌರ್ಜನ್ಯಗಳಂತಹ ವೃತಾ ಆರೋಪಗಳನ್ನು ಪರಿಶಿಷ್ಟರು ಕೈ ಬಿಟ್ಟಾಗ ಮಾತ್ರ ಸಮಾಜದಲ್ಲಿ ಬೆಳೆಯಲು ಸಾಧ್ಯ...

ಚಿಕ್ಕಾಲಘಟ್ಟ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮ ಶೀಘ್ರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯ ಭರವಸ -ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ

ಚಿತ್ರದುರ್ಗ. ಜೂನ್.19: ಚಿಕ್ಕಾಲಘಟ್ಟ ಗ್ರಾಮದ ಬಹುದಿನಗಳ ಬೇಡಿಕೆಯಾದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಈಗಾಗಲೇ ಜಾಗ...

ಜನಪ್ರತಿನಿಧಿಗಳು ಸರ್ಕಾರಿ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸೋಣ – ಸಂಸದ ಗೋವಿಂದ ಕಾರಜೋಳ

ಚಿತ್ರದುರ್ಗ. ಜೂನ್19: ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಸಮನ್ವಯತೆಯಿಂದ ಉತ್ತಮವಾಗಿ ಕಾರ್ಯನಿರ್ವಹಿಸಿ ಕೇಂದ್ರ ಹಾಗೂ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page